ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವುದಾದ್ರೆ ನಿಮ್ಮದು ಶ್ರೇಷ್ಠ ಕಂಪನಿ : ಭಾರತೀಯ ಸ್ಟಾರ್ಟ್​ಅಪ್ ಗಳ ಅನುಭವದ ನುಡಿಗಳು

ಟೀಮ್​​ ವೈ.ಎಸ್​.

1

ಭಾರತದಲ್ಲಿ ಹಲವು ಹೊಸ ಉದ್ದಿಮೆಗಳು ಯಶಸ್ವಿಯಾಗುತ್ತಲೇ ಇವೆ. ಹೊಸದಾಗಿ ಕಾಲಿಡುತ್ತಿರುವ ಉದ್ದಿಮೆದಾರರೂ ಪ್ರಗತಿಯತ್ತ ಹೆಜ್ಜೆಯನ್ನಿಡುತ್ತಿದ್ದಾರೆ. ಇನ್ನು ಈ ಯಶಸ್ವೀ ಪಯಣದ ಬಗ್ಗೆ ಯುವರ್ ಸ್ಟೋರಿಯು ಸಾಕಷ್ಟು ಲೇಖನಗಳನ್ನ ಪ್ರಕಟಿಸಿದೆ. ಆ ಯಶಸ್ಸಿನ ಕಥೆಗಳಲ್ಲಿ ಹಲವಾರು ಮಂದಿ ಸ್ಫೂರ್ತಿಯುತ ಮಾತುಗಳನ್ನಾಡಿದ್ದಾರೆ. ಅವರ ನುಡಿಗಳೇ ಹೊಸ ಸ್ಟಾರ್ಟ್ ಅಪ್ ಗಳಿಗೆ ದಾರಿ ದೀಪವಾಗಿದೆ. ಅವುಗಳಲ್ಲಿ ಆಯ್ದ ಶ್ರೇಷ್ಠ ನುಡಿಗಳು ಇಲ್ಲಿವೆ.

ಇಡೀ ಜಗತ್ತನ್ನ ಬದಲಾಯಿಸಲು ಸಾಧ್ಯವಿಲ್ಲ ಅನ್ನೋದು ನನ್ನ ನಂಬಿಕೆ, ಬದಲಾಗಿ ಜಗತ್ತಿನ ಒಂದು ಭಾಗವನ್ನ ಬದಲಾಯಿಸಬಹುದು - ಆಡಂ ವುಡ್ವರ್ಡ್, ಕಲ್ಕೇರಿ ಸಂಗೀತ್ ವಿದ್ಯಾಲಯ

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಡುಗಡೆ ಮಾಡುತ್ತಿರುವ ಆಪ್ ಗಳಿಗೆ ದೈನಂದಿನ ವಿಷಯಗಳ ಅಗತ್ಯತೆಗಳಿವೆ

- ರಜತ್ ಗುಪ್ತಾ, ಪ್ಲಾನೆಟ್ ಗೋಗೋ

2016ರಲ್ಲಿ ಭಾರತ ವಾಹನಗಳ ಮಾರಾಟದಲ್ಲಿ ಬ್ರೆಝಿಲ್, ಜರ್ಮನಿ ಹಾಗೂ ಜಪಾನ್ ನನ್ನೂ ಮೀರಿಸಲಿದ್ದು ಮೂರನೇ ಅತೀ ದೊಡ್ಡ ಮಾರುಕಟ್ಟೆಯಾಗಿ ಬೆಳೆಯಲಿದೆ – ಮುಕುಲ್ ಸಿಂಘಾಲ್, ಎಸ್ಎಐಎಫ್ ಪಾರ್ಟನರ್

2016ರಲ್ಲಿ ಭಾರತದ ಈ ಕಾಮರ್ಸ್ ಮಾರುಕಟ್ಟೆಯ ಬೆಲೆ 38 ಬಿಲಿಯನ್ ಯುಎಸ್ ಡಾಲರ್ ತಲುಪಲಿದೆ

- ಅಸೋಕ್ಯಾಮ್

ಮುಂದಿನ ಐದು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 10 ಸಾವಿರ ಕ್ಯಾಂಪಸ್ ಸ್ಟಾರ್ಟ್ ಅಪ್ ಟೀಂಗಳನ್ನ ಶುರುಮಾಡುವ ಯೋಜನೆ ಇದೆ – ಸಂಜಯ್ ವಿನಯ್ ಕುಮಾರ್, ಸ್ಟಾರ್ಟ್ ಅಪ್ ವಿಲೇಜ್

ಕೆಂಪು ಬಣ್ಣದ ಐವತ್ತು ಶೇಡ್ ಗಳು ಇತರೆ ವೈರಲ್ ಛಾಯಾಚಿತ್ರಗಳನ್ನ ಸೃಷ್ಠಿಸುತ್ತದೆ - ಮುಂಜುನಾಥ್ ಪಡಿಗಾರ್, ಮಾರ್ಕೆಟರ್

ಇದು ಒಂದು ಹೆಜ್ಜೆ ಇಡುತ್ತಲೇ ಮತ್ತೊಂದು ಹೆಜ್ಜೆ ಬಗ್ಗೆ ಯೋಚಿಸಬೇಕಾದ ಕಾಲವಿದು – ಪ್ರಣಯ್ ಶ್ರೀನಿವಾಸನ್, ಸೋರ್ಸ್ ಈಸೀ

ಮನುಷ್ಯನ ಅಂತರಾಳದ ಜಗತ್ತು ಬ್ರಹ್ಮಾಂಡಕ್ಕಿಂತಲೂ ಆಳ ಮತ್ತು ವಿಶಾಲವಾಗಿದೆ – ವ್ಲಾಡಿಮಿರ್ ಕಸನ್ವಾಸ್ಕಿ, ಕರ್ಟೂನಿಸ್ಟ್

ಪ್ರಕೃತಿಗೆ ನಾವು ಹತ್ತಿರವಾಗಿ ಯಾವಾಗ ಸರಳವಾಗಿ ಬದುಕುತ್ತೇವೋ ಆಗ ವ್ಯಕ್ತಿತ್ವಗಳೂ ಉತ್ತಮವಾಗಿ ಬದಲಾಗುತ್ತವೆ – ಶಶಿ ಭೂಷಣ್, ಮ್ಯಾಡ್ ಮೆನ್ಸ್ ಫರ್ಮ್

ನಾವು ನಕ್ಸಲೈಟ್ಸ್ ಪ್ರದೇಶ ಹಾಗೂ ಇತರೆ ಕಠಿಣ ಜಾಗಗಳಿಗೆ ಹೋಗಬೇಕು. ಇದು ನಮ್ಮ ದೇಶ, ನಾವಲ್ಲದೆ ಇನ್ಯಾರು ಹೋಗೋದಿಕ್ಕೆ ಸಾಧ್ಯ – ಶಶಾಂಕ್ ಮಣಿ, ಜಾಗೃತಿ ಯಾತ್ರಾ

ನೀವು ಆರಂಭದಲ್ಲೇ ವೈಫಲ್ಯ ಕಂಡಿದ್ದೇ ಆದ್ರೆ, ಮುಂದೆ ಅದು ಯಾವತ್ತೂ ಸಂಭವಿಸುವುದೇ ಇಲ್ಲ – ಜೆನುಪು ರೋಗ್ಮೀ, ಸಿಎಎನ್ ಯೂಥ್

ಸತತವಾದ ಪ್ರಯೋಗಗಳು ನನ್ನ ಐಡಿಯಾಗಳನ್ನ ಜಗತ್ತಿನ ಮುಂದೆ ತೆರೆದಿಡುವ ವಿಶ್ವಾಸವನ್ನ ಹೆಚ್ಚಿಸಿತು – ಸ್ಪಿರಿಹಾ ಚೋಕ್ಹಾನಿ, ಪಲ್ಪ್ ಫ್ಯಾಕ್ಟರಿ

ನಿನ್ನಷ್ಟಕ್ಕೇ ನೀನೇ ಕೊರಗ ಬೇಡ – ನಿರ್ಮಲಾ ಕಿವ್ಲಾನಿ, ನಿನಾ ಫೌಂಡೇಷನ್

ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವುದಾದ್ರೆ ನಿಮ್ಮದು ಶ್ರೇಷ್ಠ ಕಂಪನಿ – ಅಪ್ರಮೆಯಾ ರಾಧಾಕೃಷ್ಣ, ಏಂಜಲ್ ಇನ್ವೆಸ್ಟರ್

ಖುಷಿ ಸಮಯನೋ, ಬೇಸರದ ಕ್ಷಣನೋ.. ಪಾರ್ಟಿ ನಿಲ್ಲಿಸಬಾರದು – ರಾಜ್ ಮಿತ್ರಾ, ಹೂಡಿಕೆ ತಜ್ಞ

ಯಾರು ತಮ್ಮ ಯೋಜನೆಗಳನ್ನ ಪುನರ್ ಪರಿಶೀಲಿಸಲು ತಯಾರಾಗಿರುತ್ತಾರೋ ಅವರೊಂದಿಗೆ ಹೋಗುವುದು ಸೂಕ್ತ - - ನೂಪುರ್ ಜೋಷಿ ಥ್ಯಾಂಕ್ಸ್, ಪೇಪರ್ ಪ್ಲಾನ್ಸ್

ಪ್ರತಿಯೊಬ್ಬ ಉದ್ದಿಮೆದಾರನೂ ತನ್ನ ಸ್ಟಾರ್ಟ್ ಅಪ್ ಬಗ್ಗೆ ಬರಬಹುದಾದ ಟೀಕೆಗಳನ್ನ ಕೇಳಲು ತಯಾರಾಗಿರಬೇಕು - ಗಣಪತಿ ವೇಣುಗೋಪಲ್ , ಆಕ್ಸಿಲರ್

ನಮ್ಮ ಆರಂಭಿಕ ಯತ್ನದಲ್ಲೇ ವಿಘ್ನಗಳು ಕಂಡುಬಂದ್ರೆ ನಮ್ಮ ಆತ್ಮವಿಶ್ವಾಸ ಕುಗ್ಗತ್ತದೆ. ಆದ್ರೆ ಅದು ಮುಂದಿನ ತಾಂತ್ರಿಕತೆಯ ಬೆಳವಣಿಗೆಗೆ ಪೂರಕವಾಗಿರುತ್ತದೆ. – ರುದ್ರೇಶ್ ಚೌಧರಿ, ಆರ್ಚ್ – ದಿ ವೇ

ಭಾರತದ ಮಾರುಕಟ್ಟೆದಾರರು ಪ್ರಯೋಗಗಳಿಂದ ಹಿಂದೆ ಉಳಿಯುತ್ತಾರೆ. ಅವರು ಯಾವತ್ತೂ ಪ್ರಯೋಗಿಸಿದ ಮತ್ತು ಪರೀಕ್ಷಿಸಿದವುಗಳ ಹಿಂದೆ ಹೋಗುತ್ತಾರೆ – ರಿಶು ರತಿ, ಬಿಟೌಟ್

ಎಲ್ಲಾ ಸಿರಿವಂತಿಕೆಗಳು ಅನುಕರಿಸುವಂತದ್ದಲ್ಲ – ಜಯಂತ್ ಜಗದೀಶ್, ರಕ್ಷಾ ಸೇಫ್ ಡ್ರೈವ್

ಗ್ರಾಹಕರ ನಂಬಿಕೆಗಳು ಹಾಗೂ ಪೂರೈಕೆದಾರರ ಒಳನೋಟಗಳನ್ನ ಬೆಳೆಸುವುದು ಇಂಡಸ್ಟ್ರೀಗೆ ಯಾವತ್ತಿಗೆ ಸವಾಲು – ವಿನೀತ್ ಸಿಂಗ್, ಬ್ಯುಲ್ಡ್ ಝರ್

ಪ್ರತೀ ದಿನ ನಾವು ಇಂಟಲಿಜೆನ್ಸಿ, ಮೆಮೋರಿ ಬಗ್ಗೆ ಕಲಿಯುತ್ತಲೇ ಇದ್ದೇವೆ – ನವನೀತ್ ಶರ್ಮಾ, ಸ್ನಾಪ್ ಶಾಪರ್

ನಿಮ್ಮ ಉತ್ಪನ್ನಗಳನ್ನ ಬೆಳೆಸುವಾಗ ದೊಡ್ಡ ಮಟ್ಟದಲ್ಲಿ, ಜಾಗತಿಕ ಮಟ್ಟದಲ್ಲಿ ಹೋಲಿಸಲು ಹೋಗಬೇಡಿ – ನವೀನ್ ತಿವಾರಿ, ಇನ್ ಮೊಬಿ

ಲೇಖಕರು – ಮದನ್ ಮೋಹನ್ ರಾವ್
ಅನುವಾದ – ಬಿ ಆರ್ ಪಿ ಉಜಿರೆ

Related Stories