ಭವಿಷ್ಯದ ಭಾರತದಲ್ಲಿ ಇ - ಕಾಮರ್ಸ್ ಉದ್ಯಮದ ಕ್ರಾಂತಿ.. !

ಟೀಮ್​ ವೈ.ಎಸ್​.ಕನ್ನಡ

0

ರಿಟೇಲ್ ಮಾರ್ಕೆಟ್​​ನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿರೋದು ಇ ಕಾಮರ್ಸ್. ಇನ್ನು ಇ ಕಾಮರ್ಸ್ ಶುರು ಮಾಡ್ಬೇಕು, ಅದ್ರಲ್ಲಿ ಏನಾದ್ರೂ ಹೊಸತನ ಸೃಷ್ಠಿಸಬೇಕು ಅನ್ನೋದು ಅದೆಷ್ಟೋ ಮಂದಿ ಕನಸು. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆರಂಭಿಕ ಪ್ರಯತ್ನ ನಡೆಸಿ ಕೈ ಸುಟ್ಟುಕೊಂಡಿದ್ದಾರೆ. ಆದ್ರೆ ಸ್ಟಾಕ್ ಬೈ ಲವ್, ಇ ಕಾಮರ್ಸ್ ಗೆ ಸವಾಲುಗಳು ಎದುರಾದ್ರೂ ಸಾಗಬೇಕಾದ ಹಾದಿಗೆ ಯಾವುದೇ ಅಡೆತಡೆಗಳು ಉಂಟಾಗಿಲ್ಲ. ಇದು ಸ್ಟಾಕ್ ಬೈ ಲವ್ ಇ ಕಾಮರ್ಸ್ ನ ಯಶೋಗಾಥೆ.. ಇತರೆ ಯಾವುದೇ ಬ್ಯುಸಿನೆಸ್ ಗೆ ಹೋಲಿಸಿದ್ರೆ ಇ ಕಾಮರ್ಸ್ ಗೆ ಎಂಟು ಪಟ್ಟು ಹೆಚ್ಚು ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಇದೆಲ್ಲವುದರ ಅರಿವು ಹೊಂದಿದ್ದ ಸ್ಟಾಕ್ ಬೈ ಲವ್ ಇದೀಗ ಸೂಕ್ತ ಯೋಜನೆಗಳೊಂದಿಗೆ ಮುನ್ನುಗ್ಗುತ್ತಿದೆ. ಇನ್ನು ಭಾರತದಲ್ಲಿ ಮುಂದಿನ 20 ವರ್ಷಗಳ ರಿಟೇಲ್ ಮಾರ್ಕೇಟನ್ನ ಆಳುವುದು ಇ ಕಾಮರ್ಸ್ ಅನ್ನುವುದು ಸರ್ವ ವಿಧಿತ ಸತ್ಯ. ಇದನ್ನ ಸಮರ್ಪಕವಾಗಿ ಅರಿತುಕೊಂಡಿರುವ ಸ್ಟಾಕ್ ಬೈ ಲವ್ ಇ ಕಾಮರ್ಸ್ ಇದಕ್ಕೆ ತಕ್ಕಂತೆ ಭವಿಷ್ಯದ ಯೊಜನೆಗಳನ್ನ ರೂಪಿಸಿಕೊಂಡಿದೆ.

ಇದನ್ನು ಓದಿ: ಬಂದಿದೆ ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ..!

ಭಾರತ ಸರ್ಕಾರ ಕೂಡ ಹೊಸ ಸ್ಟಾರ್ಟ್ ಅಪ್ ಗಳಿಗೆ, ಇ ಕಾಮರ್ಸ್ ಗಳಿಗೆ ಉತ್ತೇಜನ ನೀಡುವುದಾಗಿ ಘೋಷಿಸಿದೆ. ಇನ್ನು ಆರ್ಥಿಕ ತಜ್ಞರೂ ಕೂಡ ಇದೊಂದು ಮಾರುಕಟ್ಟೆಯ ದಿಕ್ಕನ್ನೇ ಬದಲಾಯಿಸಬಲ್ಲ ಯೋಜನೆ ಅಂತ ಬಣ್ಣಿಸಿದ್ದಾರೆ. ಜೊತೆಗೆ ಭಾರತೀಯ ಮಾರುಕಟ್ಟೆಯನ್ನ ಇ ಕಾಮರ್ಸ್ ಗಳು ಯಾಕೆ ಮತ್ತು ಹೇಗೆ ಆಕ್ರಮಿಸುತ್ತವೆ ಅನ್ನೋದನ್ನೂ ಅವರು ವಿವರಿಸುತ್ತಾರೆ.

ಸಿರಿವಂತರಾಗುತ್ತಿರುವ ಭಾರತೀಯರು..

ಭಾರತದಲ್ಲಿ ಔದ್ಯೋಗಿಕರಣ ಹೆಚ್ಚಾಗುತ್ತಿದೆ. ಇದ್ರಿಂದಾಗಿ ಭಾರತೀಯ ಜೀವನ ಶೈಲಿಯಲ್ಲೂ ಪ್ರಗತಿ ಕಾಣುತ್ತಿದೆ. ಆರ್ಥಿಕ ತಜ್ಞರ ಪ್ರಕಾರ ಭಾರತ ಕಳೆದ ಕೆಲವು ವರ್ಷಗಳಲ್ಲಿ 32 ರಾಷ್ಟ್ರಗಳನ್ನ ಒಟ್ಟಾರೆ ಹಿಂದಿಕ್ಕಿದೆ. ಅಲ್ಲದೆ ಭಾರತದಲ್ಲಿ ಸಿರಿವಂತ ಹೂಡಿಕೆದಾರರ ಸಂಖ್ಯೆಯೂ ಬೆಳೆಯುತ್ತಿದೆ. ಹೀಗಾಗಿ ಆರ್ಥಿಕವಾಗಿಯೂ ಭಾರತ ಹೆಚ್ಚು ಸದೃಢವಾಗಿ ನಿಲ್ಲುತ್ತಿದೆ.

ಸಾಂಪ್ರದಾಯಿಕವಾಗಿ ಭಾರತೀಯರು ಬಳಕೆದಾರರು, ಉತ್ಪತ್ತಿದಾರರಲ್ಲ..!

ಇದೊಂದು ವೈಜ್ಞಾನಿಕವಾಗಿ ಸಾಬೀತಾಗದ ಸಂಗತಿಯಾಗಿದ್ರೂ, ಇದು ಎಲ್ಲರೂ ಒಪ್ಪಿಕೊಳ್ಳಬಹುದಾದ ಸತ್ಯ. ಯಾಕಂದ್ರೆ ಈ ಬಗ್ಗೆ ಪರಾಮರ್ಷಿಸಿ ಯೋಚಿಸಿದಾಗ ಹಲವು ವಾಸ್ತವಗಳು ಅರಿವಿಗೆ ಬರುತ್ತವೆ. ಚೈನಾಕ್ಕೆ ಹೋಲಿಸಿದ್ರೆ ಭಾರತದಲ್ಲಿ ಲೇಬರ್ ಗಳನ್ನ ಉತ್ಪತ್ತಿ ಮಾಡುವ ಪ್ರಮಾಣ ತೀರಾ ಕೆಳಮಟ್ಟದಲ್ಲಿದೆ. ಚೀನಾ ಮತ್ತಿತರ ದೇಶಗಳಲ್ಲಿ ಆದಾಯ ಹೆಚ್ಚಾಗಲು ಇದು ಪ್ರಮುಖ ಕಾರಣವಾಗಿದ್ರೂ, ಭಾರತದಲ್ಲಿ ಉತ್ಪಾದನಾ ಮಟ್ಟ ಕುಸಿಯುವಲ್ಲಿ ಇದು ನಿರ್ಣಾಯಕವೆನಿಸಿದೆ. ಹೀಗಾಗಿ ಭಾರತ ದೊಡ್ಡ ಮಟ್ಟದಲ್ಲಿ ಬಳಕೆ ಮಾಡುತ್ತದೆಯೇ ಹೊರತು ಉತ್ಪತ್ತಿ ಮಾಡುವುದಿಲ್ಲ.

ರಿಟೇಲ್ ವ್ಯಾಪರಸ್ಥರಿಗೆ ನಿಧಾನಗತಿಯ ಮೂಲ ಸೌಕರ್ಯಗಳು

ಭಾರತದಲ್ಲಿ ಉತ್ಪಾದನಾ ಮಟ್ಟ ಕುಸಿಯುತ್ತಿದೆ ಎಂಬುದಕ್ಕೆ ಇದೂ ಒಂದು ಸೂಕ್ತ ಉದಾಹರಣೆ. ಇನ್ನು ದೇಶದಲ್ಲಿ ರಿಟೇಲ್ ವ್ಯಾಪರಸ್ಥರಿಗೆ ಒದಗಿಸುತ್ತಿರುವ ಮೂಲ ಸೌಕರ್ಯದಲ್ಲಿ ಸಾಕಷ್ಟು ನಿರ್ಲಕ್ಷ್ಯತನ ತೋರಲಾಗುತ್ತಿದೆ. ಅಲ್ಲದೆ ವಿತರಿಸುವ ಮಾಧ್ಯಮವೂ ನಿಧಾನಗತಿಯಲ್ಲಿದೆ. ವಾರ್ಷಿಕವಾಗಿ ಕೇವಲ 12 ಶೇಕಡಾದಷ್ಟು ಪ್ರಮಾಣದಲ್ಲಿ ಭಾರತದ ರಿಟೇಲ್ ಮಾರ್ಕೆಟ್ ಬೆಳೆಯುತ್ತಿದೆ ಅನ್ನೋದು ಸತ್ಯ..

ಅಭೂತಪೂರ್ವ ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಟ್ ಬಳಕೆ

ಭಾರತದಲ್ಲಿ ಇಂಟರ್ನೆಟ್ ಹಾಗೂ ಸ್ಮಾರ್ಟ್ ಫೋನ್ ಗಳ ಬಳಕೆದಾರರ ಸಂಖ್ಯೆ ಏರುತ್ತಲೇ ಇದೆ. ದೇಶದಲ್ಲಿ ಪ್ರತೀ ಮೂರು ಸೆಕೆಂಡ್ ಗೆ ಒಬ್ಬ ಇಂಟರ್ನೆಟ್ ಬಳಕೆದಾರ ಸೇರ್ಪಡೆಗೊಳ್ಳುತ್ತಿದ್ದಾನೆ. ಇನ್ನು ಆಪ್ ಗಳ ಬಳಕೆಯಲ್ಲೂ ಭಾರತೀಯರೇ ಮುಂದುವರಿದಿದ್ದು, ಡೆಸ್ಕ್ ಟಾಪ್ ಗಳ ಬಳಕೆಯನ್ನೇ ಸ್ಥಗಿತಗೊಳಿಸುವ ಮಟ್ಟಿಗೆ ಇದು ಬೆಳೆಯುತ್ತಿದೆ. ಈ ಎಲ್ಲಾ ಅಂಶಗಳು ಭಾರತದಲ್ಲಿ ಇ ಕಾಮರ್ಸ್ ಉದ್ಯಮಕ್ಕಿರುವ ಸ್ಕೋಪ್ ಇರುವ ಸಾಕ್ಷಿ.

ಭಾರತದಲ್ಲಿ ಇ ಕಾಮರ್ಸ್ ಕೇಂದ್ರೀಕೃತವಾಗಬೇಕಾದ್ರೆ ಉದ್ಯಮಶೀಲತೆ ಹೆಚ್ಚಬೇಕು

ಭಾರತದಲ್ಲಿ ಇ ಕಾಮರ್ಸನ್ನ ಸಕ್ರೀಯಗೊಳಿಸುವುದು ಹೇಗೆ..ಇದರ ನೇತೃತ್ವ ಹೊರುವವರು ಯಾರು. ಇದೊಂದು ಸದ್ಯ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಅಲ್ಲದೆ ಈ ಬ್ಯುಸಿನೆಸ್ ಅಭಿವೃದ್ಧಿಗೆ ಪ್ರೇರಣೆ ನೀಡುವುದು ಯಾರು ಅನ್ನುವ ಯಕ್ಷ ಪ್ರಶ್ನೆಗಳೂ ಕಾಡುತ್ತದೆ. ಆದ್ರೆ ಇದಕ್ಕಿರುವ ಉತ್ತರ ತುಂಬಾ ಸರಳ. ಭಾರತದಲ್ಲಿ ಇ - ಕಾಮರ್ಸ್ ಕೇಂದ್ರೀಕೃತವಾಗಬೇಕಾದ್ರೆ ಉದ್ಯಮಶೀಲತೆ ಹೆಚ್ಚಬೇಕು ಅನ್ನೋ ಯೋಜನೆ ಹಾಗೂ ಚಿಂತನೆಯನ್ನ ಬೆಳೆಸುವ ಜೊತೆಗೆ ಅದನ್ನ ಬೆಳೆಸಲು ಬೇಕಾದ ಉದ್ಯಮ ಶೀಲತೆಯನ್ನೂ ಬೆಳೆಸುವುದು ಅನಿವಾರ್ಯ. ಆದ್ರೆ ಒಬ್ಬ ಉದ್ಯಮಿ ಅಥವಾ ಉದ್ಯಮ ಶೀಲತೆ ಬೆಳೆಯಬೇಕು ಅಂದ್ರೆ ಕನಿಷ್ಠ 10 ವರ್ಷಗಳ ಕಾಲ ತಗುಲುತ್ತದೆ. ಹಾಗಂತ ಕಂಪನಿಗಳು ತಮ್ಮ ಉತ್ಪಾದನೆಯನ್ನೇ ನಿಲ್ಲಿಸಿ ಪಲಾಯನ ಮಾಡುವುದರಲ್ಲಿ ಅರ್ಥವಿಲ್ಲ.

ಕೆಲವು ಅಗತ್ಯ ಕ್ರಮಗಳಿಂದ ಇ - ಕಾಮರ್ಸ್ ಗೆ ಉತ್ತೇಜನ..

ಹೊಸ ಪ್ರಯೋಗಗಳು ಉದ್ಯಮದಲ್ಲಿ ನಡೆಯಬೇಕು ಅಂದ್ರೆ ಅದಕ್ಕೆ ಸೂಕ್ತ ಬಂಡವಾಳವನ್ನೂ ಒದಗಿಸಲು ತಯಾರಿರಬೇಕು. ಹಾಗಂತ ಲೆಕ್ಕಾಚಾರವಿಲ್ಲದ ಹಾಗೂ ಮಾರುಕಟ್ಟೆಗೆ ಹೊಂದಿಕೆಯಾಗದ ಫಂಡ್ ಗಳಿಂದ ಯಾವುದೇ ಲಾಭ ಪಡೆಯಲು ಸಾಧ್ಯವಿಲ್ಲ. ಇನ್ನು ಉದ್ಯಮ ಗಟ್ಟಿಯಾಗಿ ಬೇರೂರಲು ಕನಿಷ್ಠ 10 ವರ್ಷಗಳನ್ನ ಪಡೆಯುತ್ತದೆ ನಿಜ. ಹಾಗಂತ ಭವಿಷ್ಯದ ಯೋಜನೆಗಳಲ್ಲಿ ಹೊಸತನಗಳಿಲ್ಲದೆ ಇದ್ದಲ್ಲಿ ನೆಲಕಚ್ಚುವುದು ಖಚಿತ. ಹೀಗೆ ಭಾರತದ ಭವಿಷ್ಯ ಇ ಕಾಮರ್ಸ್ ಗಳ ಮಾರುಕಟ್ಟೆ ಮೇಲೆ ನಿಂತಿದೆ ಅನ್ನೋದು ಸತ್ಯ.ಆದ್ರೆ ನಿರಂತರ ಸಮಸ್ಯೆಗಳೊಂದಿಗೇ ಹೊಂದಿಕೊಂಡಿರುವ ಇವುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಲ್ಲಿ ಇಡೀ ಮಾರುಕಟ್ಟೆ ವ್ಯವಸ್ಥೆಯಲ್ಲೇ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವುದು ಖಚಿತ.

ಲೇಖಕರು – ತುಷಾರ್ ಅಹ್ಲುವಾಲಿಯಾ

ಅನುವಾದ – ಸ್ವಾತಿ. ಉಜಿರೆ

ಇದನ್ನು ಓದಿ

1. ಡಾಮಿನೋಸ್ ಸ್ಟೈಲ್ ನಲ್ಲಿ ದೇಸೀ ಫುಡ್ : ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಬ್ಯುಸಿನೆಸ್ ನಲ್ಲಿ ನಲ್ಲಿ ಡಮ್ಮಾ ಡಮ್ ಹೊಸ ಹೆಜ್ಜೆ..

2. ಪೊಲೀಸ್ ಅಧಿಕಾರಿಗೆ ಫ್ಯಾನ್ ಫಾಲೋವರ್ಸ್ ಇದ್ದಾರೆ..!

3. ಬಡವರ ಹಸಿವು ನೀಗಿಸೋ ‘ಅನ್ನಕೂಟ’

Related Stories