ಕೆಲಸ ಬಿಟ್ಟು ಉದ್ಯಮ ಆರಂಭಿಸಲು ಸೂಕ್ತ ಕಾಲ ಯಾವುದು..?

ಟೀಮ್​ ವೈ.ಎಸ್​.

1

ಉದ್ಯಮಿ ಪ್ರದೀಪ್ ಗೋಯಲ್ ಅವರು ತಮ್ಮ ಬದುಕಿನ ಪಯಣವನ್ನ ಓದುಗರ ಜೊತೆ ಹಂಚಿಕೊಂಡಿದ್ದಾರೆ. ಮೊದಲ ಉದ್ಯಮದಲ್ಲಿ ವಿಫಲರಾದ್ರೂ ನಂತರ ಯಶಸ್ಸು ಗಳಿಸಿದ್ದು ಹೇಗೆ? ಅನ್ನೋದನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ಉದ್ಯಮ ಅಂದ್ರೆ ಸುಲಭ ಕೆಲಸವಲ್ಲ. ಪ್ರತಿನಿತ್ಯ ನೀವು ನೋವು ಸಹಿಸಲೇಬೇಕು. ಜನರು ಉದ್ಯೋಗ ಬಿಟ್ಟು ಉದ್ಯಮ ಆರಂಭಿಸಲು ಮುಂದಾಗೋದಿಲ್ಲ. ಯಾಕಂದ್ರೆ ಅನಿಶ್ಚಿತತೆಯ ಭಯ ಅವರನ್ನು ಕಾಡೋದು ಸಹಜ. ಆದ್ರೆ ಅತ್ಯಂತ ಹೆಚ್ಚು ಸಾಧ್ಯಾ ಸಾಧ್ಯತೆಗಳು ಅನಿಶ್ಚಿತತೆಯಲ್ಲೇ ಅಡಗಿರುತ್ತವೆ ಅನ್ನೋದನ್ನು ಮರೆಯಬೇಡಿ. ನನ್ನ ಪ್ರಕಾರ ಉದ್ಯಮ ಕ್ಷೇತ್ರಕ್ಕೆ ಕಾಲಿಡಲು ಸುಸಮಯ ಅಂದ್ರೆ, ಕಾಲೇಜು ಬಿಟ್ಟು ನಿಮ್ಮ ಸ್ವಂತ ಸಂಸ್ಥೆಯನ್ನು ಆರಂಭಿಸಿ. ಪ್ರತಿಯೊಬ್ಬರ ಪಾಲಿಗೂ ಇದೊಂದು ಕಠಿಣ ನಿರ್ಧಾರವೇ. ಆದ್ರೆ ನೀವು ಕಾಲೇಜು ಬಿಟ್ಟು ಉದ್ಯಮ ಆರಂಭಿಸಿಲ್ಲ ಎಂದಾದ್ರೆ ಪದವಿ ಮುಗಿಯುತ್ತಿದ್ದಂತೆ ಯಾವುದೋ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಿರಾ. ಕಾರ್ಪೊರೇಟ್ ಬದುಕಲ್ಲಿ ಕಳೆದು ಹೋಗುವ ಸಾಧ್ಯತೆಗಳೇ ಹೆಚ್ಚು. ಅದನ್ನು ಬಿಟ್ಟು ಸ್ವ ಉದ್ಯಮ ಆರಂಭಿಸಲು 7 ವರ್ಷಗಳೇ ಬೇಕಾಗಬಹುದು. ಉದ್ಯೋಗಕ್ಕೆ ಗುಡ್‍ಬೈ ಹೇಳಿ ಉದ್ಯಮಕ್ಕೆ ಹಾಯ್ ಹೇಳುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಕೆಲ ಟಿಪ್ಸ್ ಹಂಚಿಕೊಳ್ಳೋಣ. ಮೊದಲು ಕೆಲ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

1. ನೀವು ಉದ್ಯಮ ಆರಂಭಿಸ್ತಿರೋದು ಯಾಕೆ? ಹಣ ಮತ್ತು ಹೆಸರು ಗಳಿಸುವ ಸಲುವಾಗಿಯೋ? ಅಥವಾ ನಿಮಗೆ ನೀವೇ ಬಾಸ್ ಆಗಲು ಬಯಸಿದ್ದೀರಾ? ಇಲ್ಲವೇ ಸಮಸ್ಯೆಗಳನ್ನು ಕೆಟ್ಟದಾಗಿ ಪರಿಹರಿಸಬೇಕೆಂದಿದ್ದೀರಾ?

2. ಜೀವನ ವೆಚ್ಚಕ್ಕೆ ನಿಮ್ಮ ಬಳಿ ಎಷ್ಟು ಹಣವಿದೆ?

3. ನಿಮ್ಮ ಬಳಿ ಬಂಡವಾಳ ಎಷ್ಟಿದೆ ? ನಿಮ್ಮ ಕಂಪನಿಗೆ ಹೂಡಿಕೆ ಮಾಡಲು ಮತ್ತು ಎರಡು ವರ್ಷ ಜೀವನ ನಿರ್ವಹಣೆಗೆ ಅದು ಸಾಕಾ?

4. ನಿಮ್ಮ ಬಳಿ ಆದಾಯದ ಪರ್ಯಾಯ ಮೂಲ ಇದೆಯೇ?

5. ನಿಮಗೆ ಯಾವುದಾದರೂ ಜವಾಬ್ದಾರಿ ಇದೆಯೇ?

6. ಭವಿಷ್ಯದಲ್ಲಿ ದೊಡ್ಡ ಖರ್ಚೇನಾದರೂ ಆಗುವ ಸಾಧ್ಯತೆ ಇದೆಯೇ?

7. ನಿಮ್ಮ ಉಪಾಯವನ್ನು ಕಾರ್ಯರೂಪಕ್ಕೆ ತರಬಲ್ಲ ಸಾಮರ್ಥ್ಯ ನಿಮ್ಮಲ್ಲಿದೆಯೇ?

8. ನಿಮ್ಮ ಉಪಾಯವನ್ನು ಕಾರ್ಯರೂಪಕ್ಕೆ ತರಬಲ್ಲ ತಂಡ ನಿಮ್ಮೊಂದಿಗಿದೆಯೇ? ಅದಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತೀರಾ?

ಈ ಪ್ರಶ್ನೆಗಳಿಗೆ ನಿಮ್ಮ ಬಹುತೇಕ ಉತ್ತಗಳು ರುಣಾತ್ಮಕವಾಗಿರಬಹುದು. ಹಾಗಾಗಿಯೇ ಉದ್ಯೋಗ ಬಿಡಲು ನೀವು ಹಿಂದೇಟು ಹಾಕುತ್ತೀರಾ. ಈ ಎಲ್ಲ ಪ್ರಶ್ನೆಗಳಿಗೆ ಧನಾತ್ಮಕ ಉತ್ತರ ಸಿಗುವವರೆಗೆ ಕಾದಿದ್ದರೆ ನಾನು ಕೆಲಸ ಬಿಡುತ್ತಲೇ ಇರಲಿಲ್ಲ. ಇದುವರೆಗೂ ಪ್ರಮೋಷನ್‍ಗಾಗಿ ಕಸರತ್ತು ಮಾಡುತ್ತಲೇ ಇರಬೇಕಾಗುತ್ತಿತ್ತು.

ಕೆಲಸ ಬಿಡುವ ಮುನ್ನ 18-24 ತಿಂಗಳುಗಳ ಕಾಲ ನೀವು ನಿಮ್ಮ ಉದ್ಯಮಕ್ಕೆ ರನ್‍ವೇ ಹಾಕಿಕೊಳ್ಳಬೇಕು. ಆ ಸಂದರ್ಭದಲ್ಲಿ ನಾನು ಕೂಡ ಕೆಲ ತಪ್ಪುಗಳನ್ನು ಮಾಡಿದ್ದೇನೆ. ಆದ್ರೆ ಅದ್ಭುತ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಈ ಸಂಗತಿಗಳೇ ನನ್ನನ್ನು ಬಚಾವ್ ಮಾಡಿವೆ. ನೀವು ಅದೃಷ್ಟವಂತರಲ್ಲದೇ ಇರಬಹುದು, ಆದ್ರೆ ಫುಲ್‍ಟೈಮ್ ಕೆಲಸದಲ್ಲಿದ್ದಾಗಲೇ ನಿಮ್ಮ ಉದ್ಯಮಕ್ಕಾಗಿ 5 ಅಂಶಗಳ ಮಂತ್ರವನ್ನು ಗಮನದಲ್ಲಿರಿಸಿಕೊಳ್ಳಬೇಕು.

1. ಮೂರು ತಿಂಗಳು ಕನಿಷ್ಠ ಸಮರ್ಥ ಉತ್ಪನ್ನದ ಮೇಲೆ ಕೆಲಸ ಮಾಡಿ : ಕೆಲಸದುದ್ದಕ್ಕೂ ಹಣ ಗಳಿಸಲು ನಿಮ್ಮ ಎಂವಿಪಿ ಸಾಮರ್ಥ್ಯವನ್ನು ನೀವು ಹೆಚ್ಚಿಸಿಕೊಳ್ಳಬೇಕು. ಎಂವಿಪಿ ಕೇವಲ ಮಾದರಿಯಷ್ಟೇ ಅಲ್ಲ, ಅತಿ ಕಡಿಮೆ ಲಕ್ಷಣಗಳೊಂದಿಗೆ ಕೆಲಸ ಮಾಡಬಲ್ಲ ಉತ್ಪನ್ನ. ನಿಮ್ಮ ಗ್ರಾಹಕರ ಸಮಸ್ಯೆ ಬಗೆಹರಿಸಲು ಸಮರ್ಥರಾಗಿರಬೇಕು.

2. ತಂಡ ಕಟ್ಟಿಕೊಳ್ಳಿ...ನಿಮ್ಮೊಂದಿಗೆ ಕೆಲಸ ಬಿಡಬಲ್ಲ ಒಬ್ಬನಾದರೂ ನಿಮ್ಮ ಜೊತೆಗಿರಬೇಕು : ಉದ್ಯಮ ಅನ್ನೋದು ಏಕಾಂತ ತಾಣವೇ. ನಿಮ್ಮ ದಾರಿಯನ್ನು ನೀವೇ ಹುಡುಕಿಕೊಳ್ಳಬೇಕು. ಆದ್ರೆ ಎಲ್ಲವನ್ನೂ ನೀವೇ ನಿಭಾಯಿಸಲು ಸಾಧ್ಯವಿಲ್ಲ. ನಿಮ್ಮ ಉತ್ಪನ್ನವನ್ನು ತಯಾರಿಸಿ ಬಿಡುಗಡೆ ಮಾಡಲು ಸಹಾಯ ಮಾಡಬಲ್ಲ ಕುಶಲ ವ್ಯಕ್ತಿಯೊಬ್ಬ ಜೊತೆಗಿರಲೇಬೇಕು.

3. ಖರ್ಚು ಕಡಿಮೆ ಮಾಡಿ - ಒಂದು ವರ್ಷಕ್ಕೆ ಬೇಕಾಗುವ ವೆಚ್ಚವನ್ನು ಮೊದಲೇ ಠೇವಣಿ ಇಡಿ : ಅತ್ಯಂತ ಕಡಿಮೆ ಖರ್ಚಿನಲ್ಲಿ ಎಲ್ಲವನ್ನೂ ನಿಭಾಯಿಸುವುದು ಹೇಗೆ ಎಂಬುದನ್ನು ನೀವು ಅರಿತುಕೊಳ್ಳಬೇಕು. ನಿಮ್ಮ ವೈಯಕ್ತಿಕ ಬದುಕು ಹಾಗೂ ಉದ್ಯಮ ಎರಡರಲ್ಲೂ ಅದನ್ನೇ ಅಳವಡಿಸಿಕೊಳ್ಳಿ. ನೀವು ಉಳಿಸುವ ಪ್ರತಿ ಒಂದು ರೂಪಾಯಿ ಕೂಡ ನಿಮ್ಮನ್ನು ಉಳಿಸುತ್ತದೆ. ಒಂದು ವರ್ಷ ಖರ್ಚಿಗೆ ಬೇಕಾಗುವಷ್ಟು ಹಣವನ್ನು ಠೇವಣಿ ಇಡಿ. ಅದು ನಿಮ್ಮ ಉದ್ಯಮ ಆರಂಭಕ್ಕೆ ನೆರವಾಗುತ್ತದೆ.

4. ಉತ್ಪಾದಕತೆಯನ್ನು ಹೆಚ್ಚಿಸಿ : ಇದು ನಿಮ್ಮ ಪಾಲಿಗೆ ಗೇಮ್ ಚೇಂಜರ್ ಆಗಬಹುದು. ನಾನು ಹೇಗೆ ಉತ್ಪಾದಕತೆ ಸಾಮರ್ಥ್ಯವನ್ನು ಶೇಕಡಾ 150ರಷ್ಟು ಹೆಚ್ಚಿಸಿಕೊಂಡೆ, ಕೆಲಸದ ಅವಧಿಯನ್ನು ಕಡಿಮೆ ಮಾಡಿದೆ ಅನ್ನೋದನ್ನೂ ತಿಳಿದುಕೊಳ್ಳಿ. ನಿಮ್ಮ ಕೆಲಸಕ್ಕೆ ಬೇಕಾದ ಅಗತ್ಯ ಕೌಶಲ್ಯವನ್ನು ಕಲಿತಿರಬೇಕು. ಉದ್ಯೋಗ ಬಿಟ್ಟ ಮೇಲೆ ಇಬ್ಬರು ಮಾಡಬಲ್ಲಂಥ ಕೆಲಸವನ್ನು ನೀವೊಬ್ಬರೇ ಮಾಡಬೇಕಾಗಬಹುದು.

5. ಮಾರ್ಗದರ್ಶಕರು ನಿಮ್ಮೊಂದಿಗಿರಲಿ : ಎಷ್ಟು ಬೇಗ ನೀವು ಮಾರ್ಗದರ್ಶಕರನ್ನು ನೇಮಿಸಿಕೊಳ್ಳುತ್ತಿರೋ ಅಷ್ಟು ಬೇಗ ಯಶಸ್ಸು ನಿಮ್ಮದಾಗಲಿದೆ. ಪ್ರತಿಯೊಬ್ಬ ಉದ್ಯಮಿಗೂ ಮಾರ್ಗದರ್ಶಕರಿರಬೇಕು. ಆದ್ರೆ ಒಂದು ಸಂಸ್ಥೆಯನ್ನೂ ಆರಂಭಿಸದೇ ಮಾರ್ಗದರ್ಶಕರೆಂದು ಹೇಳಿಕೊಳ್ಳುವವರನ್ನು ನಂಬಬೇಡಿ. ನೀವು ನಿಮ್ಮ ಸಾಮಥ್ರ್ಯದ ಮೇಲೆ ನೀವು ನಿಲ್ಲುವವರೆಗೂ ಮಾರ್ಗದರ್ಶಕರು ನಿಮ್ಮ ಜೊತೆಗಿರಲಿ.

Related Stories