ಅಲೋಪತಿಗೆ ಪೈಪೋಟಿ ಡಾ ಸೇನ್​​ರ ಆಯುರ್ವೇದ..!

ಟೀಮ್​​ ವೈ.ಎಸ್​​​.

ಅಲೋಪತಿಗೆ ಪೈಪೋಟಿ ಡಾ ಸೇನ್​​ರ ಆಯುರ್ವೇದ..!

Saturday October 17, 2015,

3 min Read

ಎಕ್ಸಿಂ ಬ್ಯಾಂಕ್ ವರದಿ ಪ್ರಕಾರ ಭಾರತದ ಗಿಡಮೂಲಿಕೆ ಕ್ಷೇತ್ರದ ಸಧ್ಯದ ಮೌಲ್ಯ 4,205 ಕೋಟಿ ರೂಪಾಯಿ. 2020ರವೇಳೆಗೆ ಈ ಕ್ಷೇತ್ರದ ಮೌಲ್ಯ ಏನಿಲ್ಲವೆಂದರೂ 7 ಸಾವಿರ ಕೋಟಿಗೆ ಏರುವ ನಿರೀಕ್ಷೆ ಇದೆ. ಈ ಲೆಕ್ಕಾಚಾರವೇನಿದ್ದರೂ ಆಯುರ್ವೇದ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ್ದು. ವೈಜಾನಿಕವಾಗಿಯೂ ಜೀವಕ್ಕೆ ಅಪಾಯಕಾರಿಯಾಗುವ ರೋಗಗಳನ್ನು ವಾಸಿಪಡಿಸುವ ದಾರಿಗಳಿವೆ.

ಆಯುರ್ವೇದದ ಮೂಲಕ ಮಾರಣಾಂತಿಕ ಖಾಯಿಲೆಗಳನ್ನೂ ಗುಣಪಡಿಸುವ ಕೆಲಸ ಮಾಡುತ್ತಿದೆ ಡಾ ರೋಹಿತ್ ಸೇನ್ ಸ್ಥಾಪಿಸಿರುವ ಸೇನ್ ಕೇರ್ ಗ್ರೂಪ್. ಸೇನ್ ಕೇರ್ ಮಹಾರಾಷ್ಟ್ರದಲ್ಲಿ ಮಾಧವಭಾಗ್ ಆಸ್ಪತ್ರೆಗಳು ಮತ್ತು ಕ್ಲಿನಿಕ್​​ಗಳ ಸಮೂಹವನ್ನು ನಡೆಸುತ್ತಿದೆ. ಅಲೋಪತಿ ಪದ್ಧತಿಗಿಂತ ನಾಲ್ಕನೇ ಒಂದು ಭಾಗದಷ್ಟು ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಇವರ ವಿಶೇಷತೆ. ಅಲ್ಲದೆ ಆಯುರ್ವೇದ ಥೆರಪಿಯಲ್ಲೂ ಆಧುನಿಕ ವೈದ್ಯಪದ್ಧತಿಯನ್ನು ಅಳವಡಿಸಿಕೊಂಡು ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದ್ದೇವೆ ಎನ್ನುತ್ತಿದೆ ಸೇನ್ ಕೇರ್.

image


ಇಲ್ಲಿಯವರೆಗಿನ ಪಯಣ

ಔರಂಗಾಬಾದ್ ಯೂನಿವರ್ಸಿಟಿಯಿಂದ ಡಾ ರೋಹಿತ್ ಎಂಬಿಬಿಎಸ್ ಪದವಿ ಪಡೆದಿದ್ದರು. ಅಪೋಲೋ ಆಸ್ಪತ್ರೆಯಿಂದ ಹೃದಯ ಪುನಶ್ಚೇತನ ಫೆಲೋಶಿಪ್ ಪಡೆದಿದ್ದರು. ಬ್ರಿಟನ್​​ನ ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಹೆಲ್ತ್​​ನ ಮಾಜಿ ಫೆಲೋ ಕೂಡಾ ಆಗಿದ್ದರು. ಮುಂಬೈ ಉಪನಗರ ಘಾಟ್ಕೋಪರ್​​ನಲ್ಲಿ ವೃತ್ತಿಜೀವನದ ಪ್ರಾಕ್ಟೀಸ್ ಆರಂಭಿಸಿದರು. ಮಹಾರಾಷ್ಟ್ರದ ಸಣ್ಣ ಪಟ್ಟಣಗಳಿಗೂ ಭೇಟಿ ನೀಡಿ ತಮ್ಮ ಜ್ಞಾನ ಹಂಚಲಾರಂಭಿಸಿದರು. 1999ರಲ್ಲಿ ವೈದ್ಯ ಸೇನ್ ಆಯುರ್ವೇದಿಕ್ ಪಂಚಕರ್ಮ ಕೇಂದ್ರ ಸ್ಥಾಪಿಸಿದರು. ಈ ಕೇಂದ್ರವು ಗ್ರಾಹಕರಿಂದ ಅತ್ಯುತ್ತಮ ಸ್ಪಂದನೆ ಪಡೆಯಿತು. ಈ ಪ್ರತಿಕ್ರಿಯೆಯೇ, ಅವರನ್ನು ಉದ್ಯಮ ಬೆಳೆಸುವಂತೆ ಪ್ರೇರೇಪಿಸಿತು.

ಸರಳ ಆಯುರ್ವೇದಿಕ್ ಚಿಕಿತ್ಸೆಯಿಂದ ಆರಂಭಿಸಿ, ಆಯುರ್ವೇದಿಕ್ ಉತ್ಪನ್ನ ತಯಾರಿಕೆ, ಕಾಪಿರೈಟ್ ಪಡೆದಿರುವ ಆಯುರ್ವೇದ ವಿಧಾನದವರೆಗೆ, ಸೇನ್ ಗ್ರೂಪ್ ಕೆಲವೇ ವರ್ಷಗಳಲ್ಲಿ ಶಕ್ತಿಶಾಲಿಯಾಗಿ ಬೆಳೆದಿದೆ. ಸುಮಾರು 450 ಸಿಬ್ಬಂದಿ ಹೊಂದಿರುವ ಈ ಸಂಸ್ಥೆ ಕಳೆದ ವರ್ಷ 35ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಸೇನ್ ಕೇರ್ ಗ್ರೂಪ್​​ನ ಕ್ಲಿನಿಕ್​​ಗಳು ಮಾಧವಭಾಗ್ ಹೆಸರಿನಡಿ ಕಾರ್ಯಾಚರಣೆ ನಡೆಸುತ್ತಿವೆ. ಸಧ್ಯ ಮಹಾರಾಷ್ಟ್ರ, ಇಂದೋರ್, ಗೋವಾ ಮತ್ತು ಲಂಡನ್ ಸೇರಿ ಒಟ್ಟು 165 ಕ್ಲಿನಿಕ್​​ಗಳು ಮತ್ತು 3 ಆಸ್ಪತ್ರೆಗಳನ್ನು ಹೊಂದಿದೆ.

ನಿಮಗೆ ವೈದ್ಯರ ಅವತಾರ ಇಷ್ಟವೋ? ಉದ್ಯಮಿಯ ಅವತಾರ ಇಷ್ಟವೋ? ಎಂದು ಪ್ರಶ್ನಿಸಿದರೆ, ಎರಡೂ ಇಷ್ಟ ಎನ್ನುತ್ತಾರೆ ಡಾ ರೋಹಿತ್. “ನಾನು ರೋಗಿಗಳ ಮುಂದೆ ನಿಂತಾಗ ವೈದ್ಯನ ಪಾತ್ರ ನಿರ್ವಹಿಸುತ್ತೇನೆ. ಅದರಿಂದ ಕಲಿಯುವ ಹೊಸ ಅನುಭವ ಸಿಗುತ್ತದೆ. ಇನ್ನು ನನ್ನ ನೌಕರರು ಮತ್ತು ಉದ್ಯಮದ ಸಹೋದ್ಯೋಗಿಗಳ ಜೊತೆಗೆ ಉದ್ಯಮಿಯಾಗಿ ವ್ಯವಹರಿಸುತ್ತೇನೆ. ಎರಡನ್ನೂ ಆಸ್ವಾದಿಸುತ್ತೇನೆ.” ಎನ್ನುತ್ತಾರೆ ಡಾ ರೋಹಿತ್. ಅವರ ಸಮೂಹ ಅಭಿವೃದ್ಧಿಯಾಗಿರುವ ಬಗೆಯಿಂದ ಅವರಿಗೆ ತುಂಬಾನೇ ತೃಪ್ತಿಯಿದೆ. 1999ರಲ್ಲಿ ಪಂಚಕರ್ಮ ಚಿಕಿತ್ಸಾ ಕೇಂದ್ರವಾಗಿ ಆರಂಭವಾದ ಈ ಗ್ರೂಪ್ ಈಗ ಹೃದಯ ಪುನಶ್ಚೇತನ ಕೇಂದ್ರವನ್ನೂ ಹೊಂದಿದೆ. ಆಯುರ್ವೇದ ಔಷಧಗಳನ್ನು ಉತ್ಪಾದಿಸುವುದರಿಂದ ಆರಂಭಿಸಿ, ಮಾಧವಭಾಗ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪಿಸುವವರೆಗೆ, ಈ ಸಂಸ್ಥೆಯು ಕಳೆದ 13 ವರ್ಷಗಳಲ್ಲಿ ಉದ್ಯಮವನ್ನು ಬೆಳೆಸಲು ನಾನಾ ಹಾದಿಗಳನ್ನು ಹಿಡಿದಿದೆ.

ಮುಂದಿನ ದಿನಗಳಲ್ಲಿ ಆಯುರ್ವೇದವನ್ನು ಸಾಧ್ಯವಾದಷ್ಟು ರಾಜ್ಯಗಳಿಗೆ ತಲುಪಿಸಲು ಮತ್ತು ಅಲೋಪತಿ ಹಾಗೂ ಆಯುರ್ವೇದ ನಡುವಿನ ಅಂತರವನ್ನು ಕಡಿಮೆ ಮಾಡುವ ಕನಸು ಕಾಣುತ್ತಿದ್ದಾರೆ ಡಾ ರೋಹಿತ್. “ನನ್ನ ಪ್ರಕಾರ ಆಯುರ್ವೇದವು ಆಯ್ಕೆಗಳ ಅಲಭ್ಯತೆಯಿಂದಾಗಿ ಅಲೋಪತಿಗಿಂತ 100 ವರ್ಷಗಳಷ್ಟು ಹಿಂದಿದೆ. ನನ್ನ ಗುರಿಯೇನೆಂದರೆ, ಆಯುರ್ವೇದ ಚಿಕಿತ್ಸೆಯನ್ನು ಪ್ರತಿ ಹಳ್ಳಿಯಲ್ಲೂ ಸಿಗುವಂತೆ ಮಾಡುವುದು. ಆಗ ಜನರು ಆಯುರ್ವೇದ ಬೇಕೋ? ಅಲೋಪತಿ ಬೇಕೋ ಎನ್ನುವುದನ್ನು ಅವರೇ ನಿರ್ಧರಿಸಬಹುದು,”ಎನ್ನುತ್ತಾರೆ ಡಾ ರೋಹಿತ್.

ಡಾಕ್ಟರ್​ ರೋಹಿತ್​ ಸೇನ್​​​

ಡಾಕ್ಟರ್​ ರೋಹಿತ್​ ಸೇನ್​​​


ಕಾಪಿರೈಟ್ ಚಿಕಿತ್ಸೆ

ಮಾಧ​ವಭಾಗ್​​ ಮೊತ್ತಮೊದಲ ರೆಸಿಡೆನ್ಷಿಯ್ ಆಯುರ್ವೇದ ಚಿಕಿತ್ಸಾ ವ್ಯವಸ್ಥೆಯಾಗಿದೆ. ಅಲ್ಲದೆ ಆಯುರ್ವೇದ ಪದ್ಧತಿ ಮೂಲಕ ಹೃದ್ರೋಗಕ್ಕೆ ಚಿಕಿತ್ಸೆ ನೀಡುವ ಜಗತ್ತಿನ ಮೊದಲ ಸಂಸ್ಥೆಯೂ ಆಗಿದೆ. ರೋಗಿಗಳಿಗೆ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕಾಗಿ ನಾವು ಸಂಪೂರ್ಣ ಹೃದಯ ಶುದ್ದೀಕರಣ ಎನ್ನುವ ಕಾಪಿರೈಟ್ ಪಡೆದಿರುವ ಸೌಲಭ್ಯ ಹೊಂದಿದ್ದೇವೆ. ಆಯುರ್ವೇದ ಥೆರಪಿಯು ನಿತ್ಯಕರ್ಮ, ಯೋಗ, ವ್ಯಾಯಾಮ ಮತ್ತು ಪಂಚಕರ್ಮ ಚಿಕಿತ್ಸೆ ಜೊತೆಗೆ ಕೆಲವು ಜೀವನಶೈಲಿ ಬದಲಾವಣೆ ಸಲಹೆಗಳನ್ನು ಒಳಗೊಂಡಿದೆ.

ಸಾಮಾನ್ಯ ವಿಜಾನಕ್ಕೆ ಕಾಪಿರೈಟ್ ಸಿಕ್ಕಿದ್ದು ಹೇಗೆ?

ಸಂಪೂರ್ಣ ಹೃದಯ ಶುದ್ಧೀಕರಣವು ಆಯುರ್ವೇದಲ್ಲಿ ಅಲ್ಲಿ-ಇಲ್ಲಿ ಉಲ್ಲೇಖಿಸಿರುವ ಹಲವು ಹಂತಗಳ ಸಂಯೋಗವಾಗಿದೆ. ಆಯುರ್ವೇದದ ವಿಷಯವಾಗಿರುವ ರೋಧ್ ರೋಗವನ್ನು ನೀವು ಓದಿದರೆ ಅಲ್ಲಿ ನಿಮಗೆ ಸಂಪೂರ್ಣ ಹೃದಯ ಶುದ್ಧೀಕರಣದ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಇದನ್ನು ನಾವು ನಮ್ಮ ಕೌಶಲ್ಯ, ವಿಜಾನ, ಜಾನ ಎಲ್ಲವನ್ನೂ ಒಟ್ಟುಗೂಡಿಸಿ, ಪ್ಯಾಥೋಸ್ ಪೊಸಿಯೋಲಜಿಯಲ್ಲಿ ಅಳವಡಿಸಿ, ಹೃದಯ ರೋಗವನ್ನು ವಾಸಿಪಡಿಸುವ ವಿಧಾನ ಕಂಡುಕೊಂಡಿದ್ದೇವೆ.” ಎಂದು ವಿವರಿಸುತ್ತಾರೆ ಡಾ ರೋಹಿತ್. ನಾಲ್ಕು ವರ್ಷಗಳ ಸಂಶೋಧನೆ, ತಂತ್ರಜಾನ ಮತ್ತು 500 ರೋಗಿಗಳ ಮೇಲೆ ಪ್ರಯೋಗ ನಡೆಸಿದ ಬಳಿಕ ಈ ವಿಧಾನವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಥೆರಪಿಯ ಯಶಸ್ಸಿನ ಪ್ರಮಾಣವೂ ಜಾಗತಿಕ ಗಮನ ಸೆಳೆದಿದೆ. ಹೃದ್ರೋಗಕ್ಕೆ ಸಂಬಂಧಿಸಿದ ಜಗತ್ತಿನ ಅತಿ ದೊಡ್ಡ ನಿಯತಕಾಲಿಕ –ಲ್ಯಾನ್ಸೆಟ್ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಜನರಲ್ನಲ್ಲೂ ಈ ಥೆರಪಿ ಬಗ್ಗೆ ಬರೆಯಲಾಗಿದೆ.

ಸೇನ್ ಕೇರ್ ಗ್ರೂಪ್ ಸುಮಾರು 150 ಕ್ಕೂ ಹೆಚ್ಚು ಆಯುರ್ವೇದಿಕ್ ಉತ್ಪನ್ನಗಳನ್ನು- 100 ಔಷಧಗಳು, 50 ಸೌಂದರ್ಯಸಾಧನಗಳು- ತಯಾರಿಸಿದೆ. ಆರಂಭದಲ್ಲಿ ನೇಮಕಮಾಡಿಕೊಂಡ ವೈದ್ಯರಿಗೇ ಆಯುರ್ವೇದ ಚಿಕಿತ್ಸೆ ಬಗ್ಗೆ ಅಷ್ಟೊಂದು ನಂಬಿಕೆ ಇರಲಿಲ್ಲ. ವೃತ್ತಿಪರ ವೈದ್ಯರನ್ನು ಆರಿಸುವುದು ಮತ್ತು ಆಯುರ್ವೇದವನ್ನು ಪರಿಣಾಮಕಾರಿಯಾಗಿ ಬಳಸುವುದು ಆರಂಭಿಕ ಸವಾಲುಗಳಾಗಿದ್ದವು. ಆಯುರ್ವೇದಿಕ್ ಚಿಕಿತ್ಸೆಯನ್ನು ಶುಚಿ ಪರಿಸರದಲ್ಲಿ ಒದಗಿಸುವುದು ಮತ್ತೊಂದು ಸವಾಲಾಗಿತ್ತು. ಇಷ್ಟೆಲ್ಲವನ್ನೂ ಸಾಧಿಸಲು ಸುದೀರ್ಘ ಕಾಲ ಬೇಕಾದೀತು ಎನ್ನುವುದರ ಅರಿವು ಡಾ ರೊಹಿತ್ ಅವರಿಗೆ ಇತ್ತು. ಆದರೂ ಈ ಕಾರ್ಯಚನ್ನು ಅವರು ಕೈಗೆತ್ತಿಕೊಂಡರು. ದೀರ್ಘಕಾಲದಲ್ಲಿ ದೊಡ್ಡ ಉದ್ಯಮವಾಗಿ ಬೆಳೆಸುವ ರೂಪರೇಷೆ ಸಿದ್ಧಪಡಿಸಿದ್ದರು. ಆಯುರ್ವೇದವನ್ನು ಮುಖ್ಯವಾಹಿನಿಗೆ ತರುವುದೇ ಅವರ ಮುಖ್ಯ ಗುರಿಯಾಗಿತ್ತು.

ಇನ್ಮುಂದೆ ನಿಮಗೆ ಏನಾದರೂ ಅನಾರೋಗ್ಯ ಕಾಡಿದರೆ, ಮಾತ್ರೆಗಳನ್ನು ಸೇವಿಸುವ ಬದಲು, ಯಾವುದಾದರೂ ಗಿಡಮೂಲಿಕೆ ಔಷಧಿಗಳನ್ನು ಸೇವಿಸಿ.