ಬಿಲಿಯನ್ ಡಾಲರ್ ಕನ್ನಡಕ ಮಾರ್ಕೇಟ್‍ನ ಹೊಸ "ಸೈಟ್"

ಟೀಮ್​​ ವೈ.ಎಸ್​​​.

0

ವಿಶ್ವದಲ್ಲಿ ಹತ್ತರಲ್ಲಿ ಆರು ಮಂದಿ ಸ್ಪೆಕ್ಸ್ ಮತ್ತು ಕಾಂಟ್ಯಾಕ್ಟ್ ಲೆನ್ಸ್​​​ಗಳನ್ನು ಬಳಸುತ್ತಾರೆ ಹಾಗೂ ಕರೆಕ್ಟೀವ್ ಐ ಸರ್ಜರಿಗಳಿಗೂ ಒಳಗಾಗಿರುತ್ತಾರೆ.

ಹಾಗೆಯೇ ಮುಂದುವರಿದ ದೇಶಗಳಲ್ಲಿ ಹತ್ತರಲ್ಲಿ ಆರು ಮಂದಿ ದೃಷ್ಟಿ ದೋಷ ಹೊಂದಿದ್ದರೂ ಕಣ್ಣಿನ ಬಗ್ಗೆ ಅಥವಾ ಕನ್ನಡಕಗಳನ್ನು ಬಳಸುವಲ್ಲಿ ಸ್ವಲ್ಪ ಆಸಕ್ತಿ ಕಡಿಮೆ ಅಥವಾ ಹೊಂದಿರುವುದಿಲ್ಲ.

ಇನ್ನು, ಕನ್ನಡಕಗಳನ್ನು ಯಾರು ಹೆಚ್ಚು ಉತ್ತಾದಿಸುತ್ತಾರೆ ? ಅಂತ ಕೇಳಿದರೆ, ಸಾಮಾನ್ಯ ಜನರೂ ಹೇಳುವುದು "ಲುಕ್ಸೋಟಿಕ್ಕಾ" ಅಂತಾನೆ. ಆದರೆ, ಪ್ರಡಾ, ಜಾರ್ಜಿಯೋ, ಆರ್ಮನಿ, ವರ್ಸೇಸ್, ಲೆನ್ಸ್​​​ ಕ್ರಾಪ್ಟರ್‍ಗಳ ಬಗ್ಗೆಯೂ ಪ್ರತಿಯೊಬ್ಬರೂ ಕೇಳಿರುವುದು ಸಹಜ. ಈ ಎಲ್ಲಾ ಬ್ರಾಂಡ್‍ಗಳ ಮಾಲೀಕತ್ವವನ್ನು ಲುಕ್ಸೋಟಿಕ್ಕಾ ಹೊಂದಿದೆ ಅಥವಾ ಅವುಗಳಿಗೆ ಸನ್‍ಗ್ಲಾಸ್‍ಗಳನ್ನು ಮತ್ತು ಪ್ರಿಸ್ಕ್ರಿಪ್ಷನ್ ಪ್ರೇಮ್‍ಗಳನ್ನು ಇದು ತಯಾರಿಸುತ್ತದೆ. "ಲುಕ್ಸೋಟಿಕ್ಕಾ ಗ್ರೂಪ್" ಇಟಾಲಿಯನ್ ಐವೇರ್ ಕಂಪನಿಯಾಗಿದ್ದು, 1961ರಲ್ಲಿ ಆರಂಭವಾಯಿತು. ವಿಶ್ವದ ಪ್ರಮುಖ ಐವೇರ್ ಬ್ರಾಂಡ್‍ಗಳ 80% ಷೇರುಗಳನ್ನು ಮಾರುಕಟ್ಟೆಯಲ್ಲಿ ಹೊಂದಿದೆ. ರೇ-ಬಾನ್, ಪಿರ್ಸೋಲ್, ಲೆನ್ಸ್‍ಕ್ರಾಫ್ಟ್, ಪರ್ಲಿ ವಿಷನ್ ಮೊದಲಾದ ಬ್ರಾಂಡ್‍ಗಳೂ ಸಹ ಇದೇ ಗ್ರೂಪ್‍ನ ಮಾಲೀಕತ್ವದಲ್ಲಿದೆ. ಅಷ್ಟೇ ಅಲ್ಲ, ಮಲ್ಟಿಟ್ಯೂಡ್ ಡಿಸೈನರ್ ಬ್ರಾಂಡ್‍ಗಳಾದ ಚಾನಲ್, ಪ್ರದಾ, ಜಾರ್ಜಿಯೋ, ಆರ್ಮನಿ, ಬರ್‍ಬೆರ್ರಿ, ವರ್ಸೇಸ್, ಡೋಲ್ಸ್, ಗಬ್ಬನ… ಮುಂತಾದವುಗಳಿಗೆ ಸನ್‍ಗ್ಲಾಸ್ ಹಾಗೂ ಪ್ರಿಸ್ಕ್ರಿಪ್ಷನ್ ಪ್ರೇಮ್‍ಗಳನ್ನೂ ತಯಾರಿಸುತ್ತದೆ. ಹಾಗಾಗಿ ಲುಕ್ಸೋಟಿಕ್ಕಾ ಸಂಸ್ಥೆಯು 7000ಕ್ಕೂ ಹೆಚ್ಚು ರೀಟೇಲ್ ಸ್ಟೋರ್‍ಗಳನ್ನು ಹಾಗೂ 2014ರಲ್ಲಿ 1.7 ಬಿಲಿಯನ್ ಡಾಲರ್ ಇಬಿಡಿಟಿಎ ಹೊಂದಿದೆ. ಲುಕ್ಸೋಟಿಕ್ಕಾ ಹೊರತುಪಡಿಸಿದರೆ ಸಫಿಲೋ, ಮಾಕೋನ್ ಮತ್ತು ಡಿರಿಗೋ ಕಂಪನಿಗಳು ಪ್ರಮುಖವಾಗಿದೆ.

ಆನ್‍ಲೈನ್ ದೇವತೆ

ಆನ್‍ಲೈನ್ ಮಾರುಕಟ್ಟೆ ಮತ್ತು ಪ್ರತಿಸ್ಪರ್ಧಿಯ ಬಗ್ಗೆ ಮಾತನಾಡುವುದಾದರೆ, ವಾರ್‍ಬೈ ಪಾರ್ಕರ್ ಮುಂಚೂಣಿಯಲ್ಲಿದೆ. 215 ಮಿಲಿಯನ್ ಡಾಲರ್ ಮೌಲ್ಯದಷ್ಟು ಮಾರಾಟ ಹೊಂದಿದ್ದ ಸಂಸ್ಥೆ ಏಪ್ರಿಲ್ ನಂತರದಲ್ಲಿ ವಿಶ್ವದಲ್ಲೇ 1.2 ಬಿಲಿಯನ್ ಡಾಲರ್‍ನಷ್ಟು ಹೆಚ್ಚಳವನ್ನು ಕಂಡಿರುವ ಆನ್‍ಲೈನ್ ಸನ್‍ಗ್ಲಾಸ್‍ಗಳ ಮಾರಾಟ ಸಂಸ್ಥೆಯಾದ ವಾರ್‍ಬೈ ಪಾರ್ಕರ್, ಬಹಳಷ್ಟು ಆನ್‍ಲೈನ್ ಗ್ರಾಹಕರನ್ನು ಹೊಂದಿದೆಯಲ್ಲೆ ಯುಎಸ್‍ಎನಲ್ಲಿ ಬಹಳಷ್ಟು ಮಾರಾಟ ಮಳಿಗೆಗಳಿವೆ. ಇದು ಗ್ರಾಹಕರಿಗಾಗಿಯೇ 100 ಡಾಲರ್ ಬೆಲೆಯ ಬ್ರಾಂಡೆಡ್ ಡಿಸೈನರ್ ಫ್ರೇಮ್‍ಗಳನ್ನೂ ಮಾರಾಟ ಮಾಡುತ್ತಿದೆ. ಹಾಗೆಯೇ, ಯುಎಸ್‍ಎನಲ್ಲಿ ಮಾರಾಟವಾಗುವ ಪ್ರತಿಯೊಂದು ಪ್ರತಿ ಪೇರ್ ಗ್ಲಾಸ್‍ಗಳಿಗೆ ಮುಂದುವರಿಯುತ್ತಿರುವ ದೇಶಗಳಲ್ಲಿ ಮತ್ತೊಂದು ಪೇರ್ ಅನ್ನು ಉಚಿತವಾಗಿ ನೀಡುವ ಇರಾದೆಯನ್ನೂ ಹೊಂದಿದೆ. ಒಟ್ಟಾರೆ, ಲುಕ್ಸೋಟಿಕ್ಕಾ ಕಂಪನಿ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಇಂದಿಗೂ ಹಲವರುಉ ಇದನ್ನೇ ಇಷ್ಟಪಡುತ್ತಾರೆ.

ಭಾರತದಲ್ಲಿ ಏನಾಗುತ್ತಿದೆ ?

ಭಾರತದಲ್ಲಿ ಅತಿ ಹೆಚ್ಚು ಬಹುಬಗೆಯ ರೀಟೇಲ್ ಸ್ಟೋರ್‍ಗಳನ್ನು ಹೊಂದಿರುವ ಮತ್ತು ಆಪ್ಟಿಕಲ್ ಪ್ರಾಡಕ್ಟ್ಸ್​ನ ಅತೀ ದೊಡ್ಡ ಮಾರಾಟ ಸಂಸ್ಥೆ ಎಂದರೆ ಜೆಕೆಬಿ ಆಪ್ಟಿಕಲ್ಸ್. ಕೋಲ್ಕತ್ತಾದಲ್ಲಿ ತನ್ನ ಮುಖ್ಯ ಕಚೇರಿ ಹೊಂದಿರುವ ಈ ಸಂಸ್ಥೆಯು 60ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹಾಗೂ 600ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದೆ. ಅಲ್ಲದೆ, ಬೆನ್ ಪ್ರಾಂಕ್ಲಿನ್‍ನಂತಹ ಮುಂಬರುತ್ತಿರುವ ಬಹಳಷ್ಟು ಆಪ್ಟಿಕಲ್ ರಿಟೇಲ್ ಚೇನ್‍ಗಳು ಭಾರತದಲ್ಲಿವೆ. ಆನ್‍ಲೈನ್​​ನಲ್ಲಿ ಲೆನ್ಸ್​​​ಕಾರ್ಟ್ ಪ್ರಮುಖ ಕಂಪನಿಯಾಗಿದ್ದು, 2010ರಲ್ಲಿ ವಾಲ್ಯೋ ಸಂಸ್ಥೆಯಡಿ ಆರಂಭವಾದ ಜಿವೆಲ್ಸ್ಕಾರ್ಟ್, ಬ್ಯಾಗ್‍ಸ್ಕಾರ್ಟ್ ಮತ್ತು ವಾಚ್‍ಕಾರ್ಟ್‍ಗಳೊಂದಿಗೆ ಆರಂಭವಾಯಿತು. ಆದರೆ, ಜನವರಿ 2015ರಲ್ಲಿ 135ಕೋಟಿಯನ್ನೂ ಮೀರಿದ ಸಂಸ್ಥೆ, ಪ್ರಸ್ತುತ ಕೇವಲ ಲೆನ್ಸ್​​​ಕಾರ್ಟ್ ಬಗ್ಗೆ ಮಾತ್ರ ಗಮನಹರಿಸಲು ನಿರ್ಧರಿಸಿ ಉಳಿದ ಎಲ್ಲಾ ಪೋರ್ಟಲ್‍ಗಳನ್ನು ಮುಚ್ಚಿತು. 60 ನಗರಗಳಲ್ಲಿ 100ಕ್ಕೂ ಹೆಚ್ಚು ಬ್ರಾಂಡೆಡ್ ಶಾಪ್‍ಗಳನ್ನು ಹೊಂದಿರುವ ಲೆನ್ಸ್​​​ಕಾರ್ಟ್, ಆನ್‍ಲೈನ್ ಚಾನೆಲ್‍ನೊಂದಿಗೆ ಆಫ್‍ಲೈನ್ ನಲ್ಲೂ ಮಾರಾಟ ಹೆಚ್ಚಿಸುವ ಯೋಜನೆಯಲ್ಲಿದೆ.

ಇದು 3ಡಿ ಝಮಾನ

ಲೆನ್ಸ್​​ಕಾರ್ಟ್ ಇತ್ತೀಚೆಗೆ ತನ್ನ ವೆಬ್‍ಸೈಟ್‍ನಲ್ಲಿ ವೈಶಿಷ್ಟ್ಯತೆಗಳನ್ನೊಳಗೊಂಡ `3ಡಿ ಟ್ರೈ ಆನ್' ಬಿಡುಗಡೆ ಮಾಡಿದ್ದು, ಇಲ್ಲಿ ಬಳಕೆದಾರ ತನ್ನ ಅಭಿರುಚಿಗೆ ತಕ್ಕಂತಹ ಪ್ರೇಮ್‍ಗಳನ್ನು ಟ್ರೈ ಮಾಡಬಹುದು. ಇಲ್ಲಿನ ಟೂಲ್, ಬಳಕೆದಾರನು ಫ್ರಂಟ್ ಕ್ಯಾಮರಾ ಮುಂದೆ ತನ್ನ ಮುಖವನ್ನು ಚಲಿಸಿ ವೈಶಿಷ್ಟ್ಯತೆಗಳ ವಿವರಗಳನ್ನು ದಾಖಲಿಸುವಂತೆ ಕೇಳಲಾಗುತ್ತದೆ. ನಂತರ ಬಳಕೆದಾರ ತನಗೆ ಬೇಕಾದ ಪ್ರೇಮ್‍ಗಳನ್ನು ಹಾಕಲು ಈ ಟೂಲ್ ಅನುವುಮಾಡಿಕೊಡುವುದಲ್ಲದೆ, ಸ್ಕ್ರೀನ್ ಮೇಲೆ ರಿಸಲ್ಟ್​​​ಗಳನ್ನೂ ಡಿಸ್‍ಪ್ಲೇ ಮಾಡುತ್ತದೆ.

ಲ್ಯಾನ್ಸ್​​ಕಾರ್ಟ್

ಆಪ್ಟಿಕಲ್ ಉದ್ಯಮದಲ್ಲಿ ಬಹಳಷ್ಟು ಪೈಪೋಟಿಗಾಗಿ ನೂತನ ಸಾಹಸಗಳು ನಡೆಯುತ್ತಿವೆ. ಇದರಲ್ಲಿ ಕಳೆದ ವರ್ಷ ಗ್ಲಾಸಿಕ್ ಮತ್ತು ಜಾರ್ಜಿಯೋ ಆನ್‍ಲೈನ್ ಮಾರಾಟಕ್ಕೆ ಲಗ್ಗೆ ಇಟ್ಟಿವೆ.

ಕೈಲಾಶ್ ಮತ್ತು ದಿವೇಶ್ ನಿಚಾನಿ ಅವರಿಂದ ಆರಂಭವಾದ ಗ್ಲಾಸಿಕ್, ರೀಟೇಲ್ ಆಪ್ಟಿಕಲ್ ಡಿಸೈನಿಂಗ್ ಹೊಂದಿದೆ. ಸಧ್ಯಕ್ಕೆ, ಆನ್‍ಲೈನ್‍ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿ, ವರ್ಚುಯಲ್ ಟ್ರೈ-ಆನ್ ಫೀಚರ್ ಕೂಡ ಹೊಂದಿದೆ. "ನಮ್ಮ ವೆಬ್‍ಸೈಟ್, ಅಲ್ಲಿನ ಪ್ರಾಡಕ್ಟ್ಸ್ ಮತ್ತು ಸರ್ವಿಸ್‍ಗಳಿಗೆ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದುವರೆಗೂ ಯಾವುದೇ ಪ್ರಾಡಕ್ಟ್​ಗಳು ಹಿಂತಿರುಗಿ ಬಂದಿಲ್ಲ" ಎನ್ನುತ್ತಾರೆ ಕೈಲಾಶ್.

ಇದೇ ವಿಭಾಗದಲ್ಲಿ ಕೇಶವ್ ಮತ್ತು ನಿಧಿ ಗುಪ್ತ ಅವರ ನೇತೃತ್ವದಲ್ಲಿ ಫೀಚರ್ಡ್ ಜಾರ್ಜಿಯೇ ಆರಂಭವಾಗಿ ಪ್ರತಿ ತಿಂಗಳು 45% ಬೆಳವಣಿಗೆ ಹೊಂದುತ್ತಿದೆ. " ನಾವು ಈ ಕಾರ್ಯ ಆರಂಭಿಸಿದ ನಾಲ್ಕು ತಿಂಗಳಲ್ಲಿ 1.8% ನಿಂದ 3.2% ವರೆಗೆ ಸಿಟಿಆರ್ ಹೆಚ್ಚಿಸಲಾಗಿದೆ. ಆರಂಭದಲ್ಲಿ 30 ಮಾದರಿಗಳಿದ್ದವು. ಪ್ರಸ್ತುತ ಡಿಸೈನರ್ ಕಲೆಕ್ಷನ್ಸ್​​​ನಲ್ಲಿ 100ಕ್ಕೂ ಹೆಚ್ಚು ಮಾದರಿಗಳನ್ನು ಸೇರಿಸಿದ್ದೇವೆ. ಸನ್‍ಗ್ಲಾಸ್ ಮತ್ತು ಪವರ್ ಗ್ಲಾಸ್‍ಗಳನ್ನೂ ನಮ್ಮ ಕಲೆಕ್ಷನ್ಸ್​​​ಗಳಿಗೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ" ಎನ್ನುತ್ತಾರೆ ನಿಧಿ. 2015ರ ಕೊನೆಗೆ ತಿಂಗಳಿಗೆ 1000 ಆರ್ಡರ್‍ಗಳನ್ನು ಪಡೆದು 10 ಲಕ್ಷ ರೂ. ಆದಾಯ ಗಳಿಸುವ ಗುರಿಯನ್ನು ಜಾರ್ಜಿಯೋ ಹೊಂದಿದೆ.

ಫ್ಯೂಚರ್ "ವಿಷನ್"

ಕಳೆದ ಕೆಲವು ಶತಮಾನಗಳಿಂದ ಕೆಲವೇ ಕಂಪನಿಗಳಿಂದ ಆಳಲ್ಪಡುತ್ತಿದ್ದ ಐವೇರ್ ಉದ್ಯಮ ಇಂದು ಬಹಳಷ್ಟು ಬದಲಾವನೆ ಕಾಣುತ್ತಿದೆ. ಇತರ ಕ್ಷೇತ್ರಗಳಂತೆ ಕನ್ನಡಕಗಳ ತಯಾರಿಕೆ ಉದ್ಯಮದಲ್ಲಿ ಇದುವರೆಗೂ ರಾಜರಂತೆ ಮೆರೆಯುತ್ತಿದ್ದ ಉದ್ಯಮಿಗಳನ್ನು ಹಿಮ್ಮೆಟ್ಟಲು ತಂತ್ರಜ್ಞಾನ ಬಳಸಿ ನೂತನ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಐವೇರ್ ಬಳಕೆಯನ್ನು ಹೆಚ್ಚಿಸುವುದು ಮತ್ತು ಗ್ರಾಹಕರಿಗೆ ಉತ್ತಮ ಅನುಭವ ನೀಡುವುದೇ ಇದರ ಉದ್ದೇಶ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಿಲಿಯನ್‍ನಷ್ಟು ಜನರು ತಮ್ಮ ಕಣ್ಣಿನ ಆರೈಕೆ ಮತ್ತು ಆರಂಭಿಕ ತೊಂದರೆಗಳ ಬಗ್ಗೆ ತಿಳಿದಿರುವುದಿಲ್ಲ. ಅಂತಹವರಿಗೆ, ಫೋರಸ್‍ನ ಪ್ರಮುಖ ಉತ್ಪನ್ನವಾದ ತ್ರಿನೇತ್ರ ಒಂದು ಸಮಗ್ರವಾದ, ಚುರುಕಾದ, ಚಿಕ್ಕದಾದ ಕಣ್ಣಿನ ತಪಾಸಣಾ ಸಾಧನ ಕೇವಲ 5 ನಿಮಿಷಗಳಲ್ಲಿ ಕಣ್ಣಿನ ಸಾಮಾನ್ಯ ತೊಂದರೆಗಳನ್ನು ತಪಾಸಣೆ ಮಾಡಬಲ್ಲದು. ಇಂತಹ ಕಂಪನಿಗಳು ಕನ್ನಡಕಗಳನ್ನು ನೀಡುವ ಮಾರುಕಟ್ಟೆಗಳು ದೇಶದಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತವೆ.

Related Stories