ಬುಡಕಟ್ಟಿನ ನಂಟು- ಲುಕ್ ಲೈಕ್ ಎ ಟ್ರೈಬಲ್

ಪೂರ್ವಿಕಾ

1

ಪಾರಂಪರಿಕತೆ,ಸಂಸ್ಕತಿ,ದೇಸಿತನ ಇವೆಲ್ಲವೂ ದಿನ ಕಳೆದಂತೆ ಮರೆಯಾಗುತ್ತಿವೆ. ನಮ್ಮದೆಯಾದ ಸ್ಟೈಲ್‍ ಒಂದಿತ್ತು ಅನ್ನೋದನ್ನು ಮರೆತು ಮತ್ಯಾರದೋ ತನವನ್ನ ಬೆಳೆಸಿಕೊಳ್ಳೊದಕ್ಕೆ ಮುಂದಾಗುತ್ತೇವೆ. ಬುಡಕಟ್ಟುಜನಾಂಗ ಅಂದತ ಕ್ಷಣ ಅವ್ರ ವೇಶ ಭೂಷಣ ಕಣ್ಮುಂದೆ ಬರುತ್ತೆ. ಅವ್ರ ಹುಟ್ಟಿನೊಂದಿದೆ ಅವ್ರಿಗೆ ಸಾಕಷ್ಟು ಕಲೆಗಳು ಗೊತ್ತಿತ್ತು. ಕಸೂತಿಯಿಂದ ಹಿಡಿದು ತಮ್ಮ ಬಟ್ಟೆಗಳನ್ನ ಅವ್ರೇ ಖುದ್ದಾಗಿ ಸಿಂಗಾರ ಮಾಡಿಕೊಳ್ತಿದ್ರು. ಅಷ್ಟೇ ಅಲ್ಲದೆ ಇಂದಿಗೂ ಟ್ರೈಬಲ್ ಪ್ರಿಂಟ್‍ ಅನ್ನೋ ಒಂದು ಹೆಸರಿಗೆ ಅದೆಷ್ಟೋ ಪ್ರಸಿದ್ದಿ ಇದೆ. ಅಂತಹ ಕಲೆಯನ್ನ ಈಗಿನ ಜನತೆಗೆ ಪರಿಚಯಿಸೋದು ಹಾಗೂ ಅವ್ರ ಸ್ಟೈಲ್‍ ಆಫ್‍ ಡ್ರಸ್​​​ಗಳನ್ನ ಮಾರಾಟ ಮಾಡಲು ಹುಟ್ಟಿಕೊಂಡಿರೋ ಆನ್ ಲೈನ್ ಸ್ಟೋರ್ (uddstudio.com) ಇದೊಂದು ಕಂಪ್ಲೀಟ್‍ ಟ್ರೈಬಲ್ ಡಿಸೈನರಿ ಆನ್​​ಲೈನ್ ಸ್ಟೋರ್‍ ಅಂದ್ರೆತಪ್ಪಾಗಲಾರದು..

uddstudio.comನ ಹುಟ್ಟು ಹಾಕಿದ್ದು ಮುಂಬೈ ಮೂಲದ ಯುಥಿ. 9 ರಿಂದ 5 ವರೆಗೆ ಮಾಡೋ ಕೆಲಸ ಸಾಕು ಅಂತ ನಿರ್ಧಾರ ಮಾಡಿದ ಯುಥಿ ಏನಾದ್ರು ಹೊಸದಾಗಿ ಪ್ರಾರಂಭ ಮಾಡ್ಬೇಕು ಅಂತ ಯಾವಾಗ್ಲೂ ಯೋಚಿಸುತಿದ್ರಂತೆ. ಡಿಸೈನಿಂಗ್‍ ಅನ್ನ ಹವ್ಯಾಸವಾಗಿಟ್ಟುಕೊಂಡಿದ್ದ ಯುಥಿ ಸಮಯ ಸಿಕ್ಕಾಗಲೆಲ್ಲಾ ಡಿಸೈನಿಂಗ್ ಮಾಡಿಟ್ಟಿಕೊಳ್ತಿದ್ರು. ನಮ್ಮ ದೇಸಿತನವನ್ನ ಜನರಿಗೆ ಪರಿಚಯ ಮಾಡದಬೇಕು ಅಂತಿದ್ದ ಯುಥಿ ಅವ್ರಿಗೆ ಸಾಥ್ ನೀಡಿದ್ದು ಅವ್ರ ಪತಿ ಅತುಲ್. ಹವ್ಯಾಸವನ್ನೇ ಫುಲ್‍ಟೈಂ ಕಾಮ್ ಮಾಡಿಕೊಳ್ಳೋ ಹಿನ್ನಲೆಯಲ್ಲಿ ಯುಥಿ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿದ್ರು…

ಕಾಸ್ಟ್ಯೂಮ್‍ ಡಿಸೈನಿಂಗ್‍ ಅನ್ನ ಸೀರಿಯಸ್ ಆಗಿ ತೆಗೆದುಕೊಂಡ ಯುಥಿ, ಕೆಲಸ ಬಿಟ್ಟು ಮೂರು ತಿಂಗಳ ನಂತ್ರ ತಮ್ಮದೆ ಆದ ಒಂದು ಆರ್ಟ್ ಶೋ ಮಾಡಿದ್ರು. ಮೊದಲಿಗೆ ಅಷ್ಟೇನೂ ರೆಸ್ಪಾನ್ಸ್ ಬರದೇ ಇದ್ರೂ ಕೂಡ ನಂತ್ರ ಯುಥಿ ಅವ್ರ ಡಿಸೈನ್ಸ್ ಮಹಿಳೆಯರ ಮನಸ್ಸುಗೆಲ್ಲೋದ್ರಲ್ಲಿ ಯಶಸ್ವಿ ಆಯ್ತು. ಇದರಿಂದ ಖುಷಿಯಾದ ಯುಥಿ ಆನ್ಲೈನ್ ಸ್ಟೋರ್‍ ಅನ್ನ ಓಪನ್ ಮಾಡೋ ನಿರ್ಧಾರಕ್ಕೆ ಬರ್ತಾರೆ. ಇದಕ್ಕೂ ಮುಂಚೆ ಸಾಕಷ್ಟು ತಯಾರಿ ಮಾಡಿಕೊಂಡ್ರು. ಇಂಡಿಯನ್‍ಆರ್ಟ್ ,ಟೆಕ್ಸ್​​​ಟೈಲ್, ಡೈಯಿಂಗ್‍ ಎಲ್ಲಾದರ ಬಗ್ಗೆ ಯುಥಿ ಮತ್ತು ಅಥುಲ್‍ ಕಂಪ್ಲೀಟ್ ಆಗಿ ಟ್ರೈನಿಂಗ್‍ ತೆಗೆದುಕೊಂಡ್ರು. ಇದಾದ ನಂತ್ರ ಅದನ್ನ ದೇಶದಾಧ್ಯಂತ ಮಾರ್ಕೆಟಿಂಗ್ ಮಾಡೋದು ಹೇಗೆ ಅನ್ನೋದನ್ನ ರಿಸರ್ಚ್ ಮಾಡಿದ್ರು. ಇದೆಲ್ಲವನ್ನು ಮಾಡಿಕೊಂಡು ಆನ್‍ಲೈನ್ ಸ್ಟೋರ್ ಶುರು ಮಾಡಿದ್ರು. (udd) ಬುಡಕಟ್ಟುಜನಾಂಗದ ಕಲೆ, ಭಾರತದ ಗ್ರಾಮಿಣ ಸೊಗಡು ಹಾಗೂ ಜನಪದಕಲೆಯ ಮೂಲವಾಗಿಟ್ಟುಕೊಂಡು ಬಟ್ಟೆಗಳನ್ನ ಡಿಸೈನ್ ಮಾಡುತ್ತಿದೆ. ಅಷ್ಟೇ ಅಲ್ಲದೆ ಯುಥಿ ಮತ್ತು ಅತುಲ್ ಬುಡಕಟ್ಟು ಜನಾಂಗದವ್ರ ಬಳಿ ಈ ಡಿಸೈನ್ ಗಳನ್ನ ಕಲೆತು ನಂತ್ರ ಬಟ್ಟೆಗಳ ಮೇಲೆ ಟ್ರೈ ಮಾಡಿದ್ದಾರೆ. .ಹಳೆಯ ಕಲೆಗಳು ಎಲ್ಲೂ ಬದಲಾಗದಂತೆ ಕಾಪಾಡಿಕೊಂಡು ಅದನ್ನ ನೇರವಾಗಿ ಜನರಿಗೆ ನೀಡುತ್ತಿದ್ದಾರೆ. 

ಕೇವಲ ಬಟ್ಟೆಗಳು ಮಾತ್ರವಲ್ಲದೆ ಆಭರಣಗಳನ್ನು uddstudio.com ನಲ್ಲಿ ಖರೀದಿ ಮಾಡಬಹುದಾಗಿದೆ. uddstudio.comನಲ್ಲಿ ಟ್ರೈಬಲ್ ಡಿಸೈನ್ಸ್​​​ ಆದ ಪ್ಯಾಚ್ ವರ್ಕ್, ಪಂಚಿ ಸ್ಟೈಲ್, ತಾಂಡವ ಸ್ಟೈಲ್, ವೃಂದಾವನ ಸ್ಟೈಲ್, ವರ್ಲಿಆರ್ಟ್‍ಡಿಸೈನ್ಸ್ ಹಾಗೂ ಪ್ರಿಂಟ್‍ ಇರೋ ಬಟ್ಟೆಗಳನ್ನ ಖರೀದಿ ಮಾಡಬಹುದು. ಹಳೆ ಡಿಸೈನ್ ಈಗಿನ ಟ್ರೆಂಡ್‍ಗೆ ತಕ್ಕಂತ ಬಟ್ಟೆಗಳನ್ನ ಇಲ್ಲಿ ಶಾಪಿಂಗ್ ಮಾಡಬಹುದು. ಈಗಿನ ಸ್ಟೈಲ್​​ಗೆ ತಕ್ಕಂತ ಡ್ರಸ್, ಸ್ಯಾರಿ, ಲೆಹೆಂಗಾ,ಕುರ್ತಾ, ಕುರ್ತಾ,ಚೂಡಿದಾರ್ ಸೆಟ್‍ ಇನ್ನೂ ಅನೇಕ ಆಯ್ಕೆಗಳು uddstudio.com ನಲ್ಲಿ ಲಭ್ಯವಾಗುತ್ತೆ. ಹೀಗೆ ಬುಡಕಟ್ಟುಜನಾಂಗದಲ್ಲಿದ್ದ ಕಲೆ ಹಾಗೂ ಡಿಸೈನ್ಸ್ ಮತ್ತು ಕಲರ್​​​ಗಳಿಗೆ ಇಲ್ಲಿ ಹೆಚ್ಚು ಒತ್ತು ಕೊಡೋ ಯುಥಿ ಮತ್ತು ಅಥುಲ್‍ ದೇಶದುದ್ದಕ್ಕೂ ತಮ್ಮ ವ್ಯಾಪಾರವನ್ನ ಹರಡಿದ್ದಾರೆ. ರೇರ್‍ಕಲರ್ ಹಾಗೂ ಮಿಸ್ ಮ್ಯಾಚಿಂಗ್‍ ಕಲರ್ ಗಳು ಇಲ್ಲಿ ಹೈಲೆಟ್‍ ಆಗುತ್ತೆ. ಇನ್ನೂ ಪ್ರಿಂಟ್ ವಿಚಾರದಲ್ಲೂ ಎಲ್ಲೂ ರಾಜಿಯಾಗದೆ ಕ್ವಾಲಿಟಿ ಪ್ರಿಂಟಿಂಗ್‍ ಅನ್ನ ಕಸ್ಟಮರ್ಸ್​ಗೆ ನೀಡುತ್ತಾರೆ. ಹವ್ಯಾಸವನ್ನೇ ಫುಲ್‍ಟೈಂ ಕಾಮ್ ಮಾಡಿಕೊಂಡ ಯುಥಿ ಈಗ ಕಂಪ್ಲೀಟ್ ಹ್ಯಾಪಿಯಾಗಿದ್ದಾರೆ.

Related Stories