24*7 ಹಲೋ ಡಾಕ್ಟರ್​​​: ವೈದ್ಯರ ಮತ್ತು ರೋಗಿಗಳ ನಡುವೆ ಸಂಪರ್ಕಸೇತು..!

ಟೀಮ್​ ವೈ.ಎಸ್​

0

ವರ್ಲ್ಡ್ ಹೆಲ್ತ್ ಆರ್ಗನೈಸೇಷನ್​​ನ ಗ್ಲೋಬಲ್ ಹೆಲ್ತ್ ವರ್ಕ್ ಫೋರ್ಸ್ ಅಂಕಿ ಅಂಶಗಳ ಅನ್ವಯ 2010ರಲ್ಲಿ ಭಾರತದ ವೈದ್ಯರು ಮತ್ತು ರೋಗಿಗಳ ಅನುಪಾತ ಕ್ರಮವಾಗಿ 6:10000 ಆಗಿತ್ತು. ಇದೇ ಅನುಪಾತ 2012ರಲ್ಲಿ 7:10000 ಆಗಿತ್ತು.

ಒಡಿಶಾದಲ್ಲಿ 2010ರಲ್ಲಿ ಆರಂಭವಾದ ಹೆಲೋ ಡಾಕ್ಟರ್ 24x7 ಸೇವೆ ವೈದ್ಯರು ಮತ್ತು ರೋಗಿಗಳ ನಡುವಿನ ಸಂಪರ್ಕಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ವೈದ್ಯರು ಮತ್ತು ರೋಗಿಗಳ ನಡುವಿನ ಮಾಹಿತಿ ವಿನಿಮಯಕ್ಕೂ ಸಹಾಯಕವಾಗಿದೆ.

ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಕಾಲದಿಂದ ಒಪಿಡಿಗಳಲ್ಲಿ ವೈದ್ಯರ ಕುರಿತು ಸರಿಯಾದ ಮಾಹಿತಿ ಸಿಗದೇ ಪರದಾಡುತ್ತಿದ್ದ ರೋಗಿಗಳ ಪರಿಸ್ಥಿತಿಯನ್ನು ಗಮನಿಸಿದ್ದರು ಡಾ. ಲಲಿತ್ ಮಲಿಕ್. ಈ ಸಮಸ್ಯೆಗೆ ಪರಿಹಾರವನ್ನೂ ಅವರು ಚಿಂತಿಸಿದ್ದರು. ಅವರ ಮಾತುಗಳಲ್ಲೇ ಹೇಳುವುದಾದರೆ, ನೂರಾರು ರೋಗಿಗಳ ಅಸಹಾಯಕ ಸ್ಥಿತಿಗೆ ಒಪಿಡಿಗಳೇ ಸಾಕ್ಷಿ.. ಇದನ್ನೇ ಚಿಂತಿಸುತ್ತಿದ್ದ ಡಾ. ಲಲಿತ್ ಮಲಿಕ್ ಆರಂಭಿಸಿದ್ದೇ ಕೆಐಐಟಿ ಯುನಿವರ್ಸಿಟಿ ಟೆಕ್ನಾಲಜಿ ಬಿಸಿನೆಸ್. 20 ಲಕ್ಷ ಬಂಡವಾಳ ಹೂಡಿ ಈ ಸಂಸ್ಥೆಯ ಸಹ ಸಂಸ್ಥಾಪಕರಾದವರು ಸಂಜಯ್ ದಾಸ್.

2010-12ರಲ್ಲಿ ಆರಂಭವಾದ ಈ ಸಂಸ್ಥೆ ರೋಗಿಗಳಿಗೆ ಮಾಹಿತಿಯನ್ನೊದಗಿಸುವ ಸಾಧನವಾಗಿತ್ತು. ಅಲ್ಲದೇ ಇದು ಆಸ್ಪತ್ರೆಗಳಿಗೆ ಮತ್ತು ಕ್ಲಿನಿಕ್​ಗಳಿಗೆ ಕರೆಗಳ ನಿರ್ವಹಣೆ ಹಾಗೂ ಪೇಶೆಂಟ್ ರಿಲೇಶನ್ ಶಿಪ್ ಮ್ಯಾನೇಜ್ ಮೆಂಟ್ ಸೊಲ್ಯುಷನ್ ನಂತಹ ಕಾರ್ಯಗಳಲ್ಲೂ ನೆರವಾಗುತ್ತಿತ್ತು. ಇದೇ ವೇಳೆ ಈ ಸೇವೆಯನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡರು ಡಾ. ಲಲಿತ್ ಮಲಿಕ್. ಇದಕ್ಕಾಗಿ ಲಲಿತ್ ಸ್ಕಾಟ್ಲೆಂಡ್‌ನ ಡುಂಡೀ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಪಡೆದರು.

ಇಲ್ಲೇ ಅವರು ಹಲೋ ಡಾಕ್ಟರ್ ಸಂಸ್ಥೆಯ ಸಹ ಸಂಸ್ಥಾಪಕ ಶಶಾಂಕ್ ಸಿಂಘಾಲ್ ರನ್ನು ಭೇಟಿಯಾದದ್ದು. ಆ ವೇಳೆಗಾಗಲೇ 5 ದಿನಗಳ ಮಟ್ಟಿಗೆ ವೈದ್ಯಕೀಯ ಸೇವೆ ಪಡೆಯಲು ಯುಕೆಯ ವೈದ್ಯರ ಅಪಾಯಿಂಟ್​ಮೆಂಟ್​ ಸಿಗದೇ ನಿರಾಶರಾಗಿದ್ದ ಶಶಾಂಕ್ ಇದೇ ವಿಚಾರವಾಗಿ ಭಾರತದಲ್ಲಿ 24x7 ಟೆಲಿ ಕನ್ಸಲ್ಟೆಂಟ್ ಕಂಪನಿ ಆರಂಭಿಸುವ ಯೋಜನೆ ಹಾಕಿಕೊಂಡಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ, ಒಬ್ಬ ವೈದ್ಯ ಪ್ರತಿದಿನ ತಮ್ಮ ರೋಗಿಗಳಿಂದ ಸರಾಸರಿ 20 ಕರೆಗಳನ್ನು ಸ್ವೀಕರಿಸುತ್ತಾರೆ. ಕರೆ ಸ್ವೀಕೃತಿಯ ಭರದಲ್ಲಿ ಬಹುಮುಖ್ಯವಾದ 8 ಕರೆಗಳು ಅವರಿಗೆ ತಪ್ಪಿ ಹೋಗಿರುತ್ತದೆ. ಆದರೆ ವೈದ್ಯರಿಗೆ ತಮ್ಮ ರೋಗಿಗಳಿಗೆ ವಾಪಸು ಕರೆ ಮಾಡಬೇಕೆಂಬ ವಿಚಾರವೇ ಮರೆತುಹೋಗಿರುತ್ತದೆ. ಈ ವೇಳೆಯಲ್ಲಿ ಹಲೋ ಡಾಕ್ಟರ್ ಸೇವೆ ಸಹಾಯಕವಾಗುತ್ತದೆ ಎನ್ನುವುದು ಶಶಾಂಕ್ ವಾದ.

ಆಹ್ವಾನದ ಮೇರೆಗೆ ಡಾ. ಲಲಿತ್ ಯೋಜನೆಯೊಂದಿಗೆ ಕೈಜೋಡಿಸಿದ ಶಶಾಂಕ್ ತಮ್ಮ ಟೆಲಿ ಕನ್ಸಲ್ಟೆಂಟ್ ಯೋಜನೆಯ ರೂಪುರೇಷೆ ಸಿದ್ಧಪಡಿಸುತ್ತಾರೆ. ಮೊದಲ ಹಂತದಲ್ಲಿ ಅವರು 200 ವೈದ್ಯರು ಹಾಗೂ 500 ರೋಗಿಗಳನ್ನು ಭೇಟಿಯಾಗಿ ರೀಸರ್ಚ್ ಮಾಡುತ್ತಾರೆ.

ಭುವನೇಶ್ವರದಲ್ಲಿ ಟೆಕ್ ಇನ್ಸ್​​ಟಿಟ್ಯೂಷನ್ಸ್​​, ಚಿಂತಕರು ಹಾಗೂ ಉದ್ಯಮದಾರರ ಸಂಖ್ಯೆ ಹೇರಳವಾಗಿದೆ. ಅಲ್ಲದೇ ಇಲ್ಲಿ ಹೈಟೆಕ್ ಇನ್ ಕ್ಯುಬೇಟರ್ ಸೆಂಟರ್ಸ್ ಮುಖಾಂತರ ಬಂಡವಾಳ ಹೂಡಿಕೆಗೆ ಆಸಕ್ತ ಉದ್ದಿಮೆದಾರರೂ ಸಿಗುತ್ತಾರೆ. ಹೀಗಾಗಿ ಈ ಸೇವೆಯ ಆರಂಭಕ್ಕೆ ಒಡಿಶಾದ ಭುವನೇಶ್ವರವನ್ನು ಆಯ್ದುಕೊಳ್ಳಲಾಯಿತು ಎನ್ನುತ್ತಾರೆ ಸಂಸ್ಥಾಪಕರು.

ಟೀಮ್​ ಹಲೋ ಡಾಕ್ಟರ್​​
ಟೀಮ್​ ಹಲೋ ಡಾಕ್ಟರ್​​

2015ರ ಜನವರಿಯಲ್ಲಿ 24x7 ಸೇವೆ ಆರಂಭವಾಯಿತು. ಆರಂಭದಲ್ಲೇ 6000 ಕರೆಗಳು ಮತ್ತು 3000 ಮಂದಿ ಸೇವೆಗೆ ದಾಖಲಾದರು. ಇದರಲ್ಲಿ ಶೇ.40ರಷ್ಟು ಮಂದಿ ಪುನರ್ ಸೇವೆ ಪಡೆದರು. ವಾಸಸ್ಥಾನಕ್ಕೂ ವೈದ್ಯರಿರುವ ಜಾಗಕ್ಕೂ ದೂರವಿದ್ದವರು, ವೈದ್ಯರ ಭೇಟಿಯಾಗಲು ಸಮಯವಿಲ್ಲದಷ್ಟು ಬ್ಯುಸಿಯಾಗಿದ್ದವರು, ಪದೇ ಪದೇ ವೈದ್ಯರ ಬಳಿ ತಪಾಸಣೆಗಾಗಿ ಹೋಗುವಂಥವರು, ಗರ್ಭಿಣಿ ಸ್ತ್ರೀಯರಿದ್ದ ಮನೆಯವರು ಮತ್ತು ವೃದ್ಧರು ಈ ಸೇವೆಯನ್ನು ಪಡೆಯಬಹುದಾಗಿತ್ತು.

ಹಲೋ ಡಾಕ್ಟರ್ 24x7 ಟೆಲಿಸರ್ವಿಸ್ ಸ್ವೀಕರಿಸುವ ಸರಾಸರಿ 42 ಕರೆಗಳಲ್ಲಿ ಶೇ.40ರಷ್ಟು ಮಂದಿ ವೈದ್ಯರ ಸಂಪರ್ಕ ಸಾಧಿಸಲು ಕೋರಿರುತ್ತಾರೆ.

ಕೇವಲ 12 ಮಂದಿ ಉದ್ದಿಮೆದಾರರಿಂದ ಆರಂಭವಾದ ಈ ಉದ್ಯಮದ ಸದಸ್ಯರ ಸಂಖ್ಯೆ ಈಗ 18 ಮಂದಿಯ ತಂಡಕ್ಕೆ ಏರಿಕೆಯಾಗಿದೆ. ಇವರಲ್ಲಿ 12 ಮಂದಿ ಕ್ಯಾಂಪಸ್ ಅಂಬಾಸಡರ್ ಕೂಡ ಸೇರಿದ್ದಾರೆ. ಒಡಿಶಾದ 10 ಜಿಲ್ಲೆಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ಇದರ ಕಾರ್ಯನಿರ್ವಹಣೆ ಹೇಗೆ?

ಬಳಕೆದಾರರು ಒಂದು ನಿರ್ದಿಷ್ಟ ಮೊತ್ತವನ್ನು ಆನ್ ಲೈನ್‌ನಲ್ಲಿ ಪಾವತಿಸಿದ ಬಳಿಕ ಹೆಲ್ಪ್ ಲೈನ್​ಗೆ ಕರೆ ಮಾಡಬಹುದು. ಕರೆ ಮಾಡಿದವರ ಬಳಿ ಮಾತನಾಡುವ ಟೆಲಿಕಾಂ ಆಪರೇಟರ್ಸ್ ರೋಗಿಗಳ ಸಮಸ್ಯೆ ಏನೆಂದು ತಿಳಿದು ಅವರು ಯಾವ ವೈದ್ಯರನ್ನು ಸಂಪರ್ಕಿಸಬೇಕೆಂದು ತಿಳಿಸುತ್ತಾರೆ. ರೋಗಿ ಆ ವೈದ್ಯರೊಂದಿಗೆ ಸಂಪರ್ಕ ಸಾಧಿಸಲು ಸಮ್ಮತಿಸಿದರೆ, ರೋಗಿ ಕೇಳಿದ ವೈದ್ಯರೊಂದಿಗೆ ಸಂಪರ್ಕ ನೀಡುತ್ತಾರೆ. ಅಲ್ಲದೇ ಈ ವೆಬ್ ಸೈಟ್ ಮುಖಾಂತರ ಆರೋಗ್ಯಕ್ಕೆ ಸಂಬಂಧಿಸಿದಂತೆ ಉಚಿತ ಮಾಹಿತಿಯನ್ನೂ ಸಹ ನೀಡಲಾಗುತ್ತದೆ.

ಪ್ರತಿಯೊಬ್ಬ ವೈದ್ಯರಿಗೆ ಸಂಬಂಧಿಸಿದಂತೆ ವೈದ್ಯಕೀಯ ಯೋಜನಾ ವರದಿಯನ್ನು ನೀಡಲಾಗುತ್ತದೆ ಎನ್ನುತ್ತಾರೆ ಸಂಸ್ಥಾಪಕರು. ಜನರಲ್ ಡಾಕ್ಟರ್‌ಗೆ ಪ್ರತಿ ನಿಮಿಷಕ್ಕೆ 20 ರೂ.ಗಳು ದೊರೆಯುತ್ತವೆ. ಇನ್ನು ಪ್ರಸೂತಿ ತಜ್ಞರು, ದಂತ ವೈದ್ಯರು ಇಂತಹ ಸ್ಪೆಷಲಿಸ್ಟ್ ವೈದ್ಯರಿಗೆ ನಿಮಿಷಕ್ಕೆ 40 ರೂ.ಗಳು ದೊರೆತರೆ, ಸೂಪರ್ ಸ್ಪೆಷಲಿಸ್ಟ್‌ ಗಳಿಗೆ ನಿಮಿಷಕ್ಕೆ 60 ರೂ.ಗಳು ದೊರೆಯುತ್ತವೆ. ಆನ್ ಲೈನ್ ಬಳಕೆದಾರರು ಪಾವತಿಸುವ ಶೇ. 40ರಷ್ಟು ಹಣವನ್ನು ಸಂಸ್ಥೆ ಬಳಸಿಕೊಳ್ಳುತ್ತದೆ.

ಮುಂದಿನ ಯೋಜನೆ...

ಮುಂದೆ ದಿನವೊಂದಕ್ಕೆ 1200 ಸಲಹಾ ಸೇವೆಯನ್ನು ನೀಡುವ ಗುರಿ ಹೊಂದಿದೆ ಹಲೋ ಡಾಕ್ಟರ್ 24x7. ಅಲ್ಲದೇ ಈಗಾಗಲೇ ಈ ಸಂಸ್ಥೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ 2 ಆರೋಗ್ಯ ಘಟಕ ಆರಂಭಿಸಿರುವ ಸಂಸ್ಥೆ, ಈ ಮೂಲಕ ರೋಗಿಗಳು ವೈದ್ಯರನ್ನು ನೇರವಾಗಿ ಭೇಟಿಯಾಗಬಹುದು ಮತ್ತು ವೈದ್ಯರು ಶಿಫಾರಸು ಮಾಡಿದ ಔಷಧಿಯ ಪ್ರಿಂಟ್ ಔಟ್ ಕೂಡ ಪಡೆಯಬಹುದಾಗಿದೆ. ಇಂತಹ ಇನ್ನೂ 100 ಆರೋಗ್ಯ ಘಟಕವನ್ನು ಫಾರ್ಮಾಸಿಸ್, ಲ್ಯಾಬೋರೇಟರಿಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಇನ್ನು 6 ತಿಂಗಳಲ್ಲಿ 4 ರಾಜ್ಯಗಳಲ್ಲಿ ತಮ್ಮ ಸೇವೆಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದಾರೆ ಹಲೋ ಡಾಕ್ಟರ್ 24x7 ಸಂಸ್ಥೆಯ ಸಂಸ್ಥಾಪಕರು. ಈ ಮೂಲಕ 3 ಲಕ್ಷ ಬಳಕೆದಾರರನ್ನು ಹೊಂದುವ ಗುರಿ ಇದೆ. ಹೆಚ್ಚಿನ ಗ್ರಾಹಕರನ್ನು ಹೊಂದಲು ಉದ್ಯಮ ಮತ್ತು ಕಾರ್ಪೋರೇಟ್ ವಲಯವನ್ನು ಆಶ್ರಯಿಸುವ ಪ್ರಯತ್ನದಲ್ಲಿದ್ದಾರೆ.

ಅಲ್ಲದೇ ಸ್ಥಳೀಯ ಔಷಧಾಲಯಗಳಿಗೆ ಮತ್ತು ವೈದ್ಯರಿಗೆ ಔಷಧಗಳನ್ನು ವಿತರಿಸುವ ಚಿಂತನೆಯೂ ಇದೆ. ಔಷಧಾಲಯಗಳು ಮತ್ತು ಕ್ಲಿನಿಕ್ ಗಳ ಬಳಿಯೇ ತನ್ನ ಆರೋಗ್ಯ ಘಟಕಗಳನ್ನು ಸ್ಥಾಪಿಸುವ ಯೋಜನೆಯೂ ಇದೆ. ಸೈಫ್ ಪಾರ್ಟ್ ನರ್, ಹೆಲ್ತ್ ಸ್ಟಾರ್ಟ್, ಆಕ್ಯುಮನ್ ಫಂಡ್, ಐವೀ ಕ್ಯಾಪ್ ಉದ್ಯಮಗಳಂತಹ ಹಲವು ಖಾಸಗಿ ಹೆಲ್ಪ್ ಲೈನ್ ಗಳನ್ನೂ ಸಹ ತನ್ನೊಂದಿಗೆ ಸೇರಿಸಿಕೊಳ್ಳುವ ಚಿಂತನೆ ನಡೆದಿದೆ.

ಉದ್ಯಮ...

ಪಿಡಬ್ಲ್ಯುಸಿ ಮತ್ತು ಜಿಎಸ್ಎಂಎ ಮಂಡಿಸಿರುವ ವರದಿಯ ಪ್ರಕಾರ 2017ರೊಳಗೆ 3.4 ಬಿಲಿಯನ್ ಅಮೇರಿಕನ್ ಡಾಲರ್ ಆದಾಯದ ಡಯಾಗ್ನಸ್ಟಿಕ್ ಸೇವೆಗಳು ಜಾಗತಿಕ ಮಟ್ಟದಲ್ಲಿ ಎಂ ಹೆಲ್ತ್ ಮಾರ್ಕೆಟ್ ನ ಶೇ.15ರಷ್ಟು ಪಾಲನ್ನು ಒಳಗೊಳ್ಳುವ ನಿರೀಕ್ಷೆಯಿದೆ..

ಬಹು ಅಂಶದ ಈ ಆದಾಯ ಕಾಲ್ ಸೆಂಟರ್ ಮತ್ತು ಮೊಬೈಲ್ ಟೆಲಿಮೆಡಿಸಿನ್ ಪರಿಹಾರಗಳ ಮೂಲಕ ಬರುವ ನಿರೀಕ್ಷೆಯಿದೆ.. ಅಂದಾಜು 1.7 ಬಿಲಿಯನ್ ಅಮೆರಿಕನ್ ಡಾಲರ್ ಹಾಗೂ 1.6 ಬಿಲಿಯನ್ ಡಾಲರ್ ಆದಾಯ ಈ ಎರಡು ಸೇವೆಗಳಿಂದ ಹುಟ್ಟುವ ಸಾಧ್ಯತೆಯಿದೆ.

2015ರ ಮೊದಲಾರ್ಧದಲ್ಲಿ ವೆಂಚರ್ ಬಂಡವಾಳ ಹೂಡಿಕೆಯ ಶೇ 2ರಷ್ಟು ಮಾತ್ರ ಹೆಲ್ತ್​ಕೇರ್​​ಗೆ ಒದಗಿಸಲಾಗಿತ್ತು.. ಆದರೆ ಜಾಗತಿಕ ಉದ್ಯಮದ ಹುಲಿ ರತನ್ ಟಾಟಾ ಹಾಗೂ ನೆಕ್ಸಸ್ ವೆಂಚರ್ ಪಾರ್ಟನರ್​​ಗಳು ಸುಮಾರು 10.2 ಮಿಲಿಯನ್ ಹಣವನ್ನು ಕೇವಲ ಹೆಲ್ತ್​ಕೇರ್​​ ಕಮ್ಯೂನಿಕೆಶನ್ ಫರ್ಮ್​ಗೆ ಹೂಡಿಕೆ ಮಾಡಿರುವುದು ನಿಖರವಾಗಿ ಮುಂದಿನ ವ್ಯಾಪಕ ಬದಲಾವಣೆಗೆ ನಾಂದಿ ಹಾಡಿದೆ..

Related Stories

Stories by YourStory Kannada