ಕ್ರಿಸ್ಮಸ್​ಗೂ ಮುನ್ನ ಒಲಾಗೆ 500ಮಿಲಿಯನ್ ಡಾಲರ್ ‘F' ಸರಣಿ ಸುತ್ತಿನ ಫಂಡಿಂಗ್

ಟೀಮ್​​ ವೈ.ಎಸ್​​. ಕನ್ನಡ

ಕ್ರಿಸ್ಮಸ್​ಗೂ ಮುನ್ನ ಒಲಾಗೆ 500ಮಿಲಿಯನ್ ಡಾಲರ್ ‘F' ಸರಣಿ ಸುತ್ತಿನ ಫಂಡಿಂಗ್

Wednesday November 25, 2015,

3 min Read

ಭಾರತೀಯ ಸ್ಟಾರ್ಟ್ಅಪ್ ಕಂಪನಿಗಳು ಈ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲೇ 7.3 ಬಿಲಿಯನ್ ಡಾಲರ್ ನಿಧಿ ಸಂಗ್ರಹಿಸಿವೆ. ಸ್ಟಾರ್ಟ್ಅಪ್ ಕಂಪನಿಗಳ ದೃಷ್ಟಿಕೋನದಿಂದ ನೋಡುವುದಾದರೆ ಇದೊಂದು ಅದ್ಭುತ ಬೆಳವಣಿಗೆಯಾಗಿದ್ದು, ಕಳೆದ ತ್ರೈಮಾಸಿಕ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಉತ್ತಮ ಬೆಳವಣಿಗೆಯಾಗಿದೆ. ವರ್ಷದ ಅಂತ್ಯದವರೆಗೂ ಇದೆ ಬೆಳವಣಿಗೆಯನ್ನು ಕಾಯ್ದುಕೊಳ್ಳಲ್ಲಿದೆ. ಒಟ್ಟಿನಲ್ಲಿ 639 ಡೀಲ್​​ಗಳಾಗಿದ್ದು, ಡೀಲ್​​ ಒಂದಕ್ಕೆ ಸರಾಸರಿ 11.41 ಮಿಲಿಯನ್ ಡಾಲರ್ ಹಣ ಹರಿದು ಬಂದಿದೆ.

image


ಓಲಾ ಕಂಪನಿಯ ಹರ್ಷ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿದೆ. ಈ ವರ್ಷ ಕೂಡ ಕಂಪನಿ ಸಂತಸದಲ್ಲಿದೆ. ಓಲಾ ಪ್ರಕಟಣೆಯ ಪ್ರಕಾರ ಇಂದು 500 ಮಿಲಿಯನ್ ಡಾಲರ್ ಎಫ್ ಸರಣಿ ಸುತ್ತಿನ ನಿಧಿ ಸಂಗ್ರಹಿಸುವಲ್ಲಿ ಸಫಲವಾಗಿದೆ. ಬೈಲಿ ಗಿಪ್ಪರ್ಡ್, ಫಾಲ್ಕನ್ ಎಡ್ಜ್ ಕ್ಯಾಪಿಟಲ್, ಟೈಗರ್ ಗ್ಲೊಬಲ್, ಸಾಫ್ಟ್​​ಬ್ಯಾಂಕ್ ಗ್ರೂಪ್, ಡಿಎಸ್​​ಟಿ ಗ್ಲೋಬಲ್ ಮತ್ತು ದಿ ಕುವೈದಿ ಸಂಸ್ಥೆಗಳು ಈ ಎಫ್ ಸರಣಿ ನಿಧಿ ಸಂಗ್ರಹ ಸುತ್ತಿನಲ್ಲಿ ಭಾಗವಹಿಸಿದ್ದವು. ಇದಕ್ಕೂ ಮುಂಚೆ ಕಳೆದ ವರ್ಷ ಏಪ್ರಿಲ್​​ನಲ್ಲಿ 400 ಮಿಲಿಯನ್ ಡಾಲರ್ ‘E’ ಸರಣಿ ನಿಧಿ ಸಂಗ್ರಹಿಸಲಾಗಿತ್ತು..

500ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ ಓಲಾ, ಪ್ರಾಮಾಣಿಕತೆ ಬೆಳವಣಿಗೆಯ ಪ್ರತೀಕ

ಕಳೆದ ಒಂದು ವರ್ಷದಲ್ಲಿ ಓಲಾ ಕಂಪನಿ 30 ಪಟ್ಟು ದೊಡ್ಡದಾಗಿ ಬೆಳೆದಿದೆ. ಪ್ರತಿ ದಿನ 10 ಲಕ್ಷ ಬುಕ್ಕಿಂಗ್​ ಪ್ರಸ್ತಾಪ ಬರುತ್ತಿವೆ. 3 ಲಕ್ಷ 50 ಸಾವಿರ ವಾಹನಗಳು ಇಲ್ಲಿ ನೋಂದಣಿಯಾಗಿವೆ. 102 ನಗರದಲ್ಲಿ ಓಲಾ ಕಾರ್ಯನಿರ್ವಹಿಸುತ್ತಿದೆ. ಕಂಪನಿ ಆರಂಭವಾದಗಿನಿಂದ ಬಂಡವಾಳ ಸಂಗ್ರಹಿಸುತ್ತಿದ ಕಂಪನಿ ಇನ್ಮುಂದೆ ಬಂಡವಾಳ ಕ್ರೂಡಿಕರಣಕ್ಕೆ ಕೈ ಹಾಕುವುದಿಲ್ಲವಂತೆ. ಶೀಘ್ರದಲ್ಲೇ ವರ್ಷದ ಅಂತ್ಯದವರೆಗೆ 200 ನಗರಗಳಿಗೆ ಓಲಾ ತನ್ನ ಸೇವೆ ಒದಗಿಸಲಿದೆ. ಹಾಗಾಗಿ ಎಫ್ ಸರಣಿಯ ಬಂಡವಾಳವನ್ನು ಈ ಕೆಳಕಾಣುವ ಉದ್ದೇಶಗಳಿಗೆ ತೊಡಗಿಸಲಾಗುತ್ತದೆ..

1) ಅಸ್ತಿತ್ವದಲ್ಲಿರವ ಎಲ್ಲಾ ವಿಭಾಗಗಳಲ್ಲೂ ಅಭಿವೃದ್ಧಿ ಹೆಚ್ಚಿಸುವುದು

2) ಸ್ಥಳೀಯ ಮಾರುಕಟ್ಟೆಗೆ ಸೃಜನಾತ್ಮಕ ಪರಿಹಾರ ಒದಗಿಸುವುದು

3) ಚಾಲಕ-ಉದ್ಯಮಸ್ಥರಿಗೆ ಪೂರಕ ವಾತಾವರಣ ನಿರ್ಮಾಣ ಕಲ್ಪಿಸುವುದು.

"ಸ್ಥಳಿಯ ಮಾರುಕಟ್ಟೆಯಲ್ಲಿ ನಮ್ಮ ಉದ್ಯಮವನ್ನು ದಿನದಿಂದ ದಿನಕ್ಕೆ ಅಭಿವೃದ್ದಿಪಡಿಸಿಕೊಳ್ಳುವ ಕೆಲಸ ನಾವು ಮಾಡಲಿದ್ದೇವೆ. ಹೊಸ-ಹೊಸ ಐಡಿಯಾಗಳೊಂದಿಗೆ ನಾವು ಸ್ಥಳೀಯ ಮಾರುಕಟ್ಟೆಯಲ್ಲಿದ್ದೇವೆ. ಓಲಾ ಶೇರ್, ಓಲಾ ಪ್ರೈಮ್ ಮತ್ತು ಓಲಾ ಮನೀ ಮೂಲಕ ಭಾರತದ ಮೊಬೈಲ್ ಎಕೋಸಿಸ್ಟಮ್​ನಲ್ಲಿ ನಾವಿದ್ದೇವೆ.." ಎನ್ನುತ್ತಾರೆ ಓಲಾ ಕಂಪನಿಯ ಸಿಎಓ ಮತ್ತು ಸಹ ಮಾಲಿಕ ಭಾವಿಶ್ ಆಗರ್ವಾಲ್.

ಮಾರುಕಟ್ಟೆಯಲ್ಲಿ ಪಾರುಪತ್ಯ

ಕಂಪನಿಯ ಪ್ರಕಟಣೆಯಂತೆ, ಭಾರತದಲ್ಲಿ ಸ್ಮಾರ್ಟ್​ಫೋನ್ ಹೊಂದಿರುವ ಕ್ಯಾಬ್ ಚಾಲಕರಲ್ಲಿ 78 ಪ್ರತಿಶತ ಚಾಲಕರು ಓಲಾ ಮೊಬೈಲ್ ಆ್ಯಪ್ ಹೊಂದಿದ್ದಾರಂತೆ. ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುತ್ತಿರುವ ಓಲಾ, ಟಯರ್-2 ಮತ್ತು ಟಯರ್-3 ನಗರಗಳಲ್ಲೂ ತನ್ನ ವ್ಯವಹಾರವನ್ನು ಬೆಳೆಸಿಕೊಂಡಿದೆ. ಮುಂಬೈನ ಕಪ್ಪು-ಹಳದಿ ಬಣ್ಣದ ಟಾಕ್ಸಿಗಳು, ಆರು ನಗರದಲ್ಲಿನ ಆಟೋ ರಿಕ್ಷಾಗಳು ಮತ್ತು ಕೊಲ್ಕತ್ತಾದ ಹಳದಿ ಟ್ಯಾಕ್ಸಿಗಳನ್ನು ಓಲಾ ಸೇರಿಸಿಕೊಂಡಿದೆ. ಬೆಂಗಳೂರಿನಲ್ಲೂ ಓಲಾ ಕಾರುಬಾರು ಜೋರಾಗಿದೆ..

ಬಿಲಿಯನ್ ಡಾಲರ್ ಫಂಡಿಂಗ್ ಕ್ಲಬ್ನಲ್ಲಿ ಓಲಾ

ಸದ್ಯ ಒಲಾ 1.3 ಬಿಲಿಯನ್ ಹೊರಗಿನಿಂದ ಬಂಡವಾಳ ಸಂಗ್ರಹಿಸಿದೆ. ಕಳೆದ ವರ್ಷಗಳಲ್ಲಿ ಒಟ್ಟು 1.2 ಬಿಲಿಯನ್ ಸಂಗ್ರಹಿಸಲಾಗಿತ್ತು. ಏಪ್ರಿಲ್ 2015ರಲ್ಲಿ ಓಲಾ 400 ಮಿಲಿಯನ್ ನಿಧಿ ಸಂಗ್ರಹಸಿತ್ತು. ಆ ವೇಳೆ ‘E' ಸರಣಿ ಸುತ್ತಿನ ಬಂಡವಾಳ ಸಂಗ್ರಹದ ಸಾರಥ್ಯವನ್ನು ಡಿಎಸ್ಟಿ ಗ್ಲೋಬಲ್ ಕಂಪನಿವಹಿಸಿಕೊಂಡಿತ್ತು. 210 ಮಿಲಿಯನ್ ಬಂಡವಾಳ ಹಾಕುವುದರೊಂದಿಗೆ 2014ರ ಅಕ್ಟೋಬರ್​​ನಲ್ಲಿ ‘D' ಸರಣಿ ಸುತ್ತಿನ ನಿಧಿ ಸಂಗ್ರಹದಲ್ಲಿ ಸಾಫ್ಟ್​​ಬ್ಯಾಂಕ್ ಗಮನಸೆಳೆದಿತ್ತು. ಇವರಷ್ಟೆ ಅಲ್ಲ ಟೈಗರ್ ಗ್ಲೋಬಲ್, ಮ್ಯಾಟ್ರಿಕ್ಸ್ ಪಾರ್ಟ್​ನರ್ಸ್​, ಸ್ಟೇಡ್​ವೀವ್ ಕ್ಯಾಪಿಟಲ್ ಮತ್ತು ಸಿಕ್ಯೂವ್ ಇಂಡಿಯಾ, ಆ್ಯಸೆಲ್ ಪಾರ್ಟ್​ನರ್ಸ್ ಯುಎಸ್ ಮತ್ತು ಫಾಲ್ಕನ್ ಎಡ್ಜ್ ಕೂಡ ಓಲಾ ಬಂಡವಾಳ ಸಂಗ್ರಹದಲ್ಲಿ ಪ್ರಮುಖ ಕಂಪನಿಗಳು.

ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದ ಫ್ಲಿಫ್​​ಕಾರ್ಟ್ ಮತ್ತು ಸ್ನ್ಯಾಪ್​ಡೀಲ್

ಕಳೆದ ಒಂದು ವರ್ಷದಲ್ಲಿ ಓಲಾ ನಡೆದು ಬಂದ ಹಾದಿ ಹೀಗಿದೆ:

ನವೆಂಬರ್ 2015: ‘F' ಸರಣಿ ಸುತ್ತಿನಲ್ಲಿ 500 ಮಿಲಿಯನ್ ಡಾಲರ್ ಫಂಡಿಂಗ್

ನವೆಂಬರ್ 2015: ಓಲಾ ಮನೀ ವ್ಯಾಲೆಟ್ ಆ್ಯಪ್ ಪರಿಚಯ

ಜೂನ್ 2015: ದಿನನಿತ್ಯ ಬಳಕೆಯ ವಸ್ತುಗಳಿಗಾಗಿ ಓಲಾ ಸ್ಟೋರ್ ಆ್ಯಪ್ ಬಿಡುಗಡೆ

ಏಪ್ರಿಲ್ 2015:‘E' ಸರಣಿ ಸುತ್ತಿನಲ್ಲಿ 400ಮಿಲಿಯನ್ ನಿಧಿ ಸಂಗ್ರಹ

ಮಾರ್ಚ್ 2015: ಟ್ಯಾಕ್ಸಿಫಾರ್​​ಶ್ಯೂರ್​​​ ಓಲಾ ತೆಕ್ಕೆಗೆ

ಮಾರ್ಚ್ 2015: ಆಹಾರ ಪದಾರ್ಥಗಳ ಪೂರೈಕೆಗಾಗಿ ನಾಲ್ಕು ನಗರಗಳಲ್ಲಿ, ಓಲಾ ಕ್ಯಾಫೆ ಆನ್ ಡಿಮ್ಯಾಂಡ್ ಸೇವೆ ಆರಂಭ

ಅಕ್ಟೋಬರ್2014: ಬಿಲಿಯನ್ ಡಾಲರ್ ಮೌಲ್ಯ ಮುಟ್ಟಿದ ಓಲಾ

ಅಕ್ಟೋಬರ್2014: ‘D' ಸರಣಿ ಫಂಡಿಂಗ್​​ನಲ್ಲಿ 210 ಮಿಲಿಯನ್ ಸಂಗ್ರಹ

ಸೆಪ್ಟಂಬರ್ 2014: ಓಲಾ ವ್ಯಾಲೆಟ್ ಉದ್ಘಾಟನೆ

ಲೇಖಕರು: ಅಲೋಕ್​​ ಸೋನಿ

ಅನುವಾದಕರು: ಎನ್. ಎಸ್. ರವಿ