ಸಾವಯವ ಕೃಷಿಗೂ ಬಂತು ಮೊಬೈಲ್ ಆ್ಯಪ್...!

ವಿಸ್ಮಯ

0

ಮೊಬೈಲ್ ಮತ್ತು ಇಂಟರ್​ನೆಟ್ ಎಲ್ಲರ ಜೀವನದಲ್ಲಿ ಅವಿಭಾಜ್ಯ ಅಂಗವಾಗುತ್ತಿರುವ ಇಂದಿನ ದಿನಗಳಲ್ಲಿ ದೈನಂದಿನ ವ್ಯವಹಾರಗಳನ್ನು ಮೊಬೈಲ್ ನಿಂದಲೇ ನಿರ್ವಹಿಸುವಂತೆ ಮಾಡುವ ಎಷ್ಟು ಸೌಲಭ್ಯ ಒದಗಿಸಿದರೂ ಅದು ಕಡಿಮೆಯೇ. ಇನ್ನು ಇಷ್ಟು ದಿವಸ ರಾಸಾಯನಿಕ ಕೃಷಿಯಿಂದ ಬೇಸತ್ತು ಬಹಳಷ್ಟು ರೈತರು ಸಾವಯವ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಸಾವಯವ ಕೃಷಿ ಕುರಿತು ಮಾಹಿತಿ ನೀಡುವ ಆ್ಯಪ್ ಬಂದಿದೆ. ಈ ಆ್ಯಪ್ ನಲ್ಲಿ ಸಾವಯವ ಕೃಷಿ ಕುರಿತು ಸಮಗ್ರ ಮಾಹಿತಿ ಸಿಗಲಿದೆ.ಮುಖ್ಯವಾಗಿ ಸಾವಯವ ಕೃಷಿಯ ಬೆಳವಣಿಗೆ, ಅದರ ಅವಶ್ಯಕತೆ,ಮೂಲತತ್ವಗಳು,ಸಿದ್ಧಾಂತಗಳು ಸೇರಿದಂತೆ ಹತ್ತಾರು ಮಾಹಿತಿಗಳು ಆ್ಯಪ್ ಮೂಲಕ ತಿಳಿದುಕೊಳ್ಳಬಹುದು.

ಯಾವುದು ಸಾವಯವ ಆ್ಯಪ್..?

ಇತ್ತೀಚೆಗೆ ಸಾವಯವ ಕೃಷಿಯತ್ತ ಸಾಕಷ್ಟು ಯುವಜನರು ಮನಸೋಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಆ್ಯಪ್ ಹೆಚ್ಚು ಸಹಕಾರಿ ಆಗಲಿದೆ. ಅಂದಹಾಗೆ ಈ ಆ್ಯಪ್ ನ ಹೆಸರು Organic farming. ಈ ಆ್ಯಪ್ ಮೂಲಕ ರೈತರು ಮಾಹಿತಿಯನ್ನು ಕಲೆಹಾಕಬಹುದು.

ಯಾವ ರೀತಿಯಲ್ಲಿ ಬಳಸಬಹುದು..?

ಈಗ ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತೆ.. ಇನ್ನು ಈ ಆ್ಯಪ್ ನ್ನ ನಿಮ್ಮ ಸಾರ್ಟ್ ಮೊಬೈಲ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು..ನಿಮ್ಮ ಮೊಬೈಲ್ ನ ಗೂಗಲ್ ಪ್ಲೇಯಿಂದ Organic farming ಅಂಥ ಟೈಪ್ ಮಾಡಬೇಕು..ನಂತರ ಅದರ ಮೇಲೆ ಕ್ಲಿಕ್​​ ಮಾಡಿ ಇನ್​​ಸ್ಟಾಲ್ ಮಾಡಿಕೊಂಡರೆ ಆಯಿತು.  ಇದನ್ನ ನೀವು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು ...

ಸಾವಯವ ಕೃಷಿಗೂ ಬಂತು ಮೊಬೈಲ್ ಆ್ಯಪ್...!

ರಾಸಾಯನಿಕ ಕೃಷಿಯಿಂದ ಬೇಸತ್ತಿದ್ದ ರೈತರು ಈಗ ಸಾವಯವ ಕೃಷಿಯತ್ತ ಮುಖ ಮಾಡ್ತಿದ್ದಾರೆ..ಈ ನಿಟ್ಟಿನಲ್ಲಿ ಸಾವಯವ ಕೃಷಿಯ ಬಗ್ಗೆ ತಿಳಿಸುವ ಈ Organic farming ಆ್ಯಪ್ ಸಾಕಷ್ಟು ಉಪಯೋಗವಾಗುತ್ತೆ.. ಇನ್ನು ಸರಿಯಾದ ಮಳೆಯಾಗಿಲ್ಲ ಅಂದ್ರೂ ಕಷ್ಟ, ಹೆಚ್ಚಿಗೆ ಮಳೆ ಬಂದ್ರೂ ಕಷ್ಟ ಎನ್ನುವಂತಾಗಿದೆ. ಹೀಗಾಗಿ ಯಾವ ಸಮಯದಲ್ಲಿ ಯಾವುದನ್ನ ಬಿತ್ತನೆ ಮಾಡಿದ್ರೆ ಒಳಿತು ಎಂಬುದನ್ನು ಇದ್ರಿಂದ ತಿಳಿಯಬಹುದಾಗಿದೆ..ಇನ್ನು ರೈತಿಗೆ ಕೆಲವು ಆ್ಯಪ್ ಗಳು ಬಂದಿದೆ.. ಈಗ ಅದೇ ಸಾಲಿಗೆ ಈ Organic farming ಆ್ಯಪ್ ರೈತರಿಗೆ ಮತ್ತು ಕೃಷಿಯಲ್ಲಿ ಆಸಕ್ತಿ ಇರುವವರು ಇದ್ರ ಸದುಪಯೋಗ ಪಡೆದುಕೊಳ್ಳಬಹುದು..

Organic farming ಆ್ಯಪ್ ನಿಂದ ಯಾವ ಮಾಹಿತಿ ಲಭ್ಯ..?

ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಮಾಹಿತಿ, ರೋಗದ ಬಗ್ಗೆ ಅಭಿಪ್ರಾಯ ಪಡೆಯಬಹುದಾಗಿದೆ. ತಮ್ಮ ಸಮಸ್ಯೆಗಳಿಗೆ ಒಂದೇ ಒಂದು ಕ್ಲಿಕ್​ ಮೂಲಕ ಪರಿಹಾರ ಪಡೆಯಬಹುದಾಗಿದೆ. ಏನು ಮಾಹಿತಿ ಬೇಕೋ ಆ ಬೆಳೆಯ ಪೋಟೋ ಅಥವಾ ವಿಡಿಯೋ ತೆಗೆದು ಕಳುಹಿಸಿದ್ರೆ,ಅದಕ್ಕೆ ಉತ್ತರ ಸಿಗುತ್ತೆ. ಬಿತ್ತನೆ/ನಾಟಿ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕು, ಅದಕ್ಕೆ ಯಾವ ರೀತಿಯ ರೋಗ ಕೀಟ (ಸಂಬಂಧಿಸಿದ ಕೀಟಗಳ ಚಿತ್ರಗಳನ್ನು ನೀಡಲಾಗಿರುತ್ತದೆ) ಬಾಧಿಸಬಹುದಾದ ಸಾಧ್ಯತೆ ಇರುತ್ತದೆ, ಇಂಥ ತೊಂದರೆ ಉಂಟಾಗದಿರಲು ಮುಂಜಾಗ್ರತೆಯಾಗಿ ಯಾವ ಕ್ರಮ ಕೈಗೊಳ್ಳಬೇಕು, ಯಾವ ರೀತಿಯ ಪೋಷಕಾಂಶಗಳನ್ನು ಹಾಕಬೇಕು, ಯಾವ ಪ್ರಮಾಣದಲ್ಲಿ ನೀಡಿದರೆ ಅನುಕೂಲ ಇತ್ಯಾದಿ ವಿವರಗಳು ಇರುತ್ತವೆ.

ಏನ್ ಹೇಳ್ತಾರೆ ಕೃಷಿಯತ್ತ ಮುಖ ಮಾಡಿರೋ ಯುವರೈತರು..?

ಈಗೀನ ಕಾಲದಲ್ಲಿ ಯಾವುದೇ ಮಾಹಿತಿ ಪಡೆಯಬೇಕು ಅಂದ್ರೂ ನಾವು ಮೊದಲ ಯಾವುದಾದ್ರೂ ಆ್ಯಪ್ ಇದ್ದೀಯಾ ಅಂತ ಚೆಕ್ ಮಾಡ್ತಿವಿ..ಈಗ ಎಲ್ಲವೂ ಟೆಕ್ನಾಲಜಿ ಯುಗ. ಪ್ರತಿಯೊಂದು ಬೆರಳ ತುದಿಯಲ್ಲೇ ಇರುತ್ತೆ. ನಮ್ಮ ತಂದೆ ರೈತರು.. ನಾನು ಅವ್ರರೆಂತೆ ರೈತನಾಗಬೇಕೆಂದು ಆಸೆ ಪಟ್ಟೆ ಆದ್ರೆ ಕೃಷಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕಾರಣ ಶಿಕ್ಷಣ ಅಂತ ಬೆಂಗಳೂರಿನಲ್ಲೇ ಇದ್ದೇ. ಆದ್ರೆ ಮತ್ತೆ ನಾನು ಈ ಸಿಟಿ ಜೀವನ ಸಾಕು ಅಂತ ಹಳ್ಳಿ ಜೀವನಕ್ಕೆ ಬಂದೆ. ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದು ಕೃಷಿಯನ್ನೇ. ಹಾಗಾಗಿ Organic farming ಆ್ಯಪ್ ಬಗ್ಗೆ ನನ್ನ ಸ್ನೇಹಿತರು ಹೇಳಿದ್ರೂ.. ಈಗ ನನಗೆ ಏನೇ ಕೃಷಿ ಬಗ್ಗೆ ಮಾಹಿತಿ ಬೇಕಾದ್ರೂ ನಾನು ಈ ಅ್ಯಪ್ ನ ಸಹಾಯ ಪಡೆದುಕೊಳ್ಳುತ್ತೇನೆ ಅಂತಾರೆ ಶಿವು.

ಈಗೀಗ ಯುವಕರು ಕೃಷಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ತಮ್ಮಗೆ ಬೇಕಾದ ಮಾಹಿತಿಯನ್ನೇ ಬಹು ಸುಲಭವಾಗಿ ಪಡೆದುಕೊಳ್ಳುತ್ತಾರೆ. ತಂತ್ರಜ್ಞಾನ ಮುಂದುವರೆದಂತೆ ಎಲ್ಲವೂ ಈಗ ತಂತ್ರಾಂಶದ ಯುಗ.. ಎಲ್ಲವೂ ಕುತ್ತಲೇ ಮಾಹಿತಿ ಸಿಕ್ಕಿಬಿಡುತ್ತೆ.

Related Stories

Stories by YourStory Kannada