ಬಡ ಮಹಿಳೆಯೊಳಗಿನ ಉದ್ಯಮಿಗಳನ್ನು ಪ್ರೋತ್ಸಾಹಿಸುವ “ಶಾಂತಾ”

ಟೀಮ್​ ವೈ.ಎಸ್​. ಕನ್ನಡ

ಬಡ ಮಹಿಳೆಯೊಳಗಿನ ಉದ್ಯಮಿಗಳನ್ನು ಪ್ರೋತ್ಸಾಹಿಸುವ “ಶಾಂತಾ”

Tuesday September 27, 2016,

2 min Read

ಇತ್ತೀಚಿನ ದಿನಗಳಲ್ಲಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಕಾರ್ಯ ನಡೆಯುತ್ತಿದೆ. ಆದ್ರೆ ಕೆಲವೊಮ್ಮೆ ಯೋಚನೆ ಮಾಡಿದ್ದು ಯಾವುದೂ ನಡೆಯುವುದಿಲ್ಲ. ಭಾರತದಲ್ಲೂ ಇದೇ ಆಗಿದೆ. ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಯೋಜನೆ ಜಾರಿಯಲ್ಲಿ ಇದ್ರೂ, ಉದ್ಯಮಿಗಳ ಸಂಖ್ಯೆ ತುಂಬಾ ಇಳಿಮುಖವಾಗಿದೆ. ಅದ್ರಲ್ಲೂ ಗ್ರಾಮೀಣ ಭಾರತದಲ್ಲಿ 2005ರಲ್ಲಿ ಶೆಕಡಾ 49ರಷ್ಟು ಮಹಿಳಾ ಉದ್ಯಮಿಗಳಿದ್ರೆ, ಈಗ ಅದು ಶೆಕಡಾ 36ಕ್ಕೆ ಇಳಿದಿದೆ. ಈ ವ್ಯತಿರಿಕ್ತಕ್ಕೆ ಕಾರಣವಾಗಿರುವುದು ಕೆಲಸದ ಒತ್ತಡ. ಆದ್ರೆ ಈ ಬೆಳವಣಿಗೆಯ ವಿರುದ್ಧ 53 ವರ್ಷದ ಶಾಂತಾ ಹೋರಾಟ ನಡೆಸುತ್ತಿದ್ದಾರೆ. ಮಹಿಳಾ ಉದ್ಯಮಿಗಳ ಸಂಖ್ಯೆನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಶಾಂತಾ ಹುಟ್ಟಿದ್ದು ಬಡಕುಟುಂಬದಲ್ಲಿ. ಹರಿಹರೆಯದಲ್ಲೇ ಮದುವೆ ಕೂಡ ಆಗಿ ಜವಾಬ್ದಾರಿ ಹೆಚ್ಚಾಗಿತ್ತು. ಮದುವೆ ನಂತರ ತಮಿಳುನಾಡಿನ ಕಂಚಿಪುರಂ ಜಿಲ್ಲೆಯ ಕೊಡಪಟ್ಟಣಂನಲ್ಲಿ ಜೀವನ ಸಾಗಲು ಆರಂಭಿಸಿತು. ಶಾಂತಾಗೆ ಶಿಕ್ಷಣದ ಕೊರತೆ ಕಾಡಿದ್ರೂ, ತಾನು ಕೆಲಸ ಮಾಡುವ ಮೂಲಕ ಕುಟುಂಬದ ಬಡತನ ಹೊಡೆದೋಡಿಸುವ ಪಣತೊಟ್ಟರು.

image


ಅಂದಹಾಗೇ, ಶಾಂತಾ ಮೊದಲು ಕೆಲಸ ಆರಂಭಿಸಿದ್ದು ಸರ್ಕಾರಿ ಕಚೇರಿ ಒಂದರಲ್ಲಿ. ಅಲ್ಲಿ ಕೆಲಸ ಮಾಡಿದ್ರೂ ಸಂಬಳ ಸಿಗಲಿಲ್ಲ.ಬಸ್ ಟಿಕೆಟ್​ನ ಖರ್ಚು ಬಿಟ್ರೆ ಬೇರೇನೂ ಶಾಂತಾ ಕೈ ಸೇರಲಿಲ್ಲ. ಆದ್ರೆ ಈ ಕೆಲಸದ ಮೂಲಕ ಶಾಂತಾ ಸಂಹವನದ ಕೊರತೆ ನೀಗಿಸಿಕೊಂಡರು. ಅಷ್ಟೇ ಅಲ್ಲ ಕೆಲಸದ ಆಫರ್​ಗಳು ಹೆಚ್ಚಾಗುವಂತೆ ಮಾಡಿಕೊಂಡ್ರು.

ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಾಂತಾ ಸೆಲ್ಫ್ ಹೆಲ್ಫ್ ಗ್ರೂಪ್ (SHG) ಬಗ್ಗೆ ಅರಿತುಕೊಳ್ಳುತ್ತಾರೆ. SHGಗಳಲ್ಲಿ ಅಳವಡಿಸಿಕೊಂಡಿರುವ ಮೈಕ್ರೋಫೈನಾನ್ಸ್ ಮಾದರಿಗಳು ಬಡತನ ನಿರ್ಮೂಲನೆಗೆ ದಾರಿ ಮಾಡುತ್ತವೆ ಅನ್ನೋದನ್ನ ಶಾಂತಾ ಅರಿತುಕೊಂಡ್ರು. ಗುಂಪುಗಳಲ್ಲಿ ಇರುವ ಮಹಿಳೆರು ಒಂದು ನಿಗದಿತ ಮೊತ್ತದ ಹಣವನ್ನು ಸಂಘಗಳ ಮೂಲಕ ಕೊಟ್ಟು ಅದನ್ನು ಬ್ಯಾಂಕ್​ಗ ಳಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ವಿವಿಧ ಗುಂಪುಗಳಿಂದ ಒಟ್ಟಾರೆಯಾಗಿ ಸಂಗ್ರಹವಾಗುವ ಆ ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ಅದೇ ಗುಂಪಿನ ಮಹಿಳೆಯರಿಗೆ ನೀಡಲಾಗುತ್ತದೆ. ಆದ್ರೆ ಈ ಸಾಲವನ್ನು ಸುಮ್ಮನೆ ನೀಡಲಾಗುವುದಿಲ್ಲ. ಮಹಿಳೆಯರು ಸಾಲ ಪಡೆಯಬೇಕಾದರೆ, ಬ್ಯಾಂಕ್​ಗೆ ತಮ್ಮ ಉದ್ಯಮ ಬಗ್ಗೆ ಮಾಹಿತಿ ಮತ್ತು ಬ್ಲೂ ಪ್ರಿಂಟ್​ಗಳನ್ನು ಕೂಡ ನೀಡಬೇಕಾಗುತ್ತದೆ.

ಇದನ್ನು ಓದಿ: "ಚಪಾತಿ ಮನೆ"ಯ ಆದರ್ಶ ದಂಪತಿ

ಶಾಂತಾ ಈ ರೀತಿಯ ಮಹಿಳಾ ಗುಂಪುಗಳಿಗೆ ಹೆಚ್ಚು ಹೆಚ್ಚು ಮಹಿಳೆಯರು ಸೇರುವಂತೆ ಪ್ರೇರೆಪಿಸಿದ್ರು. ಶಾಂತಾ ವಾಸಿಸುತ್ತಿದ್ದ ಗ್ರಾಮದಲ್ಲಿ ಹೆಚ್ಚಿನ ಮಹಿಳೆಯರು 10 ರೂಪಾಯಿ ಕೊಡಲು ಕೂಡ ಹಿಂದೆಮುಂದೆ ನೋಡುವ ಪರಿಸ್ಥಿತಿ ಇತ್ತು. ಹೀಗಾಗಿ 20 ಮಹಿಳೆಯರ ಒಂದು ಗುಂಪು ಕಟ್ಟೋದಿಕ್ಕೆ ಶಾಂತಾಗೆ ಸುಮಾರು 2 ವರ್ಷಗಳ ಕಾಲ ಹಿಡಿಯಿತು. ಆದ್ರೆ ಹಠ ಬಿಡದ ಶಾಂತಾ ಅಂದುಕೊಂಡಿದ್ದನ್ನು ಸಾಧಿಸಿ ಬಿಟ್ಟರು.

ಈ ರೀತಿಯ ಗುಂಪುಗಳಿಂದ ದೊರೆಯುತ್ತಿದ್ದ ಸಾಲಗಳಿಂದ ಹಳ್ಳಿಗಳಲ್ಲಿನ ಮಹಿಳೆಯರು ಉದ್ಯಮ ಆರಂಭಿಸಿದ್ರು. ಹಸುಗಳನ್ನು ಖರೀದಿಸಿ, ಹಾಲು ಮಾರಾಟ ಆರಂಭಿಸಿದ್ರು. ಬ್ಯಾಂಕುಗಳು ಕೂಡ ಶಾಂತಾ ಮತ್ತು ಅವರ ಗುಂಪುಗಳನ್ನು ಪ್ರೋತ್ಸಾಹಿಸಲು ಆರಂಭಿಸಿದವು. ಹಳ್ಳಿಗಳ ಮಹಿಳೆಯರ ಉದ್ಯಮದ ಕನಸು ನಿಧಾನವಾಗಿ ನನಸಾಗಲು ಆರಂಭವಾಯಿತು.

ಆದ್ರೆ 2009ರಲ್ಲಿ ಶಾಂತಾಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ಚೆನ್ನೈ ಮೂಲದ ಬ್ಯಾಗ್ ತಯಾರಿಕಾ ಸಂಸ್ಥೆಯೊಂದು ಪ್ಯಾಕೇಜಿಂಗ್ ಬ್ಯಾಗ್ ತಯಾರಿಸಲು ಶಾಂತಾಗೆ ಆರ್ಡರ್ ನೀಡಿತ್ತು. ಆರಂಭದಲ್ಲಿ ಇತರೆ ಮಹಿಳೆಯರನ್ನು ಮತ್ತು ಹಣವನ್ನು ಹೊಂದಿಸಲು ಸ್ವಲ್ಪ ಸಮಯ ತಗುಲಿತು. ಆದ್ರೆ ಶಾಂತಾ ಯಾವುದನ್ನು ಕೂಡ ಬಿಟ್ಟುಕೊಡಲಿಲ್ಲ. ಅಂದುಕೊಂಡಿದ್ದನ್ನ ಮಾಡಿಯೇ ಬಿಟ್ಟರು.

ಇವತ್ತು ಶಾಂತಾ ಬಳಿ 26 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಪ್ರತೀ ವಾರ ಕನಿಷ್ಠ 5000 ಪ್ಯಾಕೇಜಿಂಗ್ ಬ್ಯಾಗ್​ಗಳು ಸಜ್ಜುಗೊಳುತ್ತಿವೆ. ಮಹಿಳೆಯರ ಕೈಯಲ್ಲಿ ಹಣ ಓಡಾಡುತ್ತಿದೆ. ಈ ಮಹಿಳೆಯರು ತಮ್ಮ ಕುಟುಂಬದ ಬಡತನ ವನ್ನು ದೂರ ಮಾಡಲು ತಮ್ಮದೇ ಶೈಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ಶಾಂತಾ ಇಷ್ಟಕ್ಕೆ ತೃಪ್ತರಾಗಿಲ್ಲ. ಮತ್ತೊಂದು ಹಳ್ಳಿ ಕಡೆ ಮುಖ ಮಾಡಿದ್ದಾರೆ. ಅಲ್ಲೂ ಮಹಿಳೆಯರ ಒಳಗಿರುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನು ಓದಿ: 

1. ಐಸಿಸ್ ರಕ್ಕಸರಿಂದ ಅತ್ಯಾಚಾರಕ್ಕೊಳಗಾಗಿ ತಪ್ಪಿಸಿಕೊಂಡಿದ್ದ ಯುವತಿ : ಈಗ ವಿಶ್ವಸಂಸ್ಥೆ ಸದ್ಭಾವನಾ ರಾಯಭಾರಿ

2. ಭಾರತದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು 'ಪತಂಜಲಿ'ಯ ಆಚಾರ್ಯ ಬಾಲಕೃಷ್ಣ

3. ಫ್ಯಾಷನ್ ಲೋಕದಲ್ಲಿ ಹೊಸ ಭಾಷ್ಯ ಬರೆದ ಆ್ಯಸಿಡ್ ದಾಳಿ ಸಂತ್ರಸ್ಥೆ..