ಇದು ಫೋಟೋಗಳು ಕಥೆ ಹೇಳೊ ಸಮಯ 

ಟೀಮ್​ ವೈ.ಎಸ್​.ಕನ್ನಡ

0

ಒಂದು ಪೋಟೋ ಸಾವಿರ ಕತೆಯನ್ನ ಹೇಳುತ್ತೆ ಅನ್ನೋ ಮಾತು ಅಕ್ಷರ ಸಹ ಸತ್ಯ. ನೋವು,ನಲಿವು ಸತ್ಯ ,ಸುಳ್ಳು ಹೀಗೆ ನಾನಾ ಬಾವನೆಗಳನ್ನ ವ್ಯಕ್ತ ಪಡಿಸೋ ಶಕ್ತಿ ಒಂದು ಫೋಟೋಗಿದೆ. ಈಗ್ಯಾಕೆ ಫೋಟೋ ಬಗ್ಗೆ ಇಷ್ಟೇಲ್ಲಾ ಹೇಳ್ತಿದ್ದೀವಿ ಅಂದ್ರೆ ಇಲ್ಲೊಬ್ಬ ಸಾಧಕ ತಮ್ಮ ಪೋಟೋಗಳ ಮೂಲಕವೇ ಕತೆ ಹೇಳಿ ಪ್ರಪಂಚದ ಜನರನ್ನ ಮೆಚ್ಚಿಸಿದ್ದಾನೆ.

ಅರ್ಜುನ್ ಹೇಳಿದ ಅವನಿ ಕತೆ

ಅವನಿ..ಅರ್ಜುನ್ ಕಾಮತ್ ಅವರ ಒಂದು ಅದ್ಭುತ ಫೋಟೋಗ್ರಫಿ. ಈಗಿನ ಹೆಣ್ಣು ಮಕ್ಕಳ ಪರಿಸ್ಥಿತಿ ,ವಯಸ್ಸಿಗೆ ಬಂದ ನಂತ್ರ ಹೆಣ್ಣು ಮಗಳು ಯಾವ ಯಾವ ಕಷ್ಟ ಸುಖಗಳನ್ನ ಎದುರಿಸುತ್ತಾಳೆ ಅನ್ನೋ ಕಥೆಯನ್ನ 48 ಫೊಟೋಗಳಲ್ಲಿ ಹೇಳಿ ಜನರನ್ನ ಮೆಚ್ಚಿಸಿದ್ದಾರೆ. ಇಲ್ಲಿ ಒಂದೊಂದು ಫೋಟೋಗಳು ಕತೆ ಹೇಳೋದರ ಜೊತೆಯಲ್ಲಿ ಅದರಲ್ಲಿನ ಭಾವನೆಗಳನ್ನೂ ಕಟ್ಟಿಕೊಡುತ್ತದೆ. ಸದ್ಯ ಲಾಸ್ ಏಂಜಲೀಸ್ ನಲ್ಲಿ ಫೋಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿರೋ ಅರ್ಜುನ್ ಕಾಮತ್ ಇಂತದೊಂದು ವಿಭಿನ್ನ ಪ್ರಯತ್ನವನ್ನ ಮಾಡಿದ್ದಾರೆ. ಸಾಮಾನ್ಯವಾಗಿ ವಿಡಿಯೋ ಶೂಟ್ ಮಾಡಿ ಯಾವುದಾದರು ಸಮಸ್ಯೆ ಬಗ್ಗೆ ಜನರ ಬಳಿ ತಿಳಿ ಹೇಳೊ ಬದಲು ವಿಭಿನ್ನ ರೀತಿಯಲ್ಲಿ ಹೊಸತನದಿಂದ ಏನನ್ನಾದ್ರು ಹೇಳಿದ್ರೆ ಅದನ್ನ ಜನರು ಚೆನ್ನಾಗಿ ಗ್ರಹಿಸ್ತಾರೆ ಅನ್ನೋದರ ಮೇಲೆ ಈ ವಿಭಿನ್ನ  ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ.

ಆರ್ಟ್ ಸ್ಟುಡೆಂಟ್ ಆಗಿರೋ ಅರ್ಜುನ್ ಕಾಮತ್ ಲಾಸ್ ಏಂಜಲೀಸ್ ನಲ್ಲಿ ಪ್ರೋಫೆಷನಲ್ ಫೋಟೋಗ್ರಾಫರ್. ಡಾಕ್ಯೂಮೆಂಟರಿ,ಮ್ಯಾರೆಜ್ ಹೀಗೆ ಇನ್ನೂ ಅನೇಕ ರೀತಿ ಫೋಟೋಗ್ರಾಫಿ ಮಾಡೋ ಅರ್ಜುನ್ ಈಗ ಅವನಿ ಸ್ಟೋರಿಯಿಂದಲೇ ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ. ಕಳೆದ ವರ್ಷ ಈ ಶೂಟ್ ಅನ್ನ ಮಾಡಿ ಫೋಟೋ ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್​ ಮಾಡಿದ್ರು. ಇಲ್ಲಿ ತನಕ ಲಕ್ಷಾಂತರ ಜನರು ಇದನ್ನ ಮೆಚ್ಚಿಕೊಂಡಿದ್ದಾರೆ.

ಏನಿದು ಅವನಿ ಸ್ಟೋರಿ

ಅವನಿ 48 ಫೋಟೋದಲ್ಲಿ ಹೆಣ್ಣೊಬ್ಬಳ ಕತೆಯನ್ನ ಹೇಳೋ ಫೋಟೋಗಳ ಸ್ಟೋರಿ. ವಯಸ್ಸಿಗೆ ಬಂದ ಹೆಣ್ಣು ಮಗಳು ಇನ್ನೇನು ಜೀವನದ ಬಗ್ಗೆ ಆಸೆಗಳನ್ನ ಕಟ್ಟಿಕೊಳೋ ಸಮಯ. ಅಂತಹ ಕ್ಷಣದಲ್ಲಿ ಅಪ್ಪ ಅಮ್ಮ ಅವಳಿಗಾಗಿ ಒಂದು ವರನನ್ನ ನೋಡಿ ಅವಳನ್ನ ಏನು ಕೇಳದೆ ಮದುವೆ ಮಾಡಿಕೊಡುತ್ತಾರೆ. ಭಯದಲ್ಲೇ ಮದುವೆ ಮಂಟಪಕ್ಕೆ ಕಾಲಿಟ್ಟು ಕತ್ತು ಬಗ್ಗಿಸೋ ಅವನಿ ಮದುವೆ ಆಗಿ ತನ್ನ ಗಂಡನನ್ನ ಹಾಗೂ ಅತ್ತೆಯ ಸೇವೆ ಮಾಡುತ್ತಾ ಜೀವನ ಮಾಡುತ್ತಾಳೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಅವನಿ ತನ್ನ ಸಂಸಾರವನ್ನ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ತನ್ನವ್ರಿಗೆ ಯಾವುದೇ ತೊಡುಕಾಗದಂತೆ ನೋಡಿಕೊಳ್ಳುತ್ತಾಳೆ. ಹೀಗೆ ಜೀವನ ಮಾಡುತ್ತಿದ್ದಾಗ ತನ್ನ ಗಂಡನಿಗೆ ಒಮ್ಮೆ ಆಪತ್ತು ಉಂಟಾಗುತ್ತದೆ. ಅದನ್ನು ಕೂಡ ಅವನಿ ತಪ್ಪಿಸಿ ಶತ್ರುಗಳೊಂದಿಗೆ ಹೋರಾಡಿ ಪತಿಯನ್ನ ಉಳಿಸಿಕೊಂಡು ಬರುತ್ತಾಳೆ.  ಇದೇ ಸಮಯದಲ್ಲಿ ಆಕೆ ಗರ್ಭಿಣಿ ಎಂದು ತಿಳಿಯುತ್ತದೆ. ಈ ವಿಚಾರವನ್ನ ಕೇಳಿ ಸಂಭ್ರಮ ಪಟ್ಟ ಪತಿ ಆಕೆಯನ್ನ ಜೋಪಾನವಾಗಿ ನೋಡಿಕೊಳ್ಳುತ್ತಾನೆ.  ಅತ್ತೆ ಈ ವಿಚಾರವನ್ನ ಸ್ವಾಮಿಜಿಯೊಬ್ಬರಿಗೆ ತಿಳಿಸುತ್ತಾರೆ. ಅದನ್ನ ತಿಳಿದ ಮಂತ್ರವಾದಿ ಮಗು ಹುಟ್ಟಿದರೆ ನಿಮ್ಮ ಕುಟುಂಬಕ್ಕೆ ಕೆಡುಕಾಗುತ್ತೆ ಅನ್ನೋ ಮಾತುಗಳನ್ನ ತಿಳಿಸುತ್ತಾರೆ. ಹೇಗಾದ್ರು ಮಗುವನ್ನ ಕೊಲ್ಲಬೇಕು ಎಂದು ಅತ್ತೆ ಹೊಂಚುಹಾಕುತ್ತಾಳೆ. ಒಮ್ಮೆ ಗಂಡನ ಜೊತೆ ಕಾಡಿಗೆ ಸುತ್ತಾಡಲು ಹೋಗಿದ್ದ ಅವನಿ ಕಾಡಿನಲ್ಲೇ ಮಗುವಿಗೆ ಜನ್ಮ ನೀಡುತ್ತಾಳೆ ನಂತ್ರ ಮನೆಗೆ ಬಂದಾಗ ಅತ್ತೆ ಮಗುವನ್ನ ಕಾಡಿನಲ್ಲೇ ಬಿಟ್ಟುಬರುವಂತೆ ಆದೇಶ ಮಾಡುತ್ತಾಳೆ. ಸರಿಯೆಂದು ಅವನಿ ಮತ್ತು ಆಕೆಯ ಪತಿ ಕಾಡಿಗೆ ಹೋಗಿ ತನ್ನ ಮಗುವಿನ ಹುಟ್ಟಿನ ಸಂಭ್ರಮವನ್ನ ಅನುಭವಿಸುತ್ತಾರೆ. ನಂತ್ರ ಅವನಿಗೆ ನೀರು ತರಲು ಅವನಿ ಪತಿ ಹೋಗುತ್ತಾನೆ ಅದನ್ನ ತಿಳಿದು ಸಾವಿನ ಹೊಂಚುಹಾಕಿ ಬಂದಿತ್ತ ಅವನಿ ಅತ್ತೆ ಅವನಿ ಮಗುವನ್ನ ಕೊಲ್ಲಲು ಪ್ರಯತ್ನಿಸುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ನದಿ ದಂಡೆಗೆ ಬರೋ ಅವನಿ ಶತ್ರುಗಳೊಂದಿಗೆ ಹೋರಾಟ ಮಾಡಿ ಮಗುವನ್ನ ನೀರಿನಲ್ಲಿ ತೇಲಿಬಿಟ್ಟು ತಾನು ಪ್ರಾಣ ಬಿಡುತ್ತಾಳೆ.

 ಇದು ಅವನಿ ಕತೆ ಈ ಕತೆಯನ್ನ ಸಾಮಾನ್ಯವಾಗಿ ಹೇಳಲು ಹೋರಟರು 20 ನಿಮಿಷಗಳ ಕಾಲ ವಿಡಿಯೋ ಬೇಕಾಗುತ್ತೆ ಆದ್ರೆ ಅರ್ಜುನ್ ಕಾಮತ್ ಮಾಡಿರೋ ವಿಭಿನ್ನ ಪ್ರಯೋಗದಿಂದ ನಿಮ್ಮ ಮನಸ್ಸಿನಲ್ಲೇ ಪೋಟೋ ನೋಡಿದ ಕ್ಷಣದಲ್ಲೇ ಅವನಿ ಕತೆಯ ಚಿತ್ತಾರ ಮೂಡುತ್ತೆ. ಕಳೆದ ವರ್ಷ ಇಂಥದೊಂದು ಪ್ರಯತ್ನ ಮಾಡಿರೋ ಅರ್ಜುನ್ ಈ ವರ್ಷ ಮತ್ತೊಂದು ಮ್ಯೂಸಿಕಲ್ ಸ್ಟೋರಿ ಆಲ್ಬಮ್ ಅನ್ನ ಹೊರತಂದಿದ್ದಾರೆ. ಇಂತಹದೊಂದು ಡಿಫ್ರೆಂಟ್ ಕಾನ್ಸೆಪ್ಟ್ ಅನ್ನ ಜಗತ್ತೆ ಮೆಚ್ಚಿಕೊಂಡಾಡುತ್ತಿದೆ. ಇನ್ನಷ್ಟು ಅರ್ಜುನ್ ಅವರ ಚಮತ್ಕಾರವನ್ನ ನೋಡ್ಬೇಕು ಅಂದ್ರೆ ಫೇಸ್ಬುಕ್ ನಲ್ಲಿ ಅರ್ಜುನ್ ಕಾಮತ್ ಫೋಟಾಗ್ರಾಫಿ ಅಂತ ಲಾಗ್ ಇನ್ ಆಗಿ. ಎಲ್ಲವೂ ತಿಳಿದು ಬಿಡುತ್ತದೆ.

ಇದನ್ನು ಓದಿ

1. ಮನೆ ಕೆಲಸಗಳನ್ನು ಮಾಡಿ ಮುಗಿಸುವ ಮಿತ್ರನ ಬಗ್ಗೆ ನಿಮಗೆಷ್ಟು ಗೊತ್ತು..?

2. ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!

3. ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..

Related Stories