ಪೆಟ್ರೋಲ್ ಡೀಸೆಲ್ ಬೇಡ್ವೇ ಬೇಡ..! ನೀರಿನಿಂದಲೇ ಓಡುತ್ತೆ ಈ ಅದ್ಭುತ ಕಾರು

ಟೀಮ್​ ವೈ.ಎಸ್​.ಕನ್ನಡ

0

ಕಾರು ಓಡ್ಬೇಕು ಅಂದ್ರೆ ಪೆಟ್ರೋಲ್, ಡೀಸೆಲ್ ಬೇಕೇ ಬೇಕು. ಆದ್ರೆ ಇದು ಅಂತಿಂಥ ಕಾರಲ್ಲ. ಪೆಟ್ರೋಲ್, ಡೀಸೆಲ್ ಇಲ್ಲದೆಯೂ ಆರಾಮಾಗಿ ಚಲಿಸಬಲ್ಲದು. ಈ ಅತ್ಯದ್ಭುತ ಕಾರನ್ನು ತಯಾರಿಸಿದವರು ಮೊಹಮ್ಮದ್ ರಯೀಸ್ ಮರ್ಕನಿ. ಮಧ್ಯಪ್ರದೇಶ ಮೂಲದ 44ರ ಹರೆಯದ ಮೊಹಮದ್ ರಯೀಸ್ ಎಂಜಿನಿಯರ್ ಪದವೀಧರರಿಬಹುದು ಅಂದ್ಕೋಬೇಡಿ. ಅವರು ಓದಿದ್ದು ಕೇವಲ 12ನೇ ತರಗತಿ ಮಾತ್ರ, ಆದ್ರೆ ಅವರ ಸಾಧನೆ ಎಲ್ಲರೂ ಮೆಚ್ಚುವಂಥದ್ದು. ಈ ಕಾರನ್ನು ಸಿದ್ಧಪರಿಸಲು ಅವರು ಬರೋಬ್ಬರಿ 5 ವರ್ಷಗಳ ಕಾಲ ಶ್ರಮಿಸಿದ್ದಾರೆ. ಅಸಿಟಿಲೀನ್ ಅನಿಲ ಹಾಗೂ ನೀರಿನಿಂದ ಈ ಕಾರು ಓಡುತ್ತೆ, ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರಿನ ನಡುವಣ ಕೆಮಿಕಲ್ ರಿಯಾಕ್ಷನ್‍ನಿಂದ ಅಸಿಟಿಲೀನ್ ಅನಿಲ ಉತ್ಪತ್ತಿಯಾಗುತ್ತೆ. ಇದೀಗ ನೀರಿನಿಂದಲೇ ಓಡುವ ತಮ್ಮ ಕಾರಿಗೆ ರಯೀಸ್ ಪೇಟೆಂಟ್ ಕೂಡ ಪಡೆದಿದ್ದಾರೆ. ಕಳೆದ 5 ವರ್ಷಗಳಿಂದ ರಯೀಸ್ ತಮ್ಮ ಕಾರಿಗೆ 800 ಸಿಸಿ ಎಂಜಿನ್ ಅನ್ನು ಅಭಿವೃದ್ಧಿಪಡಿಸ್ತಾ ಇದ್ರು. ಈಗ ಅದರಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ನೀರು ಮತ್ತು ಕಾರ್ಬೈಡ್‍ನಿಂದ ಚಲಿಸುವ ಪರಿಸರ ಸ್ನೇಹಿ ಕಾರು ಎಲ್ಲರನ್ನೂ ನಿಬ್ಬೆರಗಾಗಿಸುತ್ತಿದೆ.

ಕಳೆದ 15 ವರ್ಷಗಳಿಂದ ರಯೀಸ್ ಮೆಕ್ಯಾನಿಕ್ ಆಗಿ ಕೆಲಸ ಮಾಡ್ತಿದ್ದಾರೆ. ಕಾರು ವೆಲ್ಡಿಂಗ್ ಮಾಡುತ್ತಿದ್ದಾಗ್ಲೇ ಅವರಿಗೆ ಈ ಅದ್ಭುತ ಪರಿಕಲ್ಪನೆ ಹೊಳೆದಿತ್ತು. ``ವೆಲ್ಡಿಂಗ್, ಪೋರ್ಟೆಬಲ್ ಲೈಟನಿಂಗ್ ಸೇರಿದಂತೆ ಹಲವು ಕೈಗಾರಿಕಾ ಉದ್ದೇಶಗಳಿಗಾಗಿ ಈ ಅನಿಲವನ್ನು ಬಳಸಲಾಗುತ್ತದೆ. ನಾನು ಕಾರ್ ಎಂಜಿನ್ ಅನ್ನು ಮುಂದೂಡಲು ಅಸಿಟಿಲೀನ್ ಅನಿಲವನ್ನು ಬಳಸಿಕೊಂಡಿದ್ದೇನೆ. ಕಾರಿನ ಸಂಪೂರ್ಣ ಪ್ರದರ್ಶನಕ್ಕೆ ಅನುಕೂಲವಾಗುವಂತಹ ಇನ್ನೂ ಕೆಲವು ಬದಲಾವಣೆಗಳನ್ನು ಕೂಡ ಮಾಡಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಕಾರು ನೀರಲ್ಲಿ ಚಲಿಸುತ್ತೆ ಅನ್ನೋದೇ ವಿಶೇಷ, ನೀರೇ ಇಲ್ಲಿ ಮುಖ್ಯವಾದದ್ದು'' ಎನ್ನುವ ಮೊಹಮದ್ ರಯೀಸ್ ಕಾರು ತಯಾರಿಕೆಯಲ್ಲಿ ತಾವು ಪಟ್ಟ ಪರಿಶ್ರಮವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ: ಎಂಎನ್‍ಸಿ ಕಂಪನಿಗಳಿಗೆ ನಡುಕ ಹುಟ್ಟಿಸಿದ "ಪತಂಜಲಿ''

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್‍ನಂತಹ ಇಂಧನ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗ್ತಾ ಇದೆ. ವಾತಾವರಣದಲ್ಲಿ ಉಷ್ಣಾಂಶ ಮಿತಿಮೀರಿದೆ. ಹಾಗಾಗಿ ಪರಿಸರ ಸ್ನೇಹಿ ಕಾರುಗಳ ಅಗತ್ಯ ಮತ್ತು ಬೇಡಿಕೆ ಎರಡೂ ಅಧಿಕವಾಗಿದೆ. 

"ಪರಿಸರ ಸ್ನೇಹಿ ಕಾರುಗಳ ಮಾರುಕಟ್ಟೆ ದೊಡ್ಡದಾಗುತ್ತಿದೆ ಮತ್ತು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಜಗತ್ತಿನ ಪ್ರಸಿದ್ಧ ಆಟೋಮೊಬೈಲ್ ಕಂಪನಿಗಳು ಪರಿಸರ ಸ್ನೇಹಿ ಕಾರುಗಳ ಹುಡುಕಾಟದಲ್ಲಿವೆ. ನಾನು ತಯಾರಿಸಿದ ಕಾರು ನಿಜಕ್ಕೂ ಅದಕ್ಕೆ ಪರ್ಯಾಯವಾಗಬಲ್ಲದು. ನೀರಿನಿಂದ್ಲೇ ಚಲಿಸಬಲ್ಲ ಈ ಕಾರು ತಯಾರಿಸಲು ಹೆಚ್ಚೇನೂ ಖರ್ಚಾಗುವುದಿಲ್ಲ, ಇದು ಪರಿಸರ ಸ್ನೇಹಿ ವಾಹನವೂ ಹೌದು''
                    - ರಯೀಸ್.

ಭಾರತದಲ್ಲಿ ರಯೀಸ್ ಅವರ ಪರಿಸರ ಸ್ನೇಹಿ ಕಾರಿಗೆ ಬೇಡಿಕೆ ಬರುತ್ತೋ ಇಲ್ವೊ ಗೊತ್ತಿಲ್ಲ. ಆದ್ರೆ ನೆರೆರಾಷ್ಟ್ರ ಚೀನಾ ಈ ಅದ್ಭುತ ಐಡಿಯಾವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿಯೇ ರಯೀಸ್ ಅವರನ್ನು ತಮ್ಮ ರಾಷ್ಟ್ರಕ್ಕೆ ಆಹ್ವಾನಿಸಿರುವ ಚೀನಾ ಈ ಪರಿಕಲ್ಪನೆಯನ್ನು ಇನ್ನಷ್ಟು ವಿಸ್ತರಿಸುವಂತೆ ಮನವಿ ಮಾಡಿದೆ. ರಯೀಸ್ ಅವರ ಪರಿಸರ ಸ್ನೇಹಿ ಕಾರ್ ಪ್ರಾಜೆಕ್ಟ್ ಬಗ್ಗೆ ಆಸಕ್ತಿ ಹೊಂದಿರುವ ಯಾವುದೇ ಕಂಪನಿ ಅವರನ್ನು ಭೇಟಿ ಮಾಡಬಹುದು. ಆದ್ರೆ ರಯೀಸ್ ಒಂದು ಷರತ್ತು ವಿಧಿಸ್ತಾರೆ, ಕಾರು ತಯಾರಿಕೆಗೆ ಯಾವುದೇ ಕಂಪನಿ ಮುಂದಾದಲ್ಲಿ ತಯಾರಿಕಾ ಘಟಕವನ್ನು ತಮ್ಮ ತವರು ಮಧ್ಯ ಪ್ರದೇಶದಲ್ಲೇ ಆರಂಭಿಸಬೇಕು ಅನ್ನೋದು ಮೊಹಮದ್ ರಯೀಸ್ ಅವರ ಷರತ್ತು. ``ನನ್ನ ತವರಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಬೇಕು. ಇಲ್ಲಿಂದಲೇ ನನ್ನ ಕೆಲಸ ಆರಂಭವಾಗಬೇಕು'' ಎನ್ನುತ್ತಾರೆ ರಯೀಸ್.

ಕಾರಿಗೆ ಬೇಕಾದ ಇಂಧನ ಅಂದ್ರೆ ನೀರು ಮತ್ತು ಅಸಿಟಿಲೀನ್ ಅನಿಲ್ ತಯಾರಿಕೆ ಅತ್ಯಂತ ಸುಲಭ. ಒಂದು ಲೀಟರ್‍ಗೆ ಕೇವಲ 2 ಪೈಸೆ ಖರ್ಚಾಗುತ್ತದೆ. ಹಾಗಾಗಿ ಇದೊಂದು ಅಸಾಮಾನ್ಯ ಯೋಜನೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಚೀನಾ ರಯೀಸ್ ಅವರ ಪರಿಸರ ಸ್ನೇಹಿ ಕಾರನ್ನು ಬಳಸಿಕೊಳ್ಳುವ ಹವಣಿಕೆಯಲ್ಲಿರುವುದು ಇದೇ ಕಾರಣಕ್ಕೆ. ಆದಷ್ಟು ಬೇಗ ಭಾರತದ ಆಟೋಮೊಬೈಲ್ ಕಂಪನಿಗಳು ಕೂಡ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ರೆ ವಾಯುಮಾಲಿನ್ಯಕ್ಕೆ ಬ್ರೇಕ್ ಹಾಕಬಹುದು. ದುಬಾರಿ ಇಂಧನವಿಲ್ಲದೆ ಚಲಿಸುವ ಅಗ್ಗದ ಕಾರು ಎಲ್ಲರ ಮನೆ ಸೇರಬಹುದು. 

ಅನುವಾದಕರು: ಭಾರತಿ ಭಟ್​​

ಇದನ್ನು ಓದಿ:

1. ಸ್ಮಾರ್ಟ್​ಫೋನ್​ನಲ್ಲಿ ಅಡಗಿಕುಳಿತಿರುವ ಡಾಕ್ಟರ್​..!

2. ಕ್ಯಾಮರಾ ಕಣ್ಣಲ್ಲಿ ಮಹಿಳೆಯ ಬವಣೆಗಳ ಮಿಡಿತ : ಇದು ಸೊನಾಲಿ ಗುಲಾಟಿ ಕೈಚಳಕ

3. ಪ್ಲಾಸ್ಟಿಕ್‍ಗೆ ಪರ್ಯಾಯ ಇಕೋವೇರ್

Related Stories