ನವ್ಯೋದ್ಯಮಕ್ಕೊಂದು ನವ್ಯೋದ್ಯಮ...

ಟೀಮ್ ವೈ.ಎಸ್.

ನವ್ಯೋದ್ಯಮಕ್ಕೊಂದು ನವ್ಯೋದ್ಯಮ...

Monday October 05, 2015,

3 min Read

ಹೊಸ ಉದ್ಯಮ ಆರಂಭಿಸುವ ಆರಂಭಿಕ ಹಂತದಲ್ಲಿ ಬಹುತೇಕ ಉದ್ಯಮಿಗಳಿಗೆ ಕಾನೂನು ಪ್ರಕ್ರಿಯೆಗಳ ಅರಿವಿನ ಕೊರತೆ ಇರುತ್ತದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಆರಂಭಿಕ ದಿನಗಳಲ್ಲಿ ಆದಾಯಕ್ಕೂ ಹೊಡೆತ ಬೀಳುತ್ತದೆ. ಇಂತಹ ನವ್ಯೋದ್ಯಮಿಗಳಿಗೆ ಕಾನೂನು ಮತ್ತು ಇತರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ, ನೆರವು ನೀಡಲು ವೇದಿಕೆಯೊಂದರ ಅಗತ್ಯವಿದೆ. ನವ್ಯೋದ್ಯಮಿಗಳಿಗೆ ಕಾನೂನ ಜ್ಞಾನ ನೀಡುವುದರ ಜೊತೆಗೆ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಲು ಸಲಹೆಗಳನ್ನು ನೀಡಬೇಕಾಗಿದೆ.

2014ರ ಜುಲೈನಲ್ಲಿ ದಿವಾಕರ್ ವಿಜಯಸಾರಥಿ ಮತ್ತು ರಾಜೇಶ್ ಇಂಬಾಶೇಖರನ್ ಅವರು ಮೀಟ್‍ಯುವರ್‍ಪ್ರೋ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಏಕಗವಾಕ್ಷಿ ಸಂಸ್ಥೆಮೂಲಕ ಎಲ್ಲಾ ತೆರಿಗೆ ಮತ್ತು ಕಾನೂನು ನೆರವನ್ನು ಪಡೆದುಕೊಳ್ಳಬಹುದು. ಈ ನವ್ಯೋದ್ಯಮದ ಮುಖ್ಯಕಚೇರಿ ಚೆನ್ನೈನಲ್ಲಿದೆ.

ನಿಷ್ಟಾವಂತ ವೃತ್ತಿಪರರ ತಂಡದೊಂದಿಗೆ ಮೀಟ್‍ಯುವರ್‍ಪ್ರೊ ಸಂಸ್ಥೆ ಕೆಲಸ ಆರಂಭವಾಡಿದೆ. ಕಟ್ಟಕಡೆಯವರೆಗೂ ವಹಿವಾಟು, ರಿಯಲ್ ಎಸ್ಟೇಟ್ ವ್ಯವಹಾರ, ನಿರ್ವಹಣೆ ಮತ್ತು ಉದ್ಯಮ ಸ್ಥಾಪಿಸುವವರೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಬಲಿಷ್ಟ ತಂಡ ಕಟ್ಟಲಾಗಿದೆ.

ದಿವಾಕರ್ ವಿಜಯಸಾರಥಿ, ಸಹಸಂಸ್ಥಾಪ ಮೀಟ್ ಯವರ್ ಪ್ರೊ

ದಿವಾಕರ್ ವಿಜಯಸಾರಥಿ, ಸಹಸಂಸ್ಥಾಪ ಮೀಟ್ ಯವರ್ ಪ್ರೊ


“ಮೀಟ್‍ಯುವರ್‍ಪ್ರೊ.ಕಾಂ ವೃತ್ತಿಪರರಿಗೂ ತಮ್ಮ ವ್ಯವಹಾರ ವೃದ್ಧಿಸಲು, ಮತ್ತು ಉದ್ಯಮಿಗಳನ್ನು ಮತ್ತು ವ್ಯವಹಾರಸ್ಥರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿದೆ. ಗ್ರಾಹಕರಿಗೆ ಅವಕಾಶ ಮತ್ತು ಲಾಭಗಳನ್ನು ತಂದುಕೊಡುತ್ತದೆ. ಅಲ್ಲದೆ ಅವರಿಗೆ ಗುಣಮಟ್ಟದ ವೃತ್ತಿಪರ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸಿದೆ,” ಎನ್ನುತ್ತಾರೆ ಮೀಟ್‍ಯುವರ್‍ಪ್ರೊ ಸಹಸಂಸ್ಥಾಪಕ ದಿವಾಕರ್ ವಿಜಯಸಾರಥಿ.

ನವ್ಯೋದ್ಯಮಿಗಳ ವ್ಯವಹಾರದ ಅಗತ್ಯಗಳ ಪೂರೈಕೆ

ಮೀಟ್‍ಯುವರ್‍ಪ್ರೋ.ಕಾಂ ಎನ್ನುವುದು ವೃತ್ತಿಪರ ಸೇವೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವು ಆನ್‍ಲೈನ್ ವೇದಿಕೆಯಾಗಿದೆ. ಈ ವೇದಿಕೆಯು ನವ್ಯೋದ್ಯಮದ ಎಲ್ಲಾ ವೈಯುಕ್ತಿಕ ಮತ್ತು ವ್ಯಾವಹಾರಿಕ ಅವಶ್ಯಕತೆಗಳನ್ನು ಪೂರೈಸುತ್ತದೆ. ವೃತ್ತಿಪರ ಸೇವೆ ಪಡೆಯಲು, ತೆರಿಗೆ ರಿಟರ್ನ್ಸ್ ಸಲ್ಲಿಸಲು, ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪೂರೈಸಲು, ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಿಭಾಯಿಸಲು ಹೀಗೆ ಹತ್ತು ಹಲವು ಕೆಲಸಗಳನ್ನು ಈಡೇರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

“ಮೀಟ್‍ಯುವರ್‍ಪ್ರೊನಲ್ಲಿ ನಡೆಯುವ ಎಲ್ಲಾ ವ್ಯವಹಾರಗಳನ್ನು ಗಮನಿಸಲಾಗುತ್ತದೆ. ಡೆಡ್‍ಲೈನ್‍ಗಳನ್ನು ಪಾಲಿಸಲಾಗುತ್ತದೆ. ಟಿಐಎಂಐ ಎಂಬ ಸುರಕ್ಷಿತ ಕಾರ್ಯವಿಧಾನ ಆಡಳಿತ ಸಾಫ್ಟ್‍ವೇರ್ ಮೂಲಕ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲಾಗುತ್ತದೆ. ಈ ಮೂಲಕ ನಂಬಿಕಾರ್ಹ ವ್ಯವಹಾರ ನಡೆಯುತ್ತದೆ.” ಎನ್ನುತ್ತಾರೆ ವಿಜಯಸಾರಥಿ.

ಮೀಟ್‍ಯುವರ್‍ಪ್ರೊ, ವಿವಿಧ ಸೇವೆಗಳನ್ನು ವಿವಿಧ ದರದಲ್ಲಿ ಒದಗಿಸುತ್ತದೆ. ಇದರಿಂದ ಗ್ರಾಹಕರಿಗೆ ತಮ್ಮ ಜೇಬಿಗೆ ಅನುಗುಣವಾಗಿ ಸೇವೆ ಪಡೆದುಕೊಳ್ಳಲು ಅನುಕೂಲವಾಗಿದೆ. ಟಿಐಎಂಐ ಸಾಫ್ಟ್ ವೇರ್ ಬಳಸುತ್ತಿರುವುದರಿಂದ ಆರಂಭಿಕ ನಿಧಾನಗತಿ ಇರುವುದಿಲ್ಲ. ತಜ್ಞರ ತಂಡವು, ಉತ್ಪನ್ನದ ಡೆಲಿವರಿಯಾಗುವವರೆಗೂ ಪ್ರತಿಹಂತದ ಮೇಲೆ ನಿಗಾವಹಿಸುತ್ತದೆ. ಅಗತ್ಯಬಿದ್ದಲ್ಲಿ ಪ್ರಕ್ರಿಯೆಯನ್ನು ಸಂಭಾಳಿಸುತ್ತದೆ. ವಿಜಯಸಾರಥಿಯವರ ಪ್ರಕಾರ, ಇವರು ಸೇವೆಗೆ ವಿಧಿಸುವ ಶುಲ್ಕವು ಸಾಮಾನ್ಯ ಸೇವಾ ಆಯ್ಕೆಗಳಿಗಿಂತ 50-60% ಕಡಿಮೆಯಾಗಿದೆ.

ಸಂಸ್ಥೆಯ ಸಾಮರ್ಥ್ಯವು ಅತ್ಯಧಿಕವಾಗಿದ್ದು, ಮಾರುಕಟ್ಟೆಯಲ್ಲಿನ ಎಲ್ಲಾ ಅಗತ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತಿದೆ. ಸೇವಾ ಅಯ್ಕೆಗಳು, ದರ ನಿಗದಿ, ಸೇವಾ ಪೋರೈಕೆಯ ನಿಖರತೆ ಎಲ್ಲವೂ ಇದರ ವೈಶಿಷ್ಠ್ಯ. ಸಧ್ಯಕ್ಕೆ ಮೀಟ್‍ಯುವರ್‍ಪ್ರೊದಲ್ಲಿ 1000 ವೃತ್ತಿಪರರು ಇದ್ದಾರೆ.

2008-09ರಲ್ಲಿ ವಿಜಯಸಾರಥಿ ಮತ್ತು ಇಂಬಶೇಖರನ್ ಅವರು ಇ-ರಿಟರ್ನ್ಸ್ ಸಿದ್ಧತೆ ಮತ್ತು ಆಫ್‍ಲೈನ್ ತೆರಿಗೆ ಪಾವತಿಗಾಗಿ ಟ್ಯಾಕ್ಸ್ ಕ್ಯೂಬಿ.ಕಾಂ ಎಂಬ ವೆಬ್ ಪೋರ್ಟಲ್ ಆರಂಭಿಸಿದ್ದರು. ಹಾಗೆಯೇ, 2014ರಲ್ಲಿ ಮೈಟ್ಯಾಕ್ಸ್ ಮ್ಯಾನೇಜರ್.ಇನ್ ಎಂಬ ಪೋರ್ಟಲ್ ಸ್ಥಾಪಿಸಿ, ಆನ್‍ಲೈನ್ ಮೂಲಕ ತೆರಿಗೆ ಸಲಹೆ ಮತ್ತು ಪಾವತಿ ವ್ಯವಸ್ಥೆ ಸೃಷ್ಟಿಸಿದ್ದರು. ಇದಾದ ಬಳಿಕ, ಬಹು ವೃತ್ತಿಯಲ್ಲಿ ಸೇವೆ ನೀಡಬೇಕೆಂದು ಚಿಂತನೆ ನಡೆಸಿದರು. ಇದರ ಫಲವಾಗಿ, ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ತಮ್ಮ ಜೊತೆ ಸೇರಿಸಿಕೊಂಡು ಹೊಸ ಉದ್ಯಮ ಆರಂಭಿಸಿದರು. ಅದುವೇ ಮೀಟ್‍ಯುವರ್‍ಪ್ರೊ.

ನವ್ಯೋದ್ಯಮಕ್ಕೊಂದು ನವ್ಯೋದ್ಯಮ

ನವ್ಯೋದ್ಯಮಿಗಳ ಸಮುದಾಯಕ್ಕೆ ಎಲ್ಲಾ ವಿಧದ ಸೇವೆನೀಡಬೇಕೆಂಬ ಉದ್ದೇಶದೊಂದಿಗೆ ಮೀಟ್‍ಯುವರ್‍ಪ್ರೊ ಸ್ಟಾರ್ಟ್‍ಅಪ್ ಕ್ಲಿನಿಕ್ ಆರಂಭಿಸಿತು. ಸ್ಟಾರ್ಟ್‍ಅಪ್ ಕ್ಲಿನಿಕ್ ನವ್ಯೋದ್ಯಮಿಗಳಿಗೆ ಕಾನೂನು, ಉದ್ಯಮ ಆರಂಭಿಸಲು ವೃತ್ತಿಪರ ಸಲಹೆ, ಮಾರ್ಗದರ್ಶನ, ಸೇರಿದಂತೆ ಸಕಲ ನೆರವು ಒದಗಿಸುತ್ತದೆ. ಅಡಿಪಾಯ ಗಟ್ಟಿ ಇದ್ದಾಗಲಷ್ಟೇ ಸಂಸ್ಥೆ ದೃಢವಾಗಿ ಮುನ್ನಡೆಯಲು ಸಾಧ್ಯ.

ಸ್ಟಾರ್ಟ್‍ಅಪ್ ಪ್ಯಾಕೇಜ್‍ನಲ್ಲಿ ಉದ್ಯಮ ಆರಂಭಿಸಲು ಬೇಕಾದ ಆರಂಭಿಕ ಸಿದ್ಧತೆಗಳಿಂದ ಹಿಡಿದು, ಉದ್ಯಮ ಸ್ಥಾಪನೆಯ ಬಳಿಕವೂ ಅಗತ್ಯ ಬೀಳುವ ಎಲ್ಲಾ ಸೇವೆಗಳನ್ನು ನೀಡುತ್ತದೆ. ಉದ್ಯಮ ಸ್ಥಾಪನೆಯ ಸರ್ಟಿಫಿಕೇಟ್, ಪಾನ್ ಹಂಚಿಕೆಯ ಪತ್ರ, ಟ್ಯಾನ್, ಡಿಐನ್, ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆಗಳು, ವ್ಯಾಟ್ ಮತ್ತು ಸೇವಾ ತೆರಿಗೆ ನೋಂದಣಿ, ಆರ್‍ಬಿಐ ಸೇವೆಗಳು, ಫೆಮಾ ಸೇವೆಗಳು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗುತ್ತಿದೆ.

“ಆನ್‍ಲೈನ್ ಮತ್ತು ಆಫ್‍ಲೈನ್ ಸ್ಟಾರ್ಟ್‍ಅಪ್ ಕ್ಲಿನಿಕ್‍ನಲ್ಲಿ ಆರಂಭಿಕ ಕನ್ಸಲ್ಟೇಷನ್ ಶುಲ್ಕವು ಶೂನ್ಯವಾಗಿದೆ. ಅವರ ಉದ್ದಿಮೆಯನ್ನು ಸರಳೀಕರಿಸಲು ಅಗತ್ಯವಾದ ಎಲ್ಲಾ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ನಮ್ಮ ಉತ್ಪನ್ನಗಳ ಬಗ್ಗೆಯೂ ಮಾಹಿತಿ ನೀಡುತ್ತೇವೆ. ಎಲ್ಲಾ ಸೇವೆಗಳ ದರವು ಮಾರುಕಟ್ಟೆಯನ್ನು ಆಧರಿಸಿದ್ದು, ನಮ್ಮ ಕೈಯಲ್ಲೇನೂ ಇಲ್ಲ.” ಎನ್ನುತ್ತಾರೆ ವಿಜಯಸಾರಥಿ.

ವಕೀಲರು, ಚಾರ್ಟರ್ಡ್ ಅಕೌಂಟಂಟ್ ಮೊದಲಾದ ವೃತ್ತಿಪರರಿಗೆ ಆನ್‍ಲೈನ್ ಮಾರುಕಟ್ಟೆಯು ವರವಾಗಿ ಪರಿಣಮಿಸಿದೆ. ಹೊಸ ಗ್ರಾಹಕರನ್ನು ಪಡೆಯಲು ಹೊಸ ವೇದಿಕೆ ಸಿಕ್ಕಂತಾಗಿದೆ. ಸಾಮಾನ್ಯ ಸೇವೆಗಿಂತ ಆನ್‍ಲೈನ್ ಸೇವೆಯ ಮೂಲಕ ಎಲ್ಲಾ ಪಾವತಿಗಳನ್ನು ಸುಲಭವಾಗಿ, ಯಾವುದೇ ಅಡೆತಡೆಗಳಿಲ್ಲದೆ ಮಾಡಬಹುದಾಗಿದೆ.

“ಭಾರತದಲ್ಲಿ ವೃತ್ತಿಪರರು ತಮ್ಮ ವೃತ್ತಿಯ ಪರಿಣಾಮವಾಗಿ ಶುಲ್ಕವನ್ನು ಘೋಷಿಸಿಕೊಳ್ಳಲು ಇಚ್ಚಿಸುವುದಿಲ್ಲ. ಹೀಗಾಗಿ, ಮೀಟ್‍ಯುವರ್‍ಪ್ರೊ ವೃತ್ತಿಪರರಿಂದ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಗ್ರಾಹಕರಿಗೆ ವೃತ್ತಿಪರರು ವಿಧಿಸುವ ಶುಲ್ಕದಲ್ಲಿ ನಾವು ಸಣ್ಣ ಪಾಲನ್ನು ಗ್ರಾಹಕರಿಂದಲೇ ಸಂಗ್ರಹಿಸುತ್ತೇವೆ,” ಎನ್ನುತ್ತಾರೆ ಪಾರ್ಥಸಾರಥಿ.

ಉದ್ಯಮದ ವಿಸ್ತರಣೆ

ಮೀಟ್‍ಯುವರ್‍ಪ್ರೋ ಸಂಸ್ಥೆಯು ಸ್ಟಾರ್ಟ್ ಅಪ್ ಕ್ಲಿನಿಕ್ ಅನ್ನು ಚೆನ್ನೈನಲ್ಲಿ ಪೂರ್ಣಪ್ರಮಾಣದ ಚಟುವಟಿಕೆಯನ್ನು ಆರಂಭಿಸಲು ಉದ್ದೇಶಿಸಿದೆ. ಶೀಘ್ರದಲ್ಲಿಯೇ ಬೆಂಗಳೂರಿನಲ್ಲೂ ಉದ್ಯಮ ಆರಂಭಿಸಲು ಸಿದ್ಧತೆ ನಡೆಸಿದೆ.

“ನಾವು ಸ್ಟಾರ್ಟ್‍ಅಪ್ ಆರಂಭಿಸುವವರ ಪಾಲಿಗೆ ಸ್ಟಾರ್ಟ್‍ಅಪ್ ಕ್ಲಿನಿಕ್ ವೃತ್ತಿಪರ ಸಲಹೆಯಲ್ಲಿ ಸಮಾನಾರ್ಥಕವಾಗಿರಬೇಕು ಎಂದು ಬಯಸುತ್ತೇವೆ,” ಎನ್ನುತ್ತಾರೆ ಪಾರ್ಥಸಾರಥಿ.

ಯಾವುದೇ ಉದ್ಯಮದ ಪ್ರಯಾಣವು ನಿರ್ದಿಷ್ಟವಾದ ಆದಾಯ ಮಾದರಿ ಇಲ್ಲದೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ, ಸ್ಟಾರ್ಟ್ ಅಪ್ ಕ್ಲಿನಿಕ್ ಮೂಲಕ ನವ್ಯೋದ್ಯಮಿಗಳು ಮತ್ತು ವೃತ್ತಿಪರರ ಮಧ್ಯೆ ಉಂಟಾಗುವ ಪ್ರತಿ ಒಪ್ಪಂದದ ಮೇಲೆ 6-10% ಶುಲ್ಕ ಸಂಗ್ರಹಿಸುತ್ತದೆ. 2016ರ ಮಾರ್ಚ್ ವೇಳೆಗೆ ಸುಮಾರು ಅರ್ಧ ಮಿಲಿಯನ್ ಡಾಲರ್ ಆದಾಯ ತಲುಪುವ ಗುರಿ ಹೊಂದಿದೆ, ಮೀಟ್‍ಯುವರ್‍ಪ್ರೊ.