`Upshot.ai'ಸ್ಮಾರ್ಟ್ ಮೊಬೈಲ್ ಎಂಗೇಜ್‍ಮೆಂಟ್ ವೇದಿಕೆ

ಟೀಮ್​ ವೈ.ಎಸ್​. ಕನ್ನಡ

`Upshot.ai'ಸ್ಮಾರ್ಟ್ ಮೊಬೈಲ್ ಎಂಗೇಜ್‍ಮೆಂಟ್ ವೇದಿಕೆ

Sunday December 06, 2015,

4 min Read

ಮೊಬೈಲ್ ಆ್ಯಪ್ ಕ್ಷೇತ್ರ, ಭೇದಿಸಲು ಕಠಿಣವಾದ ವಲಯ, ಆದ್ರೆ ದೀರ್ಘಾವಧಿಯಲ್ಲಿ ಸಾಕಷ್ಟು ಲಾಭದಾಯಕವೂ ಹೌದು. ವರದಿ ಪ್ರಕಾರ 2014ರಲ್ಲಿ ಐಓಎಸ್ ಆ್ಯಪ್ ಮಾರುಕಟ್ಟೆ ಹಾಲಿವುಡ್‍ಗಿಂತಲೂ ಅಧಿಕ ಆದಾಯ ಗಳಿಸಿದೆ. ಬಳಕೆದಾರರನ್ನು ಆ್ಯಪ್ ಡೌನ್‍ಲೋಡ್‍ಗೆ ಉತ್ತೇಜಿಸುವುದಕ್ಕಿಂತ ಆದಾಯ ಗಳಿಕೆಗಾಗಿ ಬಳಕೆದಾರರನ್ನು ಎಂಗೇಜ್ ಆಗಿಡುವುದು ನಿಜಕ್ಕೂ ಸವಾಲಿನ ಕೆಲಸ. ಬಳಕೆದಾರರು ಸುಲಭವಾಗಿ ವಿಚಲಿತರಾಗ್ತಾರೆ, ಆ್ಯಪ್ ಬಳಸಿದ ಮೊದಲ ಕ್ಷಣದಲ್ಲೇ ಬಳಕೆದಾರರು ಅದರ ಮೌಲ್ಯ ಅರಿಯುವಂತೆ ಮಾಡಲು ಅಂತರ್‍ದೃಷ್ಟಿ ಬೇಕು ಅನ್ನೋದು `ಅಪ್‍ಶಾಟ್'ನ ಸಂಸ್ಥಾಪಕ ಭರತ್ ಲಿಂಗಮ್ ಅವರ ಅಭಿಪ್ರಾಯ. ನಿಮ್ಮ ಆ್ಯಪ್ ಬಳಕೆದಾರರ ಪಾಲಿಗೆ ಹವ್ಯಾಸವಾಗಿ ಬದಲಾಗುವಂತೆ ಮಾಡಲು ಅವರ ಗಮನ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎನ್ನುತ್ತಾರೆ ಭರತ್ ಲಿಂಗಮ್.

ಭರತ್ ಲಿಂಗಮ್ ಹಲವು ವರ್ಷಗಳಿಂದ ಮೊಬೈಲ್ ಆ್ಯಪ್ ವಲಯದಲ್ಲಿ ಕೆಲಸ ಮಾಡಿದ್ದಾರೆ. (x)ಕ್ಯೂಬ್ ಲ್ಯಾಬ್ಸ್ ಅವರ ಮೊದಲ ಸಂಸ್ಥೆ. ಮಾರುಕಟ್ಟೆಯಲ್ಲಿರುವ ಅವಕಾಶವನ್ನು ಗಮನಿಸಿದ ಭರತ್, `Upshot.ai' ಅನ್ನು ಆರಂಭಿಸಿದ್ರು. ಗ್ರಾಹಕರಿಗೆ ಅರ್ಥಗರ್ಭಿತ ಅನುಭವ ಮೂಡಿಸಲು ಆ್ಯಪ್ ಡೆವಲಪರ್‍ಗಳಿಗೆ ಭರತ್ ನೆರವಾಗುತ್ತಿದ್ದಾರೆ. `Upshot.ai'ಕೂಡ `ಯುವರ್‍ಸ್ಟೋರಿ' ಆಯೋಜಿಸಿದ್ದ ಟೆಕ್-30 2015ರ ಕಂಪನಿಗಳಲ್ಲೊಂದು.

image


ಏನಿದು `ಅಪ್‍ಶಾಟ್'..?

ಮೊಬೈಲ್ ಬಳಕೆದಾರರನ್ನು ಎಂಗೇಜ್ ಆಗಿಡುವಂತಹ ವೇದಿಕೆ ಇದು. ಉದ್ಯಮ ಮತ್ತು `ಎಸ್‍ಎಂಇ'ಗಳಿಗೆ ತಮ್ಮ ಮೊಬೈಲ್ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಿಸಲು, ಅವರು ಹೆಚ್ಹೆಚ್ಚು ಅದರಲ್ಲಿ ತೊಡಗಿಕೊಳ್ಳುವಂತೆ ಮಾಡಲು ಮತ್ತು ಆದಾಯ ಗಳಿಕೆಗೂ ಇದು ನೆರವಾಗುತ್ತದೆ. ಅತ್ಯಂತ ವೇಗವಾಗಿ ಬಳಕೆದಾರರು ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳುವಂತಹ ಆ್ಯಪ್ ಅನ್ನು ಅಭಿವೃದ್ಧಿಪಡಿಸಲು `ಅಪ್‍ಶಾಟ್' ಸಹಾಯ ಮಾಡುತ್ತದೆ. ಈ ಮೂಲಕ ಬಳಕೆದಾರರು ಅತ್ಯಂತ ಬೇಗನೆ ಆ್ಯಪ್ ಅನ್ನು ಅನ್‍ಇನ್‍ಸ್ಟಾಲ್ ಮಾಡದಂತೆ ತಡೆಯುತ್ತದೆ. ಅಪ್‍ಶಾಟ್ ಐತಿಹಾಸಿಕ ಬಳಕೆದಾರರ ಮೇಲೆ ಪ್ರಭಾವ ಬೀರುತ್ತದೆ, ಮಾರಾಟಗಾರರಿಗೆ ಮಾರುಕಟ್ಟೆಯ ನೈಜ ಸ್ಥಿತಿ ಅರಿಯಲು ನೆರವಾಗುತ್ತದೆ, ಬಳಕೆದಾರರ ಒಳನೋಟವನ್ನು ಅರ್ಥಮಾಡಿಕೊಂಡು ಆ್ಯಪ್ ಅಭಿವೃದ್ಧಿಪಡಿಸಲು ಕೂಡ ಸಹಾಯ ಮಾಡುತ್ತದೆ ಅನ್ನೋದು ಭರತ್ ಅವರ ಭರವಸೆಯ ನುಡಿ.

ತನ್ನ ಉತ್ಪನ್ನಗಳನ್ನು ಸರ್ಚ್ ಮಾಡಲು ಗೂಗಲ್ ಏನು ಮಾಡ್ತಿದ್ಯೋ ಅದೇ ಮಾದರಿಯಲ್ಲಿ ಅಪ್‍ಶಾಟ್ ಕಾರ್ಯನಿರ್ವಹಿಸುತ್ತೆ. ಕೇವಲ ಆ್ಯಪ್ ಅಭಿವೃದ್ಧಿಪಡಿಸಲು ಮಾತ್ರವಲ್ಲ, ಅದನ್ನು ಬಳಕೆದಾರರಿಗೆ ತಲುಪಿಸಲು ಕೂಡ ಅಪ್‍ಶಾಟ್ ವೇದಿಕೆ ಕಲ್ಪಿಸಿದೆ. ಒಂದೇ ಸೂರಿನಡಿ ಮೊಬೈಲ್ ಮಾರ್ಕೆಟಿಂಗ್‍ಗೆ ನೆರವಾಗುವಂತಹ ವ್ಯವಸ್ಥೆಯನ್ನು ಕೂಡ ಕಲ್ಪಿಸಲು ಮುಂದಾಗಿದೆ.

ಇದುವರೆಗಿನ ಕಥೆ...

ಭರತ್ ಲಿಂಗಮ್ ಐಐಟಿ ಮದ್ರಾಸ್‍ನಲ್ಲಿ ಪದವಿ ಪಡೆದಿದ್ದಾರೆ. `ಅಪ್‍ಶಾಟ್' ಅನ್ನು ಹುಟ್ಟುಹಾಕಿದವರು ಅವರೇ. ಕೇವಲ ಅಪ್‍ಶಾಟ್ ಮಾತ್ರವಲ್ಲ (x)ಕ್ಯೂಬ್ ಲ್ಯಾಬ್ಸ್ ಅನ್ನು ಕೂಡ ಭರತ್ ಆರಂಭಿಸಿದ್ರು. ಸ್ವಂತ ಉದ್ಯಮ ಆರಂಭಕ್ಕೂ ಮುನ್ನ ಭರತ್, ಮಹಿಂದ್ರಾ ಸತ್ಯಮ್, ಪಂಡೋರಾ ನೆಟ್‍ವರ್ಕ್ಸ್​​​, ನಾಲೆಡ್ಜ್ ಇನ್ಫೋಟೆಕ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ರು. ಸದ್ಯ ಹೈದ್ರಾಬಾದ್ ಮತ್ತು ಅಮೆರಿಕದ ದಲ್ಲಾಸ್‍ನಲ್ಲಿ ಕಚೇರಿಯನ್ನು ಹೊಂದಿದೆ. ಸದ್ಯ 35 ಸಿಬ್ಬಂದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೇ.75ರಷ್ಟು ಸಿಬ್ಬಂದಿ ತಂತ್ರಜ್ಞಾನ ಸಂಬಂಧಿತ ಕೆಲಸ ನಿರ್ವಹಿಸುತ್ತಿದ್ದು, ಉಳಿದ ಶೇ. 25ರಷ್ಟು ಮಂದಿ ಮಾರಾಟದ ಬಗ್ಗೆ ಗಮನಹರಿಸಿದ್ದಾರೆ. ಈ ಪಯಣ ಆಹ್ಲಾದಕರ ಮತ್ತು ಸವಾಲಿನದ್ದು ಎನ್ನುತ್ತಾರೆ ಭರತ್. ಸಾಫ್ಟ್​​​ವೇರ್ ಹೇಗೆ ಅಭಿವೃದ್ಧಿಯಾಗಿದೆ ಎಂಬುದನ್ನು ನಿರಂತರವಾಗಿ ಬದಲಾಯಿಸುವುದು ಕೂಡ ಒಂದು ಸವಾಲು. ಕೇವಲ ಹೊಸ ತಂತ್ರಜ್ಞಾನ ಮಾತ್ರವಲ್ಲ, ಸಾಫ್ಟ್​​​ವೇರ್ ಬಗ್ಗೆ ಚಿಂತನೆಗೆ ವಿನೂತನ ಪ್ರಕ್ರಿಯೆ ಕೂಡ ಅತ್ಯವಶ್ಯ. ಅದು ಪರಿಹರಿಸಲು ಕಠಿಣವಾದಂತಹ ಮೂಲಭೂತ ಸಮಸ್ಯೆ. ಅದರ ಪರಿಕಲ್ಪನೆ ಹಾಗೂ ಈಡೇರಿಸುವ ಪ್ರಕ್ರಿಯೆ ಕೂಡ ಸುಲಭವಲ್ಲ. ಅದನ್ನು ಪರಿಹರಿಸುವ ಪ್ರಯತ್ನವನ್ನು ಅಪ್‍ಶಾಟ್ ಮಾಡ್ತಿದೆ. ಬಳಕೆದಾರರ ಜೊತೆ ಅನುಭವದೊಂದಿಗೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದೆ ಪ್ರದರ್ಶನ ಮತ್ತು ವೆಚ್ಚ ದಕ್ಷತೆಯನ್ನು ಗಮನದಲ್ಲಿರಿಸಿಕೊಂಡು ತಂತ್ರಜ್ಞಾನ ಅಭಿವೃದ್ಧಿಪಡಿಸುವುದು `ಅಪ್‍ಶಾಟ್' ಮುಂದಿರುವ ಸವಾಲು.

`ಗೋ ಮಿಂಗಲ್', `ಯುನೈಟೆಡ್ ಹೆಲ್ತ್ ಗ್ರೂಪ್', `ಕುಕ್ಕು' ಸೇರಿದಂತೆ ಹಲವು ಕಂಪನಿಗಳು ಅಪ್‍ಶಾಟ್‍ನ ಗ್ರಾಹಕರಾಗಿವೆ. ಯಶಸ್ವಿ ಗೇಮ್ ಗೆವಲಪರ್‍ಗಳು, ಸರ್ವೀಸ್ ಇಂಡಸ್ಟ್ರಿಗಳು, ಕನ್ಸ್ಯೂಮರ್ ಬ್ರಾಂಡ್‍ಗಳು ಹಾಗೂ ಸ್ವತಂತ್ರ ಸಾಫ್ಟ್‍ವೇರ್ ವೆಂಡರ್‍ಗಳು `ಅಪ್‍ಶಾಟ್'ನ ಪ್ರಮುಖ ಟಾರ್ಗೆಟ್.

`ಅಪ್‍ಶಾಟ್' ಹೇಗೆ ಕಾರ್ಯನಿರ್ವಹಿಸುತ್ತೆ?

ಅತ್ಯಾಧುನಿಕ ವಿಶ್ಲೇಷಣೆ, ವಿಭಜನೆ, ಆ್ಯಪ್ ಮಾರ್ಕೆಟಿಂಗ್ ಮತ್ತು ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಕೃತಕ ಬುದ್ಧಿಮತ್ತೆಯನ್ನು `ಅಪ್‍ಶಾಟ್' ಬಳಸಿಕೊಳ್ಳುತ್ತದೆ. ಕ್ರಿಯೆಯ ಒಳನೋಟ, ಆ್ಯಪ್ ಉತ್ತಮಪಡಿಸಲು ಊಹಾ ಗುಪ್ತಚರತೆ, ವೈಯಕ್ತಿಕ ಮಾರ್ಕೆಟಿಂಗ್ ಸಂದೇಶ ಕಳುಹಿಸುವುದು ಮುಂತಾದ ಆಫರ್‍ಗಳನ್ನು ಈ ಉತ್ಪನ್ನ ಒದಗಿಸುತ್ತಿದೆ. `ಅಪ್‍ಶಾಟ್' ( paaS) `ಪಾಸ್' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತೆ. ಇದರ ಮೂಲ ಬೆಲೆ ಪ್ರತಿ ತಿಂಗಳಿಗೆ 999 ಡಾಲರ್. ಆ್ಯಪ್ ಬಳಕೆದಾರರ ಸಂಖ್ಯೆಯ ಆಧಾರದ ಮೇಲೆ ಶುಲ್ಕ ವಿಧಿಸುತ್ತದೆ. ಮುಂದಿನ ವರ್ಷ ಫೆಬ್ರವರಿ ವೇಳೆಗೆ ಇನ್ನಷ್ಟು ಬಂಡವಾಳ ಸಂಗ್ರಹಿಸಲು ಅಪ್‍ಶಾಟ್ ಯೋಜನೆ ರೂಪಿಸಿದೆ. ಇದುವರೆಗೆ ಭರತ್ ಅವರ ಮೊದಲ ಸಂಸ್ಥೆ (x)ಕ್ಯೂಬ್, ಅಪ್‍ಶಾಟ್‍ನಲ್ಲಿ ಹಣ ಹೂಡಿಕೆ ಮಾಡಿದೆ. ಸದ್ಯ `ಐಎಸ್‍ವಿ' ಹಾಗೂ ಯಶಸ್ವಿ ಆ್ಯಪ್ ಬಗ್ಗೆ ಗಮನಹರಿಸುತ್ತಿರುವುದಾಗಿ ಭರತ್ ತಿಳಿಸಿದ್ದಾರೆ.

ವಲಯ ಅವಲೋಕನ...

ಜಾಗತಿಕ ಮೊಬೈಲ್ ಎಂಗೇಜ್‍ಮೆಂಟ್ ವಲಯವನ್ನು ಪರಿಗಣಿಸಿದರೆ, ಆ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ, ಜೊತೆಗೆ 100 ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಹೊಂದಿದೆ ಎನ್ನುತ್ತಾರೆ ಭರತ್. ಇದು ಮಾರುಕಟ್ಟೆಯ ಮೊದಲ ಹಂತವಾಗಿದ್ದು, ವಿಸ್ತರಣೆಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಕೇವಲ ಮೊಬೈಲ್ ಎಂಗೇಜ್‍ಮೆಂಟ್ ಮಾತ್ರವಲ್ಲ, ಬಳಕೆದಾರರನ್ನೂ ಎಂಗೇಜ್ ಆಗಿಡುವುದು ಅವರ ಉದ್ದೇಶ.

`ಕಹುನಾ' ಜಾಗತಿಕವಾಗಿ ಹೆಸರು ಮಾಡಿರುವ ಕಂಪನಿ. `ಅರ್ಬನ್ ಏರ್‍ಶಿಪ್', `ಆ್ಯಪ್ ಬಾಯ್' ಮತ್ತು `ಲೋಕಲಿಟಿಕ್ಸ್'ನಂತಹ ಕಂಪನಿಗಳೊಂದಿಗೆ ಪೈಪೋಟಿಗಿಳಿದಿದೆ. ಭಾರತದಲ್ಲಿ `ಅಪ್‍ಶಾಟ್'ಗೆ `ಕ್ಲೆವರ್‍ಟ್ಯಾಪ್'ನಿಂದ ಸ್ಪರ್ಧೆ ಎದುರಾಗಿದೆ. ಆ್ಯಪ್ ಅಭಿವೃದ್ಧಿ ವಲಯ, ಉನ್ನತ ಕಾರ್ಯಕ್ಷಮತೆಯ ಕ್ರೀಡೆಗೆ ಸರಿಸಮಾನವಾದದ್ದು ಅನ್ನೋದು ಭರತ್ ಅವರ ಅಭಿಪ್ರಾಯ. ಇಂಡಸ್ಟ್ರಿಯ ಫ್ರೀಮಿಯಮ್ ಪ್ರಕೃತಿಯಿಂದಾಗಿ ಅದು ಅತ್ಯಂತ ಸೃಜನಶೀಲ ಸ್ಪರ್ಧಾತ್ಮಕ ಅನ್ವೇಷಣೆಯಾಗಿದೆ. ಇಲ್ಲಿ ಯಶಸ್ವಿಯಾಗುವುದು ಅಂದ್ರೆ ಕೇವಲ ಒಳ್ಳೆಯ ಎಂದರ್ಥವಲ್ಲ, ಅತ್ಯುತ್ತಮ ಎಂದರ್ಥ ಅನ್ನೋದು ಭರತ್ ಅವರ ವಿಶ್ಲೇಷಣೆ.

ಮೊಬೈಲ್ ಆ್ಯಪ್‍ಗಳಿಗೆ ಉಳಿಗಾಲವಿದೆಯೇ?

ತಂತ್ರಜ್ಞಾನದಲ್ಲಿನ ಆಮೂಲಾಗ್ರ ಪ್ರಗತಿಯಿಂದ ಮೊಬೈಲ್ ಆ್ಯಪ್‍ಗಳು, ಆ್ಯಪ್ ಜಗತ್ತಿನ ಕೇಂದ್ರಬಿಂದುವಾಗಿವೆ. ಇದು ಬಹುದೂರ ಸಾಗಬಲ್ಲ ವಲಯ ಅನ್ನೋ ವಿಶ್ವಾಸ ಭರತ್ ಅವರಿಗಿದೆ. ಭವಿಷ್ಯದಲ್ಲಿ ನಾವು ಮೊಬೈಲ್ ಅಪ್ಲಿಕೇಷನ್‍ಗಳು, ಡಿವೈಸ್‍ಗಳು, ವಾಸ್ತವತೆ, ಸ್ಮಾರ್ಟ್ ಟಿವಿ ಎಲ್ಲವನ್ನೂ ನೋಡಬಹುದು. ಈಗ ಮೊಬೈಲ್ ಹಾಗೂ ವೆಬ್‍ಗಳ ಸಹಯೋಗದಂತೆ ಮುಂದೆ ಇವೆಲ್ಲವುಗಳ ನಡುವೆಯೂ ಸಹಯೋಗ ಏರ್ಪಡಲಿದೆ. ಇನ್‍ಸ್ಟಾಲ್ ಮಾಡಿಕೊಳ್ಳುವ ಮುನ್ನವೇ ಗೂಗಲ್ ಸರ್ಚ್ ಫಲಿತಾಂಶದಲ್ಲಿ ಆಂಡ್ರಾಯ್ಡ್ ಆ್ಯಪ್‍ಗಳನ್ನು ಬಳಸಲು ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದಾಗಿ ಇತ್ತೀಚೆಗಷ್ಟೆ ಗೂಗಲ್ ಹೇಳಿದೆ. ಇದೊಂದು ಅತ್ಯವಶ್ಯ ಬೆಳವಣಿಗೆ ಅನ್ನೋದು ಭರತ್ ಅವರ ಅಭಿಪ್ರಾಯ. ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಆ್ಯಪ್ ಶೋಧವನ್ನು ಕೂಡ ಇದು ಸರಳಗೊಳಿಸಲಿದೆ. ಆ್ಯಪ್ ಅಭಿವೃದ್ಧಿಪಡಿಸುವಿಕೆ ನಿಜಕ್ಕೂ ಸಮರ್ಥನೀಯ ವ್ಯಾಪಾರ ಎನ್ನುತ್ತಾರೆ ಅವರು.

ಗೂಗಲ್, ಆ್ಯಪ್ ಸ್ಟೋರ್‍ಗಳ ಬದಲು ಶೋಧ ಮಾದರಿಯನ್ನು ಬಳಸಿಕೊಳ್ಳಲು ಮುಂದಾಗಿದೆ. ಗೋಡೆಯುಳ್ಳ ಆ್ಯಪ್‍ಗಳ ಗಾರ್ಡನ್‍ನಂತಾಗುವ ಬದಲು, ಜಗತ್ತು ಮುಂದಡಿ ಇಡುತ್ತಿದೆ. ಅದು ಗೂಗಲ್‍ನ ಜಾಹೀರಾತು ಆದಾಯಕ್ಕೆ ಕೊಕ್ಕೆ ಹಾಕಿದ್ರೂ ಆಶ್ಚರ್ಯವಿಲ್ಲ. ಆ್ಯಪ್ ಶೋಧ ತೆರೆದುಕೊಳ್ಳುತ್ತಿದ್ದು, ಹೊಸ ಮಾರ್ಗವನ್ನೂ ಸೃಷ್ಟಿಸಿದೆ. ಆ್ಯಪ್ ಇನ್‍ಸ್ಟಾಲ್ ಮಾಡಿಕೊಳ್ಳದೇ ಅದರ ಅನುಭವ ಪಡೆಯುವ ಅವಕಾಶ ಗ್ರಾಹಕರಿಗಿದೆ. ಇದ್ರಿಂದಾಗಿ ಗ್ರಾಹಕರು ಬೇರೆ ಬೇರೆ ಆ್ಯಪ್‍ಗಳಿಗಾಗಿ ಹುಡುಕಾಟ ನಡೆಸುತ್ತಾರೆ, ಅದನ್ನು ಬಳಸುತ್ತಾರೆ.

image


`ಯುವರ್‍ಸ್ಟೋರಿ' ಮಾಹಿತಿ

ಈ ವರ್ಷಾಂತ್ಯದೊಳಗೆ ಭಾರತ ವಿಶ್ವದ ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಎರಡನೇ ದೇಶ ಎನಿಸಿಕೊಳ್ಳಲಿದೆ. 402 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದುವ ಮೂಲಕ ಭಾರತ ಅಮೆರಿಕವನ್ನು ಹಿಂದಿಕ್ಕಿದೆ. `ಐಎಎಂಎಐ' ಮತ್ತು `ಕೆಪಿಎಂಜಿ' ವರದಿಯ ಪ್ರಕಾರ ಭಾರತ 2016 ವೇಳೆಗೆ 236 ಮಿಲಿಯನ್ ಮೊಬೈಲ್ ಬಳಕೆದಾರರನ್ನು ಹೊಂದಲಿದ್ದು, 2017ರ ವೇಳೆಗೆ ಈ ಸಂಖ್ಯೆ 314 ಮಿಲಿಯನ್‍ಗೆ ತಲುಪಲಿದೆ. ಕ್ಷಿಪ್ರಗತಿಯಲ್ಲಿ ಅಂತರ್ಜಾಲ ಅಳವಡಿಸಿಕೊಳ್ಳುವುದರಿಂದ `ಮೊಬೈಲ್ ಎಂಗೇಜ್‍ಮೆಂಟ್' ತಜ್ಞರ ಅವಶ್ಯಕತೆ ಹೆಚ್ಚಿದೆ. (x)ಕ್ಯೂಬ್‍ನ ಯಶಸ್ಸಿಗೆ ಭಾರತ ಹಾಗೂ ಅಮೆರಿಕ ಸಾಕ್ಷಿಯಾಗಿದೆ. ಇದೀಗ `ಅಪ್‍ಶಾಟ್' ಹೇಗೆ ಪ್ರಗತಿ ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಲೇಖಕರು: ಹರ್ಷಿತ್​​ ಮಲ್ಯ

ಅನುವಾದಕರು: ಭಾರತಿ ಭಟ್​​​​