ಕೊಕೊವಾದಿಂದ ಚಾಕಲೇಟ್ ತನಕದ ಕಥೆ..!

ಟೀಮ್​ ವೈ.ಎಸ್​. ಕನ್ನಡ

ಕೊಕೊವಾದಿಂದ ಚಾಕಲೇಟ್ ತನಕದ ಕಥೆ..!

Sunday September 18, 2016,

2 min Read

image


ಚಾಕೋಲೇಟ್.. ಇದ್ರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ..? ಚಾಕೋಲೇಟ್ ಇಲ್ಲದೆ ಯಾವ ಫಂಕ್ಷನ್ ಕೂಡ ನಡೆಯೋದು ಕಷ್ಟವೇ. ಪುಟ್ಟ ಮಕ್ಕಳಿಂದ ಹಿಡಿದು, ಹಣ್ಣು ಹಣ್ಣು ಮುದುಕರ ತನಕ ಎಲ್ಲರೂ ಒಂದು ಬಾರಿ ಚಾಕೋಲೇಟ್​ನ ಟೇಸ್ಟ್ ನೋಡಿಯೇ ಇರ್ತಾರೆ. ಚಾಕೋಲೇಟ್​ನಲ್ಲಿ ಅಂತಹದ್ದೇನಿದೆ ಅನ್ನೋ ಪ್ರಶ್ನೆಗೆ ಉತ್ತರವೂ ಸಿಂಪಲ್. ಕೊಕೊವಾ ಅನ್ನೋದು ಚಾಕೋಲೇಟ್​ನ ಒಳಗಿರುವ ಸೀಕ್ರೆಟ್. ಅಂದಹಾಗೇ ಕೊಕವಾ ಬೆಳೆಗೆ 5000 ವರ್ಷಗಳ ಇತಿಹಾಸವೂ ಇದೆ. ಅಮೆರಿಕಾದಲ್ಲಿ ಈ ಕೊಕೊವಾವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಕೊಕೊವಾ ಜತ್ತಿನೆಲ್ಲೆಡೆಗೆ ವ್ಯಾಪಿಸಿತ್ತು ಅನ್ನೋದನ್ನ ಇತಿಹಾಸ ಒತ್ತಿ ಹೇಳುತ್ತದೆ.

image


image


ಚಾಕೇಲೇಟ್​ನಲ್ಲಿ ಅಡಗಿರುವ ಪ್ರಮುಖ ಅಂಶ ಕೊಕೊವಾ ವಿಶ್ವದ ಎಲ್ಲೆಡೆಯೂ ಬೆಳೆಯುತ್ತಾರೆ ಅಂದ್ರೆ ಅದು ತಪ್ಪು ಕಲ್ಪನೆ. ಯಾಕಂದ್ರೆ ಆಫ್ರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ ಮತ್ತು ಒಷಿನಿಯಾಗಳಲ್ಲಿ ಮಾತ್ರ ಕೊಕೊವಾವನ್ನು ಬೆಳೆಯಬಹುದು. ಇವತ್ತು ವಿಶ್ವದಲ್ಲಿ ಉತ್ಪಾದನೆಯಾಗುವ ಒಟ್ಟು ಕೊಕೊವಾ ಬೆಳೆಯಲ್ಲಿ ಶೇಕಡಾ 70ರಷ್ಟು ಬೆಳೆಯನ್ನು ಪಶ್ಚಿಮ ಆಫ್ರಿಕಾ ದೇಶಗಳೇ ಬೆಳೆಯುತ್ತವೆ. 18ನೇ ಶತಮಾನದಲ್ಲಿ ಭಾರತ ಮತ್ತು ಶ್ರೀಲಂಕಾ ದೇಶಗಳಿಗೆ ಈ ಕೊಕೊವಾ ಪರಿಚಯವಾಗಿತ್ತು. ಆದ್ರೆ ಭಾರತ ಮತ್ತು ಶ್ರೀಲಂಕಾಗಳಲ್ಲಿ ಕೊಕೊವಾ ಪ್ರಮುಖ ಬೆಳೆಯಾಗಲಿಲ್ಲ. ಬದಲಾಗಿ ತೆಂಗು, ಅಡಿಗೆ ಮತ್ತು ರಬ್ಬರ್ ಜೊತೆಗೆ ಉಪ ಬೆಳೆಯಾಗಿ ಇದನ್ನು ಬೆಳಯಲಾಗುತ್ತಿದೆ. ಭಾರತದಲ್ಲಿ ಮಿಶ್ರತಳಿಯ ಕೊಕೊವಾವನ್ನು ಬೆಳೆಯಲಾಗುತ್ತಿದೆ.

image


ಕೊಕೊವಾ ಉತ್ತಮ ಕಮರ್ಷಿಯಲ್ ಬೆಳೆಯೂ ಹೌದು. ಕೊಕೊವಾ ಮರ 3ರಿಂದ 4 ವರ್ಷದ ಒಳಗೆ ಫಸಲು ನೀಡುತ್ತದೆ. 5 ವರ್ಷ ವಯಸ್ಸಿನ ಮರ ತುಂಬಾ ಉತ್ತಮ ಬೆಳೆಯನ್ನು ಕೂಡ ನೀಡಬಲ್ಲದು. ಭಾರತದಲ್ಲಿ ಸರಿಸುಮಾರು 1.5 ಕೆ.ಜಿ ಬೆಳೆಯನ್ನು ಒಂದು ಮರ ನೀಡಬಲ್ಲದು ಅನ್ನೋದನ್ನ ಹಲವು ವರದಿಗಳು ಹೇಳುತ್ತವೆ. ಕೊಕೊವಾ ಮರಳಗಳನ್ನು ಸರಿಯಾಗಿ ನೋಡಿಕೊಂಡ್ರೆ, ಬೆಳೆ ಮತ್ತಷ್ಟು ಉತ್ತಮವಾಗುವುದರಲ್ಲಿ ಸಂದೇಹವೇ ಇಲ್ಲ. ಕೊಕೊವಾ ಮಹಿಳೆಯರ ಪಾಲಿಗೆ ತುಂಬಾ ಉತ್ತಮ ಬೆಳೆಯೂ ಆಗಿದೆ. ಯಾಕಂದ್ರೆ ಕೊಕೊವಾ ಬೆಳೆ ಹೆಚ್ಚಾಗಬೇಕಾದ್ರೆ ಅದಕ್ಕೆ ಮಗುವಿನಂತಹ ಆರೈಕೆಯೂ ಅಗತ್ಯ.

image


ಕೊಕೊವಾ ಗಿಡಗಳಿಂದ ಕಿತ್ತ ಹಣ್ಣುಗಳನ್ನು ಒಡೆದು ಅದರೊಳಗಿರುವ ಬೀಜವನ್ನು ಆರಿಸಲಾಗುತ್ತದೆ. ಆ ಬೀಜವನ್ನು ಒಣಗಿಸಿ, ಚಾಕೋಲೇಟ್ ಫ್ಲೇವರ್ ಬರುವಂತೆ ಮಾಡಲಾಗುತ್ತದೆ. ಈ ಕೆಲಸವೂ ತುಂಬಾ ಜಾಣ್ಮೆ ಮತ್ತು ತಾಳ್ಮೆಯಿಂದಲೇ ನಡೆಯುತ್ತದೆ.

image


ಹಣ್ಣುಗಳಿಂದ ಬೇರ್ಪಡಿಸಿದ ಕೊಕೊವಾ ಬೀಜವನ್ನು ಸೂರ್ಯನ ಕಿರಣಗಳಲ್ಲಿ ಒಣಗಿಸಲಾಗುತ್ತದೆ. ನೈಸರ್ಗಿಕ ಶಾಖದಿಂದ ಕೊಕೊವಾ ಹಣ್ಣುಗಳು ಒಣಗಿದ್ರೆ ಅದ್ರ ರುಚಿ ಹೆಚ್ಚಾಗುತ್ತದೆ ಅನ್ನೋ ನಂಬಿಕೆ ಹಲವರದ್ದು. ಕೊಕೊವಾ ಬೀಜ ಸಂಪೂರ್ಣವಾಗಿ ಒಣಗಿದ ನಂತರ ಪ್ಯಾಕ್ ಮಾಡಿ ಸ್ಟೋರೇಜ್ ಅಥವಾ ಟ್ರಾನ್ಸ್​ಪೋರ್ಟ್ ಮಾಡಲಾಗುತ್ತದೆ.

ಕೊಕೊವಾ ಬೀಜ ಫ್ಯಾಕ್ಟರಿ ತಲುಪಿದ ಮೇಲೂ ಅದನ್ನು ಕ್ಲೀನ್ ಮಾಡಲಾಗುತ್ತದೆ. ಅಷ್ಟೇ ಅಲ್ಲ ಅದನ್ನು ಒಣಗಿಸುವ ಮತ್ತು ಹುರಿಯುವ ಕಾರ್ಯವೂ ನಡೆಯುತ್ತದೆ. ಇಷ್ಟೆಲ್ಲಾ ಆದಮೇಲೆಯೇ ಕೊಕೊವಾ ಚಾಕೊಲೇಟ್ ಫ್ಲೇವರ್ ಆಗಿ ಬದಲಾಗುತ್ತದೆ. ಹೀಗೇ ಕೊಕೊವ ಚಾಕಲೇಟ್ ಆಗಿ ಬದಲಾದ ಮೇಲೆ ಅದು ನಮ್ಮಿಷ್ಟದ ಫ್ಲೇವರ್ ಆಗಿ ಕೈ ಸೇರುತ್ತದೆ. ಚಾಕಲೇಟ್ ಇವತ್ತು ಎಷ್ಟರ ಮಟ್ಟಿಗೆ ಆಕರ್ಷಣೆ ಹೊಂದಿದೆ ಅಂದ್ರೆ ಅದನ್ನು ಬಿಟ್ಟು ನಮಗೆ ಇರೋದಿಕ್ಕೆ ಕಷ್ಟವಾಗುತ್ತಿದೆ.

ಇದನ್ನು ಓದಿ:

1. ಗಾರ್ಮೆಂಟ್ಸ್​ಗೆ ಎಂಟ್ರಿಕೊಡುತ್ತಿದೆ "ಪತಂಜಲಿ"- ವಿದೇಶಿ ಬ್ರಾಂಡ್​ಗಳಿಗೆ ತಿಲಾಂಜಲಿ..!

2. ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ

3. ಕನ್ನಡದಲ್ಲೊಂದು ಅಂತರಾಷ್ಟ್ರೀಯ ಮಟ್ಟದ Ramp ಆಲ್ಬಂ