ವೇಗದ ಪ್ರಸಕ್ತ ಜೀವನ ಶೈಲಿ : ಭಾರತದ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಪರಿಹಾರ ಹುಡುಕುತ್ತಿರುವ ಕ್ಯೂರ್ ಜೋಯ್..!

ಟೀಮ್​​ ವೈ.ಎಸ್​​​. ಕನ್ನಡ

0

ಆಧುನಿಕ ವೈದ್ಯಪದ್ಧತಿ ಇಂದಿನ ಹಲವು ರೋಗಗಳಿಗೆ ಪರಿಹಾರ ಹುಡುಕುವಲ್ಲಿ ವಿಫಲವಾಗಿದೆ. ಇದು ಪ್ರಮುಖವಾಗಿ ನಮ್ಮ ವೇಗದ ಜೀವನ ಶೈಲಿಯ ಶಾಪವಾಗಿದೆ. ಪ್ರತಿಯೊಂದರಲ್ಲೂ ಧಾವಂತ, ಬಿರುಸಿನ ಓಟ. ಇದರ ಪರಿಣಾಮ ಹೆಚ್ಚಿದ ರಕ್ತದೊತ್ತಡ, ಮಧು ಮೇಹ, ಅತಿಯಾದ ಒತ್ತಡ ಹೀಗೆ ಪಟ್ಟಿ ಬೆಳೆಯುತ್ತದೆ.

ಇದಕ್ಕೆಲ್ಲ ಪರಿಹಾರ ಹುಡುಕುವಲ್ಲಿ ಆಧುನಿಕ ವೈದ್ಯ ಪದ್ಧತಿ ವಿಫಲವಾಗಿದೆ. ಆದರೆ ಭಾರತದ ಸಾಂಪ್ರದಾಯಿಕ ಜ್ಞಾನ, ಆಯುರ್ವೇದ ಚಿಕಿತ್ಸೆ, ಯೋಗ, ಪ್ರಕೃತಿ ಚಿಕಿತ್ಸೆ ಈ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರಿಗೆ ಆಶಾ ಕಿರಣವಾಗಿ ಹೊರಹೊಮ್ಮಿದೆ. ಇದು ಸಹಜವಾಗಿಯೇ ಶ್ರೀನಿವಾಸ್ ಶರ್ಮಾ ಮತ್ತು ದೀಕ್ಷಾಂತ್ ದವೆ ಅವರ ಗಮನ ಸೆಳೆಯಿತು. ಈ ಕ್ಷೇತ್ರ ಸಹಜವಾಗಿ ಅವರನ್ನು ಆಕರ್ಷಿಸಿತು. ಆಳವಾದ ಸಂಶೋಧನೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ಅವರು ಗಮನಿಸಿದರು. ಸ್ಟಾನ್ ಫೋರ್ಡ್ ಮತ್ತು ಯುಸಿಎಲ್ ಪ್ರದೇಶದಲ್ಲಿ ಸಂಶೋಧಕರ ತಂಡ ಅರ್ಪಣಾ ಮನೋಭಾವದಿಂದ ಈ ಕ್ಷೇತ್ರದಲ್ಲಿ ಕಾರ್ಯ ನಿರತವಾಗಿರುವುದು ಅವರ ಗಮನ ಸೆಳೆಯಿತು.

ಸಹಜವಾಗಿಯೇ ಈ ಸಂಶೋಧನೆ ದೀಕ್ಷಾಂತ್ ಮತ್ತು ಶ್ರೀನಿವಾಸ್ ಶರ್ಮಾ ಅವರ ಕನಸಿಗೆ ಇನ್ನಷ್ಟು ಸ್ಪಷ್ಟ ರೂಪ ನೀಡಿತು. ಸಂಶೋಧನೆಯ ಫಲ ಜನರಿಗೆ ತಲುಪಿಸಬೇಕು, ಅದರಿಂದ ವಿಶ್ವಕ್ಕೆ , ಮಾನವ ಸಮುದಾಯಕ್ಕೆ ಒಳಿತಾಗಬೇಕು ಎಂದು ಇಬ್ಬರು ಹಂಬಲಿಸಿದರು. ಜನತೆ ಸಾಂಪ್ರದಾಯಿಕ ಚಿಕಿತ್ಸೆ ಕುರಿತು ಒಲವು ಹೊಂದಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರಯತ್ನ ನಡೆಸಿದರು. ಇದು ಸಮಗ್ರ ಚಿತ್ರಣವನ್ನೇ ಅವರ ಕಣ್ಣ ಮುಂದೆ ಅನಾವರಣಗೊಳಿಸಿತು. ಬಹು ಸಂಖ್ಯೆಯಲ್ಲಿರುವ ಜನರು ಪರಿಹಾರಕ್ಕೆ ಹಾತೊರೆಯುತ್ತಿರುವುದು ಈ ಸಂದರ್ಭದಲ್ಲಿ ಪತ್ತೆಯಾಯಿತು. ಇದು ಅಂತಿಮವಾಗಿ ಕ್ಯೂರ್ ಜೋಯ್ ಸ್ಥಾಪನೆಗೆ ಮುನ್ನುಡಿ ಬರೆಯಿತು.

2013ರಲ್ಲಿ ಕ್ಯೂರ್ ಜೋಯ್ ಅಸ್ತಿತ್ವಕ್ಕೆ ಬಂತು. ಸದ್ಯಕ್ಕೆ ಬೆಂಗಳೂರು ಮತ್ತು ಸಾನ್ ಫ್ರಾನ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿದೆ. ಕ್ಯೂರ್ ಜೋಯ್ ನೈಸರ್ಗಿಕವಾಗಿ ಆರೋಗ್ಯ ಸಂರಕ್ಷಣೆ ಮತ್ತು ಕ್ಷೇಮ ಮಾಹಿತಿ ಒಳಗೊಂಡಿರುವ ಮಾಹಿತಿ ಕಣಜವಾಗಿದೆ. ಸಾಮಾನ್ಯವಾಗಿ ಬರುವ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸೂಚಿಸಲಾಗುತ್ತಿದೆ. ಪರಿಹಾರ ದೊರೆಯುತ್ತದೆ. ಪರಿಣಿತ ವೈದ್ಯರು ಈ ಸಂಬಂಧ ಆರೋಗ್ಯ ಸೂಚನೆಯನ್ನು ನೀಡುತ್ತಾರೆ. ಸ್ಟಾನ್ ಫೋರ್ಡ್, ಯುಸಿಎಲ್​​ಎ ಮೊದಲಾದ ದೊಡ್ಡ ದೊಡ್ಡ ವಿಶ್ವ ವಿದ್ಯಾನಿಲಯಗಳ ಆರೋಗ್ಯ ಪರಿಣಿತರು ಸಾಮಾನ್ಯವಾಗಿ ಸಲಹೆ ನೀಡುತ್ತಾರೆ ಎನ್ನುತ್ತಾರೆ ಕ್ಯೂರ್ ಜೋಯ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದೀಕ್ಷಾಂತ್.

ಬೆಳವಣಿಗೆ ಮತ್ತು ನಿಧಿ

ಕಳೆದ 18 ತಿಂಗಳಲ್ಲಿ ಕ್ಯೂರ್ ಜೋಯ್ ಸಂಸ್ಥೆ ಅಭೂತ ಪೂರ್ವ ಯಶಸ್ಸು , ಬೆಳವಣಿಗೆ ದಾಖಲಿಸಿದೆ. ಶೇಕಡಾ 100 ಬೆಳವಣಿಗೆ ದಾಖಲಾಗಿದೆ. ಪ್ರತಿ ತಿಂಗಳು ಎಂಟು ಮಿಲಿಯನ್ ಜನರು ಇದರ ಸೈಟ್​​ಗೆ ಭೇಟಿ ನೀಡಿದ್ದಾರೆ. ಫೇಸ್ ಬುಕ್ ಮೂಲಕ 2.7 ಮಿಲಿಯನ್ ಬಳಕೆದಾರರು ಈ ಸೈಟ್ ಜೊತೆ ಸಂಪರ್ಕ ಹೊಂದಿದ್ದಾರೆ. ಜಾಗತಿಕವಾಗಿ ಇದು ಅತೀ ದೊಡ್ಡ ಮೂರನೇ ಸಂಸ್ಥೆಯಾಗಿ ಫೇಸ್ ಬಕ್ ನಲ್ಲಿ ಸೇರ್ಪಡೆಗೊಂಡಿದೆ. ಪ್ರಸಕ್ತ ಭಾರತ, ಅಮೆರಿಕ. ಆಸ್ಟ್ರೇಲಿಯಾ , ಇಂಗ್ಲೀಷ್ ಮಾತನಾಡುವ ಐರೋಪ್ಯ ರಾಷ್ಟ್ರಗಳತ್ತ ಕ್ಯೂರ್ ಜೋಯ್ ಗಮನ ಹರಿಸಿದೆ.ಮುಂದಿನ 18 ತಿಂಗಳ ಸ್ಪಷ್ಟ ಗುರಿಯನ್ನು ಕೂಡ ಹೊಂದಲಾಗಿದೆ. 50 ಮಿಲಿಯನ್ ಬಳಕೆದಾರರ ಸೇರ್ಪಡೆಯ ಮಹಾ ಗುರಿ ಇರಿಸಲಾಗಿದೆ. ಅಲ್ಲದೆ ಜರ್ಮನಿ, ಸ್ಪೈನ್, ಫ್ರಾನ್ಸ್ ಹೀಗೆ ಹಲವು ರಾಷ್ಟ್ರಗಳತ್ತ ದೃಷ್ಟಿ ನೆಡಲಾಗಿದೆ. ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ನೀಡಲು ಚಿಂತನೆ ನಡೆಸಲಾಗಿದೆ.

ಬಂಡವಾಳ ಸಂಗ್ರಹದಲ್ಲಿ ಕೂಡ ಕ್ಯೂರ್ ಜೋಯ್ ಹಿಂದೆ ಬಿದ್ದಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಸುತ್ತಿನಲ್ಲಿ ಏಳು ಕೋಟಿ ರೂಪಾಯಿ ನಿಧಿ ಸಂಗ್ರಹಿಸಲಾಗಿದೆ. ಖ್ಯಾತ ಉದ್ಯಮಿಗಳು ಈ ಯೋಜನೆಗೆ ಕೈ ಜೋಡಿಸಿದ್ದಾರೆ. ಸುಬ್ರತಾ ಮಿತ್ರಾ, ಲ್ಯಾರಿ ಬ್ರೈಟ್ ಮ್ಯಾನ್, ವಿವೇಕ್ ಕೃಷ್ಣನ್ .. ಹೀಗೆ ಹಲವು ಖ್ಯಾತ ನಾಮರು ಇದರಲ್ಲಿ ಸೇರಿದ್ದಾರೆ. ಭಾರತದಲ್ಲಿ ಕಾರ್ಯಕ್ಷೇತ್ರ ವಿಸ್ತರಿಸಲು ಮತ್ತು ಇತರ ರಾಷ್ಟ್ರಗಳಲ್ಲಿ ಪದಾರ್ಪಣೆಗೆ ಈ ನಿಧಿ ಬಳಸಲು ಸಂಸ್ಥೆ ನಿರ್ಧರಿಸಿದೆ.

‘ಕ್ಯೂರ್​ ಜಾಯ್​​’ ಕಾರ್ಯನಿರ್ವಹಣೆ ಹೇಗೆ..?

ಕೇವಲ ಆರೋಗ್ಯ ಕಾಳಜಿ ಅಲ್ಲ... ಇದರ ಜೊತೆ ಜೊತೆಗೆ ಅದರೊಂದಿಗೆ ಬೆಸೆದುಕೊಂಡಿರುವ ಆಹಾರ, ಸೌಂದರ್ಯ ಮತ್ತು ಪಾಲನೆ ಮಾರುಕಟ್ಟೆ ಮತ್ತು ಸ್ಪರ್ಧೆ ಕ್ಷೇತ್ರಕ್ಕೆ ಕಾಲಿರಿಸಲು ಸಿದ್ಧತೆ ಮಾಡಲಾಗಿದೆ.

ಪ್ರಸಕ್ತ ವಿಶ್ವದಾದಂತ್ಯ ನೈಸರ್ಗಿಕ ಮತ್ತು ಪರ್ಯಾಯ ಆರೋಗ್ಯ ಚಿಕಿತ್ಸಾ ಕ್ರಮಕ್ಕಾಗಿ 200 ಬಿಲಿಯನ್ ಡಾಲರ್ ವೆಚ್ಚ ಮಾಡಲಾಗುತ್ತಿದೆ. ಭಾರತವೊಂದರಲ್ಲಿ ಶೇಕಡ 4.5 ಬಿಲಿಯನ್ ಡಾಲರ್​ ವೆಚ್ಚ ಮಾಡಲಾಗುತ್ತಿದೆ.

ಇಂದು ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಆರೋಗ್ಯ ಕಾಪಾಡುವುದು ಮುಖ್ಯ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸಹಜವಾಗಿಯೇ ಇದು ಅವರನ್ನು ಸಾಂಪ್ರದಾಯಿಕ ಚಿಕಿತ್ಸಾ ಕ್ರಮದತ್ತ ಆಕರ್ಷಿಸಿದೆ. ಅದರ ಪ್ರಯೋಜನದ ಪೂರ್ಣ ಅರಿವು ಅವರಿಗಿದೆ. ಪ್ರಸಕ್ತ 4 ಕೋಟಿ ರೂಪಾಯಿ ಆದಾಯ ನಿರೀಕ್ಷಿಸುತ್ತಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ 100 ರಿಂದ 200 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದೇವೆ.

Everyday Health.com ನೋಂದಾಯಿತ ಸಂಸ್ಛೆಯಾಗಿದೆ. ಕ್ಯೂರ್ ಜೋಯ್ ನ ನೇರ ಪ್ರತಿಸ್ಪರ್ಧಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಕೂಡ ನೈಸರ್ಗಿಕ ಆಹಾರ ಸಂರಕ್ಷಣೆಗೆ ಪ್ರಾಶಸ್ತ್ಯ ನೀಡುತ್ತಿವೆ.

ಮಾರುಕಟ್ಟೆಯಲ್ಲಿನ ಪೈಪೋಟಿ ಬಗ್ಗೆ ಮಾತನಾಡಿದ ದೀಕ್ಷಾಂತ್ ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುತ್ತಾರೆ. ಕ್ಯೂರ್ ಜೋಯ್, ತನ್ನದೇ ಮಾರುಕಟ್ಟೆ ಹೊಂದಿದೆ. ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿದೆ. ಈ ಮಾರುಕಟ್ಟೆ ಒಂದು ಏಕೀಕೃತ ಮಾರುಕಟ್ಟೆಯಾಗಿ ಅಭಿವೃದ್ಧಿಯಾಗಿಲ್ಲ. ಆದುದರಿಂದ ಪ್ರತಿಯೊಂದು ಸಂಸ್ಥೆಗೂ ಬೆಳೆಯುವ ಅವಕಾಶ ಇದ್ದೇ ಇದೆ ಎನ್ನುತ್ತಾರೆ ದೀಕ್ಷಾಂತ್. ಸಂಸ್ಥೆ ಸಮರ್ಥ ಪರಿಣಿತ ತಂಡ ಹೊಂದಿದ್ದು, ಪ್ರಾಮಾಣಿಕ ದೃಷ್ಟಿ ಕೋನ ಅಳವಡಿಸಿದ್ದೇವೆ. ಇದು ದೀಕ್ಷಾಂತ್ ಅವರ ಮಾತು.

ಮುಂದಿರುವ ಸವಾಲುಗಳೇನು..?

ಆರಂಭ ಅತ್ಯಂತ ಸವಾಲಾಗಿತ್ತು. ಬೆಳವಣಿಗೆ ಮತ್ತು ಅಸ್ತಿತ್ವದ ಮೇಲೆ ಹಲವು ಅಂಶಗಳು ಪರಿಣಾಮ ಬೀರುತ್ತವೆ. ವೃತ್ತಿ ಕ್ಷೇತ್ರದ ಏರಿಳಿತಗಳನ್ನು ನಾವು ಎದುರಿಸಬೇಕಾಗಿದೆ. ಆರಂಭಿಕದ ಕಾಲ ಘಟ್ಟದಲ್ಲಿ ಬಳಕೆದಾರರನ್ನು ಪತ್ತೆ ಹಚ್ಚುವುದೇ ಪ್ರಮುಖ ಸವಾಲು. ಸತತ ಪ್ರಯೋಗ, ವಿಶ್ಲೇಷಣೆ ಮೂಲಕ ಜನರ ಅಭಿರುಚಿ ನಿರ್ಧರಿಸಲಾಗುತ್ತದೆ. ಅವರ ಬೇಡಿಕೆ ಪಟ್ಟಿ ಮಾಡಲಾಗುತ್ತದೆ. ಅಂತಿಮವಾಗಿ ಜನರಿಗೆ ಏನನ್ನು ನೀಡಬೇಕು ಆ ಉತ್ಪನ್ನವನ್ನು ಸಿದ್ಧಪಡಿಸುತ್ತೇವೆ ಎನ್ನುತ್ತಾರೆ ದೀಕ್ಷಾಂತ್. ಇದರ ಜೊತೆ ಇನ್ನೊಂದು ಮಾತನ್ನು ಕೂಡ ದೀಕ್ಷಾಂತ್ ಸೇರಿಸುತ್ತಾರೆ. ಹೊಸ ತಲೆಮಾರಿನ ಉದ್ಯಮಗಳು , ಆಲೋಚನೆಗಳು ಜನಪ್ರಿಯ ಭಾಷೆಯಲ್ಲಿ ಹೇಳುವುದಾದರೆ ಸ್ಟಾರ್ಟ್ ಅಪ್​​ ನಿರಂತರ ಪ್ರಯತ್ನದ ಸೃಷ್ಟಿಗಳು ಎನ್ನುತ್ತಾರೆ ದೀಕ್ಷಾಂತ್.

ಸಂಸ್ಥೆ ಇದೀಗ ಉತ್ತಮ ಸಾಧನೆ ಪ್ರದರ್ಶಿಸಿದ್ದು, ಮುಂದಿನ ದಿನಗಳಲ್ಲಿ ಕ್ಯೂರ್ ಜೋಯ್ ಇನ್ನಷ್ಟು ಸಾಧನೆ ದಾಖಲಿಸಲಿದೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾರೆ ದೀಕ್ಷಾಂತ್.

ಲೇಖಕರು: ತೌಸಿಫ್​​ ಆಲಂ
ಅನುವಾದಕರು: ಎಸ್​​.ಡಿ.

Related Stories

Stories by YourStory Kannada