ಕೆಲವೇ ದಿನಗಳಲ್ಲಿ ಲಾಸ್ಟ್ ಶೋ ಫಿಕ್ಸ್​.. ಇತಿಹಾಸ ಸೃಷ್ಠಿಯಲ್ಲಿ ನೀವು ಒಬ್ಬರಾಗಿ..!

ಟೀಮ್​ ವೈ.ಎಸ್​. ಕನ್ನಡ

1

ಕನ್ನಡ ಸಿನಿಮಾಗಳನ್ನ ಸಿಂಗಲ್ ಸ್ಕ್ರೀನ್​ ಚಿತ್ರಮಂದಿರದಲ್ಲಿ ನೋಡುವ ಮಜಾವೇ ಬೇರೆ. ಅಲ್ಲಿ ಬೀಳುವ ಶಿಳ್ಳೆ , ಚಪ್ಪಾಳೆ, ಜೈಕಾರ ಎಲ್ಲೂ ಸಿಗೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ಇದು ಪ್ರತೀ ಅಪ್ಪಟ ಕನ್ನಡ ಅಭಿಮಾನಿಗಳ ಬಾಯಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿ ಬರುವ ಮಾತು. ಯಸ್, ಸಿಂಗಲ್ ಥಿಯೇಟರ್​ನಲ್ಲಿ ಸಿನಿಮಾ ನೋಡುವುದು ತುಂಬಾನೇ ಖುಷಿ ಕೊಡುವ ವಿಚಾರ. ಅದರಲ್ಲೂ ಕನ್ನಡ ಸಿನಿಮಾರಂಗದಲ್ಲಿ ಅದೊಂದು ಸಂಸ್ಕೃತಿಯಂತೆ ನಡೆದುಕೊಂಡು ಬಂದಿದೆ. ಆದ್ರೆ ಕಾಲಕಳೆದಂತೆ ಈ ಸಂಸ್ಕೃತಿ ಕಳೆದುಹೋಗುತ್ತಿದ್ದು ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿರೋ ಸಾಕಷ್ಟು ಥಿಯೇಟರ್​ಗಳು ಕಣ್ಮರೆಯಾಗಿ ಆ ಸ್ಥಳಕ್ಕೆ ಮಾಲ್​ಗಳು ಬರುತ್ತಿವೆ.

ವಿಶ್ವದ 2ನೇ ಅತೀದೊಡ್ಡ ಚಿತ್ರಮಂದಿರ ‘ಕಪಾಲಿ’  

ಏಷ್ಯಾದ ಅತೀ ದೊಡ್ಡ ಚಿತ್ರಮಂದಿರ, ವಿಶ್ವದ 2ನೇ ಅತೀದೊಡ್ಡ ಚಿತ್ರಮಂದಿರ ಅಂತ ಹೆಸರು ಮಾಡಿದ್ದು ಬೆಂಗಳೂರಿನ ಮೆಜೆಸ್ಟಿಕ್​ ಪಕ್ಕದಲ್ಲಿರು ಕಪಾಲಿ ಥಿಯೇಟರ್. ಸರಿ ಸುಮಾರು 50 ವರ್ಷಗಳಿಂದ ಸಿನಿರಸಿಕರನ್ನ ಕಪಾಲಿ ಚಿತ್ರಮಂದಿರ ರಂಜಿಸುತ್ತಾ ಬಂದಿದೆ. ಆದ್ರೆ ಈಗ ಈ ಐತಿಹಾಸಿಕ ಹಿನ್ನಲೆ ಹೊಂದಿರುವ ಸಿನಿಮಾ ಮಂದಿರ ನೆಲಸಮ ಆಗಲಿದೆ. 1968ರಲ್ಲಿ ಮೊರಾರ್ಜಿ ದೇಸಾಯಿ ಅವರಿಂದ ಉದ್ಘಾಟನೆಗೊಂಡಿದ್ದ ಕಪಾಲಿ ಥಿಯೇಟರ್ 1500 ಸೀಟ್ ಕೆಪಾಸಿಟಿ ಹೊಂದಿದ್ದು, ಏಷ್ಯಾದ ಅತಿದೊಡ್ಡ ಚಿತ್ರಮಂದಿರ ಎನಿಸಿಕೊಂಡಿತ್ತು. ಕನ್ನಡ ಸಿನಿಮಾಗಳು ಮಾತ್ರವಲ್ಲದೆ ಇಂಗ್ಲೀಷ್ ಮತ್ತು ಹಿಂದಿ ಚಿತ್ರಗಳು ನೂರಾರು ದಿನಗಳ ಕಾಲ ಪ್ರದರ್ಶನವಾಗಿರುವುದು ಈ ಚಿತ್ರಮಂದಿರದ ವಿಶೇಷ.

ಇದನ್ನು ಓದಿ: 434 ಮಕ್ಕಳನ್ನು ರಕ್ಷಿಸಿದ ರೇಖಾ ಮಿಶ್ರಾ ಕಥೆ ಕೇಳಿ..!

ಅದೃಷ್ಟದಂತಿದ್ದ ಚಿತ್ರಮಂದಿರ..!

ಡಾ. ರಾಜ್‍ಕುಮಾರ್ ಸೇರಿದಂತೆ ಹಲವು ಕಲಾವಿದರ ಸಾಕಷ್ಟು ಸಿನಿಮಾಗಳು ಶತದಿನೋತ್ಸವ ಪೂರೈಸಿರುವ ಸಿನಿಮಾಮಂದಿರ ಇದಾಗಿದ್ದು,  ರಾಜ್ ಕುಟುಂಬದ ಸಾಕಷ್ಟು ಸಿನಿಮಾಗಳು ಇಲ್ಲಿಯೇ ಪ್ರದರ್ಶನವಾಗಿದೆ. ಅದರಂತೆ ಕ್ರೇಜಿಸ್ಟಾರ್ ರವಿಚಂದ್ರನ್​ರ ಹಲವಾರು ಚಿತ್ರ ಇಲ್ಲೇ ಶತದಿನೋತ್ಸವ ಪೂರೈಸಿರುವ ಹಿನ್ನಲೆ ಇದೆ. ಕಪಾಲಿ ಸಿನಿಮಾಮಂದಿರ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಹೆಗ್ಗುರುತು ಎನಿಸಿಕೊಂಡಿತ್ತು. ತನ್ನ ಸೀಟಿಂಗ್​ ಕೆಪಾಸಿಟಿ ಮತ್ತು ಚಿತ್ರಮಂದಿರದ ಕ್ವಾಲಿಟಿ ಅಂದಿನ ದಿನಗಳಲ್ಲೇ ಅತಿ ಶ್ರೇಷ್ಠವಾಗಿತ್ತು. ಹೀಗಾಗಿ ಕಪಾಲಿ ಚಿತ್ರಮಂದಿರ ಕನ್ನಡ ಚಿತ್ರರಂಗದ ಪಾಲಿಗೆ ಹೆಗ್ಗುರುತು ಕೂಡ ಆಗಿತ್ತು.  

ಕಪಾಲಿ ಸ್ಥಳದಲ್ಲಿ ಹೈಟೆಕ್​ ಮಾಲ್​

ಜಗತ್ತು ಬದಲಾಗುತ್ತಿರುವ ಹಾಗೇ ಜನರ ಲೈಫ್ ಸ್ಟೈಲ್ ಕೂಡ ಚೇಂಜ್ ಆಗ್ತಿದೆ. ಅದೇ ರೀತಿ ಸಿಂಗಲ್ ಸ್ಕ್ರೀನ್ ನಲ್ಲಿ ಚಿತ್ರವನ್ನ ನೋಡುವ ಜನರು ಕೂಡ ಕಡಿಮೆ ಆಗ್ತಿದ್ದಾರೆ. ಅತೀ ದೊಡ್ಡ ಚಿತ್ರಮಂದಿನ ಆಗಿರುವುದರಿಂದ ಜನರು ತುಂಬಿ, ಹೌಸ್​ಫುಲ್​ ಶೋಗಳಾಗುವುದು ಈಗಿನ ದಿನಗಳಲ್ಲಿ ಕಷ್ಟದ ವಿಚಾರವೇ ಆಗ್ತಿದೆ.  ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರವನ್ನ ನೋಡುವ ಹವ್ಯಾಸ ಹೆಚ್ಚಾಗುತ್ತಿದೆ. ಇಷ್ಟೆಲ್ಲ ಸೌಲಭ್ಯ ಇರುವ ಸಂದರ್ಭದಲ್ಲಿ ಥಿಯೇಟರ್ ಮಾಲೀಕರು ಕೂಡ ಬದಲಾಗ್ತಿದ್ದಾರೆ. ಕಪಾಲಿ ಸಿನಿಮಾ ಮಂದಿರವನ್ನು ನೆಲಸಮ ಮಾಡಿ,  ಅದೇ ಜಾಗದಲ್ಲಿ ಮಲ್ಟಿಫ್ಲೆಕ್ಸ್ ಇರುವ ಮಾಲ್ ಬರಲಿದೆ. ಬದಲಾವಣೆ ಜಗದ ನಿಯಮ. ಬಹುತೇಕ ಮಲ್ಟಿಪ್ಲೆಕ್ಸ್ ಗಳು ಮಾಲ್ , ಫುಡ್ ಕೋರ್ಟ್ , ಪಾರ್ಕಿಂಗ್, ಶಾಪಿಂಗ್ ಆರ್ಕೇಡ್ ನಿಂದಾಗಿ ಆದಾಯ ಗಳಿಸುತ್ತಿವೆ. ಆಧುನಿಕ ಮಲ್ಟಿಪ್ಲೆಕ್ಸ್ ಗಳು ಹೆಚ್ಚಿನ ಸ್ಥಳವಾಕಾಶ ಹೊಂದಿರುತ್ತವೆ. ಕಪಾಲಿ ಕೂಡ ದೊಡ್ಡ ಮಲ್ಟಿಪ್ಲೆಕ್ಸ್ ಎನಿಸಿಕೊಳ್ಳಲಿದೆ. 60 ಸಾವಿರ ಚದರ ಅಡಿ ಹೊಂದಿರುವ ಈ ಜಾಗದ ಮೌಲ್ಯ ಪ್ರಸ್ತುತ ಮಾರುಕಟ್ಟೆಯಲ್ಲಿ 120ರಿಂದ 150 ಕೋಟಿ ಇದೆ. ಇದರಲ್ಲಿ 2 ಲಕ್ಷ ಚದರ ಅಡಿಯ ವಾಣಿಜ್ಯ ಕಾಂಪ್ಲೆಕ್ಸ್ ನಿರ್ಮಿಸಬಹುದಾಗಿದೆ. ಹೀಗಾಗಿ ವಿಶ್ವದ 2ನೇ ಅತೀ ದೊಡ್ಡ ಚಿತ್ರಮಂದಿನ ಕೆಲವೇ ದಿನಗಳಲ್ಲಿ ನೆಲಸಮವಾಗಲಿದೆ. ಆದ್ರೆ ಕಪಾಲಿ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳಲಿದೆ.

ಇದನ್ನು ಓದಿ:

1. ಕೇಕ್​​​​ನಲ್ಲಿ ಅರಳಿತು ಕಲಾತ್ಮಕತೆ..!

2. ಟ್ರೆಂಡಿಯಾಗಿದೆ, ಸಖತ್​ ಟೇಸ್ಟೀಯಾಗಿದೆ- ಸಮ್ಮರ್​ನಲ್ಲಿ ನೈಟ್ರೋಜನ್​ ಐಸ್​ಕ್ರೀಮ್​ನದ್ದೇ ಮಾತು...! 

3. 1000 ಕೋಟಿಯ ವಿಶೇಷ ಪ್ರಾಜೆಕ್ಟ್​- ದಾಖಲೆ ಬರೆಯಲಿದೆ "ದಿ ಮಹಾಭಾರತ್"