'ರಾಜ್ಯೋತ್ಸವಕ್ಕೆ ಶಿವಣ್ಣನ ಮಾತು'

ಪಿ.ಅಭಿನಾಷ್​​​ಸೆಲೆಬ್ರಿಟಿ: ಶಿವರಾಜ್​​ ಕುಮಾರ್​​, ನಟನಿರುಪಣೆ: ಪಿ.ಅಭಿನಾಷ್​​​

0

ಕನ್ನಡವನ್ನ ರಾಜ್ಯೋತ್ಸವದಂದು ಮಾತ್ರ ನೆನಪಿಸಿಕೊಳ್ಳುವುದಲ್ಲ. ಕನ್ನಡ ನಮ್ಮ ಉಸಿರಾಗಿರಬೇಕು, ಪ್ರತಿನಿತ್ಯ, ಪ್ರತಿಕ್ಷಣ ಕನ್ನಡತನ ನಮ್ಮಲ್ಲಿ ತುಂಬಿರಬೇಕು. ಹೀಗೆನ್ನುತ್ತಾ ನನ್ನ ಜೊತೆ ಮಾತಿಗಿಳಿದ್ರು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್.

"ನಾನು ರಾಜ್ಯೋತ್ಸವವನ್ನ ವಿಶೇಷವಾಗಿ ಆಚರಣೆ ಮಾಡಿಕೊಂಡು ಬಂದಿಲ್ಲ. ಕನ್ನಡ ಧ್ವಜವನ್ನ ಹಾರಿಸಿ ಕನ್ನಡ ಹಾಡನ್ನ ಲೌಡ್ ಸ್ಪೀಕರ್‍ನಲ್ಲಿ ಹಾಕಿ ರಾಜ್ಯೋತ್ಸವ ಆಚರಣೆ ಮಾಡಿದರಷ್ಟೇ ಸಾಲದು. ಕನ್ನಡ ವರ್ಷದ 365 ದಿನವೂ ನಮ್ಮೊಳಗಿರಬೇಕು. ನಾವು ಕನ್ನಡವನ್ನ ಕಾಪಾಡಿಕೊಂಡು ಬಂದರೆ, ಕನ್ನಡವೂ ನಮ್ಮನ್ನು ಕಾಪಾಡುತ್ತದೆ. ರಾಜ್ಯೋತ್ಸವದಂದು ನಮ್ಮಲ್ಲಿರುವ ಹುರುಪು ವರ್ಷವಿಡೀ ಮುಂಡುವರೆಯಬೇಕು.

ಬೆಂಗಳೂರಿನಲ್ಲಿ ಕನ್ನಡ ಕಡಿಮೆಯಾಗ್ತಾ ಇದ್ಯಾ?

ನಮ್ಮ ಕ್ನನಡಿಗರ ಹೃದಯ ವೈಶಾಲ್ಯತೆ ಎಷ್ಟರಮಟ್ಟಿಗಿದೆ ಅಂದ್ರೆ, ಕನ್ನಡ ಬಂದ್ರೂ ಕ್ನನಡದಲ್ಲಿ ಮಾತನಾಡೋಕೆ ಹಿಂದುಮುಂದು ನೋಡ್ತಾರೆ ಅಲ್ವಾ, ಅನ್ನೋ ಪ್ರಶ್ನೆಗೆ ಶಿವಣ್ಣ ಉತ್ತರ ಕೊಟ್ಟಿದ್ದು ಹೀಗೆ. ಇತರೆ ಭಾಷೆಗಳನ್ನೂ ನಾವು ಗೌರವಿಸಬೇಕು. ಬೇರೆ ಲ್ಯಾಂಗ್ವೇಜ್‍ಗಳನ್ನ ಮಾತನಾಡಿದ್ರೂ ಪರವಾಗಿಲ್ಲ, ಕೆಲವೊಮ್ಮೆ ಅದು ಅನಿವಾರ್ಯವೂ ಆಗತ್ತೆ. ಆದ್ರೆ ಕನ್ನಡವನ್ನ ಮಾತ್ರ ಎಂದಿಗೂ ಕಡೆಗಣಿಸಬಾರದು. ಮಾತೃ ಭಾಷೆಯ ಸ್ಥಾನಮಾನ ಎಂದಿಗೂ ಹೃದಯದಲ್ಲಿರಬೇಕು. ಬಾಲ್ಯದಿಂದಲೇ ಪೋಷಕರು ಮಾತೃ ಭಾಷೆಯ ಬಗೆಗಿನ ಪ್ರಾಮುಖ್ಯತೆಯನ್ನ ಮಕ್ಕಳಿಗೆ ವಿವರಿಸಬೇಕು. ಮಾತೃ ಭಾಷೆಗೆ ನೀಡಬೇಕಾಗಿರುವ ಪ್ರಾಧಾನ್ಯತೆಯ ಬಗ್ಗೆ ತಿಳಿಸಿಹೇಳಬೇಕು. ಕನ್ನಡಾಭಿಮಾನವನ್ನ ಅವರಲ್ಲಿ ತುಂಬಬೇಕು.

ಡಾ.ರಾಜ್ ಕನ್ನಡ ಅಭಿಮಾನ

ಕನ್ನಡ ಚಿತ್ರರಂಗದ ಮೇರುನಟ ಡಾ ರಾಜ್ ಪ್ರೀತಿ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿದೆ. ರಾಜ್ ಕನ್ನಡಭಿಮಾನ ಎಷ್ಟರಮಟ್ಟಿಗೆ ಇತ್ತಂದ್ರೆ, ರಾಜ್ ಎಂದಿಗೂ ಅನ್ಯ ಭಾಷಾ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಸಂಪೂರ್ಣವಾಗಿ ಡಾ ರಾಜ್ ಅವ್ರನ್ನ ಯಾರೂ ಹಿಂಬಾಲಿಸಲು ಸಾಧ್ಯವಿಲ್ಲದೇ ಇದ್ರೂ , ಕೊನೆ ಪಕ್ಷ ಅವರು ನಡೆದುಬಂದ ಹಾದಿಯಲ್ಲಿ ಕೆಲವೊಂದು ಅಂಶಗಳನ್ನಾದ್ರೂ ಬದುಕಿನಲ್ಲಿ ಅಳವಡಿಸಿಕೊಂಡ್ರೆ, ಕನ್ನಡ ಉದ್ದಾರ ಆಗತ್ತೆ ಅಂತಾರೆ ಹ್ಯಾಟ್ರಿಕ್ ಹೀರೋ.

ಐಟಿಬಿಟಿ ಕನ್ನಡ ಪ್ರೀತಿ

ಇತ್ತೀಚೆಗೆ ಐಟಿಬಿಟಿ ವಲಯದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಾಗ್ತಿರೋದು ಒಳ್ಳೆಯ ಬೆಳವಣಿಗೆ. ಸಾಫ್ಟ್​​​ವೇರ್ ಫೀಲ್ಡ್ ಸೇರಿದಂತೆ, ಅನ್ಯ ಭಾಷಿಕರೇ ಹೆಚ್ಚಾಗಿರುವೆಡೆಗಳಲ್ಲೂ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಾಗ್ತಿರೋದು ಸಂತಸ ತರುತ್ತಿದೆ. ಇನ್ನು ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಕನ್ನಡದ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ರಂಗಿತರಂಗ ಸಿನಿಮಾ. ವಿದೇಶಗಳಲ್ಲೂ ಉತ್ತಮ ಪ್ರದರ್ಶನ ಕಂಡು, ಕನ್ನಡ ಸಿನಿಮಾಗಳನ್ನ ಪ್ರೋತ್ಸಾಹಿಸಿರುವುದು ಒಳ್ಳೆಯ ಬೆಳವಣಿಗೆ. ವಿದೇಶದ ಹೈ ಬಜೆಟ್ ಸಿನಿಮಾಗಳನ್ನೂ ಹಿಂದಿಕ್ಕಿ ರಂಗಿತರಂಗ ಸಿನಿಮಾ ಪರದೇಶಗಳಲ್ಲಿ ಓಡ್ತಿರೋದು ಸಂತಸದ ವಿಚಾರ. ಈ ಮೂಲಕ ನಾವು ಎಂದಿಗೂ ಕನ್ನಡ ಚಿತ್ರಗಳನ್ನೂ ಪ್ರೋತ್ಸಾಹಿಸುತ್ತೇವೆ. ಒಳ್ಳೆಯ ಸಿನಿಮಾಗಳನ್ನ ಗೆಲ್ಲಿಸಿಕೊಡ್ತೀವಿ ಅನ್ನೋ ಸಂದಶೇವನ್ನ ಜನತೆ ಸಾಭೀತು ಮಾಡಿದ್ದಾರೆ.

" ನನ್ನ ಪ್ರಕಾರ ಕರ್ನಾಟಕದಲ್ಲಿ ಇರುವವರೆಲ್ಲರೂ ಕ್ನನಡಿಗರೇ, ಕರ್ನಾಟಕದಲ್ಲಿ ಹುಟ್ಟಿಬೆಳೆದವರೂ ಕನ್ನಡಿಗರೇ. ಅವಶ್ಯಕತೆ ಬಿದ್ರೆ, ಕನ್ನಡಕ್ಕಾಗಿ ಫೈಟ್ ಮಾಡೋಕು ಸಿದ್ದರಾಗಿರಬೇಕು'. ಕನ್ನಡಿಗರಲ್ಲಿ ಒಗ್ಗಟ್ಟು ಅನ್ನೋದು ರಕ್ತದಲ್ಲೇ ಬಂದಿದೆ. ಆದ್ರೆ, ಒಗ್ಗಟ್ಟಾಗಿ ನಿಲ್ಲಲು ಕರೆ ಕೊಡಬೇಕು. ಕನ್ನಡಿಗರ ಕನ್ನಡತನವನ್ನ ಬಡಿದೆಬ್ಬಿಸಬೇಕು. ಕಳಸಾಬಂಡೂರಿ ಪ್ರತಿಭಟನೆಯಲ್ಲಿ ಇಡೀ ಕ್ನನಡ ಚಿತ್ರರಂಗ ಪಾಲ್ಗೊಂಡಿದೆ. ಪ್ರತಿಯೊಬ್ಬರೂ ರಸ್ತೆಗಿಳಿದು ಪ್ರತಿಭಟಿಸದೇ ಇದ್ರೂ, ಮನದಲ್ಲಿ ನಮ್ಮ ಕನ್ನಡಿಗರಿಗೆ ಒಳ್ಳೆಯದಾಗಬೇಕು, ಕಳಸಾಬಂಡೂರಿ ಯೋಜನೆ ಜಾರಿಯಾಗಬೇಕು ಅನ್ನೋದು ಎಲ್ಲರ ಮನದಲ್ಲಿದೆ. ಹಿಂದೆಯೂ ಗೋಕಾಕ್ ಚಳುವಳಿಯಲ್ಲಿ ರಾಜ್ ಭಾಗವಹಿಸಿದ್ದು, ಕನ್ನಡಿಗರ ಒಗ್ಗಟ್ಟನ್ನ ಹೆಚ್ಚುಮಾಡಿತ್ತು'.

'ನಾನು ಓದಿದ್ದು ಚೆನ್ನೈನಲ್ಲಿ. ನನಗೆ ತಮಿಳು ಭಾಷೆಯನ್ನ ಕಲಿಯುವುದು ಅನಿವಾರ್ಯವಾಗಿತ್ತು. ತಮಿಳು ಭಾಷೆಯನ್ನ ಮೂರನೇ ಭಾಷೆಯನ್ನಾಗಿ ಆರಿಸಿಕೊಂಡಿದ್ದೆ. ಆದ್ರೆ ಎಂದಿಗೂ ಕನ್ನಡಾಭಿಮಾನ ಮಾತ್ರ ಎಂದಿಗೂ ಕಡಿಮೆಯಾಗಲೇ ಇಲ್ಲ. ಪರರಾಜ್ಯದಲ್ಲಿ ಇದ್ರೂ ನಾನು ನನ್ನ ಸ್ನೇಹಿತರೊಂದಿಗೆ ಕ್ನನಡದಲ್ಲೇ ಮಾತನಾಡುತ್ತಿದ್ದೆ. ನನ್ನ ಮಕ್ಕಳಿಗೂ ಕನ್ನಡಾಭಿಮಾನದ ಬಗ್ಗೆ ಆಘಾಗ್ಗೇ ಹೆಳುತ್ತೇನೆ.

ಕನ್ನಡ ಚಿತ್ರರಂಗವೇ ಡಬ್ಬಿಂಗ್ ವಿರೋಧಿ ನೀತಿಯನ್ನ ಅನುಸರಿಸುತ್ತದೆ ಇದೂ ಕನ್ನಡಾಭಿಮಾನವಾ?

ಎಂದಿಗೂ ನಾನು ಡಬ್ಬಿಂಗ್ ವಿರೋಧಿಸುತ್ತೇನೆ. ಯಾವತ್ತೂ ಕನ್ನಡ ಚಿತ್ರರಂಗ್ಕಕೆ ಡಬ್ಬಿಂಗ್ ಅವಶ್ಯಕತೆ ಇದೆ ಅಂತಾ ನನಗನಿಸಿಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಕೊನೆವರೆಗೂ ನಾನು ನನ್ನ ನಿರ್ಧಾರಕ್ಕೆ ಬದ್ದರಾಗಿರುತ್ತೇನೆ.

ಹೀಗಂತ ಕನ್ನಡದ ಬಗ್ಗೆ ಹೇಳುತ್ತಾ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಷಯ ಹೇಳೆ ಶಿವಣ್ಣ ಮಾತು ಮುಗಿಸಿದ್ರು.