ದೀಪಾವಳಿಗೆ ಹೊಸ ಕಳೆ ನೀಡುವ ಸ್ವದೇಶಿ ಆಕಾಶಬುಟ್ಟಿ..!

ವಿಸ್ಮಯ

ದೀಪಾವಳಿಗೆ ಹೊಸ ಕಳೆ ನೀಡುವ ಸ್ವದೇಶಿ ಆಕಾಶಬುಟ್ಟಿ..!

Wednesday November 11, 2015,

2 min Read

ದಸರಾ ಹಬ್ಬ ಮುಗಿತು. ಈಗ ದೀಪಾವಳಿ ಹಬ್ಬದ ಸಂಭ್ರಮ. ದೀಪಾವಳಿ ಎಂದ್ರೆ ದೀಪಗಳ ಹಬ್ಬ ಮನೆಯ ಮುಂದೆಲ್ಲ ನೂರಾರು ದೀಪಗಳನ್ನು ಅಲಂಕರಿಸಿ, ಸಂಭ್ರಮಕ್ಕೆ ಬೃಹತ್ ಗಾತ್ರದ ಆಕಾಶಬುಟ್ಟಿಯೊಂದು ಮತ್ತೊಂದು ಕಳೆತಂದು ಕೊಡುತ್ತದೆ. ನೂರಾರು ವರ್ಷಗಳಿಂದ ಸಾಂಪ್ರದಾಯದ ಭಾಗವಾಗಿದ್ದ ಆಕಾಶಬುಟ್ಟಿಗಳ ಸ್ಥಾನವನ್ನು ಇಂದು ಹೊರದೇಶದಿಂದ ಆಮದಾಗುವ ಲಾಂಟಿನ್​​ ಗಳು ಆಕ್ರಮಿಸಿಕೊಂಡಿವೆ.

image


ದೀಪಾವಳಿ ಹಬ್ಬದ ವಿಶೇಷವೇ ಹಣತೆಗಳು ಮತ್ತು ಆಕಾಶಬುಟ್ಟಿಗಳು. ಮಾರುಕಟ್ಟೆಗೆ ವಿಭಿನ್ನವಾಗಿರೋ ಆಕಾಶಬುಟ್ಟಿಗಳು ಲಗ್ಗೆಯಿಟ್ಟಿವೆ. ಆದ್ರೆ ಈ ಬಾರಿ ಸ್ವದೇಶಿ ಆಕಾಶಬುಟ್ಟಿಗಳ ಕಡೆ ಜನ ಮುಖ ಮಾಡ್ತಿದ್ದಾರೆ. ಪ್ರತಿ ಬಾರಿ ದೀಪಾವಳಿ ಹಬ್ಬದಂದು ಹೊರ ದೇಶದಿಂದ 300 ಕೋಟಿ ರೂಪಾಯಿಯಷ್ಟು ಅಲಂಕಾರಿಕ ಸಾಮಾಗ್ರಿಗಳು ದೇಶದೊಳಗೆ ಲಗ್ಗೆಯಿಡುತ್ತೆ. ಇದ್ರಿಂದಾಗಿ ಸ್ವದೇಶಿ ವ್ಯಾಪಾರಿಗಳು ನಷ್ಟ ಅನುಭವಿಸುವ ಸ್ಥಿತಿ ಉಂಟಾಗಿದೆ.. ಹೀಗಾಗಿ ಸಮರ್ಪಣ ಎಂಬ ಸಂಸ್ಥೆ ಸ್ವದೇಶಿ ವಸ್ತುಗಳನ್ನು ಬಳಸುವತ್ತೆ ಉತ್ತೇಜನ ನೀಡ್ತಿದೆ.

image


ಚೀನಾ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ಸಾಹಸಕ್ಕೆ ಬೆಂಗಳೂರಿನ ಸಮರ್ಪಣ ಸಂಸ್ಥೆ ಮುಂದಾಗಿದೆ.

ಸಂಸ್ಕೃತಿಯಿಂದ ದೂರ ಉಳಿಯುವುದರ ಜತೆಗೆ ಸ್ಥಳೀಯ ಕರಕುಶಲಕರ್ಮಿಗಳಿಗೆ, ವ್ಯಾಪಾರಿಗಳಿಗೆ ನಷ್ಟವಾಗಿ ವಿದೇಶಿ ಕಂಪೆನಿಗಳು ಲಾಭ ಮಾಡಿಕೊಳ್ಳುತ್ತಿವೆ. ಇವೆಲ್ಲವನ್ನು ತಪ್ಪಿಸಲು ಸಮರ್ಪಣ ಸಂಸ್ಥೆ ಸ್ವದೇಶಿ ಸಾಂಪ್ರದಾಯಿಕ ಹಾಗೂ ಅಗ್ಗದ ಆಕಾಶಬುಟ್ಟಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡತ್ತಿದೆ.

image


ಮೂರು ಸಾವಿರ ಕೋಟಿ ರೂಪಾಯಿ ಚೀನಾ ವಸ್ತುಗಳು ನೋಡಲು ಅಂದವಾಗಿ ಕಾಣಿಸುವ ಚೀನಾದ ವಸ್ತುಗಳಿಗೆ ಮಾರುಹೋದ ಭಾರತೀಯರು ವಾರ್ಷಿಕ 3 ಸಾವಿರ ಕೋಟಿ ರೂಪಾಯಿ ಮೊತ್ತದ ಚೀನಾ ಅಲಂಕಾರಿಕ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ, ಹಬ್ಬದ ಸಂದರ್ಭದಲ್ಲಿ ಅಲಂಕಾರಿಕ ವಸ್ತು ತಯಾರಿಸುವುದನ್ನೇ ಕಾಯಕವಾಗಿಸಿಕೊಂಡಿರುವ ಸಾವಿರಾರು ಭಾರತೀಯ ಕುಟುಂಬಗಳು ಸಂಕಷ್ಟದಲ್ಲಿವೆ. ಅಲ್ಲದೇ ರಾಸಾಯನಿಕಯುಕ್ತ ಚೀನಾ ಉತ್ಪನ್ನಗಳ ಖರೀದಿಯಿಂದ ಆರೋಗ್ಯವೂ ಹಾಳಾಗುತ್ತಿದೆ.

ಬಿದಿರಿನ ಸಾಂಪ್ರದಾಯಿಕ ಆಕಾಶಬುಟ್ಟಿಗಳ ತಯಾರಿಕೆ ಮುಂದಾಗಿರೋ ಸಂಸ್ಥೆ, ಜನರನ್ನು ತನ್ನತ ಸೆಳೆಯುತ್ತಿದೆ. ಈ ಸಂಸ್ಥೆ ಇಲ್ಲಿ ವಾಸಿಸುವ ಬಿದಿರಿನ ವ್ಯಾಪಾರಿಗಳನ್ನು ಒಟ್ಟಿಗೆ ಸೇರಿಸಿ ಸಾಂಪ್ರದಾಯಿಕ ಶೈಲಿಯ ಆಕಾಶಬುಟ್ಟಿಗಳನ್ನು ತಯಾರಿಸಲು ಸಹಾಯ ಮಾಡ್ತಿದೆ. ಇನ್ನು ಈ ಆಕಾಶಬುಟ್ಟಿಗಳನ್ನ ಬಿದಿರಿನಿಂದ ಮಾಡಿದ್ದು ,ಯಾವುದೇ ಹೊರ ದೇಶದ ಉತ್ಪತ್ತನ್ನುಗಳನ್ನು ಬಳಸಿಲ್ಲ. ಹೀಗಾಗಿ ಇದು ಯಾವುದೇ ಹಾನಿಕಾರಕವಾಗಿರೋಲ್ಲ. ಇದ್ರಿಂದಾಗಿ ಸ್ವದೇಶಿಗರ ಜೀವನವೂ ಉತ್ತಮವಾಗುತ್ತೆ.

image


ಒಟ್ಟು ಸುಮಾರು 20 ಜನರ ತಂಡ ಜೊತೆ ಸೇರಿ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಬಣ್ಣ ಬಣ್ಣದ ಈ ಆಕಾಶಬುಟ್ಟಿಗಳು ಎಲ್ಲರನ್ನು ತನ್ನತ ಸೆಳೆಯುವಂತೆ ಮಾಡಿದ್ದಾರೆ. ಬಿದುರಿನ, ಸಾಂಪ್ರದಾಯಿಕ ಆಕಾಶ ಬುಟ್ಟಿಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ.. ಜೊತೆಗೆ ಆಕರ್ಷಕ, ಸಾಂಪ್ರದಾಯಿಕ ಶೈಲಿಯ ಆಕಾಶಬುಟ್ಟಿಗಳು ಜನ್ರನ್ನ ಆಕರ್ಷಿಸುತ್ತಿದೆ. ವಿದೇಶಿ ಸಾಮಗ್ರಿಗಳ ಬೆಲೆ ಸ್ವಲ್ಪ ಜಾಸ್ತಿ ಇದ್ದು, ವಿದೇಶಿ ಶೈಲಿ ಹೊಂದಿರುತ್ತೆ.

ಜೊತೆಗೆ, ಬಾಲಾಪರಾಧಿಗಳು,ಮಹಿಳೆಯರ ಮೂಲಕ ಆಕಾಶಬುಟ್ಟಿಗಳ ತಯಾರಿಸಲಾಗುತ್ತಿದೆ. ಮೇದರ ಜನಾಂಗದಿಂದ ಬಿದಿರುಕೊಳ್ಳುವ ಈ ಸಂಸ್ಥೆ ಮಕ್ಕಳಿಂದ ಬುಟ್ಟಿಗಳನ್ನು ಹೆಣಿಸುತ್ತಿದೆ.. ಇದರಿಂದಾಗಿ ಮಕ್ಕಳಿಗೂ ಕೈ ಕಸುಬು ಕಲಿಸುವ ಜತೆಗೆ ಹಣವನ್ನು ನೀಡುತ್ತಿದೆ. ಅಷ್ಟೇ ಅಲ್ಲದೇ ಮನೆಯಲ್ಲೇ ಇರೋ ಗೃಹಿಣಿಯರು ಕೂಡ ಆಕಾಶಬುಟ್ಟಿಗೆ ಅಲಂಕಾರ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಮಾರುಕಟ್ಟೆಯಲ್ಲಿ ಸರಾಸರಿ 350 ರೂಪಾಯಿ ಬೆಲೆ ಬಾಳುವ ಆಕಾಶಬುಟ್ಟಿಗಳನ್ನು ಸಮರ್ಪಣ ಸಂಸ್ಥೆ ಕೇವಲ 200 ರೂಪಾಯಿ ವಿತರಿಸುತ್ತಿದೆ. ಅಪ್ಪಟ ಸ್ವದೇಶಿ ದೀಪಾವಳಿ ಆಚರಣೆಯಾಗಲಿ ಎಂಬ ಉದ್ದೇಶದಿಂದ 10 ಸಾವಿರ ಬುಟ್ಟಿಗಳನ್ನು ಹೆಣಿಯುವಷ್ಟು ಸಂಪನ್ಮೂಲಗಳನ್ನು ಕ್ರೋಡೀಕರಿಸಿಟ್ಟುಕೊಂಡಿದೆ.

ಹೀಗಾಗೀ ಹೆಚ್ಚು ಹೆಚ್ಚು ಜನ ಸ್ವದೇಶಿ ಸಾಮಗ್ರಿಗಳತ್ತ ಮುಖ ಮಾಡ್ತಿದ್ದಾರೆ.. ಇದ್ರಿಂದಾಗಿ ಇಲ್ಲಿನ ವ್ಯಾಪಾರಿಗಳ ಜೀವನೋಪಾಯಕ್ಕೂ ದಾರಿಯಾಗಿದೆ. ಬಿದಿರಿನ ಆಕಾಶಬುಟ್ಟಿ ತಯಾರಿಕೆಯಿಂದ ಜೀವನ ರೂಪಿಸಿಕೊಂಡಿರುವ ಅಸಂಖ್ಯಾತ ಕುಟುಂಬಗಳು ನಮ್ಮ ಸುತ್ತಲೂ ಇದೆ.

ವಿದೇಶಿಗರಿಗೆ ಲಾಭ ಮಾಡಿಕೊಡುವು ತಪ್ಪುತ್ತದೆ ಎಂಬುದು ಯೋಜನೆಯ ರೂವಾರಿಯಾದ ಸಮರ್ಪಣ ಸಮಾಜ ಸ್ಪಂದನ ಸಂಘದ ಸ್ಥಾಪಕ ಶಿವಕುಮಾರ್ ಮಾತು. ಒಟ್ಟನ್ನಲ್ಲಿ ಕಡಿಮೆ ಬೆಲೆಯ ಸಾಂಪ್ರದಾಯಿಕ ಶೈಲಿಯ ಹಾಗೂ ಸ್ಥಳೀಯ ಕಲಾವಿದರಿಗೆ ಜೀವಾನೋಪಾಯ ಒದಗಿಸುವ ಸ್ವದೇಶಿ ಆಕಾಶ ಬುಟ್ಟಿಗಳನ್ನೇ ಖರೀದಿಸಿ.ಅಕ್ಕಪಕ್ಕದ ಸಮುದಾಯವನ್ನು ಸದೃಢಗೊಳಿಸುವಂತೆ ದೀಪಾವಳಿ ಆಚರಿಸಿ.