ಹೆಲ್ತ್ ಕೇರ್ ಉದ್ಯಮದ ಡಾಟಾ ನಿರ್ವಹಣೆ ತಂತ್ರಜ್ಞಾನದಲ್ಲಿ ಕ್ಯಾಲಿಫೋರ್ನಿಯಾ ಮೂಲದ ಕ್ಲಿನಿ ಓಪ್ಸ್ ಸಂಸ್ಥೆಯ ಸಹಾಯ

ಟೀಮ್​ ವೈ.ಎಸ್​. ಕನ್ನಡ

0


2012ರಲ್ಲಿ ಅವಿಕ್ ಪಾಲ್ ಅವರು ವೈದ್ಯಕೀಯ ಪ್ರಯೋಗಗಳ ಮಾಹಿತಿ ನಿರ್ವಹಣೆಯಲ್ಲಿ ಅಪರೂಪದ ಯಶಸ್ಸು ಗಳಿಸಿದ್ದರು. ವೈದ್ಯಕೀಯ ಪ್ರಯೋಗಗಳ ಮೇಲೆ ಹತೋಟಿ ಸಾಧಿಸುವ ತಂತ್ರಜ್ಞಾನದ ಬಗ್ಗೆ ಕೆಲ ವಿಜ್ಞಾನಿಗಳೊಂದಿಗೆ ಹಲವು ಬಾರಿ ಚರ್ಚೆ ನಡೆಸುವುದನ್ನು ಆರಂಭಿಸಿದ ಬಳಿಕ ಅವಿಕ್ ಐಕುರೆ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿದ್ದರು. ವೈದ್ಯಕೀಯ ಪ್ರಯೋಗಗಳ ಕುರಿತಾದ ಅನುಮತಿ ಪ್ರಕ್ರಿಯೆ ಸಂಪೂರ್ಣವಾಗಿ ಪೇಪರ್ ಆಧರಿತ ಕೆಲಸವಾಗಿತ್ತು ಎಂಬುದನ್ನು ಕಂಡುಕೊಂಡ ನಂತರ ಅದನ್ನು ಸಂಪೂರ್ಣವಾಗಿ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು. ವೈದ್ಯಕೀಯ ಪ್ರಯೋಗಗಳೆಂದರೆ ಹೊಸ ವೈದ್ಯಕೀಯ ಚಿಕಿತ್ಸೆ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ಅಧ್ಯಯನ ನಡೆಸುವುದು.

ಐಕುರೆಯ ಸಂಸ್ಥೆಯಲ್ಲಿ ಅವಿಕ್ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹೆಲ್ತ್‌ ಕೇರ್ ದೊರಕಿಸುವತ್ತ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಐಕುರೆಯಲ್ಲಿ ಅವಿಕ್‌ಗೆ ದೊರೆತ ಅನುಭವ, ಹೆಲ್ತ್ ಕೇರ್ ವಿಭಾಗದ ಕಾರ್ಯನಿರ್ವಹಣೆ ಮಾಹಿತಿ ನಿರ್ವಹಣೆ ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸಹಕರಿಸಿತು.

ಅವಿಕ್ ಅವರ ಪತ್ನಿ ಕೂಡ ವೈದ್ಯರು. ಮೆಡಿಕಲ್ ಸಂಶೋಧನೆಗಳಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವಿಕ್‌ರ ಪತ್ನಿ ಅವಿಕ್‌ರೊಂದಿಗೆ ವೈದ್ಯಕೀಯ ಪ್ರಯೋಗಗಳ ಪ್ರಪಂಚದ ಡಾಟಾ ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ಈ ಕುರಿತಾಗಿ ಇನ್ನೂ ಅನೇಕ ವೈದ್ಯರೊಂದಿಗೆ ಅವಿಕ್ ಸಮಾಲೋಚನೆ ನಡೆಸಿದರು. ಇದೆಲ್ಲಾ ಆದ ನಂತರ ಹುಟ್ಟಿಕೊಂಡಿದ್ದೇ ಕ್ಲಿನಿಓಪ್ಸ್ ಎಂಬ ಸಂಪೂರ್ಣವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡ ವೈದ್ಯಕೀಯ ಪ್ರಯೋಗ ಉದ್ಯಮ.

ಕಾರ್ಯ ನಿರ್ವಹಣೆ

ಕ್ಲಿನಿಓಪ್ಸ್ ಸಂಸ್ಥೆ ಆರಂಭವಾಗಿದ್ದು 2013ರಲ್ಲಿ. ಬಯೋಫಾರ್ಮಾ ಉದ್ಯಮಗಳ ವೈದ್ಯಕೀಯ ಪ್ರಯೋಗಳಿಗೆ ಟ್ಯಾಬ್ಲೆಟ್ ಬೇಸಡ್ ಸೊಲ್ಯುಷನ್ ಇದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಮೊಬೈಲ್‌ಗಳಲ್ಲಿ, ಅನಾಲಿಟಿಕ್ಸ್ ಮತ್ತು ಕ್ಲೌಡ್‌ಗಳಲ್ಲಿ ಕ್ಲಿನಿಓಪ್ಸ್ ಸಂಸ್ಥೆ ತನ್ನ ಸೇವೆ ಒದಗಿಸುತ್ತಿದೆ. ಇದು ತನ್ನ ವಿದ್ಯುನ್ಮಾನ ಮೂಲಗಳಿಂದ ಎಲ್ಲಾ ರೀತಿಯ ಡಾಟಾಗಳನ್ನು ಸೆರೆಹಿಡಿಯುತ್ತದೆ. ಅಲ್ಲದೇ ವೈದ್ಯಕೀಯ ದತ್ತಾಂಶ ನಿರ್ವಹಣೆ ಪ್ರಕ್ರಿಯೆಯ ತಪಾಸಣೆ ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತದೆ.

ಇದರಲ್ಲಿ ನೇರವಾಗಿ ಮಾಹಿತಿಗಳನ್ನು ಹಲವು ಮೆಡಿಕಲ್ ಡಿವೈಸ್‌ಗೆ ರವಾನಿಸುವ ಅಂದರೆ, ಬಿಪಿ ಮಾನಿಟರ್, ರೋಗಿಯ ಆರೋಗ್ಯದ ಕುರಿತಾದ ಸರಿಯಾದ ಮಾಹಿತಿ, ತೆಗೆದುಕೊಳ್ಳಬೇಕಾದ ಕಾಳಜಿ ಮುಂತಾದ ವಿಚಾರಗಳನ್ನು ಪ್ರಾಯೋಜಿತ ಸಂಘಟನೆಗಳಿಗೆ ಒದಗಿಸಲಾಗುತ್ತದೆ. ಫಾರ್ಮಾಸಿಟಕಲ್ ಕಂಪನಿಗಳು, ಅಕಾಡೆಮಿಕ್ ಮೆಡಿಕಲ್ ಸೆಂಟರ್‌ಗಳು, ಸಂಶೋಧನಾ ಸಂಸ್ಥೆಗಳು ಮತ್ತು ಜಾಗತಿಕ ಆರೋಗ್ಯ ನಿರ್ವಹಣೆಯಲ್ಲಿ ತೊಡಗಿರುವ ಸಂಘಟನೆಗಳ ಜೊತೆ ಸೇರಿ ಕೆಲಸ ಮಾಡುತ್ತಿದೆ ಕ್ಲಿನಿ ಓಪ್ಸ್ ಸಂಸ್ಥೆ.

ವೈದ್ಯಕೀಯ ಪ್ರಯೋಗಗಳು, ವಿಶೇಷವಾಗಿ ಗ್ಲೋಬಲ್ ಸೈಟ್‌ಗಳು ಡಾಟಾ ಸಂಗ್ರಹಣೆ, ಡಾಟಾಗಳ ಗುಣಮಟ್ಟ ಮತ್ತು ಡಾಟಾ ಭದ್ರತೆ ಸೇರಿದಂತೆ ಅನೇಕ ಡಾಟಾ ನಿರ್ವಹಣೆಯ ಸವಾಲುಗಳನ್ನು ಎದುರಿಸುತ್ತಿವೆ ಎಂಬುದನ್ನು ಕ್ಲಿನಿಓಪ್ಸ್ ಸಂಸ್ಥೆ ಗುರುತಿಸಿದೆ ಎಂದಿದ್ದಾರೆ 40 ವರ್ಷದ ಅವಿಕ್ ಅವರು. ಕ್ಲಿನಿ ಓಪ್ಸ್‌ ಸಂಸ್ಥೆಯ ಟ್ಯಾಬ್ಲೆಟ್ ಬೇಸಡ್ ಸೆಲ್ಯುಷನ್‌ಗಳು ಆಫ್‌ಲೈನ್‌ನಲ್ಲೂ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಅಂತರ್ಜಾಲದ ಸಂಪರ್ಕ ಪಡೆಯದೇ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಅವಕಾಶವನ್ನೂ ಸಹ ಇದು ನೀಡುತ್ತದೆ.

ಕ್ಲಿನಿಓಪ್ಸ್‌ ತಂಡ

ಕ್ಲಿನಿ ಓಪ್ಸ್ ಸಂಸ್ಥೆಗೆ ಅವಿಕ್ ಜೊತೆ ಐಐಟಿ ಖರಗ್‌ಪುರದಲ್ಲಿ ಅವರ ಸ್ನೇಹಿತರಾಗಿದ್ದ ಯೆರ್ರಮಲ್ಲಿ ಸುಬ್ರಮನಿಯಮ್ ಸಹ ಸಂಸ್ಥಾಪಕರಾಗಿದ್ದಾರೆ.

ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಯರ್ರಮಲ್ಲಿ ಸುಬ್ರಮನಿಯಮ್ ಮತ್ತು ಅವಿಕ್ ಇಬ್ಬರೂ ಬೇರೆ ಬೇರೆ ಕಡೆ ತಮ್ಮ ಭವಿಷ್ಯ ಹುಡುಕಿಕೊಂಡು ಹೊರಡುತ್ತಾರೆ. ಅವಿಕ್‌ ಅವರು ಉದ್ಯಮ ಆರಂಭಿಸುವವರಿಗೆ ಸಲಹೆ ಕೊಡುವ ಸಂಸ್ಥೆಯಲ್ಲಿ ಕೆಲಸ ಮಾಡಲಾರಂಭಿಸಿದರೆ, ಸುಬ್ರಮನಿಯಮ್ ಹೆಲ್ತ್ ಐಟಿ ಮತ್ತು ಮೆಡಿಕಲ್ ಡಿವೈಸ್‌ಗಳ ಕ್ಷೇತ್ರವನ್ನು ಪ್ರವೇಶಿಸಿದರು. ಅವಿಕ್ ಅವರು ಕ್ಲಿನಿಓಪ್ಸ್ ಸಂಸ್ಥೆಯನ್ನು ಆರಂಭಿಸುವ ತೀರ್ಮಾನ ಮಾಡಿದಾಗ ಅವರು ಮೊದಲು ಸಂಪರ್ಕಿಸಿದ್ದೇ ಸುಬ್ರಮನಿಯಮ್ ಅವರನ್ನು. ಅವಿಕ್‌ ಅವರ ಯೋಜನೆಗೆ ಸುಬ್ರಮನಿಯಮ್ ಅವರೂ ಸಹ ಅವಿಕ್ ಅವರ ಜೊತೆ ಸೇರಿ ಸಂಸ್ಥೆಯ ಸಹಸಂಸ್ಥಾಪಕರು ಮತ್ತು ಸಿಟಿಓ ಆದರು. ನಂತರ ಸಂಸ್ಥೆಯ ಸಂಪೂರ್ಣ ವಿನ್ಯಾಸವನ್ನು ಸುಬ್ರಮನಿಯಮ್ ಅವರೇ ಮಾಡಿದರು.

ಆಕರ್ಷಣೆ ಮತ್ತು ಗುರುತಿಸಿಕೊಳ್ಳುವಿಕೆ

ಡಿಜಿಟಲ್ ಹೆಲ್ತ್‌ ನ ಅನೇಕ ವಿಭಾಗಗಳಲ್ಲಿ ಕ್ಲಿನಿಓಪ್ಸ್ ಸಂಸ್ಥೆ ಗುರುತಿಸಿಕೊಂಡಿದೆ. ಅವುಗಳಲ್ಲಿ

• ಆಪ್ಸೆಸ್ಸರಿ ಸಂಸ್ಥೆ, ಕ್ಲಿನಿ ಓಪ್ಸ್ ಸಂಸ್ಥೆಯನ್ನು ಡಿಜಿಟಲ್ ಹೆಲ್ತ್ ವಿಭಾಗದಲ್ಲಿ ಕ್ರಾಂತಿಮಾಡುತ್ತಿರುವ ಟಾಪ್ 15 ಸಂಸ್ಥೆಗಳ ಪಟ್ಟಿಗೆ ಸೇರಿಸಿದೆ.

• ಡಿಜಿಟಲ್ ಹೆಲ್ತ್ ವಿಚಾರದಲ್ಲಿ ಹೊಸ ಹೊಸ ಸಂಶೋಧನೆ ಮಾಡುತ್ತಿರುವ 5 ಪ್ರಮುಖ ಸಂಸ್ಥೆಗಳಲ್ಲಿ ಕ್ಲಿನಿಓಪ್ಸ್ ಸಂಸ್ಥೆಗೂ ಒಂದು ಱಂಕ್‌ ನೀಡಿದೆ ಟೆಕ್‌ನ್ಯೂಸ್ ಸಂಸ್ಥೆ

• ಹೆಲ್ತ್ ಮತ್ತು ಫಿಟ್ನೆಸ್ ವಿಭಾಗದಲ್ಲಿ ಭರವಸೆ ಮೂಡಿರುವ ಅಮೆರಿಕಾದ ಟಾಪ್ ಸ್ಟಾರ್ಟ್ ಅಪ್‌ಗಳಲ್ಲಿ ಕ್ಲಿನಿ ಓಪ್ಸ್ ಸಂಸ್ಥೆಗೂ ಸ್ಥಾನ ನೀಡಿದೆ ಫೌಂಡರ್ಸ್ ಗೈಡ್ ಸಂಸ್ಥೆ.

• ಇನ್ನು ಫಾರ್ಮಾ ವಾಯ್ಸ್ ಸಂಸ್ಥೆ ಟಾಪ್‌ 10 ಡಿಜಿಟಲ್ ಹೆಲ್ತ್ ವಿಚಾರದಲ್ಲಿ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳ ಪೈಕಿ ಕ್ಲಿನಿ ಓಪ್ಸ್ ಸಂಸ್ಥೆಗೂ ಸ್ಥಾನ ನೀಡಿದೆ.

ಭವಿಷ್ಯದ ಯೋಜನೆಗಳು

“ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನ ಗಟ್ಟಿಯಾಗಿ ನೆಲೆಯೂರಲು ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಹೀಗಾಗಿ ನಮಗಾಗುವ ನಷ್ಟದ ಪ್ರಮಾಣವೂ ಕಡಿಮೆ. ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಪಡೆದ ಹಣದಿಂದಲೇ 100,000 ಡಾಲರ್ ಹೂಡಿಕೆ ಮಾಡಿದ್ದೇವೆ. ಈಗ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಕಾಣುವ ನಿಟ್ಟಿನಲ್ಲಿ ಒಂದು ಮಟ್ಟದ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದೇವೆ” ಎಂದಿದ್ದಾರೆ ಅವಿಕ್.

ಈ ವರ್ಷ ಕ್ಲಿನಿ ಓಪ್ಸ್ ಸಂಸ್ಥೆ 350,000 ಡಾಲರ್ ಆದಾಯವನ್ನು ಪಡೆದಿದೆ. ಈ ಆದಾಯ ಸಬ್‌ಸ್ಕ್ರಿಪ್ಶನ್ ಆಧಾರದ ಸಾಸ್ ಮಾದರಿಯ ಬಿಸಿನೆಸ್ ಅಳವಡಿಸಿಕೊಂಡಿರುವುದರಿಂದ ಬಂದಿದೆ. ಆದರೆ ಶೀಘ್ರದಲ್ಲಿಯೇ ಇದನ್ನು ವಾರ್ಷಿಕ ಉದ್ಯಮ ಮಾದರಿಗೆ ಬದಲಾಯಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಕ್ಯಾಲಿಫೋರ್ನಿಯಾ ಮೂಲದ ಈ ಸಂಸ್ಥೆ ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ.

ವೈದ್ಯಕೀಯ ಶಿಕ್ಷಣ ಕೇಂದ್ರಗಳು ಮತ್ತು ವಿಭಿನ್ನ ಚಿಕಿತ್ಸಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫೌಂಡೇಶನ್‌ಗಳ ಜೊತೆ ಕ್ಲಿನಿ ಓಪ್ಸ್ ಸಂಸ್ಥೆ ಮಾತುಕತೆಯಲ್ಲಿ ತೊಡಗಿದೆ. ಅಲ್ಲದೇ ದೊಡ್ಡ ದೊಡ್ಡ ಫಾರ್ಮಾಸಿಟಿಕಲ್ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಶೋಧನಾ ಸಂಘಟನೆಗಳ ಜೊತೆಯೂ ಮಾತುಕತೆ ನಡೆಸುತ್ತಿದೆ. ಆದರೆ ಇನ್ನೂ ಮಾತುಕತೆಯ ಹಂತದಲ್ಲೇ ಇರುವುದರಿಂದ ಈ ಸಂಸ್ಥೆಗಳ ಹೆಸರನ್ನು ಬಹಿರಂಗಪಡಿಸಲು ಕ್ಲಿನಿಓಪ್ಸ್ ಸಂಸ್ಥೆ ನಿರಾಕರಿಸಿದೆ.

ಕ್ಲಿನಿ ಓಪ್ಸ್ ಸಂಸ್ಥೆ ಹಲವು ಉತ್ಪನ್ನ ಮಾದರಿಯ ಯೋಜನೆಯನ್ನು ರೂಪಿಸಿಕೊಂಡಿದೆ. ವೈದ್ಯಕೀಯ ಪ್ರಯೋಗಗಳ ನಿಯೋಜನೆ, ರಿಮೋಟ್ ಮಾನಿಟರಿಂಗ್, ರೋಗಿಗಳ ನಿರ್ವಹಣೆ ಮತ್ತು ಅಡ್ವಾನ್ಸ್ಡ್ ಅನಾಲಿಟಿಕ್ಸ್ ಸೇರಿದಂತೆ ಹಲವು ಯೋಜನೆಗಳು ಸಂಸ್ಥೆಯ ಮುಂದಿದೆ.

ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರ

ಸಿಎಜಿಆರ್‌(ಸಂಸ್ಥೆಯ ವಾರ್ಷಿಕ ಬೆಳವಣಿಗೆ ದರ) ಶೇ.17ರಷ್ಟಿದೆ ಎಂದು ಹೇಳಲಾಗಿದೆ. ಹೆಲ್ತ್ ಕೇರ್ ಮತ್ತು ಹೆಲ್ತ್ ಟೆಕ್ ವಿಚಾರಗಳು ದೇಶದಲ್ಲಿ ಅತೀ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ವಲಯದಲ್ಲಿ ಒಂದಾಗಿದೆ.

ಭಾರತದ ವೈದ್ಯಕೀಯ ಪ್ರಯೋಗಗಳ ಮಾರುಕಟ್ಟೆ 2006 ಮತ್ತು 2011ರಲ್ಲಿ ಶೇ.36ರಷ್ಟು ಬೆಳವಣಿಗೆ ಸಾಧಿಸಿದೆ. ಐಬಿಇಎಫ್‌ನ ವರದಿಯ ಪ್ರಕಾರ 2017ರ ವೇಳೆಗೆ ಹೆಲ್ತ್‌ ಕೇರ್ ಉದ್ಯಮದ ಗಾತ್ರದಲ್ಲಿ 160 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವೈದ್ಯಕೀಯ ಪ್ರಯೋಗಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಶ್ರಮಿಸುವುದು ನಿಜಕ್ಕೂ ಶ್ಲಾಘನೀಯ ಪ್ರಯತ್ನ. ದೇಶದ ಇಂತಹ ಹಲವು ಹೆಲ್ತ್ ಕೇರ್ ಸಂಸ್ಥೆಗಳ ಹೆಲ್ತ್ ಟೆಕ್ ಸಂಶೋಧನಾ ವಿಚಾರದಲ್ಲಿ ಇನ್ನೂ ಸುಧಾರಣೆ ಕಾಣಬೇಕಿದೆ.


ಲೇಖಕರು: ಸಿಂಧು ಕಶ್ಯಪ್​

ಅನುವಾದಕರು: ವಿಶ್ವಾಸ್​​​

Related Stories

Stories by YourStory Kannada