ಒಂದೇ ವರ್ಷದಲ್ಲಿ 7ಮಿಲಿಯನ್ ಆದಾಯ ಗಳಿಸಿದ ನಾಲೆಡ್ಜ್ ಫ್ಯಾಕ್ಟರಿ ಹಲ್​​ವೇಝ್​​..!

ಟೀಮ್​​ ವೈ.ಎಸ್​​.

ಒಂದೇ ವರ್ಷದಲ್ಲಿ 7ಮಿಲಿಯನ್ ಆದಾಯ ಗಳಿಸಿದ ನಾಲೆಡ್ಜ್ ಫ್ಯಾಕ್ಟರಿ ಹಲ್​​ವೇಝ್​​..!

Tuesday September 22, 2015,

4 min Read

ಪರಿಪೂರ್ಣ ಸಾಮರ್ಥ್ಯ ಹೊಂದಿರುವ ತಂಡ ಯಾವುದೇ ಸಂಸ್ಥೆಯ ನಿಜವಾದ ಆಸ್ತಿ.. ಅಂತಹದ್ದೊಂದು ಸಮರ್ಥ ತಂಡ ಕಟ್ಟಿದರೆ ಯಶಸ್ಸೆಂಬ ಮಾಯಾಕುದುರೆ ಪಳಗಿಸಬಹುದು ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ.. ಅಂತಹ ಪರಿಪೂರ್ಣ ಯಶಸ್ಸು ಪಡೆದ ತಂಡವೇ ಹಲ್ವೇಝ್ ಟೀಂ..

ಪ್ರತಿಭಾವಂತ ಕೆಲಸಗಾರರನ್ನು ಗುರುತಿಸುವುದು, ಅವರ ಸ್ಕಿಲ್ ಸೆಟ್​​ಗಳನ್ನು ಅಳೆಯುವುದು, ಅವರಿಂದ ಅತ್ಯುತ್ತಮ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು, ತನ್ಮೂಲಕ ನಿರ್ಧಾರಗಳನ್ನು ಜಾರಿಗೆ ತರುವುದು, ಈ ರೀತಿ ಅತಿ ಹೆಚ್ಚು ಸಮರ್ಥವಾದ ಹಾಗೂ ತೃಪ್ತಿದಾಯಕವಾದ ಔಟ್​ಪುಟ್ ಹೊರತರುವುದು.. ಈ ಎಲ್ಲಾ ಹಂತಗಳನ್ನು ಕ್ರಮಬದ್ಧವಾಗಿ ನಡೆಸಿಕೊಂಡು ಬಂದ ಹಲ್ವೇಝ್ ತಂಡ ಇದಕ್ಕಾಗಿ ಬಳಸಿಕೊಂಡಿದ್ದು ಎಂಟರ್​​ಪ್ರೈಸ್​​​​​ ಸೋಶಿಯಲ್ ನೆಟ್​​ವರ್ಕಿಂಗ್​​​ (ಈಎಸ್ಎನ್) ಅನ್ನುವ ಸಾಮಾಜಿಕ ಜಾಲತಾಣದ ಪ್ಲಾಟ್​ಫಾರಂ ಅನ್ನು.. ಈ ಮೂಲಕ ಹಲ್ವೇಝ್ ಪರಿಣಾಮಕಾರಿ ಒಕ್ಕೂಟ ನಿರ್ಮಾಣದಲ್ಲಿ ಸ್ಮಾರ್ಟ್ ಲೀಡರ್ ಅನ್ನುವ ಶ್ರೇಯಕ್ಕೆ ಭಾಜನವಾಗಿದೆ..

ಹಲ್ವೇಝ್​ ತಂಡ

ಹಲ್ವೇಝ್​ ತಂಡ


2014ರ ಏಪ್ರಿಲ್​ನಲ್ಲಿ ಪರಿಣಿತ ಸೀಸನಲ್ ಟೆಕ್ನೋಕಾರ್ಟ್ ಸೈಫ್ ಅಹ್ಮದ್ ನಿರ್ಮಾಣ ಮಾಡಿದ ಕಂಪೆನಿಯಿದು.. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪದವಿ ಗಳಿಸಿದ್ದ ಸೈಫ್ ಐಟಿ ಉದ್ಯಮದಲ್ಲಿ ಸುಮಾರು 14 ವರ್ಷ ಕೆಲಸ ನಿರ್ವಹಿಸಿದ್ದ ಅನುಭವ ಹೊಂದಿದ್ದರು.. ಮುಖ್ಯವಾಗಿ ಬಿಸಿನೆಸ್ ಆರ್ಗನೈಸೇಶನ್ ಒಂದರಲ್ಲಿ ಟೀಂ ವರ್ಕ್ ಯಶಸ್ಸಿನಿಂದ ವಿಶ್ವವಿಖ್ಯಾತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗುರಿ ತಲುಪಬಹುದು ಅನ್ನುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು..

ವರ್ಜೀನಿಯಾದ ದೇಲಾವೇರ್ ಕಾರ್ಪೋರೇಷನ್ ಜೊತೆಗೆ ಸಂಘಟಿತವಾದರೂ ಹಲ್ವೇಜ್ ಎಲ್ಲಾ ಸಂಸ್ಥೆಗಳ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಹೇಳಿಕೊಂಡಿದೆ..

ಯಾವುದೇ ಸಂಸ್ಥೆಯ ಕೆಲಸಗಾರರನ್ನು ಒಟ್ಟಾಗಿ ಸೇರಿಸಿ ಮಾರ್ಗದರ್ಶನ ನೀಡಿ, ಗೊಂದಲವಿಲ್ಲದ ತ್ವರಿತ ಗತಿಯ ಬೆಳವಣಿಗೆ ನೀಡುವುದಾಗಿ ಹಲ್ವೇಜ್ ಸವಾಲಿನಂತೆ ಜಾಹಿರಾತು ನೀಡಿದೆ.. ಈ ಕೆಲಸದಲ್ಲಿ ಅಡೆತಡೆಯಾಗುವ ಅನಿಶ್ಚಿತ ಹಾಗೂ ಪಾರದರ್ಶಕತೆಯ ಕೊರತೆಯನ್ನು ನಿವಾರಿಸೋದಾಗಿಯೂ ಅದು ವಿಶ್ವಾಸದಿಂದ ತಿಳಿಸಿದೆ.. ಈ ಮೂಲಕ ಸಂಸ್ಥೆಯ ಸಾಮರ್ಥ್ಯ ಹೆಚ್ಚಿಸಿ ಅತ್ಯುತ್ತಮ ಔಟ್​​ಪುಟ್ ನೀಡುವುದಾಗಿ ಹಲ್ವೇಜ್ ಹೆಮ್ಮಯಿಂದ ಹೇಳಿಕೊಳ್ಳುತ್ತದೆ..

ಇದು ಆನ್​ಲೈನ್​​​ ಕಮ್ಯೂನಿಟಿಗಳನ್ನು ಕ್ರಿಯೇಟ್ ಮಾಡಿ ಪ್ರತಿಭಾವಂತರನ್ನು ಒಟ್ಟಿಗೆ ಸೇರಿಸುತ್ತದೆ.. ಈ ಒಂದೇ ಪ್ಲಾಟ್​ಫಾರಂನಲ್ಲಿ ಯಾವುದೆ ಕಂಪೆನಿಯ ಕೆಲಸಗಾರರು, ಬಿಸಿನೆಸ್ ಸಹಭಾಗಿಗಳು ತಮ್ಮ ವಿಭಿನ್ನ ಐಡಿಯಾಗಳನ್ನು ಸಂದೇಶಗಳನ್ನು ರವಾನಿಸುವ ಮೂಲಕ ವ್ಯಕ್ತಪಡಿಸಬಹುದು, ಸ್ಟೇಟಸ್​ಗಳನ್ನು ಅಪ್ಡೇಟ್ ಮಾಡಬಹುದು, ತಮ್ಮ ಪ್ರೋಗ್ರೆಸ್ ವರದಿಗಳನ್ನು ಹಂಚಿಕೊಳ್ಳಬಹುದು, ಏನಾದರೂ ಸಂಶಯಗಳಿದ್ದರೇ ಗ್ರೂಪ್​​ಗಳಲ್ಲಿ ಪ್ರಶ್ನೆ ಕೇಳಿ ಪರಿಹರಿಸಿಕೊಳ್ಳಬಹುದು.. ಇಲ್ಲಿನ ಪೋಸ್ಟ್​​ಗಳಿಗೆ ಕಾಮೆಂಟ್​​ಗಳನ್ನು ಸೇರಿಸಬಹುದು.. ಈ ಒಟ್ಟಾರೆ ಸಂವಾದ, ಸಂಭಾಷಣೆ, ಸಮಸ್ಯೆಗಳ ಅವಲೋಕನ, ಹಾಗೂ ಪರಿಹಾರಗಳ ಒಟ್ಟಾರೆ ತಿರುಳಿನಿಂದ ಯಾವುದಾದರೂ ಕಂಪೆನಿಯ ಅದೆಂತಹ ಸಮಸ್ಯೆಗಳಾದರೂ ಬಗೆಹರಿಯುತ್ತದೆ

ಹಲ್ವೇಝ್ ವೆಬ್​ಪೇಜ್​​ ಪ್ರಕಾರ ಈ ಜಾಲ ವ್ಯವಸ್ಥೆ, ಸಾಮಾಜಿಕ ತಾಣದ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡು ಸಿಂಗಲ್ ಪ್ಲಾಟ್​​ಫಾರ್ಮ್​ನಲ್ಲಿ ಸಮಸ್ಯೆಗಳನ್ನು ಪರಿಹರಿಸುತ್ತದೆ.. ಹೆಲ್ವೇಜ್ ವೆಬ್​​ಪೇಜ್​​ನ ನಿರ್ಮಾತೃ ಸೈಫ್​ರ ಪ್ರಕಾರ, ಕ್ಲಿಷ್ಟಕರ ಸಮಸ್ಯೆಗಳು ಹಾಗೂ ಪರಿಹಾರ ಸಾಧ್ಯವಿಲ್ಲದ ಸಾಫ್ಟ್​​ವೇರ್ ತೊಡಕಿನಿಂದ ಕೆಲವು ಸಂಸ್ಥೆಯ ಕೆಲಸಗಾರರು ಆ ಸಾಪ್​​ವೇರ್​​ನ್ನು ಅನ್ನು ದ್ವೇಷಿಸುತ್ತಿದ್ದರು.. ಆದರೆ ಇದೀಗ ವೆಬ್​​ಪೇಜ್​​ನ ಪಬ್ಲಿಕ್ ಬಳಕೆಯಿಂದಾಗಿ ಅಂತಹ ಬಹು ಕಠಿಣವಾದ ಸಾಫ್ಟ್​ವೇರ್​ ಸಂದಿಗ್ದತೆಗೂ ಸರಳ ಉಪಾಯ ಸಿಗುವುದು ಸಾಧ್ಯವಿದೆ..

ಜೊತೆಗೆ ಬಹುತೇಕ ಈಎಸ್ಎನ್​​ಗಳು ​​ ಕಂಟೆಂಟ್ ಸೃಷ್ಟಿಸುವುದರೊಂದಿಗೆ ಕ್ರಿಟಿಕಲ್ ಸಮಸ್ಯೆಗಳನ್ನು ವೆಬ್​​​ಸೈಟ್​​ನಲ್ಲಿ ಟ್ಯಾಗ್ ಮಾಡುವ ಕಡೆಗೆ ಗಮನ ಹರಿಸುತ್ತಿದೆ.. ಇಲ್ಲಿನ ಸರ್ಚ್ ಇಂಜಿನ್ ಅಥವಾ ಹುಡುಕಾಟದ ಪರಿಕರಗಳು ಇಂಡೆಕ್ಸ್​​ಗಳು, ಕ್ಯಾಟಲಾಗ್​​ಗಳು, ಹಾಗೂ ಸಾಫ್ಟ್​ವೇರ್​​ ಸಮಸ್ಯೆಗಳಿಗೆ ಸಂಬಂಧಪಟ್ಟ ಟ್ಯಾಗ್​ಗಳನ್ನೂ ಮಾಹಿತಿ ಸಹಿತ ಶೇರ್ ಮಾಡುತ್ತದೆ.. ಈ ಮೆಟಾಡೇಟಾದಲ್ಲಿ ಮಾಹಿತಿ ಪ್ರಧಾನವಾದ ಸರ್ಚ್ ಇಂಜಿನ್ ಬಳಕೆಯಾಗುವುದರಿಂದ ಗ್ಲೋಬಲ್ ಕಾರ್ಯಾಚರಣೆಗಳಿಗೆ ಎದುರಾಗುವ ಸವಾಲುಗಳನ್ನೂ ಸುಲಭವಾಗಿ ನಿವಾರಿಸುತ್ತದೆ ಅನ್ನೋದು ಹೆಲ್ವೇಜ್ ಸಂಸ್ಥಾಪಕರ ಅಭಿಮತ..

ಇನ್ನು ಈ ಈಎಸ್ಎನ್​​ನಲ್ಲಿ ಇನ್ನೊಂದು ಅವಕಾಶವಿದೆ.. ಬೇರೆ ಸಾಮಾಜಿಕ ಜಾಲತಾಣಗಳಿಂದ ಬುದ್ಧಿವಂತ, ಪ್ರತಿಭಾವಂತ ಪ್ರೊಫೈಲ್, ಕಂಟೆಂಟ್, ಫೀಡ್​ಬ್ಯಾಕ್ ಹಾಗೂ ಶಿಫಾರಸ್ಸುಗಳನ್ನು ಪಡೆದುಕೊಳ್ಳಬಹುದು.. ಈ ಮೂಲಕ ತನ್ನ ಜಾಲವ್ಯವಸ್ಥೆಯಲ್ಲಿ ಇಲ್ಲದ ಅಂಶಗಳನ್ನು ಎರವಲು ಪಡೆದುಕೊಳ್ಳಬಹುದಾಗಿದೆ..

ಹೇಲ್ವೇಝ್ ವೆಬ್​ಸೈಟ್, ಬೇರೆ ಬೇರೆ ಕಂಪೆನಿಗಳಿಗೆ ಕಳಿಸಿದ ಮೆಜ್​​ಗಳಂತೆ ಈ ಆಂತರಿಕ ಒಕ್ಕೂಟದ ಟೂಲ್ ಬೇರೆ ಬೇರೆ ವ್ಯವಸ್ಥೆ ಹಾಗೂ ವಿಭಾಗಗಳಲ್ಲಿ ಕೆಲಸ ಮಾಡುವ ಕೆಲಸಗಾರರ ಹೊಸ ಅನ್ವೇಷಣೆ, ಸುಳಿಹು, ಬಹು ಆಯಾಮದ ಪ್ರತಿಭೆಗಳ ಹುಡುಕಾಟ ಮಾನವ ಸಂಪನ್ಮೂಲ ರಾಜಧಾನಿಯಂತೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ..

ಇದೇ ರೀತಿ ಬೇರೆ ಭಾಗಗಳ ಸಹುದ್ಯೋಗಿಗಳು, ಮೇಲಾಧಿಕಾರಿಗಳು ಹಾಗೂ ಬಾಸ್​​ಗಳನ್ನು ಒಂದೇ ನೆಟ್ವರ್ಕ್ ಪ್ಲಾಟ್​​ಫಾರ್ಮ್​ ಅಡಿ ಸೇರಿಸುವ ಮೂಲಕ ಯಾವುದೇ ಪ್ರಾಜೆಕ್ಟ್​​ನ ಸಂಕೀರ್ಣ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಅನ್ನುವುದು ಹೆಲ್ವೇಝ್ ತಂಡದ ವಾದ..

ಅತ್ಯಾಧುನಿಕ ಆರಂಭ:

ಈ ವೆಂಚರ್ ಅತಿ ಮುಖ್ಯವಾಗಿ ಟಾಪ್ ಲೀಡರ್, ಮಧ್ಯಮ ಹಂತದ ಸಿಎಕ್ಸ್ಓ ಕಮ್ಯೂನಿಟಿ, ಸಣ್ಣ ಹಾಗೂ ದೊಡ್ಡ ಎಂಟರ್​​ಫ್ರೈಸಸ್​​ಗಳ ಎಲ್ಲಾ ಗ್ರೇಡ್​​ನ ಕೆಲಸಗಾರರನ್ನು ಒಗ್ಗೂಡಿಸುತ್ತಿದೆ.. ಈ ಮೂಲಕ ಆರ್ಗನೈಸೇಷನ್ ಒಳಗೆ ಸಾಂಸ್ಕ್ರತಿಕ ಬದಲಾವಣೆಯನ್ನೂ ತರುವ ಕೆಲಸ ಮಾಡುತ್ತಿದೆ..

ಅಲ್ಪ ಕಾಲಿಕ ಹಾಗೂ ದೀರ್ಘಕಾಲಿಕ ಸ್ಟ್ರಾಟಜಿಗಳನ್ನು ರೂಪಿಸುವ, ಪರಿಣಿತ ಮಾರ್ಗದರ್ಶನ ನೀಡುವ, ಮಾರುಕಟ್ಟೆಯನ್ನು ಬೂಸ್ಟ್ ಮಾಡುವ ಗ್ರಾಹಕರ ಆಕರ್ಷಿಸುವ ಹಾಗೂ ಇತ್ಯಾಧಿ ವಿಭಿನ್ನ ಬಿಸಿನೆಸ್ ಆಯಾಮಗಳ ಅಭಿವೃದ್ಧಿ ಸಾಧಿಸಿ ಸಾಂಸ್ಥಿಕ ಪ್ರಗತಿಯ ಮೆಟ್ಟಿಲುಗಳನ್ನು ಭದ್ರಪಡಿಸುವತ್ತ ಸೈಫ್​ರ ಈ ಈಎಸ್ಎನ್ ಸಕ್ರಿಯವಾಗಿದೆ..

ಸೈಫ್ ಹೇಳುವಂತೆ ಅವರದ್ದು ಸಣ್ಣ ತಂಡವಾದರೂ ಪ್ರತಿಭಾವಂತರ ಪಡೆಯಿದೆ.. ಅವರು ತಮಗಿಷ್ಟವಾದ ಹಾಗೂ ಮಾಡಲೇಬೇಕಿರುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ.. ಜಗತ್ತಿನಾದ್ಯಂತ ಹರಡಿರುವ ಹಲ್ವೇಝ್​​ ಕೆಲಸಗಾರರ ಪ್ರಮಾಣ ಕೇವಲ 60 ಮಾತ್ರ.. ಆದರೂ ಈ ಸಂಸ್ಥೆಯ ಎಲ್ಲಾ ಸಹುದ್ಯೋಗಿಗಳು ಶ್ರದ್ಧಾವಂತರು ಹಾಗೂ ಪರಿಣಿತರು..

ಹಲ್ವೇಝ್ ಬಿಸಿನೆಸ್ ಮಾಡೆಲ್​​ನಲ್ಲಿ ಪೇಯ್ಡ್ ಸರ್ವೀಸ್ ಇದೆ ಜೊತೆಗೆ ಫ್ರೀ ಆಡ್ ಸರ್ವೀಸ್ ಸಹ ಇದೆ.. ಕೇವಲ ಒಂದು ವರ್ಷದ ಹಿಂದೆ ಲಾಂಚ್ ಆದ ಕಂಪೆನಿ ಈಗಾಗಲೆ 7 ಮಿಲಿಯನ್ ಅಮೇರಿಕನ್ ಡಾಲರ್ ವ್ಯವಹಾರ ಮಾಡಿದೆ ಮತ್ತು ವರ್ಷದಿಂದ ವರ್ಷ ಆದಾಯದಲ್ಲಿ ಶೇ 10ರಷ್ಟು ಏರಿಕೆ ಕಾಣತೊಡಗಿದೆ..

ಸೈಫ್ ಹಲ್ವೇಝ್ ಸಂಸ್ಥೆಯನ್ನು ಯುರೋಪ್ ಹಾಗೂ ಜಗತ್ತಿನ ಎಲ್ಲಾ ದೇಶಗಳಲ್ಲೂ ವಿಸ್ತರಿಸುವ ಮಹದಾಸೆ ಹೊಂದಿದ್ದಾರೆ.. ಈಗಾಗಲೆ ಉತ್ತರ ಅಮೇರಿಕಾ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಮಾರುಕಟ್ಟೆ ಹೊಂದಿರುವ ಹಲ್ವೇಝ್ ನಿಧಾನವಾಗಿ ಜನಪ್ರಿಯಗೊಳ್ಳತೊಡಗಿದೆ.. ಹಲ್ವೇಝ್​​ನ ಆಂತರಿಕ ಒಕ್ಕೂಟ ವ್ಯವಸ್ಥೆಯೊಳಗೆ ಸುಮಾರು 15 ಆರ್ಗನೈಸೇಷನ್ ಅಡಕವಾಗಿದೆ.. ಸುಮಾರು 5 ಸಾವಿರ ಬಳಕೆದಾರರು ಈ ವೆಬ್​ಪೇಜ್​​ ಅನ್ನು ನಿರಂತರವಾಗಿ ಬಳಸತೊಡಗಿದ್ದಾರೆ.. ಇತ್ತೀಚೆಗಷ್ಟೆ ಉತ್ತರ ಅಮೇರಿಕಾ ಮೂಲದ ಅತಿ ದೊಡ್ಡ ಡಿಜಿಟಲ್ ಬ್ರಾಡ್​ಕಾಸ್ಟ್​​ ಕಂಪೆನಿಯೊಂದಿಗೆ ಒಡಂಬಡಿಕೆಗೆ ಇದು ಸಹಿ ಹಾಕಿದೆಯಂತೆ..

ಅತ್ಯುತ್ತಮ ಪ್ರತಿಕ್ರಿಯೆ ಹಾಗೂ ಕೆಲವು ಸವಾಲುಗಳು:

ಕಂಪೆನಿಗಳಿಂದ ವೆಬ್​ಪೇಜ್​​ಗೆ ಸಿಕ್ಕ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ.. ಒಂದೇ ಪ್ಲಾಟ್​ಫಾರ್ಮ್​ನಲ್ಲಿ ವಿವಿಧ ಸಮಸ್ಯೆಗಳ ಪರಿಹಾರದಿಂದಾಗಿ ಐಟಿ ಕೆಲಸಗಾರರ ನಂಬಿಕೆ ಹಾಗೂ ವಿಶ್ವಾಸ ಸಾಧಿಸುವಲ್ಲಿ ನೆರವಾಗಿದೆ.. ಗ್ರೌಂಡ್ ಲೆವೆಲ್ ವರ್ಕ್, ಸರ್ವೇ, ಹಾಗೂ ಸಮಸ್ಯೆಗಳ ಪರಿಹಾರೋಪಾಯ ಸಾಫ್ಟ್​ವೇರ್​ ಕೆಲಸಗಾರರನ್ನು ಬ್ರಾಂಡ್ ಅಂಬಾಸಡರ್​ರ​ನ್ನಾಗಿಸಿದೆ ಅನ್ನುವ ಹೆಮ್ಮೆಯ ಮಾತುಗಳು ಸೈಫ್​​ರದ್ದು..

ಇಲ್ಲಿನ ಸವಾಲುಗಳ ಬಗ್ಗೆಯೂ ಮಾಹಿತಿ ನೀಡಿರುವ ಹಲ್ವೇಝ್ ಸಂಸ್ಥಾಪಕರು ಅಮೇರಿಕನ್ ಹಾಗೂ ಇಂಡಿಯನ್ ಮಾರ್ಕೆಟ್ ನಡುವಿನ ವ್ಯತ್ಯಾಸ ತಿಳಿಸಿದ್ದಾರೆ.. ಅಮೇರಿಕನ್ ಸಾಫ್ಟ್​ವೇರ್​ ಉದ್ಯೋಗಿಗಳ ಮನಸ್ಥಿತಿ ಹಾಗೂ ಭಾರತೀಯ ಸಾಫ್ಟ್​ವೇರ್​​ ಕೆಲಸಗಾರರ ಮನಸ್ಥಿತಿಯ ನಡುವೆ ವೈರುದ್ಯದ ಮೈಂಡ್ಸೆಟ್ ಇದೆ.. ಇವೆರಡಕ್ಕೂ ಹೊಂದಿಕೊಂಡು ಪ್ಲಾಟ್​ಫಾರ್ಮ್​ ನಿರ್ಮಿಸುವುದು ತುಸು ಕಷ್ಟಕರ.. ಇಂಡಿಯನ್ ಸಾಫ್ಟ್​ವೇರ್​​ ಉದ್ಯೋಗಿಗಳು ಈ ಸಾಮಾಜಿಕ ಜಾಲ ವ್ಯವಸ್ಥೆಯನ್ನು ಇನ್ನೂ ಮುಕ್ತವಾಗಿ ಒಪ್ಪಿಕೊಂಡಿಲ್ಲ.. ಹಾಗಾಗಿ ಅವರಿಗೆ ಈ ಪ್ಲಾಟ್​ಫಾರ್ಮ್ ಸುಭದ್ರ ಅನ್ನುವ ಭಾವನೆ ಮೂಡಿಲ್ಲ ಅನ್ನುವುದು ಸೈಫ್​ರ ದೂರೂ ಸಹ ಹೌದು..

ಗಾರ್ಟನರ್ ಸಮೀಕ್ಷೆಯ ಪ್ರಕಾರ 840 ಮಿಲಿಯನ್ ಡಾಲರ್ ಮಾರುಕಟ್ಟೆಯಲ್ಲಿ ಈಗ ಕೇವಲ 13.4 ಪ್ರತಿಶತ ಮಾತ್ರ ಬಳಕೆಯಾಗ್ತಿದೆ.. ಅದರಲ್ಲಿ ಐಬಿಎಮ್ ಸಂಪರ್ಕ ವ್ಯವಸ್ಥೆ ಶೇ 13ರಿಂದ 14 ಮಾರ್ಕೆಟ್ ಶೇರ್ ಹೊಂದಿದೆ.. ಜೈವ್ ಅನ್ನುವ ಜಾಲ ವ್ಯವಸ್ಥೆ 8-10 ಶೇ, ಹೊಂದಿದೆ ಹಾಗೂ ಮೈಕ್ರೋಸಾಫ್ಟ್​​ನ ಯಮ್ಮೇರ್ ಹಾಗೂ ಸೇಲ್ಸ್ ಫೋರ್ಸ್ ಚಾಟ್ಟೇರ್ ಸಹ ಪೈಪೋಟಿಯಲ್ಲಿದೆ.. ಈ ಎಲ್ಲಾ ಸ್ಫರ್ಧೆಯ ನಡುವೆ ಹಲ್ವೇಝ್ ಪೈಪೋಟಿ ನೀಡಬೇಕಿದೆ.. ಇದು ಸೈಫ್​​ರ ಮಹತ್ವಾಕಾಂಕ್ಷೆಗೆ ಎದುರಾಗಿರುವ ಚಾಲೆಂಜ್ ಕೂಡಾ ಹೌದು..