ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಮಧ್ಯಾಹ್ನ ಊಟದ ಯೋಜನೆ ಲಾಭ ಸಿಗಲ್ಲ

ಟೀಮ್​ ವೈ.ಎಸ್​. ಕನ್ನಡ

1

ಆಧಾರ್ ಕಾರ್ಡ್ ಇಲ್ಲದೇ ಇದ್ರ ಈಗ ಯಾವ ಸೌಲಭ್ಯವೂ ಸಿಗುವುದಿಲ್ಲ. ಬ್ಯಾಂಕ್ ಖಾತೆಗಳಿಂದ ಹಿಡಿದು, ಪಾಸ್​ಪೋರ್ಟ್ ತನಕವೂ ಎಲ್ಲವೂ ಆಧಾರ್ ಕಾರ್ಡ್ ಮೂಲಕವೇ ನಡೆಯುತ್ತಿದೆ. ಈಗ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಆಧಾರ್ ಕಾರ್ಡ್ ಅನ್ನು ವಿದ್ಯಾರ್ಥಿಗಳು ಹೊಂದಿರಲೇಬೇಕು ಅನ್ನುವುದನ್ನು ಜಾರಿಗೆ ತಂದಿದೆ. ಮಧ್ಯಾಹ್ನದ ಊಟದ ಲಾಭ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಪಡೆಯುವುದು ಅನಿವಾರ್ಯವಾಗಿದೆ. ಮಧ್ಯಾಹ್ನ ಊಟದ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೆಲಸಗಾರರು ಕೂಡ ಆಧಾರ್ ಕಾರ್ಡ್ ಅಥವಾ ಯೂನಿಕ್ ಐಡೆಂಟಿಫಿಕೆಷನ್ ನಂಬರ್ ಪಡೆದ್ರೆ ಮಾತ್ರ ಕೆಲಸ ಮುಂದುವರೆಸಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರ ಈ ಹಿಂದೆ ಎಂಪ್ಲಾಯಿಸ್ ಪೆನ್ಷನ್ ಸ್ಕೀಮ್ ಮತ್ತು ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯಿಮೆಂಟ್ ಗ್ಯಾರೆಂಟಿ ಆ್ಯಕ್ಟ್(MNREGA)ನ ಪ್ರಯೋಜನ ಪಡೆಯಲು ಕೂಡ ಆಧಾರ್ ಕಾರ್ಡ್ ಅನ್ನು ಕಡ್ಡಾಯಮಾಡಿತ್ತು.

ಈಗಾಗಲೇ ಅಸ್ಸಾಂ, ಮೇಘಾಲಯ ಮತ್ತು ಜಮ್ಮುಕಾಶ್ಮೀರಗಳಲ್ಲಿ ಸರಕಾರದ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಹೊಂದುವುದನ್ನು ಕಡ್ಡಾಯ ಮಾಡಲಾಗಿದೆ. ಸರಕಾರ ನೀಡುವ ಎಲ್ಲಾ ಸೌಲಭ್ಯಗಳು ಇನ್ನುಮುಂದೆ ಆಧಾರ್ ಕಾರ್ಡ್ ಮೂಲಕವೇ ಹಂಚಿಕೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಇದನ್ನು ಓದಿ: ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್​​ಕರ್ ಕಥೆ ಕೇಳಿ..!

ಅಂದಹಾಗೇ, ವಿದ್ಯಾರ್ಥಿಗಳು ಮತ್ತು ಮಧ್ಯಾಹ್ನದ ಊಟದ ಯೋಜನೆಯಡಿ ಕೆಲಸ ಮಾಡುವ ಕೆಲಸಗಾರರು ಮುಂದಿನ ಜೂನ್ 30ರ ಒಳಗಾಗಿ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಲೇಬೇಕು. ಆಧಾರ್ ಕಾರ್ಡ್ ಹೊಂದಿದ್ದಾರೆ ಮಧ್ಯಾಹ್ನದ ಊಟದ ಯೋಜನೆಯಲ್ಲಿ  ಅವ್ಯವಹಾರ ನಡೆಯುವುದನ್ನು ತಡೆಯಲು ಸಾಧ್ಯ ಅನ್ನುವುದು ಸರ್ಕಾರದ ನಂಬಿಕೆ. 2015-2016ರ ಶೈಕ್ಷಣಿಕ ವರ್ಷದಲ್ಲಿ ಭಾರತದಾದ್ಯಂತ ಸುಮಾರು 13.16 ಕೋಟಿ ಮಕ್ಕಳು ಮಧ್ಯಾಹ್ನದ ಊಟದ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿಸಲ್ಲಿಸಿದ್ದರು. ಈ ಪೈಕಿ ಸುಮಾರು 11.50 ಲಕ್ಷ ಶಾಲೆಯ 10 ಕೋಟಿ 3 ಸಾವಿರ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದರು. ಈಗ ಮಾನವ ಸಂಪನ್ಮೂಲ ಸಚಿವಾಲಯ ಈ ಯೋಜನೆಯನ್ನು ಮತ್ತಷ್ಟು ಪಾರದರ್ಶಕವನ್ನಾಗಿಸುವ ಪ್ರಯತ್ನ ಮಾಡುತ್ತಿದೆ.

“ ಆಧಾರ್ ಕಾರ್ಡ್ ಹೊಂದಿದ್ದರೆ, ಸರಕಾರಕ್ಕೆ ಅನುದಾನ ಕೊಡುವುದಕ್ಕೆ ಮತ್ತು ಅನುದಾನ ಪಡೆಯುವವರ ಎಲ್ಲಾ ವಿವರಗಳು ಸುಲಭವಾಗಿ ಸಿಗುತ್ತದೆ. ಅಷ್ಟೇ ಅಲ್ಲ ದಾಖಲೆಗಳಿಗೆ ಎಂಟ್ರಿ ಮಾಡಲು ಸುಲಭವಾಗುತ್ತದೆ. ಆಧಾರ್ ಕಾರ್ಡ್​ನಿಂದ ಎಲ್ಲವೂ ಸುಲಭವಾಗುತ್ತದೆ.”
- ಮಾನವ ಸಂಪನ್ಮೂಲ ಇಲಾಖೆ

ಕಳೆದ ಕೆಲ ತಿಂಗಳ ಹಿಂದೆ ಡಿಪಾರ್ಟ್ ಮೆಂಟ್ ಮತ್ತು ಸ್ಕೂಲ್ ಎಜುಕೇಷನ್ ಆಫ್​ ಲಿಟರೆಸಿ (DSEL) ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡುವುದನ್ನು ವಿರೋಧಿಸಿತ್ತು. ಆದ್ರೆ ಈಗ ಸಚಿವಾಲಯವೇ ಆಧಾರ್ ಕಾರ್ಡ್ ಅನ್ನು ಕಡ್ಡಾಯವನ್ನಾಗಿ ಮಾಡಿದೆ. ಒಟ್ಟಿನಲ್ಲಿ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಮುಂದೊಂದು ದಿನ ಸರಕಾರದ ಯಾವುದೇ ಯೋಜನೆಗಳ ಲಾಭ ಪಡೆಯಲು ಸಾಧ್ಯವಿಲ್ಲ ಅನ್ನುವುದು ಸ್ಪಷ್ಟವಾಗುತ್ತಿದೆ.  

ಇದನ್ನು ಓದಿ:

1. ಔಷಧ ಉದ್ಯಮದ ಯಶಸ್ವಿ ಸಾರಥಿ : ದೇಶದ 2ನೇ ಶ್ರೀಮಂತ ದಿಲೀಪ್ ಸಾಂಘ್ವಿ 

2. ಭಾರತ ಶ್ರೀಮಂತವಾಗುತ್ತಿದೆ- ಯಾಕೆ ಅಂತೀರಾ.. ಇದನ್ನು ಓದಿ..!

3. ಸಾಂಕೇತಿಕ ಭಾಷೆ ಮೂಲಕ ಕಿವುಡ ಕಲಾವಿಧರಿಗೆ ದನಿಯಾದ ಯುವತಿ..

Related Stories

Stories by YourStory Kannada