ಹಣದ ಹಿಂದೆ ಬೀಳುವ ವೈದ್ಯರಿಗೆಲ್ಲಾ ಇವರೇ ಒಂದು ಪಾಠ…

ಟೀಮ್​ ವೈ.ಎಸ್​. ಕನ್ನಡ

ಹಣದ ಹಿಂದೆ ಬೀಳುವ ವೈದ್ಯರಿಗೆಲ್ಲಾ ಇವರೇ ಒಂದು ಪಾಠ…

Monday December 05, 2016,

2 min Read

ಸಮಾಜದಲ್ಲಿ ಆದರ್ಶ ವ್ಯಕ್ತಿಗಳು ನಮ್ಮ ಜೊತೆಯೇ ಇರುತ್ತಾರೆ. ಅಂತಹ ವ್ಯಕ್ತಿಗಳು ನಮಗೆಲ್ಲರಿಗೂ ಮಾದರಿ. ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಡಾ. ವಿ. ಸುಬ್ರಹ್ಮಣ್ಯಂ ಅನ್ನುವ ವ್ಯಕ್ತಿ ಇದ್ರು. ಈ ಡಾಕ್ಟರ್ ಫೇಮಸ್ ಆಗಿದ್ದು ಸಮಾಜ ಸೇವೆ ಮೂಲಕ. ಅಂದಹಾಗೇ ಡಾ. ಸುಬ್ರಹ್ಮಣ್ಯಂ ತನ್ನ ಬಳಿಗೆ ಚಿಕಿತ್ಸೆಗೆಂದು ಬರುತ್ತಿದ್ದವರಿಗೆ 20 ರೂಪಾಯಿಗಿಂತ ಹೆಚ್ಚು ಚಾರ್ಜ್ ಮಾಡಿದ್ದೇ ಇಲ್ಲ. ಕಡುಬಡವರ ಪಾಲಿಗೆ ಇವರು ನಿಜವಾದ ದೇವರಾಗಿದ್ದರು. ಆದ್ರೆ ಇಂತಹ ಆದರ್ಶ ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ. 20 ರೂಪಾಯಿಗಳಿಗೆ ಸೇವೆ ನೀಡುತ್ತಿದ್ದ ಡಾಕ್ಟರ್ ಸುಬ್ರಹ್ಮಣ್ಯಂ ಅಂತಿಮ ವಿಧಿ ವಿಧಾನವನ್ನು ನೋಡೋದಿಕ್ಕೆ ಲಕ್ಷಾಂತರ ಜನರು ಬಂದಿದ್ದರು ಅನ್ನೋದು ಅವರ ಸಾಮಾಜಿಕ ಕೆಲಸಗಳನ್ನು ಎತ್ತಿ ಹಿಡಿಯುತ್ತದೆ.

image


ಡಾ. ಬಾಲ ಸುಬ್ರಹ್ಮಣ್ಯಂ ಎಂಪ್ಲಾಯಿಸ್ ಸ್ಟೇಟ್ ಇನ್ಷ್ಯೂರೆನ್ಸ್ ಕಾರ್ಪೋರೇಷನ್(ESIC)ಯಲ್ಲಿ ನಿವೃತ್ತಿಯಾದ ಬಳಿಕ ಕೊಯಂಬತ್ತೂರು ನಗರದ ಸಿಧಪುಧುರ್ ಅನ್ನುವಲ್ಲಿ ಕ್ಲಿನಿಕ್ ತೆರೆದಿದ್ದರು. ಆರಂಭದಲ್ಲಿ ಇವರು ರೋಗಿಗಳಿಗೆ ಕೇವಲ ಎರಡೇ ಎರಡು ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ ಇದನ್ನು 10 ರೂಪಾಯಿಗೆ ಏರಿಸಿದ್ರು. ಎರಡು ವರ್ಷಗಳ ಹಿಂದೆ ಇದನ್ನು 20 ರೂಪಾಯಿಗೆ ಏರಿಸಿದ್ದರು. ಅಚ್ಚರಿ ಅಂದ್ರೆ ಡಾ. ಬಾಲಸುಬ್ರಹ್ಮಣ್ಯಂ ರೋಗಿಗಳಿಗೆ ಇಂಜೆಕ್ಷನ್ ಮತ್ತು ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದರು.

ಇದನ್ನು ಓದಿ: ನನಸಾಯ್ತು ಉದ್ಯಮದ 'ಹೂ' ಕನಸು : ಕಾಶ್ಮೀರದ ಸಾಹಸಿ ಮಹಿಳೆಯ ಯಶೋಗಾಥೆ

ಡಾ. ಬಾಲಸುಬ್ರಣ್ಯಂ ನಡೆಸುತ್ತಿದ್ದ ಕ್ಲಿನಿಕ್​ಗೆ ಪ್ರತಿನಿತ್ಯ 150 ರಿಂದ 200 ರೋಗಿಗಳು ಬೇಟಿ ನೀಡುತ್ತಿದ್ದರು. ಕಾಯಿಲೆಯ ತೀವ್ರತೆಯನ್ನು ಅರಿತುಕೊಂಡು ಬಾಲಸುಬ್ರಹ್ಮಣ್ಯಂ ಸಲಹೆ ನೀಡುತ್ತಿದ್ದರು.ಅನಿವಾರ್ಯತೆ ಇದ್ದರೆ ನಗರದಲ್ಲಿರುವ ಬೇರೆ ವೈದ್ಯರನ್ನು ಬೇಟಿ ಮಾಡುವಂತೆ ಸೂಚನೆ ನೀಡುತ್ತಿದ್ದರು. ತಾನು ಪಡೆಯುತ್ತಿದ್ದ ಫೀಸ್​ನಿಂದ ಕ್ಲಿನಿಕ್​ನ ಬಾಡಿಗೆ ನೀಡುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದರು. ಉಳಿದ ಹಣದಲ್ಲಿ ಔಷಧಿಗಳನ್ನು ತಂದು ಬಡವರಿಗೆ ಹಂಚುತ್ತಿದ್ದರು.

ಭಾನುವಾರ ಈ ಮಾದರಿ ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ. ಡಾ. ಬಾಲಕೃಷ್ಣರ ಅಂತಿಮ ದರ್ಶನ ಪಡೆಯುವುದಕ್ಕೆ ಸಾವಿರಾರು ಜನ ಆಗಮಿಸಿ ನಮನ ಸಲ್ಲಿಸಿದರು. ಡಾ. ಬಾಲಕೃಷ್ಣರ ಸೇವೆಗಳನ್ನು ಕೊಂಡಾಡಿದ್ರು. ಡಾ. ಬಾಲಕೃಷ್ಣರ ಸಾವು ಸಮಾಜಕ್ಕೆ ದೊಡ್ಡ ನಷ್ಟ ಎಂದು ಹೇಳಿದವರೇ ಹೆಚ್ಚು. ಒಟ್ಟಿನಲ್ಲಿ ದುಡ್ಡಿನ ಹಿಂದೆ ಬೀಳುವ ವೈದ್ಯರಿಗೆ ಡಾ. ಬಾಲಕೃಷ್ಣ ಅವರು ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಪ್ರಧಾನಿಯ ಕನಸಿಗೆ ಮತ್ತಷ್ಟು ಬಣ್ಣ- ಬನಾರಸ್​ ವೈದ್ಯೆಯ ಬೇಟಿ ಬಚಾವೋ, ಬೇಟಿ ಪಡವೋಗೆ ವಿಶಿಷ್ಟ ಸೇವೆ..!

2. ರಾಷ್ಟ್ರಗೀತೆಗೆ ವಿಶೇಷ ಗೌರವ ಸಲ್ಲಿಸಲು ಸೂಚನೆ-

3. 100 ದಿನಗಳಲ್ಲಿ 100 ಡಿಜಿಟಲ್ ಗ್ರಾಮ- ಇದು ಐಸಿಐಸಿಐ ಬ್ಯಾಂಕ್​ ಪಣ