ಬಿಗ್ ಡೀಲ್​​ಗೆ ಸ್ನ್ಯಾಪ್​​ಡೀಲ್ ರೆಡಿ..!

ಟೀಮ್​​ ವೈ.ಎಸ್​​.ಕನ್ನಡ

ಬಿಗ್ ಡೀಲ್​​ಗೆ ಸ್ನ್ಯಾಪ್​​ಡೀಲ್ ರೆಡಿ..!

Friday November 20, 2015,

2 min Read

ಹೆಚ್ಚಿನ ಜಿಎಂವಿ ಸಾಧಿಸಲು ಇ- ಕಾಮರ್ಸ್ ಕಂಪನಿಗಳು ಸಾಧ್ಯವಾಗಿರುವ ಎಲ್ಲಾ ದಾರಿಗಳನ್ನು ಅನುಸರಿಸುತ್ತಿದ್ದಾರೆ. ಪೇಟಿಎಮ್ ನವರು ಬಸ್ಸು, ಹೋಟೆಲ್ ಮತ್ತು ಚಲನಚಿತ್ರ ವಿಭಾಗಗಳಿಗೂ ಕೈ ಹಾಕಿದರೆ, ಗುರಗಾಂವ್ ಮೂಲದ ಸ್ನ್ಯಾಪ್​​ಡೀಪ್​​​​​​ ಸ್ನ್ಯಾಪ್​​ಡೀಲ್ ಮೋಟಾರ್ಸ್ ಅನ್ನು ಆರಂಭಿಸಿದೆ. ಕೇವಲ ಟು ವ್ಹೀಲರ್ ಮತ್ತು ಫೋರ್ ವ್ಹೀಲರ್ ಮಾರಾಟಕ್ಕಾಗಿ ಈ ಪ್ರತ್ಯೇಕ ವಿಭಾಗ ತೆರೆಯಲಾಗಿದೆ.

ಸ್ನ್ಯಾಪ್​​ಡೀಲ್​​​ ಮೋಟಾರ್ಸ್ ಮೂಲಕ ಕೇವಲ ಎರಡೇ ನಿಮಿಷಗಳಲ್ಲಿ ಆನ್​ಲೈನ್ ಬುಕ್ಕಿಂಗ್ ಮತ್ತು ಲೋನ್ ಅಪ್ರೂವಲ್ ಮಾಡಿಕೊಳ್ಳಬಹುದು. ಇದೇ ವೇದಿಕೆಯಲ್ಲಿ ಆಟೋಮೊಬೈಲ್ ಸಾಮಗ್ರಿಗಳು, ಟೆಸ್ಟ್ ಡ್ರೈವ್, ಆನ್​ಲೈನ್ ಬುಕ್ಕಿಂಗ್, ಆರ್ಥಿಕ ಸವಲತ್ತುಗಳು ಮತ್ತು ಡಾಕ್ಯುಮೆಂಟೇಷನ್​​ಗಳನ್ನು ಮಾಡಬಹುದಾಗಿದೆ.

ಸಧ್ಯಕ್ಕೆ ಹೀರೋ ಮೋಟೋಕಾರ್ಪ್ ಮತ್ತು ಪಿಯಾಜಿಒ ವಾಹನಗಳು ಈ ವೇದಿಕೆಯಲ್ಲಿ ಲಭ್ಯವಿವೆ. ಮಹೀಂದ್ರಾ, ಸುಜುಕಿ ಮೋಟಾರ್​ಸೈಕಲ್ ಮತ್ತು ದಟ್ಸನ್​​ಗಳು ಕೆಲವೇ ದಿನಗಳಲ್ಲಿ ಸ್ನ್ಯಾಪ್​​ಡೀಲ್ ಸೇರಿಕೊಳ್ಳಲಿವೆ. ರುಪೀ ಪವರ್ ಮತ್ತು ಯೂನಿಕಾಮರ್ಸ್​ಗಳು ಸಾಲ ಸೌಲಭ್ಯದ ಜೊತೆಗೆ ಸ್ನ್ಯಾಪ್​​ಡೀಲ್ ಮೋಟಾರ್ಸ್ ಅನ್ನು ನಿರ್ವಹಿಸಲಿದೆ. ರುಪೀ ಪವರ್​​ನ ಬಹುಪಾಲು ಷೇರು ಖರೀದಿಸಿರುವ ಸ್ನ್ಯಾಪ್​​ಡೀಲ್, ಈ ವರ್ಷವಷ್ಟೇ ಯೂನಿಕಾಮರ್ಸ್ ಅನ್ನು ಖರೀದಿಸಿದೆ.

ವರ್ಷಾರಂಭದಲ್ಲಿ ಕಂಪನಿಯು ಸಣ್ಣ ವ್ಯಾಪಾರಿಗಳಿಗೆ, ಮನೆ ವ್ಯಾಪಾರಿಗಳಿಗಾಗಿ ಮೊಬೈಲ್ ಆಧರಿತ ಶೋಪೋ ಆರಂಭಿಸಿತ್ತು. 2013ರಲ್ಲಿ ಇದನ್ನು ಸ್ನ್ಯಾಪ್​ಡೀಲ್ ಖರೀದಿಸಿತ್ತು.

image


ಇದರೊಂದಿಗೆ ಇ ಕಾಮರ್ಸ್ ಮೂಲಕ ಆಟೋಮೊಬೈಲ್ ಮಾರಾಟ ಆರಂಭಿಸಿದ ಮೊದಲ ಸಂಸ್ಥೆಯಾಗಿ ಸ್ನ್ಯಾಪ್​​ಡೀಲ್ ಕಾರ್ಯಾರಂಭ ಮಾಡಿದೆ. ಕಳೆದ ಡಿಸೆಂಬರ್​ನಿಂದೀಚೆಗೆ 3 ಲಕ್ಷ ಬೈಕ್​​ಗ ಳನ್ನು ಮಾರಾಟ ಮಾಡಿರುವುದಾಗಿ ಪ್ರಕಟಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಸ್ನ್ಯಾಪ್​​ಡೀಲ್​​​​ ಮೋಟಾರ್ಸ್ ಮೂಲಕ ಕನಿಷ್ಟ 2 ಬಿಲಿಯನ್ ಡಾಲರ್ ವಹಿವಾಟು ನಡೆಸಲು ಕಂಪನಿ ಗುರಿ ಹಮ್ಮಿಕೊಂಡಿದೆ.

ಸ್ನ್ಯಾಪ್​ಡೀಲ್ ಮೋಟಾರ್ಸ್ ಮೂಲಕ ನಾವು ಇ-ಕಾಮರ್ಸ್​ನ ಲಾಭಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ಉದ್ಯಮ ಆಧರಿತ ಅವಕಾಶಗಳು, ವಾಹನ ಸಾಲ, ಆಟೋ ಪಾಲುದಾರಿಕೆ ಸೇರಿದಂತೆ ಹಲವು ಸೇವೆಗಳನ್ನು ಒಂದೇ ಕಡೆ ಒದಗಿಸುವ ಮೂಲಕ ನಮ್ಮ ಜೀವನದಲ್ಲಿ ಈ-ಕಾಮರ್ಸ್​ನ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸಲು ಬಯಸಿದ್ದೇವೆ ಎನ್ನುತ್ತಾರೆ. ಸ್ನ್ಯಾಪ್​ಡೀಲ್​​ನ ಚೀಫ್ ಪ್ರಾಡಕ್ಟ್ ಆಫೀಸರ್ ಆನಂದ್ ಚಂದ್ರಶೇಖರನ್.

ಈ ವೇದಿಕೆಯು ವಿವಿಧ ಬ್ರ್ಯಾಂಡ್​​ಗಳ ಉತ್ಪನ್ನಗಳನ್ನು ಒಂದೇ ಕಡೆ ಪರಿಶೀಲಿಸಲು ಮತ್ತು ಹೋಲಿಕೆ ಮಾಡಲು ಅವಕಾಶ ನೀಡುತ್ತಿದ್ದು, ಆಕರ್ಷಕ ಕ್ಯಾಟಲಗ್​​ಗಳನ್ನು ಅಳವಡಿಸಲಾಗಿದೆ. ಒಮ್ಮೆ, ಉತ್ಪನ್ನವನ್ನು ಆಯ್ಕೆಮಾಡಿಕೊಂಡರೆ, ಗ್ರಾಹಕರು, ಆ ಬಳಿಕ ಡೆಲಿವರಿ ಸಮಯ ನೋಡಿಕೊಂಡು ಡೀಲರ್​​ಗಳನ್ನು ಆರಿಸಿಕೊಳ್ಳಬಹುದಾಗಿದೆ.

ಯುವರ್​​ಸ್ಟೋರಿಯ ಅಭಿಪ್ರಾಯ

ಆನ್​​ಲೈನ್ ಬುಕ್ಕಿಂಗ್ ಮತ್ತು ರುಪೀ ಪವರ್ ಮೂಲಕ ಲೋನ್ ಅಪ್ರೂವಲ್ ನಿಸ್ಸಂಶಯವಾಗಿಯೂ ವಾಹನ ಖರೀದಿದಾರರನ್ನು ಸ್ನ್ಯಾಪ್​​ಡೀಲ್​ಗೆ ಸೆಳೆಯಲಿದೆ. ಜನಪ್ರಿಯ ಬೈಕ್​​ಗಳನ್ನು ಆಯ್ಕೆಯ ಬಣ್ಣಗಳೊಂದಿಗೆ ಖರೀದಿಸ ಬಯಸುವವರು, ಹಾಗೂ ಮಾರುತಿಯವರ ಸ್ವಿಫ್ಟ್, ಎನ್​ಫೀಲ್ಡ್ ಮೊದಲಾದ ವಾಹನಗಳನ್ನು ಖರೀದಿಸಬಯಸುವವರ 4-6 ವಾರಗಳ ವರೆಗೆ ಕಾಯಬೇಕಾಗುತ್ತದೆ. ಸ್ನ್ಯಾಪ್​ಡೀಲ್​​​ ಮೋಟಾರ್ಸ್ ಈ ಕಾಯುವಿಕೆಗೆ ಅಂತ್ಯ ಹಾಡಲಿದೆ.

ವಾಹನ ಸಾಲ ಕ್ಷೇತ್ರದಲ್ಲೂ ದೊಡ್ಡ ಪಾಲು ಪಡೆಯಲು ರುಪೀ ಪವರ್ ಬಳಕೆ ಸ್ನ್ಯಾಪ್​​ಡೀಲ್​​ಗೆ ಹೆಚ್ಚಿನ ಸಹಾಯ ಮಾಡಲಿದೆ. ಲೋನ್​​ಸ್ಟ್ರೀಟ್ ಮತ್ತು ಬ್ಯಾಂಕ್ ಬಜಾರ್​​ಗಳ ಭರಾಟೆ ಮಧ್ಯೆ ಈ ಕ್ರಮ ಸ್ನ್ಯಾಪ್​​ಡೀಲ್​​ಗೆ ಹೆಚ್ಚಿನ ಶಕ್ತಿ ಒದಗಿಸಲಿದೆ.

ಇ-ಕಾಮರ್ಸ್ ಖರೀದಿಗೆ ಹೋಲಿಸಿದರೆ, ಆಟೋಮೊಬೈಲ್ ಕ್ಷೇತ್ರವು ದೊಡ್ಡ ಖರೀದಿಯ ಮಾರುಕಟ್ಟೆಯಾಗಿದೆ. ಅವಶ್ಯಕವಾಗಿಯೂ ಸ್ನ್ಯಾಪ್​ಡೀಲ್​​​ನ ಈ ಪ್ರತ್ಯೇಕ ವೇದಿಕೆಯು ಹೆಚ್ಚಿನ ಜಿಎಂವಿ ಸಾಧಿಸಲು ಅವಕಾಶ ಕಲ್ಪಿಸಲಿದೆ. ಜಿಎಂವಿಯ ಆಟದಲ್ಲಿ ಒಬ್ಬರಿಗೊಬ್ಬರನ್ನು ಮೀರಿಸಲು ಇ-ಕಾಮರ್ಸ್ ಸಂಸ್ಥೆಗಳು ಜಿದ್ದಿಗೆ ಬಿದ್ದಿರುವಾಗ ಇದು ಸ್ನ್ಯಾಪ್​ಡೀಲ್​​ಗೆ ನೆರವಾಗಲಿದೆ.

ಲೇಖಕರು: ಜೈವರ್ಧನ್​​​

ಅನುವಾದಕರು: ಪ್ರೀತಮ್​​​​