ಕಲಾವಿದರಿಗೆ ಆನ್‍ಲೈನ್ ವಿಷಯಾಧಾರಿತ ವ್ಯವಸ್ಥೆ ನಿರ್ಮಿಸಿದ `ಕ್ಯೂಕಿ'

ಟೀಮ್​ ವೈ.ಎಸ್​. ಕನ್ನಡ

0

ವಡಲಾದ ಒಂದು ಚಿಕ್ಕ ಅಪಾರ್ಟ್‍ಮೆಂಟ್‍ನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶೇಖರ್ ಕಪೂರ್ ಮತ್ತು ರೆಹಮಾನ್ ಬಗ್ಗೆ ನಡೆದ ಸಭೆಯಲ್ಲಿ ಇದೆಲ್ಲಾ ಆರಂಭವಾಯಿತು. ಸಮೀರ್ ಬಂಗಾರ ಮತ್ತು ಸಾಗರ್ ಗೋಕಲೆ ಎಂಬವರು ಒಂದು ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಆಲೋಚಿಸಿದ್ದರು. ಕಂಟೆಂಟ್ ಕ್ರಿಯೇಷನ್ ಮತ್ತು ಅದನ್ನು ವಿತರಿಸುವ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿರೋದನ್ನು ಅವರು ಕಂಡಿದ್ದರು.

ಸಾಗರ್ ಹೇಳುವಂತೆ ಕಂಟೆಂಟ್‍ನ ಬೆಲೆ, ವಿತರಣೆ ಹಾಗೂ ಮಾರಾಟ ಮಾಡೋದು ಸಂಪೂರ್ಣವಾಗಿ ಒಂದು ಹೊಸ ಮಾದರಿಯಾಗಿದ್ದು, ಪ್ರಸ್ತುತದಲ್ಲಿ ವಿಕಾಸ ಹೊಂದುತ್ತಿರುವ 13 ರಿಂದ 24 ವಯಸ್ಸಿನವರ ಗುಂಪಿನ ಆಧ್ಯತೆಗಳಿಂದ ಹೆಚ್ಚು ಪ್ರಾಬಲ್ಯ ಹೊಂದಿದೆ. ಇದು ಮಲ್ಟಿ ಚಾನಲ್‍ಗಳನ್ನು ಬಿತ್ತರಿಸುವ ನೆಟ್‍ವರ್ಕ್ ಆದ `ಕ್ಯೂಕಿ' ಆರಂಭಕ್ಕೆ ನಾಂದಿಯಾಯಿತು.

ಮಾರುಕಟ್ಟೆಗೆ ಪ್ರವೇಶ

ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದ ನಂತರ 2014ರ ಮಾರ್ಚ್‍ನಲ್ಲಿ ಈ ತಂಡವು ತಮ್ಮ ಪುನರ್‍ಸ್ಥಾಪಿತವಾದ ನೆಟ್‍ವರ್ಕ್‍ನೊಂದಿಗೆ ನೇರ ಪ್ರಸಾರ ಆರಂಭಿಸಿತು. ಪ್ರಸ್ತುತದಲ್ಲಿ ರಾಷ್ಟದಾದ್ಯಂತ 250 ಕಲಾವಿದರು ಕ್ಯೂಕಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಗರ್ ಹೇಳುವಂತೆ, ``ನಾನು ನಮ್ಮನ್ನು ನಿರ್ಮಾತೃ ಆಧಾರಿತ ಅಂತ ವ್ಯಾಖ್ಯಾನಿಸಿಕೊಳ್ಳೋದಕ್ಕೂ ಒಂದು ಕಾರಣವಿದೆ. ನಮಗೆ, ಕ್ಯೂಕಿಯಲ್ಲಿ ಸೃಷ್ಟಿಕರ್ತನೇ ನಮ್ಮ ಬಿಸಿನೆಸ್‍ನ ಮೂಲವಾಗ್ತಾನೆ. ಒಂದು ಕಂಪನಿಯಾಗಿ ನಮ್ಮ ಉದ್ದೇಶವೆಂದರೆ, ಕಲಾವಿದರಿಗೆ ಉತ್ತಮ ವಾತಾವರಣ ಕಲ್ಪಿಸುವುದು ಹಾಗೇ ಅವರು ಇಂಟರ್‍ನೆಟ್ ಮೂಲಕ ಸಾಧ್ಯವಾದಷ್ಟು ಪ್ರೇಕ್ಷಕರ ಮೇಲೆ ಪ್ರಭಾವ ಬೀರುವುದು''.

ಸಾಗರ್, ಟೆಲಿವಿಷನ್ ಉದ್ಯಮದಲ್ಲಿ ಸುಮಾರು 13 ವರ್ಷಗಳ ಅನುಭವ ಹೊಂದಿದ್ದು, ಯುಟಿವಿ, ಟೈಮ್ಸ್ ಗ್ರೂಪ್ ಅಂಡ್ ನೆಟ್‍ವರ್ಕ್ 18ನಂತಹ ದೊಡ್ಡ ಗ್ರೂಪ್‍ಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಮತ್ತೊಂದೆಡೆ, ಸಮೀರ್, ಉದ್ಯಮಗಳಿಗೆ ಮತ್ತು ಬ್ಯಾಂಕಿಂಗ್ ಬಿಸಿನೆಸ್‍ನಲ್ಲಿ ಬಂಡವಾಳ ಹೂಡುತ್ತಿದ್ದರು ಮತ್ತು ಬಹಳ ವರ್ಷಗಳಿಂದ ಇರುವ ಡಿಜಿಟಲ್ ಬಿಸಿನೆಸ್‍ಗಳಾದ ಇಂಡಿಯಾ ಗೇಮ್ಸ್ ಮತ್ತು ಡಿಸ್ನಿ ಡಿಜಿಟಲ್ ಮೇಲೆ ಹಿಡಿತ ಹೊಂದಿದ್ದರು. ಅಷ್ಟೇ ಅಲ್ಲ, ಬಹಳಷ್ಟು ಆರಂಭಿಕ ಉದ್ಯಮಗಳಿಗೆ ಬಂಡವಾಳ ಹೂಡುವ ದೇವರಂತಿದ್ದರು.

ಸಂಸ್ಥೆ ವಿಸ್ತರಣೆ

ಈ ತಂಡವು ಆರಂಭದಲ್ಲಿ ಸಂಗೀತಕ್ಕೆ ನೇರವಾಗಿ ಆಧ್ಯತೆಯನ್ನು ನೀಡಲಾರಂಭಿಸಿತು. ಆನ್‍ಲೈನ್‍ನಲ್ಲಿ ಅಸ್ತಿತ್ವ ಹೊಂದಿರುವ ಪ್ರತಿಯೊಬ್ಬ ಭಾರತೀಯ ಸಂಗೀತಗಾರನೂ ಕ್ಯೂಕಿಯಲ್ಲಿ ಸೈನ್‍ಅಪ್ ಆಗಿದ್ದಾನೆ. ಒಂದು ವೇದಿಕೆಯಾಗಿ, ಇತರ ನೆಟ್‍ವರ್ಕ್‍ಗಳಿಗಿಂತ ವಿಭಿನ್ನವಾದ ಕ್ಯೂಕಿ, ಮಾಧ್ಯಮಗಳ ನಿರ್ಮಾತೃಗಳನ್ನು ಹೆಚ್ಚಾಗಿ ಫೋಕಸ್ ಮಾಡುತ್ತದೆ. ಒಂದು ಡಿಜಿಟಲ್ ವೇದಿಕೆಗೆ ಆಧಾರವಾಗುವ ಸಂದರ್ಭದಲ್ಲಿ, ಹಲವು ಆಫ್‍ಲೈನ್ ಒಡಂಬಡಿಕೆಗಳನ್ನು ರೂಪಿಸುವಲ್ಲಿ ಹೆಚ್ಚು ಪ್ರಭಾವ ಹಾಗೂ ಹಣಗಳಿಕೆ ಹೊಂದಿದೆ. ಸಾಗರ್ ಹೇಳುವಂತೆ, ಅವರು ಪ್ರಮುಖ ವಿಷಯಗಳ ಕುರಿತು ಫಿಲಂಗಳ ನಿರ್ಮಾಣ, ಟಿವಿ ಕಾರ್ಯಕ್ರಮಗಳನ್ನು ಮಾಡುವುದು, ನೇರ ಪ್ರಸಾರ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ತಂತ್ರಜ್ಞಾನಕ್ಕೆ ಅವಕಾಶ

ಇದೊಂದು ಟೆಕ್ನಾಲಜಿ ಬೇಸ್ಡ್ ಕಂಟೆಂಟ್ ಬಿಸಿನೆಸ್, ಅಂದರೆ ಗ್ರಾಹಕರ ಕಡೆಯಿಂದ ಯಾವುದೇ ಒಂದು ದೊಡ್ಡ ಕಂಟೆಂಟ್ ನೆಟ್‍ವರ್ಕ್‍ನಂತೆ ಕಾಣುತ್ತದೆ. ಹಾಗೆಯೇ ಮತ್ತೊಂದೆಡೆಯಿಂದ ದೊಡ್ಡ ಡೇಟಾ ಅನಾಲಿಸ್ಟ್​​ಗಳು, ರೆಕಮೆಂಡೇಷನ್ ಇಂಜಿನ್‍ಗಳು ಹಾಗೂ ಆಡಿಯನ್ಸ್ ಅನಾಲಿಸ್ಟ್​​ಗಳಿಂದ ಸಂಪೂರ್ಣ ನಿಯಂತ್ರಣ ಹೊಂದಿದೆ. ``ಇದೊಂದು ಮಾಧ್ಯಮ ಉದ್ಯಮವನ್ನು ಸಂಪೂರ್ಣವಾಗಿ ಹೊಸ ರೀತಿಯಲ್ಲಿ ನೋಡುವುದಾಗಿದೆ ಮತ್ತು ಇಂಟರ್‍ನರಟ್ ಹಾಗೂ ವೀಡಿಯೋ ಎರಡೂ ಸಮಾನಾರ್ಥಕಗಳೆಂದು ನಾವು ನಂಬಿದ್ದೇವೆ-ಹಾಗಾಗಿ ನಾವು ಮಾಡುವುದೆಲ್ಲವೂ ವೀಡಿಯೋದಲ್ಲಿ ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ" ಎನ್ನತ್ತಾರೆ ಸಾಗರ್.

ಈ ಕಂಪನಿಯು ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಗರದ ಸುತ್ತಮುತ್ತ ಉದ್ಯಮಕ್ಕೆ ಅಗತ್ಯವಾದ ಮೂಲ ಸೌಕರ್ಯಗಳುಳ್ಳ ಕಟ್ಟಡಗಳನ್ನು ನಿರ್ಮಿಸಿದೆ. ಅಲ್ಲದೆ, ಈ ಭಾಗದಲ್ಲಿ ಲಭ್ಯವಿರುವ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಹಾಯ ಮಾಡಲೆಂದೇ ಧಾರವಿಯಲ್ಲಿ ಒಂದು ಸ್ಟೂಡಿಯೋವನ್ನೂ ಕ್ಯೂಕಿ ಹೊಂದಿದೆ.

ಹಿಡಿತ ಮತ್ತು ಬೆಳವಣಿಗೆ

ಸಾಗರ್ ಅವರು, ಫುಲ್‍ಸ್ಕ್ರೀನ್ ಆದ ಲಾಸ್ ಏಂಜಲೀಸ್‍ನ ಮಾಧ್ಯಮ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದ ಬಗ್ಗೆ ಹೀಗೆ ಹೇಳುತ್ತಾರೆ ; ಕ್ಯೂಕಿ ಬೃಹತ್ ಬೆಳವಣಿಗೆಯ ಸಾಮಥ್ರ್ಯ ಹೊಂದಿದೆ. ಅವರೇ ಹೇಳುವಂತೆ, ಕ್ಯೂಕಿ, ತನ್ನ 200ಕ್ಕೂ ಹೆಚ್ಚು ಚಾನೆಲ್‍ಗಳಿರುವ ನೆಟ್‍ವರ್ಕ್‍ನ ಜೀವಮಾನ ವೀಕ್ಷಣೆ ಒಂದು ಬಿಲಿಯನ್‍ಗೂ ಹೆಚ್ಚಿದ್ದು, ಪ್ರತಿ ಮಾಹೆಯಲ್ಲಿ 100 ಮಿಲಿಯನ್ ವೀಕ್ಷಣೆಯ ರನ್‍ರೇಟ್ ಹೊಂದಿದೆ ಎನ್ನುತ್ತಾರೆ.

ಅವರು ಅಂದಾಜಿಸುವಂತೆ, ಯಾವುದೇ ನಕಲು ಮಾಡದೆ, ಪ್ರತಿ ತಿಂಗಳು 60 ರಿಂದ 70 ಮಿಲಿಯನ್ ಕಾರ್ಯನಿರತ ವೀಕ್ಷಕರು ತಿಂಗಳಿಗೆ ಅರ್ಧ ಬಿಲಯನ್ ನಿಮಿಷಗಳನ್ನು ವೀಕ್ಷಣೆಗಾಗಿ ವ್ಯಯಿಸುತ್ತಿದ್ದಾರೆ. ``ನಮ್ಮ ನೆಟ್‍ವರ್ಕ್‍ನ ಕೆಲವು ಟಾಪ್ ಚಾನೆಲ್‍ಗಳು ಶ್ರದ್ಧಾ ಶರ್ಮ, ಸನಮ್ ಬಂದ್, ಪವರ್‍ಡ್ರಿಫ್ಟ್, ಫಂಕ್ ಯು ಜೊತೆಗೆ ಕೆಲವು ಸಾಂಪ್ರದಾಯಿಕ ಮಾಧ್ಯಮಗಳ ಬಹುದೊಡ್ಡ ಸ್ಟಾರ್‍ಗಳಾದ ಎ.ಆರ್.ರೆಹಮಾನ್, ಸಲೀಂ ಸುಲೈಮನ್, ಕ್ಲಿಂನ್ ಸೆರೆಜೋ ಸೇರಿದಂತೆ ಇತರರನ್ನು ಒಳಗೊಂಡಿದೆ'' ಎನ್ನುತ್ತಾರೆ ಸಾಗರ್.

ತಂಡ ಮತ್ತು ಸವಾಲುಗಳು

ನಿರ್ಮಾತೃಗಳು ಮತ್ತು ಜಾಹೀರಾತುದಾರರ ಜೊತೆಗೆ ನೂತನ ರೂಪುರೇಷೆಗಳನ್ನು ತಯಾರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪಶ್ಚಿಮದಲ್ಲಿ ನಿರ್ಮಾತೃಗಳೇ ಮಲ್ಟಿ ಚಾನೆಲ್‍ಗಳ ನೆಟ್‍ವರ್ಕ್‍ಗಳನ್ನು ಹಳೆಯದೆಂದು ಬಿಂಬಿಸಿದ್ದಾರೆ. ಅದಕ್ಕೆ ಸಮಾನಾಂತರವಾಗಿ ನಾವು ಅದನ್ನು ಭಾರತದಲ್ಲಿ ಅಭಿವೃದ್ಧಿಪಡಿಸುತ್ತಿದ್ದೇವೆ ಎನ್ನುತ್ತಾರೆ ಸಾಗರ್.

``ಕುತೂಹಲ ಅಂಶವೆಂದರೆ, ಪ್ರೇಕ್ಷಕರು ವಿಷಯಗಳು ಮತ್ತು ನಿರ್ಮಾತೃಗಳನ್ನು ಇಷ್ಟಪಡುವಲ್ಲಿ ತಮ್ಮ ಆಧ್ಯತೆಗಳನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ ಅಂತ ನನಗೆ ಅನಿಸುತ್ತಿದೆ. ಇಂದಿನ ವಿರಳವಾದ ಕಂಟೆಂಟ್‍ಗಳನ್ನು ನೋಡಿದರೆ, ಅದೂ ಕೂಡ ಸ್ಪಷ್ಟವಾಗಿರುತ್ತದೆ" ಎನ್ನುತ್ತಾರೆ ಸಾಗರ್.

ಸಾಗರ್, ಸಮೀರ್ ಅಲ್ಲದೆ, ಸಲಹಾ ಮಟ್ಟದಲ್ಲಿ ಶೇಖರ್ ಕಪೂರ್ ಮತ್ತು ಎ.ಆರ್.ರೆಹಮಾನ್ ಇದ್ದು, ಬ್ರಾಂಡೆಡ್ ಕಂಟೆಂಟ್‍ಗಳ ಮಾರಾಟದ ನೇತೃತ್ವ ವಹಿಸುವ, ರೇಡಿಯೋ ಮತ್ತು ಇತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿರುವ ಜ್ಯೋಹಿ ಈ ತಂಡದಲ್ಲಿದ್ದಾರೆ. ಕ್ಯೂಕಿಯಲ್ಲಿ ಕಾರ್ಯನಿರ್ವಹಿಸುವ ಮೊದಲು, ಇವರು ಟ್ಯಾಲೆಂಟ್ ಹೌಸ್‍ನ ಬ್ರಾಂಡ್ ಸಲ್ಯೂಷನ್ಸ್ ಮತ್ತು ರಿಲಾಯನ್ಸ್ ಎಂಟರ್‍ಟೇನ್‍ಮೆಂಟ್‍ನ ನೇತೃತ್ವ ವಹಿಸಿದ್ದರು.

ಇಂಡಿಯಾ ಗೇಮ್ಸ್‍ನಲ್ಲಿ ಸಮೀರ್‍ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಆನಂದ್, ಈ ಕಂಪನಿಯಲ್ಲಿನ ವಿವಿಧ ಪಾತ್ರಗಳಾದ ಪ್ರಾಡಕ್ಡ್ ಗೈ, ಆರ್ಟಿಸ್ಟ್ ಮ್ಯಾನೇಜರ್ ಮತ್ತು ನೆಟ್‍ವರ್ಕ್ ಬಿಸಿನೆಸ್ ಡೆವಲೆಪ್‍ಮೆಂಟ್‍ನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಬಂಡವಾಳ ಮತ್ತು ಭವಿಷ್ಯ

ಕಂಪನಿಯ ಎಲ್ಲಾ ಸಹಸಂಸ್ಥಾಪಕರೂ ತಮ್ಮ ವೈಯಕ್ತಿಕ ಸಾಮಥ್ರ್ಯಕ್ಕೆ ತಕ್ಕಂತೆ ಬಂಡವಾಳ ಹೂಡಿದ್ದಾರೆ. ``ನಾವು ಒಂದು ಪ್ರಮುಖವಾದ ಉದ್ಯಮವನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಅದರ ಮೊದಲ ಸರಣಿಯನ್ನು ಅಂತಿಮಗೊಳಿಸುತ್ತಿದ್ದೇವೆ'' ಎನ್ನುತ್ತಾರೆ ಸಾಗರ್.

ಮುಂದಿನ ಕೆಲವು ತಿಂಗಳುಗಳಲ್ಲಿ ಉದ್ಯಮವನ್ನು 10ರಷ್ಟು ಅಭಿವೃದ್ಧಿಪಡಿಸುವುದು ಈ ತಂಡದ ಪ್ರಮುಖ ಗುರಿ. ಹಾಗಾಗಿ ಬ್ರಾಂಡ್‍ಗಳು ಮತ್ತು ಆಫ್‍ಲೈನ್ ಅಭಿವೃದ್ಧಿಯಲ್ಲಿ ಉತ್ತಮ ದರಗಳಲ್ಲಿ ಮತ್ತು ದೀರ್ಘಾವಧಿ ಒಡಂಬಡಿಕೆಗಳ ಮೂಲಕ ಮತ್ತಷ್ಟು ಕಲಾ ಪ್ರಕಾರಗಳನ್ನು, ಚಾನೆಲ್‍ಗಳನ್ನು ಸೇರಿಸುವ ಉದೇಶವನ್ನು ಈ ಟೀಮ್ ಹೊಂದಿದೆ.

ಲೇಖಕರು

Related Stories