ಭೂಕಂಪನ ಮಾಹಿತಿ ನೀಡುವ ಮೈಶೇಕ್ ಆ್ಯಪ್..! 

ಎನ್​ಎಸ್​ಆರ್​

0

ನಮಗೆ ಯಾವ ಮಾಹಿತಿ ಬೇಕಾದ್ರು ನಾವು ಅಂಗೈಯಲ್ಲೇ ಪಡೆಯುವಂತಹ ಕಾಲವಿದು. ಬೆರಳಂಚಿನಲ್ಲೇ ಎಂತಹ ಮಾಹಿತಿಯನ್ನಾದ್ರು ಪಡೆಯಬಹುದಾದಂತಹ ಸ್ಮಾರ್ಟ್ ಫೋನ್ ಯುಗವಿದು. ನಮಗೇನೇ ಮಾಹಿತಿ ಬೇಕಿದ್ದರೂ ಬೆರಳ ತುದಿಯಲ್ಲೇ ದೊರೆಯುತ್ತದೆ. ಒಂದೊಂದು ಮಾಹಿತಿಗೂ ಒಂದು ಆ್ಯಪ್​ಗಳು ಬಂದಿವೆ. ಈ ಆ್ಯಪ್​ಗಳು ಎಷ್ಟೋ ಪ್ರಯೋಜನಕಾರಿಯಾಗಿವೆಯೆಂದರೆ, ನಮ್ಮ ಅರ್ಧ ಸಮಸ್ಯೆಗಳಿಗೆ ಪರಿಹಾರವಾಗಿ ಆ್ಯಪ್​ಗಳು ಕೆಲಸಮಾಡುತ್ತಿವೆ. ಇದೀಗ ಈ ಸರಣಿಗೆ ಹೊಸ ಆ್ಯಪ್​ವೊಂದು ಸೇರ್ಪಡೆಯಾಗಿದೆ. ಅದು ಸಾಮಾನ್ಯವಾದ ಆ್ಯಪ್ ಅಲ್ಲ. ಇದು ಭೂಕಂಪನವನ್ನು ಪತ್ತೆ ಮಾಡುವ ಬಹುಪಯೋಗಿ ಆ್ಯಪ್. ಹಿಂದೆಲ್ಲಾ ಎಲ್ಲೆಲ್ಲಿ ಭೂಕಂಪನವಾಗಿದೆ. ಎಷ್ಟರಮಟ್ಟಿಗೆ ಭೂಕಂಪನ ಸಂಭವಿಸಿದೆ ಎಂದು ತಿಳಿಯಲು ನಾವು ಒಂದೋ ಹವಾಮಾನ ಇಲಾಖೆ ಅಥವಾ ಭೂಕಂಪನ ಮಾಪನ ಇಲಾಖೆಯಿಂದ ತಿಳಿಯಬೇಕಿತ್ತು. ಇನ್ನು ಮುಂದೆ ನಮ್ಮ ಮೊಬೈಲ್ ಮೂಲಕವೇ ನಾವು ಭೂಕಂಪನ ಪ್ರಮಾಣವನ್ನು ನಿಖರವಾಗಿ ತಿಳಿಯಬಹುದಾಗಿದೆ.

ಇದನ್ನು ಓದಿ: ಕಾಕಾ ಕನಸಿನ ಕೂಸು ಆಶೀರ್ವಾದ್ ನೆಲಸಮ

ಹೌದು ಇಂತಹವೊಂದು ಅದ್ಭುತ ಆ್ಯಪ್ಅನ್ನು ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ ಭೂಕಂಪಶಾಸ್ತ್ರೀಯ ಪ್ರಯೋಗಾಲಯದ ತಜ್ಞರು ಈಗಾಗ್ಲೇ ಅಭಿವೃದ್ಧಿಪಡಿಸಿದ್ದಾರೆ. ಈ ಅತ್ಯಾಧುನಿಕ ಆ್ಯಪ್​ನ ಸಹಾಯದಿಂದಾಗಿ, ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಭೂಕಂಪನದ ಪ್ರಮಾಣವನ್ನು ಕಂಡು ಹಿಡಿಯಬಹುದಾಗಿದೆ. ಜಸ್ಟ್ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಡೌನ್​ಲೋಡ್ ಮಾಡಿಕೊಂಡರೆ ಸಾಕು. ನಿಮಗೆ ಅಲರ್ಟ್ ಬರಲು ಶುರುವಾಗಿ ಬೀಡುತ್ತದೆ.

ಈ ಆ್ಯಪ್ ಎಷ್ಟರಮಟ್ಟಿಗೆ ಅಡ್ವಾನ್ಸ್ ಆಗಿದೆಯೆಂದರೆ. ಮೊಬೈಲ್​ನಲ್ಲಿರುವ ಜಿಪಿಎಸ್ ತಂತ್ರಜ್ಞಾನದ ಮೂಲಕ ಭೂಕಂಪನದ ಕೇಂದ್ರ ಬಿಂದುವನ್ನು ಕೂಡ ನಿಖರವಾಗಿ ಗುರುತಿಸಬಹುದಾಗಿದೆ. ಹೀಗಂತ ನಾವ್ ಹೇಳ್ತಿಲ್ಲ ಇದನ್ನು ಅಭಿವೃದ್ಧಿ ಪಡಿಸಿರುವ ಬರ್ಕ್ಲಿ ಭೂಕಂಪಶಾಸ್ತ್ರೀಯ ಪ್ರಯೋಗಾಲಯದ ತಜ್ಞರು ಹೇಳಿದ್ದಾರೆ. ಬರ್ಕ್ಲಿ ಭೂಕಂಪನ ಶಾಸ್ತ್ರೀಯ ಪ್ರಯೋಗಾಲಯದ ತಜ್ಞ ಅಭಿವೃದ್ಧಿಪಡಿಸಿರುವ ಈ ಆ್ಯಪ್​ನ್ನು ಮೈಶೇಕ್ ಎಂದು ನಾಮಕರಣ ಮಾಡಲಾಗಿದೆ.

ಸದ್ಯ ಇದನ್ನು ಗೂಗಲ್ ಪ್ಲೇ ಸ್ಟೋರ್​ನಲ್ಲಿಯೂ ಬಿಡುಗಡೆ ಮಾಡಲಾಗಿದೆ. ಎಲ್ಲ ಬಗೆಯ ಆ್ಯಂಡ್ರಾಯ್ಡ್ ಫೋನ್​ಗಳಲ್ಲಿ ಇದು ಕಾರ್ಯನಿರ್ವಹಿಸಲಿದೆ. ಬ್ಯಾಕ್ ಗ್ರೌಂಡ್ ಅಪ್ಲಿಕೇಷನ್ ಆಗಿ ಇದು ತನ್ನ ಕಾರ್ಯವನ್ನು ನಿರಂತರವಾಗಿ ಮಾಡುತ್ತದೆ. ಮೊಬೈಲ್ ಇರುವ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯ ಸಣ್ಣಪುಟ್ಟ ಕಂಪನಗಳ ಸಂಭವಿಸಿದರೂ ಇದು ತಕ್ಷಣವೇ ರೆಕಾರ್ಡ್ ಮಾಡಿಕೊಳ್ಳುತ್ತದೆ. ತಕ್ಷಣವೇ ನಿಮ್ಮನ್ನು ಅಲರ್ಟ್ ಮಾಡುತ್ತದೆ. ಅಲ್ಲದೆ ಅದರ ಪ್ರಮಾಣವನ್ನು ಮೊಬೈಲ್ನಲ್ಲಿ ತೋರಿಸುತ್ತದೆ.

ಸಾಮಾನ್ಯವಾಗಿ ಸ್ಮಾರ್ಟ್​ಫೋನ್​​ಗಳನ್ನು ಗೇಮ್​ಗಳಿಗಾಗಿ ಬಳಕೆ ಮಾಡಲಾಗುವ ಆಕ್ಸಲೆರೋ ಮೀಟರ್​ಗಳನ್ನೇ ಬಳಕೆ ಮಾಡಿಕೊಂಡು ಕಂಪನದ ತೀವ್ರತೆಯನ್ನು ಅಳೆಯಲು ಸಾಧ್ಯವೆಂದು ತಜ್ಞರು ಹೇಳಿದ್ದಾರೆ. ಕಂಪನ ಹಲವು ಕಿಲೋಮೀಟರ್ ದೂರದಲ್ಲಿ ಸಂಭವಿಸಿದರೂ ಇದು ಮೊದಲೇ ಎಚ್ಚರಿಕೆ ರವಾನಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಇದೊಂದು ಜೀವರಕ್ಷಕ ಆ್ಯಪ್. ಭೂಕಂಪನ ತೀವ್ರತೆ ಹೆಚ್ಚಾಗುವ ಮೊದಲೆ ಜೀವ ಉಳಿಸಿಕೊಳ್ಳಲ್ಲು ಇಂದು ಸಹಾಯಕಾರಿಯಾಗಲಿದೆ.

ಇದನ್ನು ಓದಿ

1. ಬಿಎಂಟಿಸಿಯಲ್ಲಿ ಮಹಿಳೆಯರ ಸುರಕ್ಷತೆಗೆ ಹೊಸ ಸಹಾಯವಾಣಿ..

2. ನೌಕಾಪಡೆಗೆ ಶಕ್ತಿ ಹೆಚ್ಚಿಸಿದ ಐಎನ್‍ಎಸ್ ಕದಮತ್

3. ಹೆಚ್ ಐವಿ ಪೀಡಿತರಿಗೆ ಮದುವೆ ಭಾಗ್ಯ _ ಸಂಗಾತಿ ಹುಡುಕಾಟಕ್ಕೆ ವೇದಿಕೆ `ಪಾಸಿಟಿವ್ ಶಾದಿ’