ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಬ್ಯಾಕ್ಟೀರಿಯದಿಂದ ಉಂಟಾಗುವ ಮಿದುಳು ಜ್ವರ(ಮೆನಿಂಜೈಟಿಸ್) ಕ್ಕೆ ಲಸಿಕೆಯನ್ನು ಹೊಂದಬಹುದು

ಟೀಮ್ ವೈ.ಎಸ್​. ಕನ್ನಡ

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಬ್ಯಾಕ್ಟೀರಿಯದಿಂದ ಉಂಟಾಗುವ ಮಿದುಳು ಜ್ವರ(ಮೆನಿಂಜೈಟಿಸ್) ಕ್ಕೆ ಲಸಿಕೆಯನ್ನು ಹೊಂದಬಹುದು

Wednesday December 23, 2015,

2 min Read

image


ಹಿಲ್ಮನ್ ಪ್ರಯೋಗಾಲಯವು ಸುಧಾರಿತ ಫಲಪ್ರದತೆಯ ಮತ್ತು ಕಡಿಮೆ ವೆಚ್ಚದ ಬ್ಯಾಕ್ಟೀರಿಯದಿಂದ ಉ0ಟಾಗುವ ಮಿದುಳು ಜ್ವರದ ಲಸಿಕೆಯ ಬಗ್ಗೆ ಪ್ರಗತಿ ಸಾಧಿಸಿದೆ. ಅಲ್ಲದೆ ನಿಸ್ಸೇರಿಯಾ ಮೆನಿಂಜೈಟಿಡಿಸ್ಸೆರೊಗ್ರೂಪ್​​ 10 ರ ಲಸಿಕೆಯ ಸಂಶ್ಲೇಷಣೆಯ ಕುರಿತಾದ ವರದಿಯನ್ನೂ ಪ್ರಕಟಿಸಿದೆ.

ಭಾರತದಲ್ಲಿ ಮೆನಿಂಜೋಕೊಕ್ಕಲ್ ಪಿಡುಗಿನ ಪ್ರಕರಣಗಳು ಕಡಿಮೆಯಾಗಿದ್ದರೂ ಕಳೆದ 100 ವರ್ಷಗಳಲ್ಲಿ ಅಲ್ಲಲ್ಲಿ ಸಾಂದರ್ಭಿಕ ದಾಖಲೆಗಳನ್ನು ನೋಡಬಹುದೆಂದು ಹಿಲ್ಮನ್ ಪ್ರಯೋಗಾಲಯವು ಗುವಾಹಟಿಯಲ್ಲಿ ತಿಳಿಸಿದೆ. ಈ ರೋಗಕ್ಕೆ ಲಭ್ಯವಿರುವ ಲಸಿಕೆ ದುಬಾರಿಯಾಗಿದ್ದು, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದನ್ನು ಪಡೆಯುವುದು ಮತ್ತು ಖರೀದಿಸುವದು ಕಷ್ಟಸಾಧ್ಯವಾಗಿದೆಯೆಂದು ತಿಳಿಸಿದೆ.

ಹಿಲ್ಮನ್ ಪ್ರಯೋಗಾಲಯವು ವಿಶ್ವದ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಮರ್ಕ್​ ಅಂಡ್​ ಕೊ ಕಂಪನಿ ಮತ್ತು ವೆಲ್‍ಕಮ್‍ ಟ್ರಸ್ಟ್​ನೊಂದಿಗೆ ಜೊತೆಗೂಡಿ ನವೀನ ಪ್ರಯೋಗಗಳ ಮೂಲಕ ಕಡಿಮೆ ವೆಚ್ಚದ ಲಸಿಕೆಯನ್ನು ತಯಾರಿಸುವ ನಿಟ್ಟಿನಲ್ಲಿ ಸಂಕಲ್ಪ ಬದ್ಧವಾಗಿದೆಯೆಂದು ಅವರು ತಿಳಿಸಿದರು.

ಯಾವುದೇ ಲಸಿಕಾ ತಯಾರಿಕೆಯಲ್ಲಿಅಧಿಕ ಬಂಡವಾಳದ ಅಗತ್ಯವಿದ್ದರೂ ಹಿಲ್ಮನ್, ನವೀನ ಪದ್ಧತಿಯ ಮೂಲಕ ಲಸಿಕಾ ಉತ್ಪಾದಕರು ಕಡಿಮೆ ಬೆಲೆಯ ಲಸಿಕೆ ತಯಾರಿಸುವತ್ತ ಪ್ರಯತ್ನಿಸುವುದನ್ನುಖಾತ್ರಿ ಪಡಿಸುವತ್ತ ಮುಂದಾಗಿರುವುದಾಗಿ ತಿಳಿದುಬಂದಿದೆ.

ಬೆಳೆಯುತ್ತಿರುವ ಮೆನಿಂಜೈಟಿಸ್ ಪ್ರಕರಣಗಳನ್ನು ಗಮನದಲ್ಲಿರಿಸಿ ಪ್ರಯೋಗಾಲಯಗಳು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಗಾಗಿ ಸಂಶ್ಲೇಷಣೆಯ ಒಂದು ಸಮರ್ಥ ತಂತ್ರದ ಕುರಿತಾಗಿ ಒಂದು ವೈಜ್ಞಾನಿಕ ವರದಿಯನ್ನು ಪ್ರಕಟಿಸಿವೆ. ವಿಶ್ವ ಲಸಿಕಾ ಅನ್ವೇಷಣೆ ಮತ್ತು ಅಭಿವೃದ್ಧಿ ಸಂಘಟನೆ(global vaccine research and development organisation)ಯ ವರದಿಯಲ್ಲಿಯ ಉಲ್ಲೇಖದಂತೆ ಸಂಶೋಧನೆ ಇನ್ನೂ ನಡೆದಿರುವಾಗಲೇ ಪರೀಕ್ಷಣೆಯ ಮೊದಲ ವರದಿಯಲ್ಲಿಯೇ ಧನಾತ್ಮಕ ಫಲಿತಾಂಶಗಳು ದೊರೆತಿದ್ದು ಹೊಸ ಲಸಿಕೆಯು ಪ್ರಸಕ್ತ ಲಸಿಕೆಗಳಿಗಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ.

ಹಿಲ್ಮನ್ ಪ್ರಯೋಗಾಲಯ ಹೊಸ ಲಸಿಕೆಗಳ ಸಂಶೋಧನೆ ಮತ್ತು ಸದ್ಯದ ಲಸಿಕೆಗಳ ಕ್ಷಮತೆಯನ್ನು ಬೆಳೆಸುವದರ ಮೂಲಕ ಶೈಕ್ಷಣಿಕ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿಯ ನಡುವಿನ ಬಿರುಕನ್ನುತುಂಬುವುದರಲ್ಲ್ಲಿ ವೇಗ ವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಸೂತ್ರದ ಅಭಿವೃದ್ಧಿಯ ಹಿಂದಿನ ವಿಚಾರ ಪ್ರಕ್ರಿಯೆಯನ್ನು ಹಂಚಿಕೊಳ್ಳುತ್ತ ಹಿಲ್ಮನ್ ಪ್ರಯೋಗಾಲಯದ ಮುಖ್ಯ ನಿರ್ವಹಣಾಧಿಕಾರಿ ಯಾದಡಾ. ದವಿಂದರ್‍ಗಿಲ್‍ ಅವರು ದೇಶದ ಆರ್ಥಿಕತೆಯ ಮೇಲೆ ಈ ಪ್ರಯೋಗದ ಪರಿಣಾಮದ ಬಗ್ಗೆ ಸಂಶೋಧನೆ ಹಾಗೂ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಸಂಸ್ಥೆಯು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ಗಿಲ್‍ರ ಹೇಳಿಕೆಯಲ್ಲಿ ದೇಶದ ಲಸಿಕಾ ಕಾರ್ಯದಲ್ಲಿ ಇರುವ ಕಂದಕವನ್ನುತುಂಬುವುದರಲ್ಲಿ ಈ ಸೂತ್ರದ ಪಾತ್ರದೊಂದಿಗೆ ಲಸಿಕೆಯ ಬಳಕೆ, ಕೈಗೆಟಕುವಿಕೆ ಮತ್ತು ಸ್ವೀಕಾರದ ಪರಿಸ್ಥಿತಿಗಳ ಮೌಲ್ಯ ಮಾಪನವನ್ನೂ ಮಾಡಲಾಗುವುದೆಂದು ಉಲ್ಲೇಖಿಸಲಾಗಿದೆ. ಪ್ರಯೋಗಾಲಯದ ಅಭಿಪ್ರಾಯದಂತೆ ಬ್ಯಾಕ್ಟೀರಿಯಾದಿಂದ ಉಂಟಾಗುವ ಮೆನಿಂಜೈಟಿಸ್ ಮಾರಕ ಮತ್ತು ಸಾಂಕ್ರಾಮಿಕವಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ, ಸೀನುವುದು ಮತ್ತು ಕೆಮ್ಮುವುದರಿಂದ ಹರಡಬಹುದಾಗಿದೆ.

ಮೆನಿಂಜೈಟಿಸ್‍ನ ಬ್ಯಾಕ್ಟೀರಿಯಾ ಒಬ್ಬ ವ್ಯಕ್ತಿಯ ರಕ್ತದಲ್ಲಿ ಮೂಗು, ಕಿವಿ ಅಥವಾ ಶ್ವಾಸನಾಳದ ಇತರ ಮೇಲ್ಭಾಗದ ಅಂಗಗಳಿಂದ ಪ್ರವೇಶಿಸಬಹುದೆಂದೂ ತಿಳಿಸಲಾಗಿದೆ.


ಅನುವಾದಕರು: ಸುಘೋಶ್​