ಭಾರತೀಯ ಸಾಹಸೋದ್ಯಮಗಳ ಯಶಸ್ಸಿನ ಕಹಾನಿ - 2015

ಟೀಮ್​ ವೈ.ಎಸ್​. ಕನ್ನಡ

ಭಾರತೀಯ ಸಾಹಸೋದ್ಯಮಗಳ ಯಶಸ್ಸಿನ ಕಹಾನಿ - 2015

Wednesday December 30, 2015,

5 min Read

ಈ ವರ್ಷ ಉದ್ಯಮಗಳದ್ದು ಭರ್ಜರಿ ಸವಾರಿ. ತಳಮಟ್ಟದ ಸಂಸ್ಥೆಗಳಿಂದ ಹಿಡಿದು ಅಲಿಬಾಬಾ, ಇನ್ಫೋಸಿಸ್‍ನಂತಹ ಹೂಡಿಕೆದಾರು ಕೂಡ ಈ ವರ್ಷ ಸುದ್ದಿಯಲ್ಲಿದ್ದಾರೆ. 2016ರ ಹೊಸ್ತಿಲಲ್ಲಿ ಕೊಂಚ ಸಿನಿಕತನದ ಜೊತೆ ಉದ್ಯಮಗಳು ಭವಿಷ್ಯವನ್ನು ಎದುರು ನೋಡುತ್ತಿವೆ. ಈ ಆಟದ ಏರಿಳಿತ ಕೆಲ ವಲಯಗಳನ್ನು ಇನ್ನಷ್ಟು ಪ್ರೋತ್ಸಾಹಿಸಿದೆ. ಈ ವರ್ಷ ಸ್ಟಾರ್ಟ್‍ಅಪ್ ಜಗತ್ತಿನಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿದ್ದ ಸಂಸ್ಥೆಗಳ ಬಗ್ಗೆ ಯುವರ್‍ಸ್ಟೋರಿ ಗಮನಹರಿಸಿದೆ, ಅವ್ಯಾವುವು ನೋಡೋಣ.

ದುಡ್ಡೇ ದೊಡ್ಡಪ್ಪ...

ಈ ವರ್ಷ ಕೂಡ ಅತಿ ಹೆಚ್ಚು ಹೂಡಿಕೆ ಮಾಡಿದ ಸಂಸ್ಥೆ ಅಂದ್ರೆ `ಸೀಕ್ವೆಯಾ ಕ್ಯಾಪಿಟಲ್'. 32 ಹೂಡಿಕೆಗಳೊಂದಿಗೆ `ಸೀಕ್ವೆಯಾ ಕ್ಯಾಪಿಟಲ್' ಮೊದಲ ಸ್ಥಾನದಲ್ಲಿದ್ರೆ, `ಟೈಗರ್ ಗ್ಲೋಬಲ್ ಇನ್‍ವೆಸ್ಟ್‍ಮೆಂಟ್ಸ್' 29 ಹೂಡಿಕೆಗಳ ಮೂಲಕ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಅಚ್ಚರಿ ಎಂಬಂತೆ ರತನ್ ಟಾಟಾ, ಎನ್‍ಆರ್ ನಾರಾಯಣಮೂರ್ತಿ, ಕುಣಾಲ್ ಬಾಲ್ ಸೇರಿದಂತೆ ಹಲವರು ಏಂಜೆಲ್ ಹೂಡಿಕೆದಾರರಾಗಿ ಬದಲಾಗಿದ್ದಾರೆ. ಇನ್ನೊಂದೆಡೆ ಚೀನಾದ ಅತಿ ದೊಡ್ಡ ಇ-ಕಾಮರ್ಸ್ ಕಂಪನಿ `ಅಲಿಬಾಬಾ' ಭಾರತ ಪ್ರವೇಶಿಸಿದೆ. `ಪೇಟಿಮ್'ನಲ್ಲಿ ಹೂಡಿಕೆ ಮಾಡುವ ಜೊತೆಜೊತೆಗೆ ಅಲಿಬಾಬಾ ಬೆಂಗಳೂರಿನ ಮೊಬೈಲ್ ಹಾಗೂ ವಾಣಿಜ್ಯ ಕೇಂದ್ರಿತ ಉದ್ಯಮಗಳತ್ತ ಚಿತ್ತ ಹರಿಸಿದೆ. ಚೀನಾದ ಮತ್ತೊಂದು ಎಲೆಕ್ಟ್ರಾನಿಕ್ಸ್ ಕಂಪನಿ `ಕ್ಸಿಯೋಮಿ' ಕೂಡ ಇದೇ ಹಾದಿಯಲ್ಲಿ ಸಾಗ್ತಾ ಇದೆ. ಭಾರತದ ಉದ್ಯಮಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಇ-ಕಾಮರ್ಸ್ ಗೋದಾಮುಗಳು ಮತ್ತು ಲಾಜಿಸ್ಟಿಕ್ಸ್ ಸೇವೆಯನ್ನು ಆರಂಭಿಸಲು ಮುಂದಾಗಿದೆ.

ಟ್ಯಾಕ್ಸಿ ಕ್ರಾಂತಿ...

ಟ್ಯಾಕ್ಸಿ ಯೂನಿಯನ್‍ಗಳ ಪ್ರತಿಭಟನೆ ಹಾಗೂ ಸರ್ಕಾರದ ನಿಷೇಧದ ನಡುವೆಯೂ ಈ ವರ್ಷ ಖಾಸಗಿ ಕಾರ್ ಸೇವೆಗಳ ಅಬ್ಬರ ಜೋರಾಗಿಯೇ ಇತ್ತು. ಅತ್ಯಂತ ಕಡಿಮೆ ಇನ್‍ಸೆಂಟಿವ್ ಕೊಡ್ತಿದ್ದಾರೆ ಅಂತಾ ಆರೋಪಿಸಿ `ಓಲಾ' ಹಾಗೂ `ಊಬರ್' ಕ್ಯಾಬ್ ಚಾಲಕರು ಭಾರೀ ಪ್ರತಿಭಟನೆ ನಡೆಸಿದ್ರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, `ಮೇರು' ಹಾಗೂ `ಜುಗ್ನೂ'ನಂತೆ `ಓಲಾ' ಮತ್ತು `ಊಬರ್' ಸಹ ತಮ್ಮ ಸೇವೆಯನ್ನು ಇನ್ನಷ್ಟು ವಿಸ್ತರಿಸಿವೆ. ಅಮೆರಿಕದ ಟ್ಯಾಕ್ಸಿ ಸಂಗ್ರಾಹಕ ಸಂಸ್ಥೆ ಊಬರ್ ಪಾಲಿಗೆ ಭಾರತ ಎರಡನೇ ಅತಿ ದೊಡ್ಡ ಭೌಗೋಳಿಕ ಮಾರುಕಟ್ಟೆಯಾಗಿದೆ. ಭಾರತದ ಉದ್ಯಮಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಊಬರ್ ಈಗಾಗ್ಲೇ ಪ್ರಕಟಿಸಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಓಲಾ ದೆಹಲಿಯ ತನ್ನೆಲ್ಲಾ ಸಿಬ್ಬಂದಿಯನ್ನು ಸಿಎನ್‍ಜಿ ಆಗಿ ಬದಲಾಯಿಸಿದೆ. ಆದ್ರೆ ರಾಜಧಾನಿಯಲ್ಲಿ ಕಾರ್ಯಾಚರಣೆ ನಡೆಸಲು ಲೈಸೆನ್ಸ್ ಪಡೆಯುವ ಸಲುವಾಗಿ ಕೋರ್ಟ್‍ನಲ್ಲಿ ಹೋರಾಟ ಮಾಡುತ್ತಲೇ ಇತ್ತು. ಆದ್ರೆ ಸರ್ಕಾರದಿಂದ ಓಲಾಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕೆಲ ಕಠಿಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುವಂತೆ ಸರ್ಕಾರ ಕಟ್ಟಪ್ಪಣೆ ಮಾಡಿದೆ. ಅಕ್ಟೋಬರ್‍ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ `ಪರವಾನಿಗೆಗೆ ಸಲಹೆ, ಮಾಹಿತಿ ತಂತ್ರಜ್ಞಾನದ ಬೇಡಿಕೆ ಮೇಲೆ ಅನುಸರಣೆ ಮತ್ತು ಹೊಣೆಗಾರಿಕೆಗಳನ್ನು ಸಾರಿಗೆ ವೇದಿಕೆಗಳ ಆಧಾರದ ಮೇಲೆ ಒದಗಿಸಿದೆ. ಇದು ತಂತ್ರಜ್ಞಾನ ಆಧಾರಿತ ಸಂಗ್ರಾಹಕರು ಮತ್ತು ಟ್ಯಾಕ್ಸಿ ಕಂಪನಿಗಳ ನಡುವಣ ಸ್ಪಷ್ಟ ವ್ಯತ್ಯಾಸವನ್ನು ತಿಳಿಸುತ್ತದೆ. ಚಾಲಕರ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಪೊಲೀಸ್ ಪರಿಶೀಲನೆ ಕಡ್ಡಾಯ. ಸಂಗ್ರಾಹಕರು ವಾಹನಗಳ ಮಾಲೀಕತ್ವ ಪಡೆಯುವಂತಿಲ್ಲ. ಯಾವುದೇ ಚಾಲಕರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಳ್ಳುವಂತಿಲ್ಲ. ಟ್ಯಾಕ್ಸಿ ಸೇವೆ ರೂಪದಲ್ಲಿ ತನ್ನನ್ನು ತಾನು ಪ್ರಸ್ತುತಪಡಿಸಬೇಕು.

image


ಬೆಸ-ಸಮ ನಿಯಮದ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ಎಲ್ಲರನ್ನೂ ಅಚ್ಚರಿಯ ಕಡಲಲ್ಲಿ ಮುಳುಗಿಸಿದೆ. ಬೆಸ ಸಂಖ್ಯೆಯ ವಾಹನಗಳನ್ನು ಬೆಸ ಸಂಖ್ಯೆಯ ದಿನಾಂಕದಂದು ಮಾತ್ರ ಬಳಸಬೇಕೆಂಬುದು ನಿಯಮ, ಇದರಿಂದ ವಾಯು ಮಾಲಿನ್ಯ ಕಡಿಮೆ ಮಾಡಬಹುದು ಅನ್ನೋದು ಸರ್ಕಾರದ ಲೆಕ್ಕಾಚಾರ. ಇತ್ತೀಚೆಗಷ್ಟೇ ಕಾರ್‍ಪೂಲಿಂಗ್ ಸೇವೆ ಆರಂಭಿಸಿರುವ ಸಂಗ್ರಾಹಕರಿಗೂ ಇದೊಂದು ಆಘಾತವೇ ಸರಿ. ಜನವರಿಯಲ್ಲಿ ಸಮ-ಬೆಸ ನಿಯಮವನ್ನು ಪ್ರಯೋಗಾತ್ಮಕವಾಗಿ ಅಳವಡಿಸಲಾಗುತ್ತೆ, ಇದಕ್ಕಾಗಿ ಊಬರ್, ಮೇರು, ಓಲಾ ಮತ್ತು ಝಿಪ್ಗೋ ತಯಾರಿ ಮಾಡಿಕೊಳ್ಳುತ್ತಿವೆ.

ರಾಜ್ಯ ನೀತಿಗಳು...

ಉದ್ಯಮ ಪರಿಸರದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡ ಕೆಲವು ಸಡಿಲ ನೀತಿಗಳನ್ನು ಜಾರಿಗೆ ತಂದಿದೆ. `ಅಲ್ಟರ್ನೇಟಿವ್ ಇನ್‍ವೆಸ್ಟ್‍ಮೆಂಟ್ ಫಂಡ್ಸ್'ನಲ್ಲೂ ಹೂಡಿಕೆ ಮಾಡಲು ವಿದೇಶಿ ಘಟಕಗಳಿಗೆ ಕೇಂದ್ರ ಸಚಿವ ಸಂಪುಟ ಜುಲೈನಲ್ಲೇ ಅನುವು ಮಾಡಿಕೊಟ್ಟಿದೆ. ಇದರಿಂದಾಗಿ ಉದ್ಯಮಗಳಿಗೆ ಬಂಡವಾಳದ ಲಭ್ಯತೆ ಹೆಚ್ಚಾಗಲಿದೆ. ವಿದೇಶಿ ಹೂಡಿಕೆದಾರರು ಕೂಡ ಂIಈನಲ್ಲಿ ಬಂಡವಾಳ ಹಾಕಬಹುದು. ದೇಶದ ಭದ್ರತಾ ಮಾರುಕಟ್ಟೆ ನಿಯಂತ್ರಕ ಸಂಸ್ಥೆ `ಸೆಬಿ' ಸಮಂಜಸವಾದ ಅಗತ್ಯಗಳಿದ್ದಲ್ಲಿ, ಎಂತಹ ಬದಲಾವಣೆಗೂ ಸಿದ್ಧ ಅಂತಾ ಸ್ಪಷ್ಟಪಡಿಸಿದೆ. ಇನ್ಫೋಸಿಸ್‍ನ ನಾರಾಯಣಮೂರ್ತಿ ಅವರ ನೇತೃತ್ವದಲ್ಲಿ ಉದ್ಯಮಗಳಿಗೆ ನಿಯಂತ್ರಣ ಚೌಕಟ್ಟು ಹಾಕಲು ಸಮಿತಿಯೊಂದನ್ನು ನೇಮಕ ಮಾಡಲಾಗಿದೆ. ಸಡಿಲವಾದ ದೇಶಿ ವಿನಿಮಯ ನೀತಿ ಮೂಲಕ ಈ ಸಮಿತಿ, ಉದ್ಯಮಗಳಿಗೆ ಸುಲಭವಾಗಿ ಬಂಡವಾಳ ಗಿಟ್ಟಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. `ಐಪಿಓ' ಅಕ್ರಮಗಳ ಮೂಲಕ ಹೂಡಿಕೆದಾರರಿಗೂ ನಿಧಿ ವಿತರಿಸಲಾಗುತ್ತಿದೆ. ಎನ್‍ಆರ್‍ಐಗಳ ಟಿoಟಿ-ಡಿeಠಿಚಿಣಡಿiಚಿbಟe ಹಣವನ್ನು ಕೂಡ ದೇಶೀಯ ನಿಧಿಯನ್ನಾಗಿ ಪರಿಗಣಿಸಲು ಸರ್ಕಾರ ನಿರ್ಧರಿಸಿರುವುದು ಕೂಡ ಸ್ವಾಗತಾರ್ಹ. ಇದರಿಂಗಾಗಿ ಎಫ್‍ಡಿಐ ನೀತಿಗಳಿಂದ್ಲೂ ಅವರು ಬಚಾವ್ ಆಗಬಹುದು. ಹಾಗಂತ ಇದು ಎಫ್‍ಡಿಐ ಕಥೆಯ ಸುಖಾಂತ್ಯವೇನಲ್ಲ. ತಿಂಗಳ ಹಿಂದಷ್ಟೆ ಎಫ್‍ಡಿಐ ನೀತಿ ಉಲ್ಲಂಘಿಸಿರುವ 21 ಇ-ಕಾಮರ್ಸ್ ಕಂಪನಿಗಳ ವಿರುದ್ಧ ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ಅದರರ್ಥ ಆ 21 ಕಂಪನಿಗಳು ಎಫ್‍ಡಿಐ ನಿಧಿಯನ್ನು ಪಡೆದಿಲ್ಲ. ಎಫ್‍ಡಿಐ ಗೊಂದಲದಿಂದಾಗಿ ವಿದೇಶಿ ಬಂಡವಾಳವನ್ನು ಪಡೆಯಲು ಇ-ಕಾಮರ್ಸ್ ಕಂಪನಿಗಳು ಹಿಂದೇಟು ಹಾಕುವಂತಾಗಿದೆ.

ಅಂತರಾಷ್ಟ್ರೀಯ ಸೇರ್ಪಡೆಗಳು...

ಕೆಲವು ಉದ್ಯಮಗಳು ಈ ವರ್ಷ ವಿದೇಶಿ ನೀರಿನಲ್ಲೇ ಈಜುವ ಸಾಹಸ ಮಾಡಿವೆ. `ಝೋಸ್ಟೆಲ್' ವಿಯೆಟ್ನಾಂಗೆ ತೆರಳಿದ್ರೆ, ಹೋಟೆಲ್ ಬುಕ್ಕಿಂಗ್ ಆ್ಯಪ್ `ರೂಮ್ಸ್ ಟುನೈಟ್' 1.5 ಮಿಲಿಯನ್ ಡಾಲರ್ ಬಂಡವಾಳ ಗಿಟ್ಟಿಸಿಕೊಂಡು, ದುಬೈನಲ್ಲಿ ಉದ್ಯಮ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಆ್ಯಪ್ `ರೆಡ್ ಬಸ್' ಕೂಡ 8 ಮಿಲಿಯನ್ ಡಾಲರ್ ನೆರವು ಪಡೆದುಕೊಂಡಿದೆ. ಆಗ್ನೇಯ ಏಷ್ಯಾ, ಸಿಂಗಾಪುರ ಮತ್ತು ಮಲೇಷಿಯಾದಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ. ಮತ್ತೊಂದೆಡೆ `ಜುಗ್ನೂ' ಫಿಲಿಪೈನ್ಸ್‍ನತ್ತ ಚಿತ್ತ ನೆಟ್ಟಿದೆ.

ಅಮೆರಿಕ ಮೂಲದ `ಊಬರ್' ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಲ್ಲದೆ, ಆiಜi ಏuಚಿiಜi , `ಗ್ರ್ಯಾಬ್ ಟ್ಯಾಕ್ಸಿ', `ಲಿಫ್ಟ್' ಜೊತೆಗಿನ `ಓಲಾ' ಪಾಲುದಾರಿಕೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿತ್ತು. ಈ 4 ಕಂಪನಿಗಳು ಒಟ್ಟಾಗಿ 7 ಬಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಿವೆ. ಆiಜi ಏuಚಿiಜi ಕಂಪನಿ ಓಲಾ, ಲಿಫ್ಟ್ ಮತ್ತು ಗ್ರ್ಯಾಬ್ ಟ್ಯಾಕ್ಸಿಯಲ್ಲಿ ಹೂಡಿಕೆ ಮಾಡಿದೆ. ಆiಜi ಏuಚಿiಜi ಚೀನಾದ 360 ನಗರಗಳಲ್ಲಿ ಕಾರ್ಯಾಚರಣೆ ನಡೆಸ್ತಾ ಇದೆ. ಅಮೆರಿಕದ 200 ನಗರಗಳಲ್ಲಿ ಲಿಫ್ಟ್ ಸೇವೆ ದೊರೆಯುತ್ತಿದ್ದು, ಗ್ರ್ಯಾಬ್ ಟ್ಯಾಕ್ಸಿ ಮಲೇಷಿಯಾ, ಸಿಂಗಾಪುರ, ಇಂಡೋನೇಷ್ಯಾ, ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್‍ನಲ್ಲಿ ಕಾರ್ಯಾಚರಿಸುತ್ತಿದೆ. ಒಂದೇ ಅಪ್ಲಿಕೇಷನ್ ಬಳಸಿ, ಗ್ರಾಹಕರು ಈ ನಾಲ್ಕೂ ಸಂಸ್ಥೆಗಳ ಸೇವೆಯನ್ನು ಪಡೆಯಬಹುದು. ಸ್ಥಳೀಯ ಮಾರುಕಟ್ಟೆ ಜ್ಞಾನ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಈ ಸಂಸ್ಥೆಗಳು ಪರಸ್ಪರ ಪೈಪೋಟಿಗಿಳಿದಿವೆ.

ಹೆಚ್ಚು ಯುನಿಕಾನ್, ಕಡಿಮೆ ಫುಡ್ಡೀಸ್...

ಈ ವರ್ಷ ಓಲಾ, ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್, ಇನ್ಮೋಬಿ, ಮು ಸಿಗ್ಮಾ ಜೊತೆಗೆ ಪೇಟಿಮ್, ಝೊಮೆಟೋ ಹಾಗೂ ಕ್ವಿಕರ್ ಕೂಡ ಯುನಿಕಾರ್ನ್ ಕ್ಲಬ್ ಸೇರಿವೆ. ಅಮೆರಿಕ ಮಾರುಕಟ್ಟೆ ಪ್ರವೇಶಿಸಲು `ಅರ್ಬನ್ ಸ್ಪೂನ್' ಅನ್ನು ಸ್ವಾಧೀನಪಡಿಸಿಕೊಂಡಿರುವ `ಝೊಮ್ಯಾಟೋ' ಈ ವರ್ಷವಿಡೀ ಭಾರೀ ಸುದ್ದಿ ಮಾಡಿದೆ. ನವೆಂಬರ್‍ನಲ್ಲಿ 200 ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಿರುವ ಝೊಮ್ಯಾಟೋ, ಫುಡ್ ಡೆಲಿವರಿಗಾಗಿ ಪ್ರತ್ಯೇಕ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಅಷ್ಟೇ ಅಲ್ಲ `ಟ್ರಿಪ್ ಹೊಬೊ' ಜೊತೆಗೆ ಕೂಡ ಝೊಮ್ಯಾಟೋ ಪಾಲುದಾರಿಕೆ ಮಾಡಿಕೊಂಡಿದೆ. ಅದೆಷ್ಟೋ ಆಹಾರೋದ್ಯಮಗಳು ನಷ್ಟದ ಹಾದಿ ಹಿಡಿದ್ರೂ ಝೊಮ್ಯಾಟೋ ಮಾತ್ರ ಇಡೀ ವರ್ಷ ಆ ವಲಯದಲ್ಲಿ ಹಿಡಿತ ಸಾಧಿಸುವಲ್ಲಿ ಸಫಲವಾಗಿದೆ. ಆರ್ಥಿಕ ಸಂಕಷ್ಟದಿಂದಾಗಿ `ಸ್ಪೂನ್ ಜೊಯ್', `ಈಟ್ಲೋ' ಮತ್ತು `ಡ್ಯಾಝೋ' ಕಂಪನಿಗಳು ಬಾಗಿಲು ಮುಚ್ಚಿವೆ. 200 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿರುವ `ಟಿನಿ ಔಲ್' ಕೆಲವು ನಗರಗಳಲ್ಲಿ ಕಾರ್ಯಾಚರಣೆ ನಡೆಸ್ತಾ ಇದ್ದ ತನ್ನ ಕಚೇರಿಗಳನ್ನು ಬಂದ್ ಮಾಡಿದೆ.

ಯುನಿಕಾರ್ನ್‍ಗಳೇ 2015ರಲ್ಲಿ ಹೆಚ್ಚು ಪ್ರಾಬಲ್ಯ ಮೆರೆದಿರುವುದು ಸುಳ್ಳಲ್ಲ. ಯಾಕಂದ್ರೆ ಫ್ಲಿಪ್‍ಕಾರ್ಟ್‍ನ ಸಚಿನ್ ಬನ್ಸಲ್ ಹಾಗೂ ಬಿನ್ನಿ ಬನ್ಸಲ್, ಫೋಬ್ರ್ಸ್‍ನ ಬಿಲಿಯನೇರ್‍ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ನಾಪ್‍ಡೀಲ್ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ. `ಪೆಪ್ಪರ್ ಟ್ಯಾಪ್', `ಗ್ರೊಫರ್ಸ್' ಮತ್ತು `ಜುಗ್ನೂ' ಜೊತೆಗೆ `ಫ್ಲಿಪ್‍ಕಾರ್ಟ್', `ಓಲಾ' ಹಾಗೂ `ಅಮೇಝಾನ್' ಕೂಡ ದಿನಸಿ ವಿತರಣೆ ರೇಸ್‍ಗೆ ಲಗ್ಗೆ ಇಟ್ಟಿವೆ.

ಇ-ಕಾಮರ್ಸ್ ಕ್ಷೇತ್ರದ ಮುನ್ನಡೆ...

ಈ ವರ್ಷಪೂರ್ತಿ ಇ-ಕಾಮರ್ಸ್‍ನ ಘಟಾನುಘಟಿಗಳು ತಮ್ಮ ಸ್ವಾಧೀನ ಪ್ರಕ್ರಿಯೆ, ಅಪ್ಲಿಕೇಷನ್ ತಂತ್ರ, ಮಿಲಿಯನ್ ಲೆಕ್ಕದಲ್ಲಿ ಹೂಡಿಕೆ ಹಾಗೂ ಹಬ್ಬದ ಸಂದರ್ಭಗಳಲ್ಲಿ ಬಂಪರ್ ಮಾರಾಟದ ಮೂಲಕ ಸುದ್ದಿ ಮಾಡುತ್ತಲೇ ಇದ್ದವು. ಆನ್‍ಲೈನ್ ಶಾಪಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮೂಲಕ ಪೇಟಿಮ್ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈ ವರ್ಷ ದೀಪಾವಳಿಯಲ್ಲಂತೂ ಆನ್‍ಲೈನ್ ಶಾಪಿಂಗ್ ಸೈಟ್‍ಗಳಲ್ಲಿ ಹಿಂದೆಂದೂ ಕಂಡು ಕೇಳಿರದಂತಹ ಬಂಪರ್ ಆಫರ್‍ಗಳಿದ್ವು. ಇನ್ನೊಂದೆಡೆ ಲಾಜಿಸ್ಟಿಕ್ಸ್ ವಿಭಾಗ ಹಾಗೂ ಪೂರೈಕೆ ಸರಣಿಯಲ್ಲು ಆಮೂಲಾಗ್ರ ಬದಲಾವಣೆಗಳಾಗಿವೆ. ಶೇ.60ರಷ್ಟು ಆರ್ಡರ್‍ಗಳು ಟೈರ್-2 ಮತ್ತು ಟೈರ್-3 ನಗರಗಳಿಂದ್ಲೇ ಸಿಗುತ್ತಿರುವುದು ವಿಶೇಷ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಸೇಲ್ಸ್ ಸಂಖ್ಯೆ ಮೂರುಪಟ್ಟು ಹೆಚ್ಚಾಗಿದೆ.

ಪಿಕ್ಚರ್ ಅಭಿ ಬಾಕಿ ಹೈ...

2016ರ ಜವರಿಯಲ್ಲಿ `Sಣಚಿಡಿಣuಠಿ Iಟಿಜiಚಿ Sಣಚಿಟಿಜuಠಿ Iಟಿಜiಚಿ' ಕ್ಯಾಂಪೇನ್ ಆರಂಭವಾಗಲಿದೆ. ಆದ್ರೆ 2015ರ ಅಂತ್ಯದಲ್ಲೂ ಉದ್ಯಮ ಲೋಕದ ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. `ಗ್ರೊಫರ್ಸ್' ಹಾಗೂ `ಓಯೋ ರೂಮ್ಸ್' 100 ಮಿಲಿಯನ್ ಡಾಲರ್ ಕ್ಲಬ್ ಸೇರಿವೆ. ಅದರರ್ಥ ಅವರೇ ಮುಂದಿನ ಯುನಿಕಾರ್ನ್‍ಗಳಾ? ಇನ್ಫೋಸಿಸ್ 6 ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ, ಅವುಗಳಲ್ಲಿ ಒಂದು ಮಾತ್ರ ಭಾರತದ್ದು. ಈ ಟ್ರೆಂಡ್ ಮುಂದುವರಿಯಲಿದ್ಯಾ? ಅಥವಾ ಭಾರತೀಯ ಉದ್ಯಮಗಳು ಹೂಡಿಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆಯೇ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಅತಿ ದೊಡ್ಡ ಕಚೇರಿಯೊಂದನ್ನು ಹೈದ್ರಾಬಾದ್‍ನಲ್ಲಿ ತೆರೆಯಲು, 50 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಊಬರ್ ಮುಂದಾಗಿದೆ. ಹೀಗೆ ದಿನೇ ದಿನೇ ಹೆಚ್ಚುತ್ತಿರುವ ಪೈಪೋಟಿಯಿಂದ ಸಾರಿಗೆ ಸೇವೆಯಲ್ಲಿ ಇನ್ನಷ್ಟು ಸುಧಾರಣೆ ಆಗುತ್ತಾ ಅನ್ನೋ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.

ಲೇಖಕರು: ಅಥಿರಾ ಎ ನಾಯರ್

ಅನುವಾದಕರು: ಭಾರತಿ ಭಟ್​​