ಉದ್ಯಮ ಹಾಗೂ ಗ್ರಾಹಕರ ನಡುವಿನ ಸಮಸ್ಯೆಗಳಿಗೆ ಸಿದ್ಧ ಸೂತ್ರ ಎಂಕ್ವೈರ್ಲಿ ಕಮ್ಯೂನಿಕೇಶನ್ .. !

ಟೀಮ್​ ವೈ.ಎಸ್​. ಕನ್ನಡ

ಉದ್ಯಮ ಹಾಗೂ ಗ್ರಾಹಕರ ನಡುವಿನ ಸಮಸ್ಯೆಗಳಿಗೆ ಸಿದ್ಧ ಸೂತ್ರ ಎಂಕ್ವೈರ್ಲಿ ಕಮ್ಯೂನಿಕೇಶನ್ .. !

Sunday February 21, 2016,

3 min Read

ಇಂದಿನ ವ್ಯಾಪಾರ ಮಾರುಕಟ್ಟೆ ವಿಸ್ತರಿಸುತ್ತಲೇ ಇದೆ.. ವಿವಿಧ ಅವತಾರಗಳಲ್ಲಿ ಮಾರುಕಟ್ಟೆ ಬೆಳೆದಿರುವ ರೀತಿಯನ್ನ ಸೂಕ್ಷ್ಮವಾಗಿ ಊಹಿಸುವುದೂ ಸ್ವಲ್ಪ ಕಷ್ಟ. ಆದ್ರೆ ಎಷ್ಟೇ ಬೆಳವಣಿಗೆ ಹಾಗೂ ಕ್ರಾಂತಿಗಳು ಇದ್ರೂ ಕೂಡ ಇವತ್ತಿಗೂ ಇಂಡಸ್ಟ್ರೀ ಹಾಗೂ ಗ್ರಾಹಕರ ನಡುವೆ ಒಂದು ದೊಡ್ಡ ಅಂತರವೇ ಇದೆ. ಈ ಅಂತರದ ಬಗ್ಗೆ ಬಹುತೇಕ ಯಾವ ಉದ್ದಿಮೆಗಳೂ ತಲೆಯನ್ನೇ ಕೆಡಿಸಿಕೊಳ್ಳಲು ಮುಂದಾಗುವುದಿಲ್ಲ. ಆದ್ರೆ ಪ್ರತಿಯೊಬ್ಬ ಗ್ರಾಹಕನು ಅತೀ ಉತ್ಕೃಷ್ಟವಾದ ಗುಣಮಟ್ಟ ಹಾಗೂ ಸೇವೆಯನ್ನ ನಿರೀಕ್ಷಿಸುತ್ತಾನೆ ಅನ್ನೋದು ವಾಸ್ತವ. ಇನ್ನು ಕೇವಲ ಬೆರಳ ತುದಿಯಲ್ಲೇ ಅತೀ ಹೆಚ್ಚು ಆಯ್ಕೆಗಳನ್ನ ಹೊಂದಿರುವ ಗ್ರಾಹಕ ಯಾವುದೇ ನಿರ್ದಿಷ್ಟ ಸೇವೆಯನ್ನೇ ನೆಚ್ಚಿಕೊಂಡು ಇರಲಾರ ಅನ್ನುವುದೂ ಕೂಡ ಅಷ್ಟೇ ಸತ್ಯ. ಹೀಗಾಗಿ ಯಾವುದೇ ಬ್ರಾಂಡ್ ಹಾಗೂ ಕಂಪನಿ ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ, ಗುಣಮಟ್ಟದ ಸೇವೆಯನ್ನ ನೀಡಿದ್ರೆ ಮಾತ್ರ ಕಂಪನಿಗಳಿಗೆ ಉಳಿಗಾಲ. ಹೀಗಾಗಿ ಅದೆಷ್ಟೋ ಕಂಪನಿಗಳು ತಮ್ಮ ಗ್ರಾಹಕರ ಮೇಲ್ವಿಚಾರಣೆಗಾಗೇ ಕೆಲವು ನೆಟ್ ವರ್ಕ್ ಗಳನ್ನ ನೆಚ್ಚಿಕೊಂಡಿವೆ. ಈ ಕಂಪನಿಗಳು ಗ್ರಾಹಕರು ಹಾಗೂ ಸೇವಾದಾರರ ನಡುವಿನ ಕೊಂಡಿಯಂತಿದ್ದು ಸಮಸ್ಯೆಗಳನ್ನ ಉತ್ಪಾದಕರ ಗಮನಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಇಂತಹ ಆಪರೇಟಿವ್ ಗಳಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರೋದು ಎಂಕ್ವೈರ್ಲಿ ಕಮ್ಯುನಿಕೇಶನ್.

image


ಎಂಕ್ವೈರ್ಲಿ ಕಮ್ಯುನಿಕೇಶನ್ ವಿವಿಧ ಗ್ರಾಹಕರನ್ನ ಸುಧಾರಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಎಂಕ್ವೈರ್ಲಿ ವಿವಿಧ ಆರ್ಕಿಟೆಕ್ಟ್ ಗಳನ್ನ ಒಳಗೊಂಡಿದ್ದು ಗ್ರಾಹಕರ ಅನುಮಾನ ಹಾಗೂ ಸಮಸ್ಯೆಗಳನ್ನ ಕಲೆಹಾಕಿ ಪರಿಹಾರ ಸೂಚಿಸುತ್ತಿದೆ. ಇನ್ನು ಈ ಕಂಪನಿಯಿಂದ ಪರಿಹಾರ ಬಯಸಲು ಇಚ್ಛಿಸುವವರು ಎಸ್ ಎಂಎಸ್ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು. ಇವುಗಳನ್ನ ಬಯೋಕಾನ್, ಕ್ಯು ಆರ್ ಕೋಡ್ ಗಳ ಕಂಪನಿಗಳ ಮೂಲಕ ರಿಸೀವ್ ಮಾಡಿ ಪರಿಹಾರ ನೀಡುವ ಪ್ರಯತ್ನ ನಡೆಸಲಾಗುತ್ತದೆ.

ಇದನ್ನು ಓದಿ

ಕೆಲಸ ಹುಡುಕಿ ಬೆಂಗಳೂರಿಗೆ ಬಂದ ನೇಪಾಳಿ ಯುವಕ ಕಂಪನಿ ಕಟ್ಟಿದ..!

ಕ್ರಿಯೆಟಿವ್ ಐಡಿಯಾ..

ಎಂಕ್ವೈರ್ಲಿ ಕಾನ್ಸೆಪ್ಟ್ ಹುಟ್ಟಿಕೊಂಡಿದ್ದು ಅಕ್ಸೆಂಚರ್ ನಲ್ಲಿ ಉದ್ಯೋಗಿಯಾಗಿದ್ದ ಅಂಜುನ್ ಚೌಧರಿ ಅವರಿಗೆ. ಅಂಜುನ್ ಡಿಜಿಟಲ್ ಇಕೋ ಸಿಸ್ಟಮ್ ಹುಟ್ಟುಹಾಕಿ ಬ್ಯುಸಿನೆಸ್ ನಲ್ಲಿರುವ ಅತೀ ಕ್ಲಿಷ್ಟಕರವಾದ ಸಮಸ್ಯೆಗಳನ್ನ ಗುರುತು ಹಾಕಿದ್ರು. ಪರಿಣಾಮ ಅವರ ಪ್ರಯತ್ನಕ್ಕೆ ಇನ್ನಿಲ್ಲದ ಪ್ರತಿಕ್ರಿಯೆ ವ್ಯಕ್ತವಾಯ್ತು. “ ನಾವು ಮೊದಲ ಆವೃತ್ತಿಯನ್ನ ಆರಂಭಿಸಿದಾಗ ಪ್ರಾಡಕ್ಟ್ ಗಳ ಬಗ್ಗೆ ಅಗತ್ಯವಿರುವ ವಿವಿಧ ಮಾಹಿತಿಗಳನ್ನ ಕಲೆಹಾಕಿದೆವು. 2 ವರ್ಷದಲ್ಲೇ 500ಕ್ಕೂ ಹೆಚ್ಚು ಗ್ರಾಹಕನ್ನ ತಲುಪುವಲ್ಲಿ ಯಶಸ್ವಿಯಾದೆವು.ಬಳಿಕ ನಮ್ಮ ಬ್ಯುಸಿನೆಸ್ ಒಂದು ಹಂತಕ್ಕೆ ಬಂದಿತು ” ಅಂತ ಅಂಜುನ್ ತಮ್ಮ ವ್ಯವಹಾರ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸುತ್ತಾರೆ.

ಕೆಲಸ ನಿರ್ವಹಿಸುವ ಬಗೆ ..

ಎಂಕ್ವೈರ್ಲಿ ಟೆಕ್ನಾಲಜಿ ಆಂಡ್ರಾಯ್ಡ್, ಪೇಥಾನ್, ಜಿಒ, ಆರ್ ಓಆರ್, ಆಂಗ್ಯುಲರ್ ಜೆಎಸ್, ಪೋಸ್ಟರ್ಸ್ ಡಾಟಾ ಸರ್ವೀಸ್ ಗಳ ಮೂಲಕ ಕಾರ್ಯನಿಭಾಯಿಸುತ್ತಿದೆ. ವಿಶೇಷ ಅಂದ್ರೆ ಇಲ್ಲಿ ಕೆಲಸ ಮಾಡುವ ರೀತಿ ಹಾಗೂ ವರ್ಕಿಂಗ್ ನೆಟ್ ವರ್ಕನ್ನು ಸೋಷಿಯಲ್ ಚಾನೆಲ್ ಗಳಲ್ಲೂ ಆಪರೇಟ್ ಮಾಡಲು ಸಾಧ್ಯವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಗ್ರಾಹಕರ ಬೇಡಿಕೆಗಳು ಹಾಗೂ ಸರ್ವೀಸ್ ಗಳನ್ನ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತಿದೆ. ಇನ್ನು ಇಲ್ಲಿ ಮಾರ್ಕೆಟಿಂಗ್ ಬಗೆಗೂ ಎಚ್ಚರಿಕೆವಹಿಸಲಾಗಿದ್ದು ವಿವಿಧ ಹಂತಗಳಲ್ಲಿ ಪ್ರಮೋಷನ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಕೆಲವು ಬ್ಯುಸಿನೆಸ್ ಗಳು ಕನಿಷ್ಠ ಲ್ಯಾಪ್ ಟಾಪ್, ಕಂಪ್ಯೂಟರ್ ಗಳ ಸೌಲಭ್ಯವೂ ಇಲ್ಲದೆಯೂ ಆರಂಭವಾಗಿದೆ. ಆದ್ರೆ ಅವುಗಳು ಡಿಐಎಫ್ ಮಾಡೆಲ್ ನ ಒಳಗೆ ಸೇರ್ಪಡೆಗೊಳ್ಳುತ್ತಿದೆ ಅಂತ ಅಂಜುನ್ ವಿವರಿಸುತ್ತಾರೆ.

ಹೂಡಿಕೆ ಮತ್ತು ಭವಿಷ್ಯದ ಯೋಜನೆ..

ಎಂಕ್ವೈರ್ಲಿ ಪ್ರಾಥಮಿಕವಾಗಿ ಅಟೋಮೇಟಿವ್, ಶಿಕ್ಷಣ, ರಿಟೈಲ್, ಎಫ್ & ಬಿ ಹಾಗೂ ಸ್ಟಾರ್ಟ್ ಅಪ್ ಗಳಿಗೆ ಸಂಬಂಧಿಸಿದ ಗ್ರಾಹಕರನ್ನ ನಿಭಾಯಿಸುತ್ತಿತ್ತು. ಇದು ನೇರವಾಗಿ ಗ್ರಾಹಕರನ್ನ ತಲುಪುವಲ್ಲಿ ಯಶಸ್ಸು ಕಂಡಿದ್ದು ಶೇಕಡಾ 30ರಷ್ಟು ಪ್ರಗತಿಯನ್ನ ಹೊಂದಿದೆ. ಪ್ರಸ್ತುತ 1000 ಬ್ಯುಸಿನೆಸ್ ಬಳಕೆದಾರರು, 300 ಕ್ಲೈಂಟ್ಸ್ ಗಳು ಎಂಕ್ವೈರ್ಲಿ ಜೊತೆಗಿದ್ದು ಸುಮಾರು $500,000ರಷ್ಟು ಮೊತ್ತವನ್ನು ಹೂಡಿಕೆ ಮಾಡಲಾಗಿದೆ. ಇನ್ನು ಭವಿಷ್ಯದಲ್ಲಿ 120 ಟೀಂಗಳನ್ನ ಗುತ್ತಿಗೆಗೆ ಪಡೆಯಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಎಂಜಿನಿಯರಿಂಗ್, ಡಿಟಿಜಲ್ ಸ್ಟ್ರಾಟಜಿ, ಗ್ರಾಫಿಕ್ ಡಿಸೈನ್ ಗೆ ಸಂಬಂಧಿಸಿದ ಗ್ರಾಹಕರನ್ನ ನಿಭಾಯಿಸಲು ಯೋಜನೆ ರೂಪಿಸಿದೆ. ಅಲ್ಲದೆ ಭಾರತದ ಪ್ರಮುಖ 10 ನಗರಗಳಲ್ಲಿ ಇದನ್ನ ಆಪರೇಟ್ ಮಾಡಲು ಚಿಂತಿಸಲಾಗಿದೆ.

ಇನ್ನು ಬೆಳವಣಿಗೆಯ ದೃಷ್ಠಿಯಿಂದ ಗ್ರಾಹಕರ ರಿವ್ಯೂಗಳನ್ನ ರಿಪೋರ್ಟ್ ಮಾಡುವ ವ್ಯವಸ್ಥೆಯನ್ನ ಇಲ್ಲಿ ಕಲ್ಪಿಸಲಾಗಿದೆ. ಈ ಮೂಲಕ ಬ್ರಾಂಡ್ ಹಾಗೂ ಬ್ಯುಸಿನೆಸ್ ಬಗ್ಗೆ ಗಮನ ನೀಡಲಾಗ್ತಿದೆ. ಇನ್ನು ಇದೀಗ ಮಾರ್ಕೆಟ್ ಶೇರ್ ನಲ್ಲಿ $56 ಬಿಲಿಯನ್ ಇದ್ದು 2019ರ ಹೊತ್ತಿಗೆ ಇದ್ರ ಮೌಲ್ಯ ಶೇಕಡಾ 17ರಷ್ಟು ವೃದ್ಧಿಸುವ ಲೆಕ್ಕಾಚಾರಗಳಿವೆ. ಹೀಗೆ ಗ್ರಾಹಕರು ಹಾಗೂ ಕೈಗಾರಿಕೆಗಳ ನಡುವೆ ಇರುವ ಅಂತರವನ್ನ ಎಂಕ್ವೈರ್ಲಿ ಕಮ್ಯುನಿಕೇಶನ್ ತಗ್ಗಿಸುತ್ತಿದೆ.

ಲೇಖಕರು – ಸಿಂಧೂ ಕಶ್ಯಪ್

ಅನುವಾದ – ಸ್ವಾತಿ, ಉಜಿರೆ

ಇದನ್ನು ಓದಿ

1. ಕ್ರೀಡಾಪಟುಗಳ ಫಿಟ್ನೆಸ್ ಗುರು ರಾಜಮಣಿ

2. ರಾಕೆಟ್ ವೇಗದಲ್ಲಿ ಮನೆಬಾಗಿಲಿಗೆ ಬಯಸಿದ ಫುಡ್ : ಗುರುಗಾಂವ್ ನಲ್ಲಿ ‘ರಾಕೆಟ್ ಶೆಫ್’ ಮ್ಯಾಜಿಕ್ ..

3. ನರೇಂದ್ರ ಮೋದಿ ಕ್ಷೇತ್ರದಲ್ಲಿ ದೇಶದ ಮೊಟ್ಟ ಮೊದಲ ಆಹಾರ ಧಾನ್ಯದ ಬ್ಯಾಂಕ್...