ಫೇಸ್.. !-ಕೆಲಸದ ಸಂದರ್ಶನವನ್ನು ಧೈರ್ಯವಾಗಿ ಎದುರಿಸಿ

ಟೀಮ್​​ ವೈ.ಎಸ್​​.

ಫೇಸ್.. !-ಕೆಲಸದ ಸಂದರ್ಶನವನ್ನು ಧೈರ್ಯವಾಗಿ ಎದುರಿಸಿ

Tuesday October 13, 2015,

3 min Read

ರಾಜೇಶ್ ಮತ್ತು ವೆಂಕಟ್ ಕೋಝಿಕ್ಕೋಡ್ ಐಐಎಂನಿಂದ 2007ರಲ್ಲಿ ಪದವಿ ಪಡೆದರು. ಬಳಿಕ ಸಿಟಿಬ್ಯಾಂಕ್ ಮತ್ತು ಡಿಲೋಟ್ಟೆ ಎಂಬ ಕನ್ಸಲ್ಟಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅವರಿಗೆ ಉದ್ಯಮತ್ತ ಆಸಕ್ತಿ ಹೆಚ್ಚಾಗಿತ್ತು. ಈ ಇಬ್ಬರು ಗೆಳೆಯರು ಮತ್ತು ಕೆಲ ಸಮಾನಮನಸ್ಕರು ಪದೇ ಪದೇ ಒಂದೆಡೆ ಸೇರಿ ಏನಾದರೂ ಒಂದು ಉದ್ಯಮ ಸ್ಥಾಪಿಸಬೇಕು ಎಂದು ಚರ್ಚಿಸುತ್ತಿದ್ದರು. ಇಂತಹ ಚರ್ಚೆಯ ವೇಳೆಗೆ ಸಾವಿರಾರು ಐಡಿಯಾಗಳು ಬಂದು ಹೋಗಿದ್ದವು. ಆದರೆ, ಉದ್ಯಮಕ್ಕೆ ಇಳಿಯಲು ಅವರು ದೊಡ್ಡದೊಂದು ಐಡಿಯಾವನ್ನು ಎದುರು ನೋಡುತ್ತಿದ್ದರು.

image


ಅಂತಹದ್ದೊಂದು ದಿನ ಬಂದೇ ಬಿಟ್ಟಿತ್ತು. ಇದಕ್ಕೆ ವಿಧಿ ಲಿಖಿತ ಎನ್ನದೇ ಬೇರೇನೂ ಹೇಳಲು ಸಾಧ್ಯವಿಲ್ಲ. ರಸ್ತೆ ಅಪಘಾತಕ್ಕೆ ಸಿಲುಕಿದ ಇವರು ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಆಗಿದ್ದರು. ಅಲ್ಲೇ ಅವರು ತಮ್ಮ ಬದುಕು, ಮುಂದಿನ ಹಾದಿ ಎಲ್ಲದರ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಂಡಿದ್ದು, ಆಸ್ಪತ್ರೆಯ ಬೆಡ್​​ನಲ್ಲಿ ಮಲಗಿಕೊಂಡೇ ತಮ್ಮ ವೃತ್ತಿಗೆ ಗುಡ್​​ಬೈ ಹೇಳಿ, ನವ್ಯೋದ್ಯಮ ಫೇಸ್ ಮೂಲಕ ವೃತ್ತಿರಂಗಕ್ಕೆ ಧುಮುಕಲು ನಿರ್ಧರಿಸಿದರು. ಫೇಸ್ ಎಂದರೆ ಫೋಕಸ್ ಅಕಾಡೆಮಿ ಫಾರ್ ಕೆರಿಯರ್ ಎನ್ಹಾನ್ಸ್​​ಮೆಂಟ್​​​ ​​). ದೇಶಾದ್ಯಂತ ತಮ್ಮ ಮುಷ್ಟಿ ಬಿಗಿಗೊಳಿಸಿರುವ ಟೈಮ್, ಐಎಂಎಸ್ ಮೊದಲಾದ ಸಂಸ್ಥೆಗಳ ಜೊತೆ ಪೈಪೋಟಿಗೆ ಬಿದ್ದಿರುವ ಫೇಸ್, ಕ್ಯಾಟ್ ಸೇರಿದಂತೆ ವಿವಿಧ ವೃತ್ತಿ ಆಧರಿತ ಪರೀಕ್ಷೆಗಳಿಗೆ ಕೋಚಿಂಗ್ ನೀಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ಫೇಸ್ ಜಾಗ ಕಂಡುಕೊಳ್ಳದೇ ಇದ್ದರೂ, ಫೇಸ್ ಎಂಟ್ರಿಯಿಂದ ಉಳಿದ ಸಂಸ್ಥೆಗಳಿಗೆ ಪೈಪೋಟಿ ಸೃಷ್ಟಿಯಾಗಿರುವುದಂತೂ ನಿಜ.

ಐಡಿಯಾ ಹುಟ್ಟಿಕೊಂಡಿದ್ದು ಹೇಗೆ?

ಇದು ರಾತ್ರೋರಾತ್ರಿ ಹುಟ್ಟಿಕೊಂಡ ಐಡಿಯಾ ಅಂತೂ ಖಂಡಿತಾ ಅಲ್ಲ. ಬಾತ್​​ರೂಂನ ಶವರ್​​ನಡಿ ಹುಟ್ಟಿದ ಚಿಂತನೆಯೂ ಅಲ್ಲ. ಆದರೆ, ಒಂದಂತೂ ನಿಜ, ಶಿಕ್ಷಣ ಕ್ಷೇತ್ರದ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದ ನನಗೂ ರಾಜೇಶ್​​ಗೂ ಏನಾದರೂ ಮಾಡಿದರೆ, ಇದೇ ಕ್ಷೇತ್ರದಲ್ಲಿ ಮಾಡಬೇಕು ಎಂಬ ಆಸೆಯಂತೂ ಇತ್ತು ಎನ್ನುತ್ತಾರೆ ವೆಂಕಟ್. ಎಂಬಿಎ ಆಕಾಂಕ್ಷಿಗಳಿಗೆ ಕ್ಯಾಟ್ ಕೋಚಿಂಗ್ ಮೂಲಕ ಸಂಸ್ಥೆ ಆರಂಭಿಸಿದರು, ಈ ಜೋಡಿ ಗೆಳೆಯರು. ಈ ಕ್ಷೇತ್ರದಲ್ಲಿ ರಾಷ್ಟ್ರೀಯ ಕೋಚಿಂಗ್ ಸೆಂಟರ್​​ಗಳಿದ್ದು, ಭಾರೀ ಪೈಪೋಟಿ ಇತ್ತು. ಆದರೆ, ಬದಲಾವಣೆ ಆಗಿಯೇ ತೀರುತ್ತದೆ. ಇವರ ಬದುಕಿನಲ್ಲೂ ಅಂತಹ ಸಂದರ್ಭವೊಂದು ಒದಗಿ ಬಂತು. ಅವರಿದ್ದ ಪ್ರದೇಶದ ಹೊಸ ಕಾಲೇಜೊಂದು, ಇವರ ಸಂಸ್ಥೆಯನ್ನು ಸಂಪರ್ಕಿಸಿತು. ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡಿ, ಎಲ್ಲಾ ಸಂದರ್ಶನಗಳನ್ನು ಸುಲಭದಲ್ಲಿ ಉತ್ತೀರ್ಣರಾಗುವಂತೆ ಮಾಡಬೇಕು ಎನ್ನುವುದೇ ಅವರ ಆಫರ್ ಆಗಿತ್ತು. ಅದು ಅವರು ದೀರ್ಘ ಕಾಲದಿಂದ ನಿರೀಕ್ಷಿಸುತ್ತಿದ್ದ ಸಂದರ್ಭ. ಈ ವಲಯದಲ್ಲಿ ಅಂದರೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿಪರ ತರಬೇತಿ ನೀಡುವ ಯಾವುದೇ ಸಂಸ್ಥೆಗಳಿರಲಿಲ್ಲ. ಇದೇ ಅವರ ಭವಿಷ್ಯ ಎಂದು ಅರಿತುಕೊಂಡು ತಕ್ಷಣವೇ ಒಪ್ಪಿಕೊಂಡರು. ಈ ಕ್ಷೇತ್ರದ ಮಾರುಕಟ್ಟೆ ಕನಿಷ್ಟವೆದರೂ 200 ಮಿಲಿಯನ್ ಡಾಲರ್ ಎಂದು ಅಂದಾಜಿಸುತ್ತಾರೆ ವೆಂಕಟ್.

image


ವ್ಯವಹಾರ:

2008ರ ಡಿಸೆಂಬರ್​​ನಲ್ಲಿ ಆರಂಭಗೊಂಡ ಫೇಸ್ ಸಂಸ್ಥೆ, ಅಲ್ಪಾವಧಿಯಲ್ಲೇ ಬಲುದೂರ ನಡೆದುಬಂದಿದೆ. ಸಧ್ಯಕ್ಕೆ ಈ ಕ್ಷೇತ್ರದಲ್ಲಿ ಫೇಸ್ ಸವಾಲು ರಹಿತ ಏಕಮೇವ ನಾಯಕನಾಗಿ ಮುನ್ನಡೆಯುತ್ತಿದೆ. ಕಾಲೇಜುಗಳಿಗೆ, ಕಾರ್ಪೋರೇಟ್ ಸಂಸ್ಥೆಗಳಿಗೆ ಉದ್ಯೋಗ ಒದಗಿಸುವ ತರಬೇತುದಾರ ಸಂಸ್ಥೆಯಾಗಿ ಅತಿದೊಡ್ಡ ತರಬೇತಿದಾರರ ತಂಡವನ್ನು ಹೊಂದಿದೆ. “ನಾವು ಈಗಾಗಲೇ 400ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳ 5,50,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದೇವೆ. ಐಐಟಿ ಮದ್ರಾಸ್ ನಿಂದ ಆರಂಭಿಸಿ, ಆಂಧ್ರಪ್ರದೇಶ, ತಮಿಳುನಾಡಿನ ಗ್ರಾಮಾಂತರ ಕಾಲೇಜುಗಳೂ ಇವರ ಗ್ರಾಹಕರಾಗಿವೆ. ಅಂದಹಾಗೆ ನಾವು ವಿಐಟಿ ಯೂನಿವರ್ಸಿಟಿಯಲ್ಲಿ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದೇವೆ. ಕಾಗ್ನಿಜೆಂಟ್ ಸಂಸ್ಥೆಯು ಒಂದೇ ಕ್ಯಾಂಪಸ್ನಲ್ಲಿ 1820 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಉದ್ಯೋಗದ ಆಫರ್ ನೀಡಿ ದಾಖಲೆ ಬರೆದಿದೆ, ಎನ್ನುತ್ತಾರೆ ವೆಂಕಟ್. ಕಾಗ್ನಿಜೆಂಟ್, ವಿಪ್ರೋ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳ ಜೊತೆ ಉದ್ಯೋಗವಕಾಶ ಕಲ್ಪಿಸುವ ಬಗ್ಗೆಯೂ ಒಪ್ಪಂದ ಮಾಡಿಕೊಂಡಿದ್ದಾರೆ. ಕೊಯಂಬತ್ತೂರಿನಲ್ಲಿ ಆರಂಭಗೊಂಡ ಸಂಸ್ಥೆ ಈಗ ಚೆನ್ನೈ, ಬೆಂಗಳೂರು, ಹೈದ್ರಾಬಾದ್, ಮುಂಬೈಗಳಲ್ಲಿ ಶಾಖೆ ತೆರೆದಿದೆ. ಈ ಶಾಖೆಗಳು ಪ್ರಾದೇಶಿಕ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದು, 500 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿವೆ.

ಕಾಲೇಜುಗಳಿಗೆ ಮುಖ್ಯವಾಗಿ ಸಮಸ್ಯೆ ನಿಭಾಯಿಸುವುದು, ಸಂವಹನ ಮೊದಲಾದ ಕ್ಷೇತ್ರಗಳಲ್ಲಿ ಫೇಸ್ ನೆರವು ನೀಡುತ್ತಿದೆ. ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂಸ್ಥೆಯು, ಜಾನ ಆಧರಿತ ಶಿಕ್ಷಣ ಹಾಗೂ ಕೌಶಲ್ಯ ಹೆಚ್ಚಿಸುವ ಶಿಕ್ಷಣವನ್ನು ಒದಗಿಸುತ್ತಿದೆ. ಫೇಸ್ ತಂಡದಲ್ಲಿ 150 ಮಂದಿ ತರಬೇತುದಾರರಿದ್ದಾರೆ. ಇವರು ಬೇರೆ ಬೇರೆ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಅಂಗವಾಗಿ ತರಬೇತಿಗಳನ್ನು ನೀಡುತ್ತಾರೆ.

ಫೇಸ್ ಯಾವುತ್ತೂ ಹವ್ಯಾಸಿ ತರಬೇತಿದಾರರ ಮೂಲಕ ಕಾರ್ಯಾಚರಿಸುತ್ತಿಲ್ಲ. ಫೇಸ್ ಬಳಿ, ಇರುವವರೆಲ್ಲಾ ಪೂರ್ಣಕಾಲಿಕ ತರಬೇತುದಾರರಾಗಿದ್ದಾರೆ. ತಂತ್ರಜಾನ ಆಧರಿತ, ಶೈಕ್ಷಣಿಕ ಸಹಕಾರಕ್ಕಾಗಿ, ಫೇಸ್ ತನ್ನದೇ ಆದರ ತಾಂತ್ರಿಕ ತಂಡವನ್ನೂ ಹೊಂದಿದೆ.

ಸವಾಲುಗಳು

ಬಹುತೇಕ ಉನ್ನತ ಶಿಕ್ಷಣ ಸಂಸ್ಥೆಗಳು ತೆರಿಗೆ ಉಳಿತಾಯಕ್ಕಾಗಿಯೋ ಅಥವಾ ವ್ಯವಹಾರದ ಉದ್ದೇಶಕ್ಕಾಗಿಯೋ ಸ್ಥಾಪಿಸಲ್ಪಡುತ್ತವೆ. ಈ ಕ್ಷೇತ್ರವು ಅತ್ಯುತ್ತಮ ವೃತ್ತಿಪರರನ್ನಾಗಲೀ, ಅತ್ಯಂತ ಬುದ್ಧಿಶಾಲಿಗಳನ್ನಾಗಲೀ ಆಕರ್ಷಿಸುತ್ತಿಲ್ಲ. ಇದರ ಪರಿಣಾಮವಾಗಿ, ಹಲವು ವ್ಯಕ್ತಿಗಳು ಮತ್ತು ಅರೆಕಾಲಿಕ ತರಬೇತುದಾರರು, ಆಡಳಿತ ಮಂಡಳಿಗಳನ್ನು ಸಂಪರ್ಕಿಸಿ, ಕಳಪೆ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿದ್ದಾರೆ. “ಕಾಲೇಜುಗಳಿಗೆ ಅಂತಿಮ ಘಟ್ಟದಲ್ಲಿ ಇದ್ದಕ್ಕಿದ್ದಂತೆ ಜಾನೋದಯವಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಕನಸು ಕಾಣತೊಡಗುತ್ತಾರೆ. ಆದರೆ, ಅದಕ್ಕೆ ಬೇಕಾದ ಗುಣಮಟ್ಟದ ವೃತ್ತಿಪರ ತರಬೇತಿಯನ್ನಾಗಲೀ, ಕೌಶಲ್ಯಭರಿತ ಶಿಕ್ಷಣವನ್ನಾಗಲೀ ಒದಗಿಸಿರುವುದಿಲ್ಲ,” ಎನ್ನುತ್ತಾರೆ ವೆಂಕಟ್. ಸಾಮಾನ್ಯವಾಗಿ ಎಂಜಿನಿಯರಿಂಗ್ ಕಾಲೇಜುಗಳು, ಎಲ್ಲಿಯೂ ಉದ್ಯೋಗ ಸಿಗದ ಅಥವಾ, ಶೈಕ್ಷಣಿಕವಾಗಿ ಕೆಳಹಂತದ ಪ್ರದರ್ಶನ ನೀಡಿರುವವರನ್ನೇ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳುತ್ತವೆ. ಇದು ಉಲ್ಟಾ ಆದರೆ ಒಳ್ಳೆಯದು.

ಭವಿಷ್ಯದ ಯೋಜನೆ

ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಫೇಸ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪೂರ್ವ ಮತ್ತು ಕೇಂದ್ರ ಭಾರತದಲ್ಲೂ ಮಾರುಕಟ್ಟೆ ವಿಸ್ತರಿಸುವ ಯೋಜನೆಯಲ್ಲಿದೆ ಫೇಸ್. “ನಾವು ಈ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಸೇವೆ ಕಲ್ಪಿಸಿದ್ದೇವೆ. ಇನ್ನು ಕೆಲವೇ ತಿಂಗಳುಗಳಲ್ಲಿ ದೆಹಲಿಯಲ್ಲಿ ಪೂರ್ಣಪ್ರಮಾಣದ ಕೇಂದ್ರವನ್ನು ತೆರೆಯಲು ತೀರ್ಮಾನಿಸಿದ್ದೇವೆ. ಇದಲ್ಲದೆ ನಾವು ಕೆಲವು ಗ್ರಾಹಕ ಕಾಲೇಜುಗಳಲ್ಲಿ ತಂತ್ರಜಾನ ಮೂಲಕ ಪರ್ಯಾಯ ಮಾದರಿಗಳನ್ನೂ ಯಶಸ್ವಿಯಾಗಿ ಅಳವಡಿಸಿದ್ದೇವೆ,” ಎನ್ನುತ್ತಾರೆ ವೆಂಕಟ್. ಸಾಂಪ್ರದಾಯಿಕ ತರಬೇತಿ ವ್ಯವಸ್ಥೆಗೆ ಪರ್ಯಾಯವಾಗಿ ಬೆಳೆಯಲು, ಪರ್ಯಾಯ ತರಬೇತಿ ಕಾರ್ಯಕ್ರಮಗಳನ್ನೂ ಸಂಸ್ಥೆ ಆಯೋಜಿಸುತ್ತಿದೆ. ಅಲ್ಲದೆ, ಸಂಸ್ಥೆಗಳಿಗೆ ಆರಂಭಿಕ ಹಂತದ ನೌಕರರ ಶೋಧಕ್ಕೆ ಸಹಕಾರಿಯಾಗುವಂತೆ ಹೈರ್ಫ್ರಂಕಾಲೇಜ್ ಎಂಬ ಆನ್​ಲೈನ್​​ ಪೋರ್ಟಲ್ ಅನ್ನೂ ಆರಂಭಿಸಿದೆ.