ಮೈಕ್ರೋ ಸಾಫ್ಟ್ ಹೊಸ ಅನ್ವೇಷಣೆ

ಟೀಮ್​​ ವೈ.ಎಸ್​​. ಕನ್ನಡ

ಮೈಕ್ರೋ ಸಾಫ್ಟ್ ಹೊಸ ಅನ್ವೇಷಣೆ

Sunday December 06, 2015,

3 min Read

ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ಅಲೆ ಮೂಡಿಸಿದ್ದ ಮೈಕ್ರೋಸಾಫ್ಟ್ ,ಇದೀಗ ಮತ್ತೊಂದು ಪ್ರಮುಖ ಹೆಜ್ಜೆಯಿರಿಸಿದೆ. ಇಷ್ಟು ದಿನಗಳ ಕಾಲ ಕಂಪ್ಯೂಟರ್ ಸಾಫ್ಟ್‌ ವೇರ್, ಗ್ರಾಹಕ ಬಳಕೆಯ ಉತ್ವನ್ನಗಳ ತಯಾರಿಕೆ ಮಾಡುತ್ತಿದ್ದ ಮೈಕ್ರೋಸಾಫ್ಟ್ ಇದೀಗ ಉದ್ಯಮಶೀಲತೆಯನ್ನು ಚುರುಕುಗೊಳಿಸಲು ಹೊಸ ಅಫ್ಲಿಕೇಶನ್‌ಗಳನ್ನು ಸಿದ್ದಪಡಿಸಿದೆ

ಮೈಕ್ರೋಸಾಫ್ಟ್ ವೆಂಚರ್ಸ್‌ನನ್ನು ಏಕೆ ಆಯ್ಕೆ ಮಾಡಬೇಕು?

ಅಂದಹಾಗೆ ನೂತನ ಅಫ್ಲಿಕೇಶನ್ ಸಿದ್ಧಪಡಿಸಿರೋ ಮೈಕ್ರೋಸಾಫ್ಟ್, ಪ್ರಮುಖ 10 ಉದ್ಯಮಗಳನ್ನು ಗುರಿಯಾಗಿಸಿದೆ. ನೂತನ ಪ್ರೋಗ್ರಾಂಗಳನ್ನು ಸಿದ್ಧಪಡಿಸಿದ್ದು ಉದ್ಯಮಿಗಳಿಗೆ ಸಹಾಯವಾಗುವ ದೂರುದೃಷ್ಟಿ ಹೊಂದಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ನೂತನ ತಂಡವೊಂದನ್ನು ರಚನೆಮಾಡಿದ್ದು, ಮೈಕ್ರೋಸಾಫ್ಟ್ ವೆಂಚರ್ಸ್ ಸಿಸಿರ್ ತಂಡವನ್ನ ಕಟ್ಟಿಕೊಂಡಿದೆ.ಇದು ಉದ್ಯಮಿಗಳು ಹಾಗೂ ಗ್ರಾಹಕರ ಮಧ್ಯೆ ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ನೂತನ ಅಫ್ಲಿಕೇಶನ್ ಸಿದ್ದಗೊಳಿಸಿದೆ.ಕಳೆದ ಸೆಪ್ಟಂಬರ್‌ನಲ್ಲೇ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಪರಿಚಿಯಸಿದ್ದು, ಹೊಸ ಭರವಸೆ ಹುಟ್ಟುಹಾಕಿದೆ.

image


ಮೈಕ್ರೋಸಾಫ್ಟ್ ಪ್ರಮುಖ ಗ್ರಾಹಕರು

1.ಈಗಾಗಲೇ ಮಾರುಕಟ್ಟೆಯಲ್ಲಿ ಪರಿಪಕ್ವ ಹೊಂದಿರುವ ಕೆಲವು ಸಂಸ್ಥೆಗಳು

2. ಈ ಹಿಂದೆ ಜೊತೆಯಾಗಿ ಕಾರ್ಯನಿರ್ವಹಿಸಿದ ಕಂಪನಿಗಳ ಜೊತೆ ಮುಂದುವರೆಯುವಿಕೆ

3.ಮೈಕ್ರೋಸಾಫ್ಟ್ ತಂತ್ರಜ್ಞಾನ ಆಧರಿತ ಹಾಗೂ ಮಾರುಕಟ್ಟೆ ಆಧರಿತ ಗ್ರಾಹಕರು

4. ಉತೃಷ್ಟ ಗುಣಮಟ್ಟದ ಉತ್ವನ್ನ ಆಧರಿತ ಗ್ರಾಹಕರು

ಮೈಕ್ರೋಸಾಫ್ಟ್ ವೆಂಚರ್ಸ್ ವೈಶಿಷ್ಟ್ಯಗಳು

ನಾವು ಇದೀಗ ಸಿದ್ಧಪಡಿಸಿರೋ ಕೆಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟವಿದ್ದು, ಅದಕ್ಕಾಗಿ ಪೈಪೊಟಿಯಿದೆ. ಇದರಿಂದ ಕೆಲ ಮಾರ್ಪಾಡು ತರಲಾಗಿದೆ ಎಂಬದು ಕಂಪನಿ ಅಂಬೋಣ. "ನಾವು ಕಾರ್ಪೋರೆಟ್ ಜಗತ್ತಿನಲ್ಲಿ ಪೂರ್ಣ ಪ್ರಮಾಣ ಯಶಸ್ಪಿ ಹೊಂದಿದ್ದರೂ ಪ್ರತಿಸ್ಪರ್ಧಿಗಳನ್ನು ಎದುರಿಸಲು ಹಲವು ಬದಲಾವಣೆ ತರುವುದು ಅವಶ್ಯಕತೆಯಿದೆ. ಅಲ್ಲದೆ ನಾವು ಸಿದ್ದಪಡಿಸಿರೋ ನೂತನ ಅಫ್ಲಿಕೇಶನ್ ಮುಂದಿನ ಮುಂಬರುವ ದಿನಗಳಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ ಎಂಬ ಆಶಾವಾದ ವ್ಯಕ್ತಪಡಿಸುತ್ತಾರೆ ಕಂಪನಿಯ ನಿರ್ದೇಶಕ ರವಿ ನಾರಾಯಣ.

ಉದ್ಯಮಗಳಲ್ಲಿ ಮೈಕ್ರೋಸಾಫ್ಟ್ ವೆಂಚರ್ಸ್ ಸಹಯೋಗ..!!

1. ಮಾರಾಟ ಮತ್ತು ಮಾರುಕಟ್ಟೆ ವಿಧಾನಗಳನ್ನ ಬಳಸಿಕೊಂಡು ಒಂದು ನಿರ್ಧಿಷ್ಟ ಉದ್ಯಮಕ್ಕೆ ನೆರವಾಗುವುದು

2. ಮೈಕ್ರೋಸಾಫ್ಟ್ ಉತ್ಪನ್ನಗಳಿಗೆ ಪೂರಕವಾಗಿ ಕಾರ್ಯನಿರ್ವಹಣೆ

3. ಕಂಪನಿಗಳು ಹೇಗೆ ಸಹಭಾಗಿತ್ವ ಸಾಧಿಸುತ್ತವೆ ಎಂಬುವುದನ್ನ ಅರಿಯುವಿಕೆ

4. ಜಾಗತಿಕವಾಗಿ ಮೈಕ್ರೋಸಾಫ್ಟ್ ವೆಂಚರ್ಸ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೂಢಿಕರಿಸುವುದು

6. ಆಪ್ತಸಲಹಾ ಜೊತೆ ಉದ್ಯಮಗಳಿಗೆ ನೆರವಾಗುವಿಕೆ

7. ತಂತ್ರಜ್ಞಾನ ವೃದ್ಧಿ ಮತ್ತು ಅವುಗಳಿಗೆ ಸಹಾಯ ಮಾಡುವುದು

ಹಿಗೇ ಹಂತ ಹಂತವಾಗಿ ಉದ್ಯಮ ಜಗತ್ತಿನಲ್ಲಿ ಹೊಸ ತಂತ್ರಜ್ಞಾನವನ್ನ ಪರಿಚರಿಸಿದ ಮೈಕ್ರೋಸಾಫ್ಟ್ ವೆಂಚರ್ಸ್ ಇದೀಗ ನೂತನ 10 ಅಫ್ಲಿಕೇಶನ್ ಮೂಲಕ ಕಾರ್ಪೊರೇಟ್ ಜಗತ್ತಿನಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಲು ಮುಂದಾಗಿದೆ. ಉದ್ಯಮಕ್ಕೆ ಹೊಸ ಆಯಾಮ ನಿಡುವ ಮೂಲಕ ಕೆಲವು ಮಾರ್ಪಾಡುಗಳನ್ನು ತರಲಾಗಿದೆ. ಈಗಾಗಲೇ ಆರಂಭಿಕ ಕಂಪನಿಗಳಲ್ಲಿ ತನ್ನ ಪ್ರಭುತ್ಪ ಸಾಧಿಸಿದ್ದು,ಹೊಸ ಹೊಸ ಉದ್ಯಮಗಳಲ್ಲಿ ಉತ್ತಮ ಕಾರ್ಯನಿರ್ವಹಣಯ ಪರಿಸರ ನಿರ್ಮಾಣ ಮಾಡುವ ಉದ್ದೇಶದಿಂದ ನೂತನ ಅಫ್ಲಿಕೇಶನ್ ಸಿದ್ದಗೊಂಡಿವೆ. ನೂತನ ಅಫ್ಲಿಕೇಶನ್ ಗಳ ಗಣ ವೈಶಿಷ್ಟ್ಯಗಳು ಈ ಕೆಳಗಿನಂತಿದ್ದು, ಇವುಗಳು ಭಾರತೀಯ ಮಾರುಕಟ್ಟೆಯನ್ನ ಆಧರಿಸಿ ಅಫ್ಲಿಕೇಶನ್‌ಗಳು ರಚಿತಗೊಂಡಿವೆ.

ನೂತನ 10 ಮೈಕ್ರೋಸಾಫ್ಟ್ ವೆಂಚರ್ಸ್ ಕಂಪ್ಯೂಟರ್ ಅಫ್ಲಿಕೇಶನ್‌ಗಳು ಹಾಗೂ ವೈಶಿಷ್ಟ್ಯಗಳು

1.ಕ್ಯಾನ್‌ವಾಸ್ ಫ್ಲಿಫ್

ಇದು ಒಂದು ರೀತಿ ಕೋಡ್ ಅಫ್ಲಿಕೇಶನ್ ಆಗಿದ್ದು, ಒಂದು ಸಾಲು ಬರೆಯವ ಮೂಲಕ ಬಳಕೆದಾರರು ಮತ್ತು ಉದ್ಯಮಿಯ ಜೊತೆ ಸಂಭಾಷಣೆಗೆ ಸಹಾಯಕಾರಿಯಾಗಿ ಕಾರ್ಯನಿರ್ವಹಿಸಲು ಸಿದ್ಧಪಡಿಸಲಾಗಿದೆ.

2.ಚಾನ್‌ಲಿಸ್ಟ್

ಚಾನ್‌ಲಿಸ್ಟ್ ಒಂದು ನೂತನ ಅಫ್ಲಿಕೇಶನ್‌ಯಾಗಿದ್ದು, ವಿಶೇಷ ತಂತ್ರಾಂಶವನ್ನ ಹೊಂದಿದೆ.ಉದ್ಯಮಿಗಳು ತಮ್ಮ ವ್ಯಾಪಾರದಲ್ಲಿ ಉನ್ನತಿಗೆ ಸಹಾಯಾಕಾರಿಯಾಗಿದ್ದು, ಚಿಲ್ಲರೆ ಮತ್ತು ವಿತರಕರ ಮಧ್ಯೆ ಸಹಾಯಕಾರಿ ಕಾರ್ಯನಿರ್ವಹಿಸತ್ತೆ. ಮತ್ತು ಕಂಪನಿಗಳ ಆನ್ಲೈನ್ ಮಾರುಕಟ್ಟೆಯ ಜೊತೆ ಆಫ್ಲೈನ್ ಮಾರುಕಟ್ಟೆಯ ಚಿಲ್ಲರೆ ದಾಸ್ತಾನು ಮಳಿಗೆ ಮಾಡುವರ ಮಾಹಿತಿಗಾಗಿ ಇದು ಸಹಾಯಕಾರಿಯಾಗುತ್ತೆ.

3.ಕುಡ್‌ಚೇರಿ

ಗ್ರಾಹಕರು ತಾವು ಖರೀದಿ ಮಾಡುವ ವಸ್ತುವಿನ ಬ್ರ್ಯಾಂಡ್‌ ಮೌಲ್ಯ ಎಷ್ಟೇಂದು ಅಳೆಯಲು ಮತ್ತು ಗ್ರಾಹಕ ಸಂತೃಪ್ತಿ ಸುಧಾರಿಸಲು ಇದು ಸಹಾಯ ಮಾಡುತ್ತದೆ.

4.ಫ್ಲೂಟರಾಸಲ್ಯೂಷೇನ್

ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಕಲ್ವಿಸಲಾಗುವ ಸಂಪರ್ಕ ಯಂತ್ರಗಳಿಗೆ ಫ್ಲೂಟರಾಸಲ್ಯೂಷೇನ್‌ ತಾಂತ್ರಾಂಶವನ್ನ ಅಳವಡಿಸಿಲಾಗಿರುತ್ತೆ.ಇದು ಸಂಸ್ಥೆಯಲ್ಲಿನ ಕೆಲವು ಉದ್ಯಮ ಪರ ವಿಶ್ಲೇಷಣೆಗಳನ್ನು ಕೇಂದ್ರೀಕರಿಸಲು ಬಳಸಲಾಗುತ್ತೆ.ಈಗಾಗಲೆ ನೂರಕ್ಕೂ ಹೆಚ್ಚು ಫಾರ್ಚೂನ್ ಸಂಸ್ಥೆಗಳು ಇದನ್ನ ಬಳಕೆ ಮಾಡಲಾಗುತ್ತೆ.

5.ನೊಲ್ಸ್‌ಕೆಪೆ

ನೊಲ್ಸ್‌ಕೆಪೆ ತಾಂತ್ರಾಂಶವು ರೈಲು ಇಲಾಖೆಯಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಇದು ಮಾರಾಟ ಮತ್ತು ಮಾರುಕಟ್ಟೆ ಒಂದು ದಶಮಾಂಶ ಚಾಲಿತ ವಿಧಾನವಾಗಿ ಮತ್ತು ಸಂಸ್ಥೆಗೆ ವಿವಿಧ ತಂತ್ರ ಯೋಚಿಸುವ ಮಾರ್ಗದರ್ಶನ ನೀಡುತ್ತದೆ.

6.ಟ್ರಿವಿ

ಇದು ಟಿವಿ ಪ್ಲಗ್ಗಳು ಮತ್ತು ವೈರ್‌ರ್ಲೆಸ್‌ನ ಕೆಲವು ಸಾಧನಗಳಲ್ಲಿ ಹೆಚ್ಚು ಬಳಿಕೆಯಾಗುತ್ತಿದೆ. ಪೂರ್ಣ ಎಚ್ಡಿಯ ದೊಡ್ಡ ಪರದೆಯ ಮೇಲೆ ಕೆಲವು ಮೂಲಗಳಿಂದ ವಿಷಯ ಅರಿಯಲು ಅವಕಾಶ ನೀಡುತ್ತೆ. ಅಲ್ಲದೆ ಇದೊಂದು ಹೆಚ್‌ಡಿಎಮ್‌ಐ ನ ಮಾಧ್ಯಮ ಸ್ಟ್ರೀಮಿಂಗ್ ಸಾಧನವಾಗಿದೆ ಕೂಡಾ ಬಳಕೆಯಾಗುತ್ತಿದೆ.

7.ಟ್ರಿಫ್‌ಹೊಬೋ

ಟ್ರಿಫ್‌ಹೊಬೊ ತಂತ್ರಾಂಶವು ಪ್ರವಾಸಿಗರ ಸಹಾಯಕಾರಿ ಕಾರ್ಯನಿರ್ವಹಣೆ ಮಾಡುತ್ತಿದೆ. ಜಗತ್ತಿನಾದ್ಯಂತ ಸುಮಾರು 14 ಸಾವಿರ ಪ್ರವಾಸಿ ತಾಣಗಳ ಮಾಹಿತಿಗಳನ್ನೊಳಗೊಂಡಗೊಂಡಿದೆ. ಅಲ್ಲದೆ ಇದು ವಿವಿಧ ವ್ಯಾಪಾರ ವಾಹಿನಿಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಇದು ಉಪಯೋಗವಾಗಿದೆ.

8.ವ್ಯಾಕಿಲ್‌ಸರ್ಚ್

ವ್ಯಾಕಿಲ್‌ಸರ್ಚ್ ತಂತ್ರಾಂಶವು ಭಾರತದಲ್ಲಿನ ಕಾನೂನು ಸೇವೆಗಳ ಲೆಕ್ಕಪತ್ರ ಸೇವೆಗಳ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿ ಉದ್ದೇಶ ಹೊಂದಿದೆ.

9.ವಿರ್ಗ್‌ವ್ಯಾಬಲ್ಸ್

ವಿರ್ಗ್‌ವ್ಯಾಬಲ್ಸ್ ತಂತ್ರಾಂಶವು ವಿಂಡೋಸ್ ಮತ್ತು ಆಫ್ ಪೇಟೆಂಟ್ ಉತ್ಪನ್ನಗಳ ಬಳಕೆಗೆ ಸಹಾಯಕಾರಿಯಾಗಿದೆ. ಸಧ್ಯ ಐಟಿ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಬಳಕೆಯಾಗುತ್ತಿರುವ ವಿರ್ಗ್‌ವ್ಯಾಬಲ್ಸ್ ಐಟಿ ಕ್ಷೇತ್ರಗಳಿಗೆ ಶಕ್ತಿಯಾಗಿದೆ ಎಂದು ಹೇಳಬಹುದು.

10.ವ್ಯಾಮೊ

ವ್ಯಾಮೋ ತಾಂತ್ರಾಂಶವು ಕಾರ್ಪೋರೇಟ್ ಸಂಸ್ಥೆಯಲ್ಲಿ ವೈಯಕ್ತಿಕ ಬಳಕೆಗೆ ಇದು ಸಹಾಯಕಾರಿಯಾಗಿದೆ.ಕೆಲ ವಿಶೇಷ ಸಂದರ್ಭದಲ್ಲಿ ಉದ್ಯಮೆಗಳ ವ್ಯಯಕ್ತಿಕವಾಗಿ ಬಳಕೆಯಾಗುತ್ತೆ.ಇದು ಕೆಲಸದೊತ್ತಡದ ನಿವಾರಣೆಗೆ ಸಹಾಯಕಾರಿಯಾಗಿ ಬಳಕೆಯಾಗುತ್ತಿದೆ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ಶ್ರುತಿ