ಬಾಹ್ಯಾಕಾಶದ ಮೇಲೆ ಕಣ್ಣಿಡಲು ಬರಲಿದೆ ರೆಡಿಯೋ ಟೆಲಿಸ್ಕೋಫ್...

ನಿನಾದ

ಬಾಹ್ಯಾಕಾಶದ ಮೇಲೆ ಕಣ್ಣಿಡಲು ಬರಲಿದೆ ರೆಡಿಯೋ ಟೆಲಿಸ್ಕೋಫ್...

Saturday January 23, 2016,

2 min Read

ಮನುಷ್ಯನಿಗೆ ಇಲ್ಲಿಯವರೆಗೆ ಈ ಜಗತ್ತನ್ನ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯವಾಗಲೇ ಇಲ್ಲ. ತನ್ನ ಅಸ್ತಿತ್ವ ಮತ್ತು ತನ್ನ ಅಸ್ತಿತ್ವಕ್ಕೆ ಕಾರಣವಾದ ಸಿದ್ದಾಂತಗಳನ್ನ ಆತ ಇಂದಿಗೂ ಅನ್ವೇಷಿಸುತ್ತಲೇ ಇದ್ದಾನೆ. ಆತನಿಗೆ ತನ್ನ ಸುತ್ತಮುತ್ತ ಪ್ರಪಂಚ ಇವತ್ತಿಗೂ ನಿಗೂಢ. ಆ ನಿಗೂಢತೆಯನ್ನ ಶೋಧಿಸೋದಕ್ಕೆ ಆತ ಮಾಡದೇ ಇರೋ ಪ್ರಯತ್ನಗಳಿಲ್ಲ. ತನ್ನ ಸುತ್ತಮುತ್ತಲಿರೋ ಪರಿಸರದಿಂದ ಹಿಡಿದು ತನ್ನ ತಲೆಯ ಮೇಲಿರೋ ಆಕಾಶದವರೆಗೆ ಶೋಧಿಸಿದ್ದಾನೆ, ಅಭ್ಯಸಿಸಿದ್ದಾನೆ. ಆದ್ರೆ ಇವತ್ತಿಗೂ ಪೂರ್ಣವಾಗಿ ಆತನಿಗೆ ಆ ಸತ್ಯವನ್ನ ಅರಿಯೋದಕ್ಕೆ ಸಾಧ್ಯವಾಗಿಲ್ಲ. ಅಲ್ಲದೆ ತನ್ನ ತಲೆಯ ಮೇಲಿರೋ ಕೋಟ್ಯಾಂತರ ಕಾಯಗಳ ಬಗ್ಗೆ ತಿಳಿದುಕೊಳ್ಳೋದಕ್ಕೆ ಸಾಧ್ಯವಾಗಿಲ್ಲ. ಅನಂತ ಆಕಾಶದ ರಹಸ್ಯವನ್ನ ಆತ ಬಯಲು ಮಾಡೋದಕ್ಕೆ ಮಾಡಿದ ಸಾಹಸಗಳು ಅಷ್ಠಿಷ್ಟಲ್ಲ. ಆದ್ರೆ ಆತನ ಸಾಹಸಕ್ಕೆ ಸಿಕ್ಕಿದ್ದು ಬೆರಳೆಣಿಕೆಯಷ್ಟು ಮಾತ್ರ.

image


ಉಪಗ್ರಹಗಳನ್ನ ಉಡಾವಣೆ ಮಾಡಿ ಕಾಯಗಳ ಅಂತರ್ಯವನ್ನ ತಿಳಿದುಕೊಳ್ಳೋಕೆ ಪ್ರಯತ್ನಿಸಿದ್ದಾನೆ. ಅದೇ ರೀತಿ ಟೆಲಿಸ್ಕೋಪ್ ಅನ್ನ ಕಣ್ಣಿಗೆ ಒತ್ತಿಹಿಡಿದುಕೊಂಡು ಆಕಾಶದಲ್ಲಾಗೋ ಪ್ರತಿ ಬದಲಾವಣೆಯನ್ನ ಕಣ್ಣುರೆಪ್ಪೆ ಮುಚ್ಚದೇ ಕಾದು ನೋಡಿದ್ದಾನೆ. ಆದ್ರೆ ಕೋಟ್ಯಾಂತರ ಜ್ಯೋತಿರ್ವಷ್ಯಗಳ ದೂರದಲ್ಲಿರೋ ಕಾಯಗಳು, ಗ್ರಹಗಳು, ಧೂಮಕೇತುಗಳು ಮನುಷ್ಯನ ಕಣ್ಣಿಗೆ ಕಾಣದೆ ತಲೆಮರೆಸಿಕೊಂಡಿವೆ. ಅವುಗಳ ಪತ್ತೆ ಮನುಷ್ಯ ಹಗಲಿರುಳು ತಲೆಕೆಡಿಸಿಕೊಂಡು ಅದನ್ನ ಹತ್ತಿರದಿಂದ ನೋಡುವ ಉಪಕರಣಗಳನ್ನ ಪತ್ತೆಹಚ್ಚುತ್ತಲೇ ಇದ್ದಾನೆ. ಇದೀಗ ಚೀನಾದ ವಿಜ್ಞಾನಿಗಳು ಅಂತಹ ಒಂದು ಉಪಕರಣವನ್ನ ಸೃಷ್ಠಿಸೋ ಸನಿಹದಲ್ಲಿದ್ದಾರೆ. ಅವರ ಸಾಹಸವೇನಾದ್ರೂ ಯಶಸ್ವಿಯಾದ್ರೆ ಆಕಾಶ ನೋಡುತ್ತ ಕುಳಿತ ವಿಜ್ಞಾನಿಗಳಿಗೆ ಅಂಗೈಯಲ್ಲಿ ಆಕಾಶ ಸಿಕ್ಕಷ್ಟೆ ಸಂತೋಷವಾಗಲಿದೆ.

ಚೀನಾದ ವಿಜ್ಞಾನಿಗಳು ಜಗತ್ತನ್ನ ಅತೀ ಹತ್ತಿರದಿಂದ ನೋಡುವ ಉಪಕರಣವನ್ನ ಕಂಡುಹಿಡಿಯುತ್ತಿದ್ದಾರೆ. ಅಲ್ಲದೆ ಆ ಉಪಕರಣದ ತಯಾರಿಕೆಯ ಮುಕ್ಕಾಲು ಭಾಗದಷ್ಟು ಕೆಲಸವನ್ನ ಈಗಾಗ್ಲೇ ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಬೃಹತ್ ಪ್ರಾಜೆಕ್ಟ್ ಗೆ ಫಾಸ್ಟ್ ಅನ್ನೋ ಹೆಸರನ್ನಿಟ್ಟಿದ್ದಾರೆ. ಅಲ್ಲದೆ ವಿಜ್ಞಾನಲೋಕದಲ್ಲಿ ಅಚ್ಚರಿಯನ್ನ ಮೂಡಿಸ್ತಿರೋದು ರೇಡಿಯೋ ಟೆಲಿಸ್ಕೋಪ್. ಈ ರೆಡಿಯೋ ಟೆಲಿಸ್ಕೋಪ್ ಅನ್ನ ಚೀನಾದ ಮಿಲಿಟರಿ ಮತ್ತು ಲೆಡ್ ಸ್ಪೇಸ್ ನಿರ್ಮಿಸ್ತಿವೆ. ಈ ರೇಡಿಯೋ ಟೆಲಿಸ್ಕೋಪ್ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಷಯಗಳಿವೆ. ಅದೇನಂದ್ರೆ ಸಂಪೂರ್ಣ ಡಿಶ್ ನಂತೆ ಇರೋ ಉಪಕರಣ 500ಫುಟ್ ಬಾಲ್ ಪಿಚ್ ನಷ್ಟು ವಿಶಾಲವಾಗಿದೆ. ಈ ರೇಡಿಯೋ ಟೆಲಿಸ್ಕೋಪ್ ನಿಂದ ಉಳಿದ ಗ್ರಹಗಳ ಬಗ್ಗೆ ಅಧ್ಯಯನವನ್ನ ಕರಾಕುವಕ್ಕಾಗಿ ಮಾಡಬಹುದು ಅನ್ನೋ ವಿಜ್ಞಾನಿಗಳ ಒಮ್ಮತದ ಅಭಿಪ್ರಾಯ.

image


ರೇಡಿಯೋ ಟೆಲಿಸ್ಕೋಪ್ ನ ಫಾಸ್ಟ್ ಪ್ರಾಜೆಕ್ಟ್ 2016ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಈ ಕಾರ್ಯ ಪೂರ್ಣಗೊಂಡು ಯಶಸ್ವಿಯಾದ್ರೆ ಚೀನಾ ಸ್ಪೇನ್ ಪ್ರೋಗ್ರಾಂನಲ್ಲಿ ಒಬ್ಬಂಟಿಯಾಗಿ ಈ ಸಾಧನೆ ಮಾಡಿ ಶ್ರೇಯಕ್ಕೆ ಪಾತ್ರವಾಗಲಿದೆ. ಅಲ್ಲದೆ ರೇಡಿಯೋ ಟೆಲಿಸ್ಕೋಪ್ ಮೂಲಕ ಪ್ಲಾನೆಟ್ ಗಳ ರಚನೆ, ವಿನ್ಯಾಸ, ಜೊತೆಗೆ ಮಿಲಿಯನ್ ಗಟ್ಟಲೆ ಇರೋ ನಕ್ಷತ್ರಗಳ ಹುಟ್ಟು, ಬೆಳವಣಿಗೆ, ಮರಣದ ಜೊತೆಗೆ ಸೋಲಾರ್ ಸಿಸ್ಟಂ ಬಗ್ಗೆ ನಿಖರವಾಗಿ ಅಧ್ಯಯನ ಮಾಡೋದಕ್ಕೆ ಸಾಧ್ಯವಾಗಲಿದೆ. ಈ ಕಾರ್ಯದಲ್ಲಿ ತೊಡಗಿಕೊಂಡಿರೋ ವಿಜ್ಞಾನಿಗಳು 10ಸಾವಿರ ಜ್ಯೋತಿವ್ರರ್ಷಗಳ ದೂರದಲ್ಲಿರೋ ಗ್ರಹಗಳು ಮತ್ತು ನಕ್ಷತ್ರಗಳ ಇರುವಿಕೆಯನ್ನ ರೇಡಿಯೋ ತರಂಗಾಂತರಗಳ ಮೂಲಕ ಪತ್ತೆಹಚ್ಚಬಹುದು ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಈ ರೇಡಿಯೋ ಟೆಲಿಸ್ಕೋಪ್ 500ಮೀಟರ್ ವರೆಗಿನ ದೃಶ್ಯಾವಳಿಗಳನ್ನ ಸೆರೆಹಿಡಿಯಲಿದೆ. ಅಂದ್ರೆ ನಿಖರವಾಗಿ 21 ಲಕ್ಷದ 10ಸಾವಿರ ಚದುರ ಅಡಿ ದೂರದ ಚಿತ್ರಗಳನ್ನ ಸೆರೆಹಿಡಿಯಲಿದೆ. ಹೀಗಾಗಿ ಚೀನಿ ವಿಜ್ಞಾನಿಗಳು ಅಂತರಿಕ್ಷದ ಚಲನವಲಗಳ ಮೇಲೆ ನಿಗಾ ಇಡಲು ರೆಡಿಯೋ ಟೆಲಿಸ್ಕೋಪ್ ಅನ್ನ ನೆಚ್ಚಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಟೆಲಿಸ್ಕೋಪ್ ಬಾಹ್ಯಾಕಾಶದಲ್ಲಿ ಒಂದು ಇತಿಹಾಸವನ್ನ ಸೃಷ್ಠಿಸಲಿದ್ದು ಜಗತ್ತನ್ನ ತನ್ನತ್ತ ಸೆಳೆಯಲಿದೆ.