ಪುರುಷರೇ ಯಾಕೇ ಡ್ರೈವ್​ ಮಾಡಬೇಕು? 'ಟ್ಯಾಕ್ಸ್​ ಶಿ' ಇದ್ದರೆ ಮಹಿಳೆಯರಿಗೆ ಟೆನ್ಷನ್​ ಇಲ್ಲ...

ವಿಸ್ಮಯ

ಪುರುಷರೇ ಯಾಕೇ ಡ್ರೈವ್​ ಮಾಡಬೇಕು?  'ಟ್ಯಾಕ್ಸ್​ ಶಿ' ಇದ್ದರೆ ಮಹಿಳೆಯರಿಗೆ ಟೆನ್ಷನ್​ ಇಲ್ಲ...

Monday January 11, 2016,

2 min Read

ಎಲ್ಲಾ ಕಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿರುತ್ತೆ. ಮಹಿಳೆಯರು ಹೊರ ಬರಲು ಭಯ ಪಡುವ ಪರಿಸ್ಥಿತಿ ಉದ್ಭವಿಸಿದೆ. ಇನ್ನು ಕ್ಯಾಬ್‍ನಲ್ಲಿ ಮಹಿಳೆಯರು ಲೈಗಿಂಕ ಕಿರುಕುಳ ಎದುರಿಸುತ್ತಿರುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಚಾಲಕಿಯರನ್ನೇ ನೇಮಿಸಿ ಕೊಡುವ ನೂತನ ಸೇವೆ ಸಿಲಿಕಾನ್ ಸಿಟಿಯಲ್ಲಿ ಆರಂಭಗೊಂಡಿದೆ. ಮಹಿಳೆಯರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟ್ಯಾಕ್ಸಿ ಸೇವೆಗಳೂ ಬರುತ್ತಿವೆ.

ಒಂದು ಕಾಲದಲ್ಲಿ ವಾಹನಗಳನ್ನ ಪುರುಷರು ಮಾತ್ರ ಓಡಿಸಬೇಕು ಅಂತ ಇತ್ತು. ಅದ್ರೆ ಈಗ ಆ ಕಾಲ ಬದಲಾಗಿದೆ ಯಾಕೆಂದ್ರೆ ಮಹಿಳೆಯರು ಸ್ವಾಲಂಭಿಯಾಗಿ ದುಡಿಮೆ ಮಾಡುತ್ತಿದ್ದಾಳೆ. ಎಲ್ಲ ಕ್ಷೇತ್ರದಲ್ಲೂ ತನ್ನ ಕಾರ್ಯಕ್ಷಮತೆಯನ್ನು ತೋರಿದ್ದಾಳೆ. ಟ್ಯಾಕ್ಸಿಯಲ್ಲೂ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇಂತಹವರಿಗೆ ಪ್ರೋತ್ಸಾಹಿಸಲು ಟ್ಯಾಕ್ಸಿಶಿ ಎಂಬ ಸೇವೆಯೊಂದು ಆರಂಭಗೊಂಡಿದೆ.

image


ಎಷ್ಟೋ ಬಾರಿ ವಾಹನವಿದ್ದು ನಮ್ಮ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಮಕ್ಕಳನ್ನು ಶಾಲೆಗೆ ಬಿಡುವುದು. ಕರೆದುಕೊಂಡು ಬರಲೋ, ಅಥವಾ ಶಾಪಿಂಗ್‍ಗೆ ಹೋಗೊಕ್ಕೆ, ಕೆಲಸಕ್ಕೆ ಹೋಗಿ ಬರಲು ವಾಹನವಿದ್ದರೂ ಖುದ್ದು ಚಾಲನೆ ಮಾಡಲು ಸಾಧ್ಯವಾಗದೆ ಇರಬಹುದು. ಇಂಥ ಸಮಯದಲ್ಲಿ ಮಹಿಳೆಯರ ಚಾಲನಾ ಸೇವೆಯನ್ನು ಬಾಡಿಗೆಗೆ ಪಡೆಯುವ ವ್ಯವಸ್ಥೆ ಇದ್ದರೆಷ್ಟು ಚೆಂದ ಅಲ್ವಾ.

ಇಂಥದ್ದೊಂದು ಆಲೋಚನೆಯೊಂದಿಗೆ ಚಾಲನಾ ಸೇವೆ ಆರಂಭಿಸಿದ್ದಾರೆ ವಂದನಾ ಸೂರಿ. ಟ್ಯಾಕ್ಸ್​ ಶಿ ಹೆಸರಿನಲ್ಲಿ ಇಂಥ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಚಾಲಕಿಯರನ್ನು ಒದಗಿಸುವ ವ್ಯವಸ್ಥೆ ಇದು. ಎಷ್ಟೋ ಬಾರಿ ನಮ್ಮ ಬಳಿ ವಾಹನವಿದ್ದೂ ಚಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಪೋಷಕರಿಗೆ ಮೆಡಿಕಲ್ ಅಪಾಯಿಂಟ್‍ಮೆಂಟ್ ಇದ್ದರೆ, ಮಕ್ಕಳ ಶಾಲಾ ಪ್ರಯಾಣಕ್ಕೆ ಅಥವಾ ಇನ್ನಿತರ ಅನಿವಾರ್ಯ ಸಂದರ್ಭಗಳಲ್ಲಿ ಇಂಥದ್ದೊಂದು ಅವಶ್ಯಕತೆ ಹುಟ್ಟಿಕೊಳ್ಳಬಹುದು. ಇದಕ್ಕೆ ಮಹಿಳಾ ಚಾಲಕರೇ ಸುರಕ್ಷಿತ ಎಂದು ಯೋಚಿಸುವವರ ಸಂಖ್ಯೆ ಈಗ ಹೆಚ್ಚಿದೆ. ಅದಕ್ಕೆ ಈ ವ್ಯವಸ್ಥೆ ನೆರವಾಗುತ್ತಿದೆ. ನಗರದಲ್ಲಿನ ಒಂಟಿ ಮಹಿಳೆಯರ ಸುರಕ್ಷತೆ ಈ ವ್ಯವಸ್ಥೆಯ ಮುಖ್ಯ ಉದ್ದೇಶ.

image


ಸದ್ಯ ಟ್ಯಾಕ್ಸ್​ಶಿ ಸೇವೆಯಲ್ಲಿ ಇಪ್ಪತೈದು ಮಂದಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂಟನೇ ತರಗತಿ ಪಾಸಾದವರು, ಒಂಟಿ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಹೀಗೆ ಭಿನ್ನ ನೆಲೆಯ ಸಿಬ್ಬಂದಿಗಳು ಇದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸಬಲರನ್ನಾಗಿಸುವ ಉದ್ದೇಶದೊಂದಿಗೆ ಮಹಿಳೆಯರನ್ನು ಉತ್ತಮ ಚಾಲಕಿಯರನ್ನಾಗಿ ರೂಪಿಸುವ ಕೆಲಸವೂ ಇಲ್ಲಿ ನಡೆಯುತ್ತಿದೆ.

ಈ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶಗಳು ಇಲ್ಲ. ಪುರುಷರು ಬುಕ್ ಮಾಡುವಂತಿಲ್ಲ. ಅದಕ್ಕೆ ತಕ್ಕಂತೆ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ದಿನಕ್ಕೆ ಸುಮಾರು ನೂರಮೂವತ್ತರಿಂದ ನೂರೈವತ್ತು ಕರೆಗಳು ಬರುತ್ತಿವೆಯಂತೆ. ಇಲ್ಲಿ ಮೊದಲು ಆರು ತಿಂಗಳು ಸಂವಹನ ಕೌಶಲ್ಯ ಸ್ವರಕ್ಷಣಾ ತಂತ್ರ ಹಾಗೂ ಚಾಲನಾ ತರಬೇತಿಯನ್ನು ನೀಡಲಾಗುತ್ತದೆ. ಅವರ ಸಂಪೂರ್ಣ ಹಿನ್ನೆಲೆ, ಪೊಲೀಸ್ ಪರಿಶೀಲನೆ ನಡೆದ ನಂತರವಷ್ಟೇ ತರಬೇತಿ ನೀಡಲಾಗುತ್ತಿದೆ.

ಟ್ಯಾಕ್ಸ್​​ ಶಿ ಸೇವೆಗೆ ಒಂದು ಗಂಟೆಗೆ ನೂರೈವತ್ತು ರೂಪಾಯಿ ಶುಲ್ಕ. ಬೆಳಿಗ್ಗೆ ಏಳಕ್ಕೆ ಶುರುವಾದರೆ ರಾತ್ರಿ ಒಂಬತ್ತರವರೆಗೂ ಸೇವೆ ಲಭ್ಯ. ಸಂಜೆ ಏಳರ ನಂತರ ಮುನ್ನೂರು ರೂಪಾಯಿ ಶುಲ್ಕ. ಅವರ ಮೇಲೆ ನಿಗಾ ಇಡಲು ಆ್ಯಪ್ ಕೂಡ ಇದೆ. ಬೆಂಗಳೂರಿನಿಂದ ಮೈಸೂರು ಮಾರ್ಗದ ದಾರಿಗೆ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಟ್ಯಾಕ್ಸಿ ಸೇವೆಯೂ ಆರಂಭಿಸುವ ಯೋಜನೆ ಹೊಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಹತ್ತು ನಗರಗಳಲ್ಲಿ 2000 ಮಹಿಳಾ ಚಾಲಕರನ್ನು ಹೊರತರುವ ಆಸೆ ಹೊಂದಿದ್ದಾರೆ.