ಮೇಡ್ ಇನ್ ಇಂಡಿಯಾ - ವಿಶ್ವದ ಮೊದಲ ಆಟೋಮ್ಯಾಟಿಕ್ ಟೇಬಲ್ ಟಾಪ್ ದೋಸೆ ತಯಾರಿಸೋ ಯಂತ್ರ – ದೋಸಾ ಮ್ಯಾಟಿಕ್..

ಟೀಮ್ ವೈ ಎಸ್ ಕನ್ನಡ

ಮೇಡ್ ಇನ್ ಇಂಡಿಯಾ - ವಿಶ್ವದ ಮೊದಲ ಆಟೋಮ್ಯಾಟಿಕ್ ಟೇಬಲ್ ಟಾಪ್ ದೋಸೆ ತಯಾರಿಸೋ ಯಂತ್ರ – ದೋಸಾ ಮ್ಯಾಟಿಕ್..

Tuesday December 22, 2015,

5 min Read

ದಕ್ಷಿಣ ಭಾರತದ ದೋಸೆಯ ರುಚಿ ವಿಶ್ವದಾದ್ಯಂತ ಪರಿಚಿತವಾಗಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯಂತಹ ಪದಾರ್ಥಗಳಿಂದ ಮಾಡಲ್ಪಡುವ ಈ ದೋಸೆ ಉಗಮವಾದದ್ದು, ಕರ್ನಾಟಕದ ದೇವಾಲಯಗಳ ನಗರ ಉಡುಪಿಯಲ್ಲಿ. ದೋಸೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವಿಧಗಳಿವೆ. ದೋಸೆ ಸಾಮಾನ್ಯವಾಗಿ ಆಗಿಂದಾಗ್ಗೆ ತಯಾರು ಮಾಡಿಕೊಂಡು ತಿನ್ನಬಹುದಾದಂತಹ ತಿಂಡಿಯಾಗಿದೆ. ಆದರೆ ಬೆಂಗಳೂರು ಮೂಲದ “ಮುಕುಂದ ಫುಡ್ಸ್” ಈ ಒಂದು ಚಟುವಟಿಕೆಯನ್ನೇ ಬದಲಾಯಿಸಿದೆ ಎಂದು ಹೇಳಬಹುದು. ಅದೇನೆಂದು ತಿಳಿಯುವ ಕುತೂಹಲಕ್ಕಾಗಿ ಈ ಸ್ಟೋರಿ ..

ಈಶ್ವರ್ ವಿಕಾಸ್... ಇವರು ಎಸ್.ಆರ್.ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ. ಒಮ್ಮೆ ದೆಹಲಿಯ ಒಂದು ರೆಸ್ಟೋರೆಂಟ್‍ಗೆ ಭೇಟಿ ನೀಡಿದಾಗ ದೋಸೆ ಆರ್ಡರ್ ಮಾಡಿದರು. ಆಗ ಅವರು ಇದ್ದಕ್ಕಿದ್ದಂತೆ ಆಶ್ಚರ್ಯಗೊಂಡಿದ್ದನ್ನು ಈಗಲೂ ನೆನೆಸಿಕೊಳ್ಳುತ್ತಾರೆ. ಏಕೆಂದರೆ ಅದರ ಬೆಲೆ 110 ರೂಪಾಯಿಯಾಗಿತ್ತು. ಇದೇ ನಮ್ಮ ದಕ್ಷಿಣ ಭಾರತದ ಹೋಟೆಲ್‍ಗೆ ಹೋಲಿಸಿದರೆ ಅತ್ಯಂತ ದುಬಾರಿಯಾದ್ದನ್ನು ಕಂಡರು. ನಾವು ಇಲ್ಲಿ ಮತ್ತೊಂದನ್ನು ಗಮನಿಸಲೇಬೇಕಾದ ಅಂಶವೊಂದಿದೆ. ಅದೇನೆಂದರೆ ಮೆಕ್‍ಡೊನಾಲ್ಡ್ ನಲ್ಲಿ ಬರ್ಗರ್ ಅಥವಾ ಕೆಎಫ್‍ಸಿಯ ಚಿಕನ್ ದೇಶದ ಯಾವುದೇ ಮೂಲೆಯಲ್ಲಿ ಆರ್ಡರ್ ಮಾಡಿದರೂ ಅದರ ಬೆಲೆ ಒಂದೇ ಆಗಿರುತ್ತದೆ ಎಂದು ಮನವರಿಕೆ ಮಾಡಿಕೊಡುತ್ತಾರೆ ಈಶ್ವರ್.

image


ಇದಕ್ಕೆ ಉತ್ತರ ತುಂಬಾ ಸರಳವಾಗಿದೆ ಎನ್ನಬಹುದು ಪಿಜ್ಜಾ, ಬರ್ಗರ್‍ಗಳನ್ನು ರೆಡಿಮೇಡ್ ಆಗಿ ತಯಾರು ಮಾಡುವ ಯಂತ್ರಗಳು ಸಾಕಷ್ಟು ಬಂದಿವೆ. ಆದರೆ ಭಾರತೀಯ ತಿಂಡಿಗಳಾದ ದೋಸೆ ಮತ್ತು ಪೂರಿಯಂತಹ ತಿಂಡಿಗಳ ಯಂತ್ರಗಳಿಂದಲ್ಲದೇ ಮಾನವ ನಿರ್ಮಿತವಾದ ತಿಂಡಿಗಳು ಎಂದು ಹೇಳಬಹುದು.

ದೋಸೆ ಅಥವಾ ಪೂರಿ ತಮ್ಮ ಕೈ ಚಳಕದಿಂದ ಮಾಡಲ್ಪಟ್ಟರೆ, ಪಿಜಾó-ಬರ್ಗರ್‍ಗಳು ರೆಡಿಮೇಡ್ ಫುಡ್ ಗುಂಪಿಗೆ ಸೇರುತ್ತದೆ. ಒಮ್ಮೆ ಅಡುಗೆಯಲ್ಲಿ ರೆಡಿಮೇಡ್‍ಗಳಿಗೆ ಪ್ರಾಮುಖ್ಯತೆ ಕೊಟ್ಟಲ್ಲಿ ಆಹಾರ ತಮ್ಮತನವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಆದರೆ ಮನುಷ್ಯ ಫಾಸ್ಟ್ ಫುಡ್‍ನೆಡೆಗೆ ಹೆಚ್ಚು ಸೆಳೆಯಲ್ಪಡುತ್ತಾನೆ ಎನ್ನುತ್ತಾರೆ ಈಶ್ವರ್.


ಈಶ್ವರ್ ಕೆ ವಿಕಾಸ್, ಸಂಸ್ಥಾಪಕ ಮತ್ತು ಸಿಇಓ

ಈಶ್ವರ್ ಕೆ ವಿಕಾಸ್, ಸಂಸ್ಥಾಪಕ ಮತ್ತು ಸಿಇಓ


ಇದನ್ನು ಅರ್ಥಮಾಡಿಕೊಂಡ ಈಶ್ವರ್ 2011ರಲ್ಲಿ ತನ್ನ ಗೆಳೆಯ ಸುದೀಪ್ ಸಾಬಟ್‍ರೊಂದಿಗೆ ಕೂಡಿ ಬೆರಳ ತುದಿಯಿಂದ ಬಟನ್ ಪ್ರೆಸ್ ಮಾಡಿದರೆ ದೋಸೆ ಉತ್ಪಾದನೆಯಾಗುವಂತಹ ಮಷೀನನ್ನು ತಯಾರು ಮಾಡುವತ್ತ ಗಮನ ಹರಿಸಿದ್ರು. ಮೇ 2012ರಲ್ಲಿ ಒಂದು ಕಂಪೆನಿಯನ್ನು ತೆರೆಯಲು ಮುಂದಾದ ಆ ಇಬ್ಬರು ಯುವಕರು ತೃತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಈ ಯೋಜನೆಯನ್ನು ಇಂಡಿಯನ್ ಏಂಜಲ್ ನೆಟ್‍ವರ್ಕ್‍ನೊಂದಿಗೆ ಹಂಚಿಕೊಂಡರು. ಅವರು ಇನ್‍ಕ್ಯೂಬೇಟರ್(ಉಷ್ಣಪೋಷಕ ಯಂತ್ರ)ನ ಸಹಾಯದೊಂದಿಗೆ ತಮ್ಮ ದೋಸಾಮ್ಯಾಟಿಕ್ ಉತ್ಪನ್ನವನ್ನು ತಯಾರಿಸಲು 2013ರಲ್ಲಿ ಕಂಪೆನಿಯ ಸಹಕಾರವನ್ನು ಬಯಸಿದರು. ಈ ಯುವಕರನ್ನ ಬೆನ್ನು ತಟ್ಟಿ ಇಂಡಿಯನ್ ಏಂಜಲ್ ನೆಟ್‍ವರ್ಕ್, ಮುಕುಂದಾ ಫುಡ್ಸ್‍ನ ಮಾಲೀಕರಾದ ಹರಿ ಬಾಲಸುಬ್ರಮಣ್ಯಂ ಮತ್ತು ಪಿ ಗೋಪಿನಾಥರೊಂದಿಗೆ ಅಕ್ಟೋಬರ್2013ರಲ್ಲಿ ಕೈಜೋಡಿಸಿದರು.

ಈ ಮಷೀನು ಹೇಗೆ ಕಾರ್ಯನಿರ್ವಹಿಸುತ್ತದೆ.

ಪ್ರಾರಂಭದಲ್ಲಿ ಈ ಮಶೀನ್ 1ಮೀಟರ್ ಉದ್ದ ಹಾಗೂ 1ಮೀಟರ್ ಅಗಲವಾಗಿತ್ತು. ಈಗಿನ ಅಳತೆ ಕೇವಲ ಒಂದು ಮೈಕ್ರೋವೊವೆನ್‍ನಷ್ಟಿದೆ. ದೋಸಾಮ್ಯಾಟಿಕ್ ಕೇವಲ ಬಟನ್ ಪ್ರೆಸ್ ಮಾಡುವುದರೊಂದಿಗೆ ತಯಾರಾಗುತ್ತದೆ. ಅದರ ದಪ್ಪ ಮತ್ತು ಅಳತೆಗಳನ್ನು ನಮಗೆ ಹೇಗೆ ಬೇಕೋ ಹಾಗೆ ತಯಾರು ಮಾಡಿಕೊಳ್ಳಬಹುದು. ಸುಮಾರು 1ಮಿ.ಮೀ. ನಿಂದ ಹಿಡಿದು 6ಮಿ.ಮೀ.ವರೆಗೂ ದೋಸೆಯ ಮಂದಳತೆಗಳಲ್ಲಿ ಮಾಡಬಹುದಾಗಿದೆ.

ದೋಸಾ ಮ್ಯಾಟಿಕ್‍ನಿಂದ ತಯಾರಿಸಲ್ಪಟ್ಟ ದೋಸೆಗಳು

image


ಇಲ್ಲಿ ದೋಸೆ ಮಾಡಬೇಕೆಂದರೆ ಒಂದು ಕಂಟೈನರ್‍ನಲ್ಲಿ ದೋಸೆ ಹಿಟ್ಟು ಮತ್ತೊಂದರಲ್ಲಿ ಎಣ್ಣೆಯನ್ನು ಸೇರಿಸಬೇಕು. ಅದಾದ ನಂತರ ನಮಗೆ ಯಾವ ತರಹ ದೋಸೆ ಬೇಕೋ ಅಂದರೆ ತೆಳು, ಮಂದ, ಕ್ರಿಸ್ಪಿ, ಖಾಲಿ ದೋಸೆ ಇದರಲ್ಲಿ ಯಾವುದು ಬೇಕೋ ಅದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಬಟನ್ ಪ್ರೆಸ್ ಮಾಡಿದ ಮೇಲೆ ದೋಸೆ ಹಿಟ್ಟು ಸುತ್ತಲೂ ಹರಡಿ, ಎಷ್ಟು ಬೇಕೋ ಅಷ್ಟು ಎಣ್ಣೆಯೊಂದಿಗೆ ಕೇವಲ 60 ಸೆಕೆಂಡ್‍ಗಳಲ್ಲಿ ದೋಸೆ ತಯಾರಾಗುತ್ತದೆ. ಆ ನಂತರ ರುಚಿಯಾದ ಶುಚಿಯಾದ ದೋಸೆಯನ್ನು ಸವಿಯಬಹುದು.

ದಿನನಿತ್ಯದ ವಸ್ತುಗಳನ್ನು ನೋಡುತ್ತಾ ದೋಸಾಮ್ಯಾಟಿಕ್‍ನ ಡಿಸೈನ್ ಬಗ್ಗೆ ಪ್ರಭಾವಿತಗೊಂಡ ಈಶ್ವರ್ ವಿಕಾಸ್.

ದೋಸಾಮ್ಯಾಟಿಕ್‍ನ ಹಲವು ಭಾಗಗಳನ್ನು ವಿವಿಧ ವಸ್ತುಗಳಿಂದ ಪ್ರಭಾವಿತಗೊಂಡು ತಯಾರಿಸಲ್ಪಟ್ಟಿದೆ. ಉದಾಹರಣೆಗೆ ಬೈಕ್ ಸ್ಟ್ಯಾಂಡ್, ಸೂಟ್‍ಕೇಸ್‍ನ ಬೀಗ, ನೀರಿನ ಚಿಲುಮೆ, ಹಾಗೂ ಅಕ್ವೇರಿಯಂನಂತಹವುಗಳಿಂದ ದೋಸಾಮ್ಯಾಟಿಕ್ ತಯಾರಿಸಬಹುದೆಂಬ ಕಲ್ಪನೆ ಅಮೋಘವಾಗಿದೆ.

ಈ ಮಷೀನನ್ನು ತಯಾರಿಸಲು ಈ ಮೇಲಿನ ಅಂಶಗಳ ಪ್ರಭಾವ ಬಳಸಿ ತಯಾರಿಸಲು ಹಲವು ಅಡ್ಡಿ ಆತಂಕಗಳುಂಟಾದವು. ದೋಸೆ ಹಿಟ್ಟನ್ನು ಬಿಸಿ ಪ್ಲೇಟಿನ ಮೇಲೆ ಹರಡಲು ಆರ್ಕಿಮೆಡಿಸ್ ತತ್ವಗಳನ್ನು ಪಾಲಿಸಬೇಕಾಯಿತು. ಕಾಂಕ್ರೀಟನ್ನು ಮೇಲಂತಿಸ್ತಿಗೆ ಸಾಗಿಸಿ ಉಪಯೋಗಿಸುವ ಮಾದರಿಯನ್ನು ಇದಕ್ಕೂ ಅಳವಡಿಸಲಾಗಿದೆ. ಎಸಿ ಮೋಟಾರ್‍ನ ಶಕ್ತಿಯನ್ನು 1440 ನಿಂದ 1 ಮಾಡಲು ಐ.ಐ.ಟಿ ಪ್ರೊಫೆಸರ್ ಹಾಗೂ ವಿದ್ಯಾರ್ಥಿಗಳನ್ನು ಕೇಳಿದಾಗ ಇದು ಅಸಾಧ್ಯ ಎಂದು ತಿಳಿಸಿದರು . ಇನ್ನೂ ಒಬ್ಬರು ಸುಮಾರು 15-20ಸಾವಿರ ಬೆಲೆಯುಳ್ಳ ಫ್ರೀಕ್ವೆನ್ಸಿ ಡ್ರೈವ್‍ನ್ನು ಉಪಯೋಗಿಸಲು ಸೂಚಿಸಿದರು. ಕೊನೆಗೂ ಕೇವಲ 3500ರೂ.ಗಳ ಬೆಲೆಯುಳ್ಳ ಒಂದು ಬದಲಾವಣಾ ಫ್ರೀಕ್ವೆನ್ಸಿಯುಳ್ಳ ಡ್ರೈವ್‍ನ್ನು ಚೆನ್ನೈ ಮೂಲದ ಅಂಗಡಿ ಮಾಲೀಕರೊಬ್ಬರಿಂದ ಪಡೆದು ಅದಕ್ಕೆ ಅಳವಡಿಸಿದರು.

ನಮ್ಮಲ್ಲಿ ಇಚ್ಛಾಶಕ್ತಿಯೊಂದಿದ್ದರೆ ಎಂತಹ ಕಠಿಣ ಸವಾಲುಗಳನ್ನು ಬೇಕಾದರೂ ಎದುರಿಸಬಹುದು ಎನ್ನುತ್ತಾರೆ ಸುದೀಪ್. ಆ ನಂತರ ನಾವು ಮುಕುಂದ ಫುಡ್ಸ್‍ಗೆ ಭೇಟಿ ನೀಡಿ ದೋಸಾಮ್ಯಾಟಿಕ್‍ನ ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲಿಸಿದೆವು. ದೋಸಾಮ್ಯಾಟಿಕ್ ಯಂತ್ರವು ಸರಿಯಾದ ಕ್ರಮದಲ್ಲಿ ನಡೆಯುತ್ತಿರುವುದು ಕಂಡು ಬಂತು.

ಹೂಡಿಕೆ ಮತ್ತು ಬೇಡಿಕೆಯ ಪೂರೈಕೆ

ಈ ಯಂತ್ರವನ್ನು ಬಳಸಲು ಮುಂದೆ ಬಂದವರು ಮುಕುಂದ ಫುಡ್ಡೀಸ್ ನೊಂದಿಗೆ ಕೇವಲ ಕೆಲವರು ಮಾತ್ರ ಎಂದು ಹೇಳಬಹುದು. ಆದ್ದರಿಂದ ನಮ್ಮ ತಂಡವೇ ಅದರ ಉಪಯೋಗವನ್ನು ಬಳಸಿಕೊಳ್ಳಲು ಮುಂದಾಯಿತು. ನಮ್ಮ ಅದೃಷ್ಟಕ್ಕೆ ಒಂದಪ ಕಂಪೆನಿಯು ಬಂಡವಾಳ ಹೂಡಲು ಮುಂದಾಯಿತು. ನಂತರ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನ ಬಿಡುಗಡೆಗಾಗಿ ಹೆಚ್ಚಿನ ಒತ್ತಡಗಳು ಬರಲಾರಂಭಿಸಿತು ಎಂದು ಈಶ್ವರ್ ಹೇಳುತ್ತಾರೆ.


ಸುದೀಪ್ ಸಾಬಟ್ ಸಹ ಸಂಸ್ಥಾಪಕ ಮತ್ತು ಸಿಒಒ

ಸುದೀಪ್ ಸಾಬಟ್ ಸಹ ಸಂಸ್ಥಾಪಕ ಮತ್ತು ಸಿಒಒ


ಸಾಮಾನ್ಯವಾಗಿ ಒಂದು ಟಯೋಟಾದಂತಹ ಕಂಪೆನಿಯು ಉತ್ಪನ್ನದ ಮೂಲ ರೂಪ ಹೊರತರಲು 4-5 ವರ್ಷಗಳು ಬೇಕಾಗುತ್ತದೆ. ಹಾಗೆಯೇ ಆ ನಂತರ ಒಂದೆರಡು ವರ್ಷಗಳ ನಂತರ ಉತ್ಪನ್ನಗಳು ತಯಾರಾಗುತ್ತವೆ.

ಸುದೀಪ್ ಸಾಬಟ್‍ರ ಪ್ರಕಾರ ಅವರಲ್ಲಿ ಹೆಚ್ಚಿನ ಹಣವಾಗಲೀ ಅಥವಾ ಸಮಯವಾಗಲೀ ಇರಲಿಲ್ಲ. ಅದೇ ಸಂದರ್ಭದಲ್ಲೇ ಮೊದಲ ಮೂಲ ಉತ್ಪನ್ನದಿಂದ ಬಂಡವಾಳವೇರ್ಪಟ್ಟಿತು. ಆದರೂ ಮತ್ತೆರಡು ಪ್ರೋಟೋಟೈಪ್‍ಗಳನ್ನು ತಯಾರಿಸುವುದು ಪ್ರಮುಖವಾಗಿತ್ತು. ಹಾಗೆ ಮಾಡಿದರೆ ತಮ್ಮ ಉತ್ಪನ್ನಗಳು ಮಾರುಕಟ್ಟೆಗೆ ಬರಲು ಹೆಚ್ಚಿನ ಸಮಯ ಹಿಡಿಸುತ್ತದೆ. ಆ ನಂತರ ದೋಸಾಮ್ಯಾಟಿಕ್‍ನ ತಯಾರಿಕೆಯಲ್ಲಿ ಮುಕುಂದ ಫುಡ್ಸ್‍ಗೆ ಅತ್ಯಂತ ಹೆಚ್ಚಿನ ಲಾಭವನ್ನು ಹಾಗೂ ಸಮಯವನ್ನು ಉಳಿತಾಯ ಮಾಡಿಕೊಡುವಲ್ಲಿ ಯಶಸ್ವಿಯಾಯಿತು.

ಪ್ರಮುಖ ಕಂಪೆನಿಗಳೆಲ್ಲಾ ‘ಸ್ಟಾರ್ಟ್ ಅಪ್’ಗಳ ಮೇಲೆ ಹೆಚ್ಚೆಚ್ಚು ಬಂಡವಾಳ ಹೂಡಿದರೆ ಲಾಜಿಸ್ಟಿಕ್ಸ್, ಟ್ರಾಫಿಕ್, ಮ್ಯಾನುಫ್ಯಾಕ್ಚರಿಂಗ್, ವ್ಯಾಪಾರ, ವ್ಯವಹಾರಗಳ ಮೇಲೆ ಬೀರುವ ನೈಜ ಪರಿಣಾಮಗಳಿಗೆ ಹೆಚ್ಚಿನ ಅನುಕೂಲಗಳಾಗುತ್ತವೆ ಎಂದು ಈಶ್ವರ್‍ರವರು ಪ್ರಸ್ತಾಪಿಸುತ್ತಾರೆ.

ಸರ್ಕಾರಗಳೂ ಸಹ ‘ಸ್ಟಾರ್ಟ್ಅಪ್’ಗಳ ಬೆಳವಣಿಯಲ್ಲಿ ಸಹಕಾರ ನೀಡಿದಲ್ಲಿ ಉದ್ದಿಮೆ ಮತ್ತಷ್ಟು ಬೆಳೆಯಲು ಸಹಕಾರಿಯಾಗುತ್ತದೆ. ಸರ್ಕಾರದ ಎಲ್ಲಾ ಯೋಜನೆಗಳು ಕೇವಲ ಕಾಗದಗಳಲ್ಲೇ ಉಳಿಯುತ್ತದೆ. ನಮ್ಮ ತಂಡದ ವತಿಯಿಂದ ಸರ್ಕಾರದ ಅನುದಾನಕ್ಕಾಗಿ ಅನೇಕ ಅರ್ಜಿಗಳನ್ನು ಸಲ್ಲಿಸಲಾಯಿತು. ಸಣ್ಣ ಮಟ್ಟದ ಸಾಲಗಳಿಗಾಗಿ TIFAC-SIDBI ಗೆ ಅರ್ಜಿ ಸಲ್ಲಿಸಿದ್ದಾಗ್ಯೂ ಅದು ಕೇವಲ ಫೈಲುಗಳಲ್ಲೇ ಉಳಿದಿದೆ ಈಶ್ವರ್‍ರವರು ಎಂದು ನೆನಪಿಸಿಕೊಳ್ಳುತ್ತಾರೆ.

ಉದ್ದಿಮೆ ಮತ್ತು ಮಾರುಕಟ್ಟೆಯ ವ್ಯವಸ್ಥೆ

ಇಂದು ಭಾರತೀಯ ಆಹಾರ ಉದ್ದಿಮೆಯು ಶೇ. 32ರಷ್ಟು ಬೆಳವಣಿಗೆಯನ್ನು ಹೊಂದಿದೆ. ಸುಮಾರು 121 ಬಿಲಿಯನ್ ಡಾಲರುಗಳ ವ್ಯವಹಾರ ದೇಶದಲ್ಲಿ ನಡೆಯುತ್ತಿದೆ. ಆಹಾರ ಉದ್ದಿಮೆ ಅತಿ ದೊಡ್ಡ ಉದ್ದಿಮೆಗಳಲ್ಲಿ ಒಂದಾಗಿದೆ ಹಾಗೂ ಇದರ ಉತ್ಪಾದನೆ, ಬಳಕೆ ಮತ್ತು ರಫ್ತು ವ್ಯವಹಾರದಲ್ಲಿ 5ನೇ ರ್ಯಾಂಕ್ ಗಳಿಸಿದೆ. ಆಹಾರ ಉದ್ದಿಮೆಯಲ್ಲಿ ನೇರವಾಗಿ ಸುಮಾರು 13 ಮಿಲಿಯನ್ ಜನರಿಗೆ ಉದ್ಯೋಗಾವಕಾಶ ಹಾಗೂ 35 ಮಿಲಿಯನ್ ಪರೋಕ್ಷವಾಗಿ ಉದ್ಯೋಗವನ್ನು ದೊರಕಿಸಿಕೊಟ್ಟಿದೆ ಎಂದು ಹೇಳಬಹುದು. ಒಟ್ಟಾರೆ ಬೆಳವಣಿಗೆಯಲ್ಲಿ ಶೇ.14 ರಷ್ಟು ಉತ್ಪನ್ನಗಳು ಆಹಾರ ಉದ್ದಿಮೆಯಿಂದಲೇ ಬರುತ್ತಿದೆ. ಸುಮಾರು ಶೇ.13ರಷ್ಟು ರಫ್ತು ಹಾಗೂ ಶೇ. 6 ರಷ್ಟು ಬಂಡವಾಳವನ್ನು ಇದೇ ಉದ್ದಿಮೆಗಳಿಗೆ ಹೂಡಲಾಗುತ್ತಿದೆ. ಹೀಗೇ ಮುಂದುವರೆದರೆ ಶೇ. 10 ವಾರ್ಷಿಕ ಬೆಳವಣಿಗೆ ಕಂಡು 2015ರ ಕೊನೆಯ ಹಂತಕ್ಕೆ 194 ಬಿಲಿಯನ್ ಡಾಲರುಗಳ ವ್ಯವಹಾರ ನಡೆಯುವ ಸಂಭವವಿದೆ.

ದೋಸಾಮ್ಯಾಟಿಕ್ ಉದ್ದಿಮೆ ಸಣ್ಣ ರೆಸ್ಟೋರೆಂಟ್‍ಗಳಲ್ಲಿ ಬಳಸಿದಲ್ಲಿ ಹೆಚ್ಚಿನ ಮಾನವ ಸಂಪನ್ಮೂಲವಿಲ್ಲದೆ ಕೇವಲ ಮೆಶೀನಿನಿಂದಲೇ ಸುಮಾರು 500 ದೋಸೆಗಳನ್ನು ತಯಾರಿಸಬಹುದಾಗಿದೆ.

ದೋಸಾಮ್ಯಾಟಿಕ್‍ನ ತಯಾರಿಕೆಯ ತಂಡ

ಹಾರ್ಡ್‍ವೇರ್ ಸ್ಟಾರ್ಟ್‍ಟಪ್‍ನ ಸವಾಲುಗಳು

ನೌಕರರ ಆಯ್ಕೆ ಮತ್ತು ಅವರನ್ನು ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಕಾರ್ಮಿಕರ ಆಸಕ್ತಿಯು ಈ ಕಾರ್ಯದಲ್ಲಿ ತುಂಬಾ ಕಡಿಮೆ ಎಂದು ಹೇಳಬಹುದು. ಜೊತೆಗೆ ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದಾರೆ. ಅವರ ಮನವೊಲಿಕೆಯಂತೂ ದುಸ್ಸಾಹಸವೇ ಸರಿ ಎನ್ನುತ್ತಾರೆ ಈಶ್ವರ್.

ಹಾರ್ಡ್‍ವೇರ್ ಕಾರ್ಯಕ್ಷೇತ್ರದಲ್ಲಿ ಹೊರಗೆ ಮಾಡಬೇಕಾದಂತಹ ಕೆಲಸಗಳೇ ಹೆಚ್ಚು. ಪ್ರಾಡಕ್ಟ್ ತಯಾರಿಯಿಂದ ಹಿಡಿದು ಖರೀದಿ ಮತ್ತು ಮಾರಾಟಗಳೆಲ್ಲವೂ ಬಜಾರಿನಲ್ಲೇ ವ್ಯವಹರಿಸಬೇಕು. ಕಂಪ್ಯೂಟರಿನ ಮುಂದೆ ಕುಳಿತು ಮಾಡಬೇಕಾದ ಕೆಲಸಗಳು ತೀರ ಕಡಿಮೆ. ಒಂದು ಸ್ಟಾರ್ಟ್ಅಪ್ ನಡೆಸುವುದು ಮ್ಯಾರಾಥಾನ್ ಓಟವಿದ್ದಂತೆ. ಅದೇ ಒಂದು ಹಾರ್ಡ್‍ವೇರ್ ಸ್ಟಾರ್ಟ್ಅಪ್ ಮ್ಯಾರಾಥಾನ್ ಓಟದ ಎರಡರಷ್ಟು ಎಂದು ತಮ್ಮ ಕಷ್ಟವನ್ನು ಹಂಚಿಕೊಳ್ಳುತ್ತಾರೆ

ಇಂದಿನ ವ್ಯವಹಾರ ಮತ್ತು ಮುಂದಿನ ಯೋಜನೆಗಳು

ಪ್ರತಿದಿನ ನಮ್ಮ ತಂಡಕ್ಕೆ 4-5 ಜನ ಮಾಹಿತಿ ಪಡೆದುಕೊಳ್ಳುಲು ಬರುತ್ತಾರೆ. ಇಂದು ಸುಮಾರು 30 ಗ್ರಾಹಕರು ದೋಸಾಮ್ಯಾಟಿಕ್ ಮೆಷೀನುಗಳಿಗಾಗಿ ಬೆಂಗಳೂರು, ಕೊಲ್ಕತ್ತಾ, ಮುಂಬೈಗಳಂತಹ ಮಹಾನಗರಗಳಿಂದ ವಸ್ತುಗಳಿಗಾಗಿ ಹೆಚ್ಚಿನ ಬೇಡಿಕೆಗಳು ಬರತೊಡಗಿವೆ. ಮೊದಲ ಕಂತಿನ ವಸ್ತುಗಳನ್ನು ಈಗಾಗಲೇ ಡೆಲಿವರಿ ನೀಡಲಾಗಿದೆ.

image


ಮುಂದಿನ ಗುರಿ:

• ಈ ಸಾಲಿನಲ್ಲಿ 500 ದೋಸಾಮ್ಯಾಟಿಕ್ ಮೆಷೀನುಗಳನ್ನು ರೂ. 1.1 - 1.5 ಲಕ್ಷದವರೆಗಿನ ಅಂದಾಜಿನಂತೆ ಮಾರಾಟ ಮಾಡುವುದು.

• ಬೆಂಗಳೂರು, ಕೊಲ್ಕತ್ತಾ, ಮುಂಬೈ ಮಹಾನಗರಳಲ್ಲಿ ಸರ್ವೀಸ್ ಸೆಂಟರ್‍ಗಳ ಸ್ಥಾಪನೆ.

• ದೊಡ್ಡ ದೊಡ್ಡ ತಯಾರಿಕಾ ಕಂಪೆನಿಗಳಂತೆ ಇದರ ಉತ್ಪಾದನಾ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳುವುದು.

• ಮತ್ತಷ್ಟು ಡಿಸೈನ್‍ಗಳನ್ನು ವೃದ್ಧಿಗೊಳಿಸಿ ಉತ್ಪನ್ನಗಳ ತಯಾರಿಕೆ.

ತಮ್ಮ ಬಂಡವಾಳವನ್ನು ಮತ್ತಷ್ಟು ಹೆಚ್ಚಿಸಿಕೊಂಡು, ಈಗಿರುವ 15 ಮಂದಿ ನೌಕರರೊಂದಿಗೆ ಮತ್ತಷ್ಟು ಜನರನ್ನು ತಮ್ಮ ಜೊತೆಗೆ ಕೈಜೋಡಿಸಿಕೊಂಡು ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗವನ್ನು ಬಲಪಡಿಸುವುದರೊಂದಿಗೆ, ಮತ್ತಷ್ಟು ಡಿಸೈನ್‍ಗಳ ಬಲಪಡಿಸಲು, ಉತ್ಕಷ್ಟವಾದ ಪ್ರಾಡಕ್ಟ್ ಗಳ ತಯಾರಿಗೆ ಉತ್ತೇಜನವನ್ನು ನೀಡಲು ಶ್ರಮವಹಿಸುವುದು.

“ಮುಕುಂದ ಫುಡ್ಸ್”ನ ಮೂಲಕ ಮೊದಲ್ಗೊಂಡ ನಮ್ಮ ಸ್ಟಾರ್ಟ್ಅಪ್ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಪರಿಚಯ ಮತ್ತು ಎಲ್ಲಾ ಕಡೆಗಳಲ್ಲೂ ನಮ್ಮ ಉತ್ಪನ್ನಗಳು ಸಿಗುವಂತೆ ಮಾಡಬೇಕಾಗಿರುವುದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಂದು ಹರ್ಷ ವ್ಯಕ್ತಪಡಿಸುತ್ತಾರೆ.


ಅನುವಾದಕರು - ಬಾಲು

ಲೇಖಕರು - ಅಬಾಷ್ ಕುಮಾರ್