ಜಿಮ್ ರವಿ= ಬಾಡಿ ಬ್ಯುಲ್ಡಿಂಗ್​ಗೆ ಸ್ಫೂರ್ತಿ..!

ಕೃತಿಕಾ

0

ಇವರ ಹೆಸರು ರವಿ. ಹೀಗಷ್ಟೇ ಹೇಳಿದ್ರೆ ಇವರ ಪೂರ್ಣ ಪರಿಚಯ ಯಾರಿಗೂ ಆಗೋದಿಲ್ಲ. ಅದೇ ಜಿಮ್ ರವಿ ಅಂದಾಕ್ಷಣ ಎಲ್ಲೋ ಕೇಳಿದ್ದೀವಲ್ಲ, ಯಾವುದೋ ಸಿನಿಮಾ ನಟ ಇರಬಹುದಾ ಅನ್ನಿಸುತ್ತದೆ. ಹೌದು ಸಿನಿಮಾದಲ್ಲಿ ಖಳನಾಯಕನಾಗಿ ಹೆಸರು ಮಾಡಿರುವ ರವಿ ತಮ್ಮ ಬಾಡಿ ಬ್ಯುಲ್ಡಿಂಗ್ ನಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದು ಹಲವರಿಗೆ ಸ್ಫೂರ್ತಿಯಾದವರು. ಸಿನಿಮಾದಲ್ಲಿ ವಿಲನ್​ ರೋಲ್ ಗಳಲ್ಲಿ ನಟಿಸುತ್ತಿದ್ದ ಜಿಮ್ ರವಿ ಈಗ ನಿಜ ಜೀವನದಲ್ಲಿ ಹೀರೋ ಆಗಲು ಹೊರಟಿದ್ದಾರೆ. ಅವರ ನಿಜ ಜೀವನದ ಕಥೆ ತಿಳಿದುಕೊಂಡ್ರೆ ಇವರೆಷ್ಟು ಸ್ಪೂರ್ತಿಯ ಸೆಲೆ ಅನ್ನೋದು ಅರ್ಥವಾಗುತ್ತೆ.

ಇದನ್ನು ಓದಿ: ಹೋಟೆಲ್ ಚಿಕ್ಕದಾದ್ರೂ.. ಹೆಸರು ದೊಡ್ಡದು...!

ಜಿಮ್ ರವಿ ಅಂದಾಕ್ಷಣ ನೆನಪಾಗೋದು ಅವರ ಕಟ್ಟುಮಸ್ತಾದ ದೇಹ. ಜಿಮ್ ಅನ್ನೋ ಪರಿಕಲ್ಪನೆ ಇನ್ನೂ ಅಪರಿಚಿತ ಅನ್ನೋ ಸ್ಥಿತಿಯಿದ್ದಾಗಲೇ ಅವರ ಹೆಸರಿನ ಹಿಂದೆ ಜಿಮ್ ಎಂಬ ವಿಶೇಷಣ ಸೇರಿಕೊಂಡುಬಿಟ್ಟಿತ್ತು. ಬಡತನದಲ್ಲಿ ಹುಟ್ಟಿದ ಜಿಮ್ ರವಿಗೆ ಏನಾದರೂ ಸಾಧನೆ ಮಾಡಬೇಕು ಅನ್ನೋ ಆಸೆ ಚಿಕ್ಕಂದಿನಿಂದಲೇ ಚಿಗುರೊಡೆದಿತ್ತು. ಮೂಲತಃ ಕೋಲಾರ ಜಿಲ್ಲೆಯ ಕಠಾರಿಪಾಳ್ಯದ ಬಡ ಕುಟುಂಬದಲ್ಲಿ ಜನಿಸಿದ ರವಿ ಈ ಹಿಂದೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ವಾಸವಾಗಿದ್ರು. ಮೈಸೂರಿನಲ್ಲಿದ್ದ ಗರಡಿಮನೆಗಳು ಅವರನ್ನು ಸೂಜಿಗಲ್ಲಿನಂತೆ ಸೆಳೆದಿದ್ದವು. ಮೊದ ಮೊದಲಿಗೆ ಗರಡಿ ಮನೆಗಳಲ್ಲಿ ದೇಹ ದಂಡಿಸಿದ ರವಿ ಆ ನಂತ್ರ ಪಕ್ಕಾ ಪ್ರೊಫೆಷನಲಿಸ್ಟ್ ರೀತಿಯಲ್ಲಿ ಕಟ್ಟುಮಸ್ತಾದ ದೇಹ ಪಡೆದುಕೊಳ್ಳಲು ಜಿಮ್ ನಲ್ಲಿ ಬೆವರು ಹರಿಸಿದವರು. ಮೊದಲಿಗೆ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದ್ದ ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಂಸೆ ಗಿಟ್ಟಿಸಿದ್ದ ರವಿ ನಂತರ ಸವೆಸಿದ ಹಾದಿ ಮಾತ್ರ ಅದ್ಭುತ. ಇವತ್ತು ರವಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನೂರಕ್ಕೂ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅದರಲ್ಲಿ ನೂರು ಪದಕಗಳು ಚಿನ್ನದ್ದು ಅನ್ನೋದು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಹೀಗೆ ವಿಶ್ವಮಟ್ಟದಲ್ಲಿ ದೇಹದಾರ್ಡ್ಯ ಸ್ಫರ್ದೆಗಳಲ್ಲಿ ಗೆದ್ದು ಹೆಸರುಗಳಿಸಿರುವ ಈ ಮೈಸೂರಿನ ಪ್ರತಿಭೆ ಈಗ ಜಿನ್ ತರವೇತುದಾರರಾಗಿ ತಮ್ನ ಅನುಭವವನ್ನು ಯುವ ಪ್ರತಿಭೆಗಳಿಗೆ ದಾರೆಯೆಯುತ್ತಿದ್ದಾರೆ.

ಒಂದು ಕಾಲದಲ್ಲಿ ಜಿಮ್ ರವಿ ಅವರ ಬಾಡಿ ಬ್ಯುಲ್ಡಿಂಗ್ ನಿಂದಾಗಿಯೇ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು. ಇಲ್ಲಿಯವರೆಗೆ ಕನ್ನಡ, ತೆಲುಗು, ತಮಿಳಿನ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಜಿಮ್ ರವಿ ನಟಿಸಿದ್ದಾರೆ. ಗಡುಸು ದೇಹದಿಂದಾಗಿ ರವಿಗೆ ಹುಡುಕಿಕೊಂಡು ಬಂದಿದ್ದೆಲ್ಲವೂ ವಿಲನ್ ಪಾತ್ರಗಳೇ. ಸಿಬಿಮಾದಲ್ಲಿ ಮಾತ್ರ ವಿಲನ್ ಆಗಿರೋ ರವಿ ನಿಜಜೀವನದಲ್ಲಿ ಹೀರೋ. ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಅವರು ಗಳಿಸಿರುವ ಪದಕಗಳ ಪಟ್ಟಿ, ಮಾಡಿರುವ ಸಾಧನೆಯೇ ಹಲವು ಯುವಕರಿಗೆ ಸ್ಫೂರ್ತಿ. ವಿಶೇಷ ಅಂದ್ರೆ ಯಾವುದೇ ತರಬೇತುದಾರರಿಂದ ಬಾಡಿ ಬಿಲ್ಡಿಂಗ್ ತರಬೇತಿಯನ್ನು ಪಡೆಯದೇ ಮಿಸ್ಟರ್ ಇಂಡಿಯಾ ಆಗಿ ಆಯ್ಕೆಯಾದವರು ಯಾರಾದ್ರೂ ಇದ್ರೆ ಅದು ಈ ಜಿಮರ ರವಿ ಮಾತ್ರ. ಇಂತದ್ದೊಂದು ಕೀರ್ತಿಗೆ ಪಾತ್ರವಾಗುವ ಮತ್ಯೊಬ್ಬ ದೇಹದಾರ್ಡ್ಯ ಪಟು ನಮ್ಮ ದೇಶದಲ್ಲಿಲ್ಲ. ಕೇವಲ ತಮ್ಮ ಶ್ರಮದಿಂದಲೇ ಇಷ್ಟು ದೊಟ್ಟಮಟ್ಟದ ಸಾಧನೆ ಮಾಡಿದ್ದು ರವಿ ಅವರ ವಿಶೇಷ.

" ಮೈಸೂರಿನಲ್ಲಿದ್ದಾಗ ಅಲ್ಲಿನ ಗರಡಿಮನೆಗಳು ನನ್ನಲ್ಲಿ ಅದೇನೋ ಆಸಕ್ತಿ ಹುಟ್ಟಿಸಿದ್ದವು. ಕುತೂಹಲಕ್ಕಾಗಿ ಗರಡಿ ಮನೆಗೆ ಸುಮ್ಮನೆ ಹೋದವನಿಗೆ ಅಲ್ಲಿದ್ದವರನ್ನು ನೋಡಿ ನಾನು ಅವರಂತಾಗಬೇಕು ಅಂದುಕೊಂಡು ವ್ಯಾಯಾಮ ಮಾಡೋದು ಆರಂಭಿಸಿದೆ. ಆ ನಂತರ ದಸರಾ ಸಮಯದಲ್ಲಿ ನಡೆಯುತ್ತಿದ್ದ ದೇಹದಾರ್ಡ್ಯ ಸ್ಪರ್ಧೆ ನನ್ನನ್ನು ಆಕರ್ಷಿಸಿತು. ಮನೆಯಲ್ಲಿ ಕಡುಬಡತನವಿದ್ದರೂ ನನ್ನ ಆಸೆಗೆ ಮನೆಯವರ ಅಡ್ಡಿಯೇನೂ ಇರಲಿಲ್ಲ. ಆಗ ನಾನೂ ಬಾಡಿ ಬ್ಯುಲ್ಡಿಂಗ್ ಮಾಡಬೇಕು ಅಂತ ನಿರ್ಧರಿಸಿದೆ. ಜಿಮ್ ಸೇರಿಕೊಂಡೆ. ಜಿಮ್ ಗೆ ಹಣ ಕೊಡಲು, ದೇಹಕ್ಕೆ ಅಗತ್ಯವಾದ ಆಹಾರ ತಿನ್ನೋದಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡಲು ಆರಂಭಿಸಿದೆ. ಅವತ್ತು ನಾನು ತೆಗೆದುಕೊಂಡ ನಿರ್ಧಾರ ಇವತ್ತಿಗೂ ತಪ್ಪು ಅಂತ ಅನ್ನಿಸಿಲ್ಲ. ಆ ನನ್ನ ನಿರ್ಧಾರದಿಂದ ನನಗೆ ಹೆಸರು, ಹಣ, ಖ್ಯಾತು ಎಲ್ಲವೂ ಬಂತು. ಈಗ ನಾನು ಯುವಕರಿಗೆ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಅತ್ಯಾಧುನಿಕ ಜಿಮ್ ಕೇಂದ್ರಗಳನ್ನು ಸ್ಥಾಪಿಸಬೇಕು" 
                                          - ಜಿಮ್​ ರವಿ

ಜಿಮ್ ರವಿಯ ಸಾಧನೆಯ ಹಾದಿ...

* 1989- ಪ್ಯಾರಿಸ್ ವಿಶ್ವ ಚಾಂಪಿಯನ್​ಶಿಪ್ ನಲ್ಲಿ 8ನೇ ಸ್ಥಾನ

* 1990- ಜಪಾನ್ ಮಿಸ್ಟರ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 4ನೇ ಸ್ಥಾನ

* 1991- ಸ್ವಿಜರ್ಲೆಂಡ್ ಮಿಸ್ಟರ್ವಿಶ್ವಚಾಂಪಿಯನ್​ಶಿಪ್ ನಲ್ಲಿ 9ನೇ ಸ್ಥಾನ

* 1992- ಇಂಡೋ-ಪಾಕ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನ

* 1992- ಲಾಸ್ ಏಂಜಲೀಸ್ ವಿಶ್ವಚಾಂಪಿಯನ್​ಶಿಪ್​​ನಲ್ಲಿ ನಾಲ್ಕನೇ ಸ್ಥಾನ

* 1994- ಜರ್ಮನಿ ಮಿಸ್ಟರ್ ವರ್ಲ್ಡ್​​  ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ

* 1996- ಆಸ್ಪ್ರೇಲಿಯಾ ವಿಶ್ವ ಚಾಂಪಿಯನ್​ಶಿಪ್ ನಲ್ಲಿ ಆರನೇ ಸ್ಥಾನ

* 1997- ಅಮೆರಿಕ ವಿಶ್ವ ಚಾಂಪಿಯನ್​ಶಿಪ್ ನಲ್ಲಿ ಒಂಬತ್ತನೇ ಸ್ಥಾನ.

ಇದಿಷ್ಟೇ ಅಲ್ಲ. ಈ ಅಂತರಾಷ್ಟ್ರೀಯ ಸ್ಫರ್ದೆಗಳಲ್ಲಿ ಪದಕ ಗಳಿಸಿರೋ ರವಿಗೆ ರಾಷ್ಟ್ರೀಯ ಮತ್ತು ರಾಜ್ಯ ನಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಜಯಿಸದ್ದಾರೆ. ಇಂತಹ ರವಿಯ ಸಾಧನೆ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಏಕಲವ್ಯ ಪ್ರಶಸ್ತಿ, ರಾಜ್ಯದ ಶ್ರೇಷ್ಟ ಕ್ರೀಡಾಪಟು ಪ್ರಶಸ್ತಿ ಸೇರುದಂತೆ ಹಲವು ಪ್ರಶಸ್ತಿಗಳು ರವಿ ಅವರನ್ನು ಹುಡುಕಿಕೊಂಡು ಬಂದಿವೆ. ಇಂತಹ ಒಬ್ಬ ವ್ಯಕ್ತಿ ಹಲವರುಗೆ ಸ್ಫೂರ್ತಿಯಾಗಿದ್ದಾರೆ.

ಇದನ್ನು ಓದಿ

1.ಉತ್ತಮ ಸೇವೆಗೆ ಮುಂದಾದ ಭಾರತೀಯ ರೈಲ್ವೇ

2. ಉರ್ದು ಭಾಷೆಯ ಸೌಂದರ್ಯ – ಶ್ರೀಮಂತಿಕೆ ಹೆಚ್ಚಿಸಿದ ರೆಹ್ಕ್ತಾ ಫೌಂಡೇಷನ್..

3. ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!

Related Stories

Stories by YourStory Kannada