ಬಹುಪಯೋಗಿ ಬಾದಾಮಿ ಎಣ್ಣೆ-`ಪಹಾಡಿ ಲೋಕಲ್'ನ ಸಂಶೋಧನೆ

ಟೀಮ್​ ವೈ.ಎಸ್​​.

ಬಹುಪಯೋಗಿ ಬಾದಾಮಿ ಎಣ್ಣೆ-`ಪಹಾಡಿ ಲೋಕಲ್'ನ ಸಂಶೋಧನೆ

Monday November 09, 2015,

3 min Read

ಜೆಸ್ಸಿಕಾ ಜಾಯ್ನ್ ಅವರಿಗೆ ತಮ್ಮ ಉದ್ಯಮ ಪಯಣದ ವೈಫಲ್ಯದ ಬಗ್ಗೆ ನಾಚಿಕೆಯಿಲ್ಲ. ತಮ್ಮ 21ನೇ ವಯಸ್ಸಿನಲ್ಲೇ ಜೆಸ್ಸಿಕಾ ಮ್ಯಾಗಝೀನ್ ಒಂದನ್ನು ಆರಂಭಿಸಿದ್ರು. ಆದ್ರೆ ಅದು ಶೋಚನೀಯ ಸೋಲು ಕಂಡಿತ್ತು. ನಂತರ ಅವರು ಕೈಹಾಕಿದ್ದು `ಶಾರ್ಕ್‍ಫಿನ್'ಗೆ. ಅಂದ್ರೆ ಯಶಸ್ವಿ ಹಾಗೂ ಸೃಜನಶೀಲ ವ್ಯಾಪಾರಕ್ಕೆ ಪರಿಹಾರ ಕೊಡಬಲ್ಲ ಕಂಪನಿಯೊಂದನ್ನು ಶುರು ಮಾಡಿದ್ರು. ಜೆಸ್ಸಿಕಾಗೆ ವಿನ್ಯಾಸದ ಬಗ್ಗೆ ಚೆನ್ನಾಗಿ ತಿಳಿದಿತ್ತು. ಸೌಂದರ್ಯ ಜಗತ್ತಿನ ಅರಿವಿತ್ತು. ಉತ್ಪಾದನೆ ಹಾಗೂ ಸಂಪಾದನೆ ಬಗೆಗೂ ಆಳವಾದ ಜ್ಞಾನವಿತ್ತು. ಪರಿಣಾಮ `ಶಾರ್ಕ್‍ಫಿನ್' ಅತ್ಯುತ್ತಮ ಬ್ರಾಂಡ್‍ಗಳನ್ನು ಸೃಷ್ಟಿಸಿತ್ತು. ಸರಿಸಾಠಿಯಿಲ್ಲದಂಥ ಶ್ರೇಷ್ಠ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿತ್ತು. ಆದ್ರೆ ಬರ್ತಾ ಬರ್ತಾ ಜೆಸ್ಸಿಕಾಗೆ ವಿಭಿನ್ನವಾದದ್ದನ್ನೇನಾದ್ರೂ ಮಾಡಬೇಕೆಂಬ ಹಂಬಲ ಹೆಚ್ಚಾಯ್ತು. `ಶಾರ್ಕ್‍ಫಿನ್' ಬಗ್ಗೆ ಜೆಸ್ಸಿಕಾಗೆ ಹೆಮ್ಮೆಯಿದೆ. ಆದ್ರೆ ಅವರ ವಿನೂತನ ಉದ್ಯಮ `ಪಹಾಡಿ ಲೋಕಲ್' ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿದೆ.

image


ಹಿಮಾಲಯದ ವಿಶಿಷ್ಟ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಗುರುತಿಸಿ, ಅವನ್ನು ಸಂಗ್ರಹಿಸಲಾಗುತ್ತೆ. ಅದನ್ನು ಸುಂದರವಾಗಿ ಪ್ಯಾಕ್ ಮಾಡುವ ಮೂಲಕ ಪರ್ವತಗಳ ವಿಶೇಷತೆಯನ್ನು ಪಹಾಡಿ ಲೋಕಲ್ ನಗರಗಳಿಗೆ ಪಸರಿಸುತ್ತಿದೆ. ಲಾಜಿಸ್ಟಿಕ್ಸ್, ಗುಣಮಟ್ಟ ಮತ್ತು ಪ್ಯಾಕೇಜಿಂಗ್ ಸರಳ ಪ್ರಕ್ರಿಯೆ ಎನಿಸಿದ್ರೂ ಅಂದುಕೊಂಡಷ್ಟು ಸುಲಭವಲ್ಲ. ಗುಣಮಟ್ಟ ಹಾಗೂ ಉತ್ಪನ್ನದ ಶುದ್ಧತೆ ಬಗ್ಗೆ ಗಮನಹರಿಸಬೇಕು. ರಿಜಿಸ್ಟ್ರೇಶನ್, ದಾಖಲೆ ಮತ್ತು ಟೆಸ್ಟಿಂಗ್ ಕೂಡ ಅನಿವಾರ್ಯ. ನಮ್ಮ ಗ್ರಾಹಕರು ಎಂಬ ಅನುಭೂತಿಯೊಂದಿಗೆ ಪಹಾಡಿ ಲೋಕಲ್ ಕೆಲಸ ಮಾಡ್ತಿದೆ.

ಜೆಸ್ಸಿಕಾ ಪಕ್ಕಾ ಸಿಟಿ ಹುಡುಗಿ. ಹುಟ್ಟಿ ಬೆಳೆದದ್ದೆಲ್ಲ ಮುಂಬೈನಲ್ಲಿ. ನಂತರ ಕೆಲ ಕಾಲ ಶಿಮ್ಲಾಕ್ಕೆ ಶಿಫ್ಟ್ ಆದ್ರು. ಅಲ್ಲಿ ಬಾದಾಮಿ ಎಣ್ಣೆಯ ಪ್ರಯೋಜನಗಳನ್ನು ಪತ್ತೆ ಮಾಡಿದ್ರು. ಸಮಯ ಕಳೆದಂತೆಲ್ಲ ಅವರ ಸಂವೇದನೆ ಕೃತಕ ವಸ್ತುಗಳಿಂದ ನೈಸರ್ಗಿಕವಾಗಿ ಸಂಸ್ಕರಿಸಿದ ಉತ್ಪನ್ನಗಳತ್ತ ಸಾಗಿತ್ತು. ಶುದ್ಧ ಮತ್ತು ಹದವಾದ ಉತ್ಪನ್ನಗಳೆಡೆಗೆ ಮನಸ್ಸು ಆಕರ್ಷಿತವಾಗಿತ್ತು. ಕನಿಷ್ಠ ಪರಿಸರೀಯ ಪ್ರಭಾವ ಹೊಂದಿರುವ ವಸ್ತುಗಳನ್ನೇ ಬಳಸಬೇಕು, ಅದರ ಫಲಿತಾಂಶದಲ್ಲಿ ಖಾತರಿಯಿಬೇಕೆಂದು ಜೆಸ್ಸಿಕಾ ಅವರಿಗೆ ಅನಿಸಿತ್ತು. ಬಾದಾಮಿ ಎಣ್ಣೆಯನ್ನು ಆಧ್ರ್ರಕವಾಗಿ, ನೋವು ನಿವಾರಣೆಗಾಗಿ, ಕೂದಲಿಗೆ ಮತ್ತು ಚರ್ಮದ ಕಿರಿಕಿರಿ ಇವೆಲ್ಲದಕ್ಕೂ ಜೆಸ್ಸಿಕಾ ಬಳಸಿದ್ರು. ಅದರಿಂದ ಸಿಕ್ಕ ಪರಿಣಾಮವನ್ನು ನೋಡಿ ಅವರೇ ನಿಬ್ಬೆರಗಾಗಿದ್ರು. ಕೂಡಲೇ ಬಾದಾಮಿ ಎಣ್ಣೆ ಬಗ್ಗೆ ಮತ್ತಷ್ಟು ಸಂಶೋಧನೆ ಶುರು ಮಾಡಿದ್ರು. ಬಾದಾಮಿ ಎಣ್ಣೆಯಲ್ಲಿ ಕ್ಯಾನ್ಸರ್ ನಿವಾರಕ ಅಂಶಗಳಿವೆ ಅನ್ನೋನ್ನು ಜೆಸ್ಸಿಕಾ ಪತ್ತೆ ಮಾಡಿದ್ರು. ಬಹುಪಯೋಗಿ ಬಾದಾಮಿ ಎಣ್ಣೆಯ ಬಗ್ಗೆ ಜಗತ್ತಿಗೆ ತಿಳಿಸಲೇಬೇಕೆಂಬ ಬಯಕೆ ಅವರಿಗಿತ್ತು.

image


ಪಹಾಡಿ ಲೋಕಲ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಇದು ಸಕಾಲ ಎಂದು ತೀರ್ಮಾನಿಸಿದ ಜೆಸ್ಸಿಕಾ, ಕಾಂತಿವರ್ಧಕ ಕೈಗಾರಿಕೆಯನ್ನೇ ಗುರಿಯಾಗಿಟ್ಟುಕೊಂಡು ನೈಸರ್ಗಿಕ ಹಾಗೂ ರಾಸಾಯನಿಕ ರಹಿತ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ರು. ಪಹಾಡಿ ಲೋಕಲ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಳೆದ ಒಂದು ವರ್ಷದಲ್ಲಿ ಜೆಸ್ಸಿಕಾ ಗ್ರಾಹಕರ ಅಗತ್ಯಗಳನ್ನು ಅರಿತುಕೊಂಡಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರಿಂದ್ಲೂ ಅವರಿಗೆ ಬೆಂಬಲ ಸಿಕ್ಕಿದೆ. ಮಿಸ್ ಮಾಲಿನಿ, ಬ್ರೌನ್ ಪೇಪರ್ ಬ್ಯಾಗ್‍ನಂತಹ ಉತ್ಪನ್ನಗಳು ಪಹಾಡಿ ಲೋಕಲ್ ಬಗ್ಗೆ ಒಳ್ಳೆಯ ಸಂದೇಶ ಸಾರುತ್ತಿವೆ. ಹೋಟೆಲ್, ಸ್ಪಾ, ಸಲೂನ್, ಆರೋಗ್ಯ ಕೇಂದ್ರಗಳು ಮತ್ತು ದೊಡ್ಡ ದೊಡ್ಡ ಅಂಗಡಿಗಳ ಜೊತೆ ಪಹಾಡಿ ಲೋಕಲ್ ಒಪ್ಪಂದ ಮಾಡಿಕೊಳ್ತಿದೆ.

ಜೆಸ್ಸಿಕಾ ಅವರ ಪ್ರಕಾರ ಪೂರೈಕೆ ಸರಣಿಗೆ ಬೇಡಿಕೆಗಿಂತ ಮೊದಲ ಆದ್ಯತೆಯಿದೆ. ಹಿಮಾಲಯದ ತಪ್ಪಲಲ್ಲಿ ಹಣ್ಣುಗಳೇ ದೊರೆಯದೇ ಇದ್ದಲ್ಲಿ, ಅಥವಾ ಇನ್ಯಾವುದೇ ಸಮಸ್ಯೆ ಉಂಟಾದಲ್ಲಿ ತಮಗೆ ಹಿನ್ನಡೆ ಖಚಿತ ಎನ್ನುತ್ತಾರೆ ಜೆಸ್ಸಿಕಾ. ಜೈವಿಕವಾಗಿ ಕಾರ್ಯನಿರ್ವಹಿಸುವುದೇ ಅವರ ಉದ್ದೇಶ. ಮಾರುಕಟ್ಟೆ ಹಾಗೂ ಪೂರೈಕೆ ಸರಣಿ ನಡುವೆ ಸಮತೋಲನ ಕಾಪಾಡಲು ಅವರು ಯತ್ನಿಸುತ್ತಿದ್ದಾರೆ. ಇದು ಪಹಾಡಿ ಲೋಕಲ್‍ಗೆ ಆರಂಭಿಕ ಹಂತ ಅನ್ನೋದೇನೋ ನಿಜ. ಆದ್ರೆ ಈಗಾಗ್ಲೇ ಪಹಾಡಿ ಲೋಕಲ್ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಮೂಲಸೌಕರ್ಯಗಳನ್ನು ಕಲ್ಪಿಸಿದೆ. ಶಿಮ್ಲಾ ಮೂಲದ ಎನ್‍ಜಿಓ ಜೊತೆ ಪಹಾಡಿ ಲೋಕಲ್ ಒಪ್ಪಂದ ಮಾಡಿಕೊಂಡಿದೆ. ಮಹಿಳಾ ಸಬಲೀಕರಣ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಿದೆ.

image


ತಮ್ಮ ಪ್ರತಿಯೊಂದು ಉದ್ಯಮದಲ್ಲೂ ಕೌಶಲ್ಯ, ಗ್ರಾಹಕರ ಅನುಭವ, ಕಾಳಜಿ ಇದ್ದೇ ಇದೆ. ಅದೇ ತಮ್ಮ ಕೆಲಸದ ಕೇಂದ್ರಬಿಂದು ಎನ್ನುತ್ತಾರೆ ಜೆಸ್ಸಿಕಾ. ಮ್ಯಾಗಝೀನ್ ಯಶಸ್ವಿಯಾಗದೇ ಇದ್ರೂ ತಮ್ಮ ಉದ್ಯಮ ಪಯಣದ ಆರಂಭಕ್ಕೆ ವೇದಿಕೆಯಾಗಿತ್ತು. ಶಾರ್ಕ್‍ಫಿನ್ ಕೂಡ ಸೃಜನಶೀಲತೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಡಿಯಾಗೋ, ವಯೋಕಾಮ್ 18, ರಾಜಸ್ತಾನ ರಾಯಲ್ಸ್, ಪೆರ್ನಾರ್ಡ್ ರಿಕಾರ್ಡ್‍ನಂತಹ ಕಂಪನಿಗಳ ಜೊತೆ ಕೆಲಸ ಮಾಡಲು ಚಾನ್ಸ್ ಸಿಕ್ಕಿದ್ದು ತಮ್ಮ ಅದೃಷ್ಟ ಅನ್ನೋದು ಅವರ ಅಭಿಪ್ರಾಯ. ಮಕ್ಕಳ ಬಗೆಗಿರುವ ಪ್ರೀತಿಯಿಂದಾಗಿ ಜೆಸ್ಸಿಕಾ ಶೈನಿ ಹ್ಯಾಪಿ ಸಂಸ್ಥೆಯನ್ನು ಹುಟ್ಟುಹಾಕಿದ್ರು. ಪಹಾಡಿ ಲೋಕಲ್ ಮೂಲಕ ಪರಿಪಕ್ವತೆ ಮತ್ತು ಜವಾಬ್ದಾರಿಯ ಅರಿವಾಯ್ತು ಅನ್ನೋದು ಜೆಸ್ಸಿಕಾರ ನೇರ ನುಡಿ. ಪಹಾಡಿ ಲೋಕಲ್ ಒಂದು ನೈಜ ಬ್ರ್ಯಾಂಡ್. ಸ್ಥಳೀಯವಾದ್ದು, ಶುದ್ಧವಾದದ್ದು..ಗ್ರಾಹಕರಿಗೆ ನಮ್ಮ ಉತ್ಪನ್ನಗಳಿಂದ ಒಳ್ಳೆಯದಾಗಬೇಕು ಅನ್ನೋದು ಪಹಾಡಿ ಲೋಕಲ್ ತತ್ವ. ಪ್ರತಿದಿನವೂ ಕನಸು ಕಾಣಬೇಕು, ಅದನ್ನು ನನಸಾಗಿಸಲು ಪ್ರಯತ್ನ ಪಟ್ಟಾಗ ಮಾತ್ರ ಯಶಸ್ಸು ಸಾಧ್ಯ ಎನ್ನುತ್ತಾರೆ `ಪಹಾಡಿ ಲೋಕಲ್'ನ ಸಾರಥಿ ಜೆಸ್ಸಿಕಾ.