ಸ್ಯಾನಿಟರಿ ಪ್ಯಾಡ್ ಮಾರುಕಟ್ಟೆಯ ಬ್ರಾಂಡ್ ಅಂಬಾಸಡರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

ಟೀಮ್​​ ವೈ.ಎಸ್​​. ಕನ್ನಡ

0

ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಮಿಂಚುತ್ತಿರುವ ಬ್ಯಾಡ್ಮಿಂಟನ್ ಪ್ರತಿಭೆ ಸೈನಾ ನೆಹ್ವಾಲ್ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪ್ರಾರಂಭಿಕ ಸಂಸ್ಥೆಗಳಿಗೆ ಹೂಡಿಕೆ ಮಾಡುವಲ್ಲಿ ಬಾಲಿವುಡ್ ಮುಂಚೂಣಿಯಲ್ಲಿದೆ. ಯುವರಾಜ್​​​ ಸಿಂಗ್​​ರ ಯುವ್ ವಿ ಕ್ಯಾನ್ ಸಂಸ್ಥೆ ಈಗಾಗಲೆ ಕಾರ್ಯಾಚರಣೆ ನಡೆಸುತ್ತಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಸೈನಾ ಈಗಾಗಲೆ ಕೆಲವು ಪ್ರಮುಖ ಸಂಸ್ಥೆಗಳ ಬ್ರಾಂಡ್ ಅಂಬಾಸಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತ ಈಗ ಮಹಿಳೆಯರ ಸಮಸ್ಯೆಗೆ ಉತ್ತರಿಸಬೇಕಾದ ನಿಟ್ಟಿನಲ್ಲಿ ಗಮನಹರಿಸುತ್ತಿದೆ. ಅದೇ ರೀತಿಯ ಸಂಸ್ಥೆಯೇ ಸೂಥೀ ಹೆಲ್ತ್​​​ಕೇರ್. ಸೂಥಿ ಹೆಲ್ತ್​​ಕೇರ್​​ನಿಂದ ಕಾರ್ಯಾಚರಣೆ ನಡೆಸಲ್ಪಡುತ್ತಿರುವ ಪ್ಯಾರೀ ಸ್ಯಾನಿಟರಿ ಪ್ಯಾಡ್​​ಗೆ ಬ್ರಾಂಡ್ ಅಂಬಾಸಡರ್ ಆಗಿ ಗುರುತಿಸಿಕೊಂಡಿದ್ದಾರೆ ವಿಶ್ವದ ನಂಬರ್-1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್. ಜೊತೆಗೆ ಸೈನಾ ಪ್ಯಾರೀಗೆ ಹೂಡಿಕೆ ಸಹ ಮಾಡಿದ್ದಾರೆ.

ಸಂಸ್ಥೆಯ ಸಮರ್ಥನೆ

ಈ ಸಣ್ಣ ಹೂಡಿಕೆಯ ಸಹಾಯದಿಂದ ಸೈನಾ ಮುಖ್ಯವಾಹಿನಿಯಲ್ಲಿ ಕೇಂದ್ರ ಸ್ಥಳದಲ್ಲಿ ಮೇಕ್ ಇನ್ ಇಂಡಿಯಾ, ಹೆಣ್ಣು ಶಿಶು ರಕ್ಷಣೆ, ಸ್ವಚ್ ಭಾರತ್​ನಂತಹ ಕಾರ್ಯಕ್ರಮಗಳಲ್ಲಿ ಅರ್ಥಗರ್ಭಿತವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಸರ್ಕಾರದ ಸೃಜನಾತ್ಮಕ ಯೋಜನೆಗಳ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ.

ಸೂಥಿ ಹೆಲ್ತ್​​ಕೇರ್ ಬಗ್ಗೆ ತಿಳಿದುಕೊಳ್ಳಿ

ವಾಲ್​​ಸ್ಟ್ರೀಟ್​​​​ನ ಪ್ರಸಿದ್ಧ ಹೂಡಿಕೆದಾರರು ಹಾಗೂ ಪಕ್ಕಾ ವೃತ್ತಿಪರ ಉದ್ಯಮಿಗಳಿಂದ ಪ್ರಾರಂಭಿಸಲ್ಪಟ್ಟ ಸಂಸ್ಥೆ ಸುಥಿ ಹೆಲ್ತ್​​ಕೇರ್. ಇದು ಪ್ಯಾರೀ ಸ್ಯಾನಿಟರಿ ಪ್ಯಾಡ್​​ಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಯೋಜನೆ ಪ್ರಾರಂಭಿಸಿದೆ. ಗ್ರೇಟರ್ ನೋಯ್ಡಾದಲ್ಲಿ ಶುರುವಾದ ಇದರ ತಯಾರಿಕಾ ಘಟಕ, ಗುಣಮಟ್ಟದ ಉತ್ಪಾದನೆಯ ಮೂಲಕ ಭಾರತ ಹಾಗೂ ವಿದೇಶಗಳಲ್ಲಿ ಸ್ಯಾನಿಟರಿ ಪ್ಯಾಡ್​​ಗಳನ್ನು ಮಾರಾಟ ಮಾಡುತ್ತಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ (ನ್ಯಾಷನಲ್ ಹೆಲ್ತ್ ಮೆಶಿನ್-ಎನ್​​ಹೆಚ್ಎಂ) ಅಡಿಯಲ್ಲಿ ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಪ್ರಮಾಣಿಕರಿಸಿದ ಗುಣಮಟ್ಟದ ಸ್ಯಾನಿಟರಿ ಸರಬರಾಜು ಮಾಡುವ ಸಂಸ್ಥೆಗಳಲ್ಲಿ ಸೂಥಿ ಹೆಲ್ತ್​​ಕೇರ್ ಅಗ್ರ ಶ್ರೇಣಿಯಲ್ಲಿದೆ.

ಇತ್ತೀಚೆಗಷ್ಟೇ ಸಂಸ್ಥೆ ಬಹಿರಂಗಪಡಿಸಿದ ಮೊತ್ತವನ್ನು ರಿಲಾಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಅನಿಲ್ ಗುಪ್ತಾರವರಿಂದ ಹೂಡಿಕೆ ಮಾಡಿದೆ. ಸಂಸ್ಥೆಯ ಸಕ್ರಿಯ ಸಲಹೆಗಾರೂ ಆಗಿದ್ದ ಅನಿಲ್, ಇಲ್ಲಿನ ಅವಕಾಶಗಳನ್ನು ಗಮನಿಸಿ ಸ್ವಯಂಪ್ರೇರಿತರಾಗಿ ಹೂಡಿಕೆ ಮಾಡಿದ್ದಾರೆ. ಬ್ರಾಂಡ್ ಪ್ಯಾರೀಯ ಬ್ರಾಂಡಿಂಗ್ ಚಟುವಟಿಕೆಗಳು ಹಾಗೂ ಮಾರ್ಕೆಂಟಿಂಗ್ ಕೆಲಸಗಳಿಗೆ ಈ ಹಣವನ್ನು ಬಳಸುವ ತೀರ್ಮಾನ ಮಾಡಿದೆ.

ಮಾರುಕಟ್ಟೆ ಹಾಗೂ ಬ್ರಾಂಡ್ ಸ್ಥಾಪನೆ

ಅಂದಾಜಿನ ಪ್ರಕಾರ ಸ್ಯಾನಿಟರಿ ಪ್ಯಾಡ್ ಮಾರುಕಟ್ಟೆ ಸುಮಾರು 5 ಪಟ್ಟು ಹೆಚ್ಚಿನ ಪ್ರಗತಿ ಸಾಧಿಸುವ ನಿರೀಕ್ಷೆ ಹೊಂದಿದೆ. ಅಂದರೆ ಈ ಮಾರುಕಟ್ಟೆ 2025ರ ವೇಳೆಗೆ ಸುಮಾರು 21 ಸಾವಿರ ಕೋಟಿ ತಲುಪುವ ಅಂದಾಜಿದೆ. ಪ್ಯಾರೀ ಭಾರತದಲ್ಲಿ 10 ರಿಂದ 24 ವರ್ಷದೊಳಗಿನ ಸುಮಾರು 165 ಮಿಲಿಯನ್ ಹುಡುಗಿಯರಿಗೆ ಸ್ಯಾನಿಟರಿ ಪ್ಯಾಡ್ ತಲುಪಿಸುವ ಗುರಿ ಹೊಂದಿದೆ. ಮುಂದಿನ 5 ವರ್ಷದಲ್ಲಿ ಸ್ಯಾನಿಟರಿ ಪ್ಯಾಡ್​​ಗಳ ಮಾರುಕಟ್ಟೆಯನ್ನು ಗೃಹಬಳಕೆಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಲು ಪ್ಯಾರೀ ಯೋಜನೆ ರೂಪಿಸಿದೆ. ಭಾರತದಾದ್ಯಂತ ಗುರುತು ಮಾಡಿರುವ ರೀಟೈಲ್ ಶಾಪ್​​ಗಳಲ್ಲಿ ಹಾಗೂ ಇ-ಕಾಮರ್ಸ್ ಉದ್ಯಮದಲ್ಲೂ ನ್ಯಾಪ್ಕಿನ್ ಮಾರಾಟವನ್ನು ವಿಸ್ತರಿಸಬೇಕು ಅನ್ನುವುದು ಪ್ಯಾರೀ ಬ್ರಾಂಡ್​​ನ ಗುರಿ.

ಶೇ. 85 ಭಾರತೀಯ ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್​​ಗಳನ್ನು ಬಳಸುತ್ತಿಲ್ಲ. ಪ್ರಾಥಮಿಕ ಹಂತದಲ್ಲಿ ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ಹಾಗೂ ಅಧ್ಯಯನ ನಡೆಯಬೇಕಿದೆ. ಅರುಣಾಚಲಂ ಮುರುಗನಾಥಂ ತಮ್ಮ ಜಯಶ್ರೀ ಎಂಟರ್ಪ್ರೈಸಸ್ ದಶಕಗಳ ಹಿಂದೆಯೇ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್ ನೀಡುವ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿತ್ತು. ಬಾಳೆಗಿಡದ ಎಲೆಗಳಲ್ಲಿ ಸ್ಯಾನಿಟರಿ ಪ್ಯಾಡ್​​ಗಳನ್ನು ತಯಾರಿಸಿ ಎಕೋ ಫ್ರೆಂಡ್ಲೀ ಸ್ಯಾನಿಟರಿ ಪ್ಯಾಡ್ ಉತ್ಪಾದನೆಯತ್ತ ಗಮನ ಹರಿಸಿದ್ದ ಸಂಸ್ಥೆ ಸತಿ ಪ್ಯಾಡ್. ಸಿಐಐಇಯಿಂದ ಪ್ರಮಾಣಿಕರಿಸಿದ ಅಕ್ಬರ್​​ರ ಇನ್ನೋವೇಶನ್ ಅನ್ನುವ ಹೈಬ್ರಿಟ್ ಸೋಶಿಯಲ್ ಉದ್ಯಮ, ಅತ್ಯುತ್ತಮ ಗುಣಮಟ್ಟದ ಹಾಗೂ ಗೊಬ್ಬರವಾಗಬಲ್ಲ ಸ್ಯಾನಿಟರಿ ಪ್ಯಾಡ್ ತಯಾರಿಕೆ ಮಾಡಿತ್ತು. ಐಐಟಿ ಹಾಗೂ ಐಐಎಂ ವಿದ್ಯಾರ್ಥಿಗಳಿಂದ ಹೂಡಿಕೆ ಮಾಡಿಸಿದ ಅಕ್ಬರ್ ಈ ಸ್ಯಾನಿಟರಿ ನ್ಯಾಪ್ಕಿನ್​​ಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು.

ಹೂಡಿಕೆದಾರರೂ ಹಾಗೂ ಹೂಡಿಕೆಯ ಆಯಾಮ

ಸೈನಾ ಔದ್ಯಮಿಕ ಜಗತ್ತಿನ ಜೊತೆ ಸಂಬಂಧ ಉತ್ತಮಪಡಿಸಿಕೊಳ್ಳಲು ಪ್ಯಾರೀ ಸಂಸ್ಥೆಯ ಜೊತೆ ಹೂಡಿಕೆ ಮಾಡಿದ್ದಾರೆ. ಸ್ಯಾನಿಟರಿ ಪ್ಯಾಡ್ ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶ ಹೊಂದಿದೆ. ಹಾಗಾಗಿ ಪ್ಯಾರಿ ಇದರ ಬ್ರಾಂಡ್ ನೆಲೆಗೊಳಿಸುವ ಉದ್ದೇಶ ಹೊಂದಿದೆ. ಸೂಥಿ ಹೆಲ್ತ್​​ಕೇರ್ ಸಂಸ್ಥೆಯ ಸಿಇಒ, ಸಾಹಿಲ್ ಧರಿಯಾ ಹಣದ ಸೂಕ್ತ ಹೂಡಿಕೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಸಂಸ್ಥೆಯ ಅಭಿವೃದ್ಧಿ ಹಾಗೂ ವಿಸ್ತಾರವನ್ನು ಗಣನೆಯಲ್ಲಿಟ್ಟುಕೊಂಡು ಫಂಡಿಂಗ್ ಮಾಡಲಾಗಿದೆ. ಕೈಗೆಟುಕುವ ದರದಲ್ಲಿ ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳ ಮಾರಾಟದ ವಿಚಾರದಲ್ಲಿ ಸೂಥಿ ಹೆಲ್ತ್​​ಕೇರ್ ಮಾರುಕಟ್ಟೆಯಲ್ಲಿ ಸಿಂಹ ಪಾಲು ಹೊಂದಿದೆ. ಕಳೆದ ವರ್ಷ ಸಂಸ್ಥೆ ಸ್ಪಿರಿಟ್ ಆಫ್ ಮ್ಯಾನುಫ್ಯಾಕ್ಚರ್ ಪ್ರಶಸ್ತಿ ಗಳಿಸಿಕೊಂಡಿತ್ತು. ಇದರಿಂದ ಸಾಕಷ್ಟು ಉತ್ತೇಜನಗೊಂಡು ಮತ್ತಷ್ಟು ಸಾಮಾಜಿಕ ಕಳಕಳಿಯ ಉತ್ಪನ್ನಗಳ ತಯಾರಿಕೆಯತ್ತ ಗಮನ ಹರಿಸುತ್ತಿದೆ.

ಸೈನಾ, ಮಹಿಳೆಯರಿಗೆ ಹಾಗೂ ಯುವತಿಯರಿಗೆ ಮಾದರಿಯಾಗಿರುವುದರಿಂದ, ಅವರು ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವುದು ಮುಂದೆ ಒಳ್ಳೆಯ ಬೆಳವಣಿಗೆಗೆ ಪೂರಕವಾಗುತ್ತದೆ ಅನ್ನುವುದು ಸಂಸ್ಥೆಯ ಆಶಯ.

ಲೇಖಕರು: ಅಲೋಕ್​​ ಸೋನಿ
ಅನುವಾದಕರು: ವಿಶ್ವಾಸ್​​

Related Stories