ಅಂದ ಹೆಚ್ಚಿಸುವ ಅಂದಗಾತಿ ಡಾ.ತ್ರಾಸಿ

ಟೀಮ್​​ ವೈ.ಎಸ್​. ಕನ್ನಡ

ಅಂದ ಹೆಚ್ಚಿಸುವ ಅಂದಗಾತಿ ಡಾ.ತ್ರಾಸಿ

Sunday December 06, 2015,

2 min Read

ಏನಾದರೂ ಹೊಸತನ್ನು ಕಲಿಯಬೇಕೆಂದರೆ ಅದಕ್ಕೆ ಶ್ರದ್ಧೆ ಮತ್ತು ಕಲಿಕೆಯ ಆಸಕ್ತಿ ಇರಲೇಬೇಕು. ಆಗ ಬ್ರಹ್ಮ ವಿದ್ಯೆಯಾದರೂ ಕ್ಷಣಾರ್ಧದಲ್ಲಿ ಹಿಡಿತಕ್ಕೆ ಬರುತ್ತದೆ. ಇದು ನನ್ನಿಂದಾಗಲ್ಲ ಎಂದು ಕಲಿಯುವ ಮೊದಲೇ ಸೋಲೊಪ್ಪಿಕೊಂಡರೆ ಏನೇ ಮಾಡಿದರೂ ಆ ವಿದ್ಯೆ ನಮಗೆ ಕರಗತವಾಗುವುದಿಲ್ಲ. ಆದರೆ, ಕೇವಲ ತಮ್ಮ ಗ್ರಹಿಕೆ ಮತ್ತು ಚಿಕಿತ್ಸಾ ವಿಧಾನವನ್ನು ನೋಡಿಕೊಂಡೇ ಪ್ಲಾಸ್ಟಿಕ್ ಸರ್ಜರಿ ಮಾಡುವ ವಿಧಾನ ಕಲಿತ ಮುಂಬೈನ ಡಾ. ಶ್ರೀಲತಾ ಸುರೇಶ್ ತ್ರಾಸಿ, ಇದೀಗ ಹಲವು ಸೆಲಬ್ರಿಟಿಗಳ ಫೆವರೆಟ್ ಆಗಿದ್ದಾರೆ. ಅಲ್ಲದೆ ತಮ್ಮ ಚಿಕಿತ್ಸೆ ಮೂಲಕವೇ ಅನೇಕರ ನ್ಯೂನತೆಗಳನ್ನು ಸರಿಪಡಿಸಿ, ಸುಂದರವಾಗಿಸಿದ್ದಾರೆ.

image


ಮನುಷ್ಯ ಬಾಹ್ಯ ಸೌಂದರ್ಯಕ್ಕೆ ನೀಡುವಷ್ಟು ಕಾಳಜಿಯನ್ನು ಇನ್ಯಾವುದಕ್ಕೂ ಕೊಡುವುದಿಲ್ಲ. ನಮ್ಮನ್ನು ನೋಡುವವರು ಎಷ್ಟು ಚೆಂದಗೆ ಕಾಣುತ್ತಿದ್ದಾರೆ ಎಂದರೆ ಮಾತ್ರ ನಮಗೆ ತೃಪ್ತಿ. ಅದಕ್ಕಾಗಿಯೇ ಅನೇಕರು ಬ್ಯೂಟಿ ಪಾರ್ಲರ್, ತಮ್ಮ ಅಂಗಗಳಲ್ಲಿರುವ ನ್ಯೂನತೆ ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿಗೆ ಮೊರೆ ಹೋಗುತ್ತಿದ್ದಾರೆ. ಅದನ್ನೇ ತಮ್ಮ ಬಂಡವಾಳ ಮತ್ತು ಉದ್ಯಮವಾಗಿಸಿಕೊಂಡಿದ್ದಾರೆ ಡೆರ್ಮಾಟಾಲಜಿಮ ವೆನೆರೋಲಾಜಿ ಮತ್ತು ಲೆಪ್ರೋಲೋಜಿ ವೈದ್ಯೆ ಡಾ. ಶ್ರೀಲತಾ ಸುರೇಶ್ ತ್ರಾಸಿ. ಕಳೆದ 25 ವರ್ಷಗಳಿಂದ ಚಲನಚಿತ್ರ ನಟ, ನಟಿಯರು, ರಾಜಕಾರಣಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ವೈದ್ಯೆಯಾಗಿರುವ ಡಾ. ತ್ರಾಸಿ, ಮುಂಬೈನ ಹೆಸರಾಂತ ಆಸ್ಪತ್ರೆಗಳಾದ ನಾಯರ್ ಮತ್ತು ರಾಜವಾಡಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಕುರಿತು ಪಾಠವನ್ನು ಮಾಡುತ್ತಿದ್ದಾರೆ.

image


ಮಾವನಿಂದ ಬಂದ ಬಳುವಳಿ

ಡಾ.ತ್ರಾಸಿ ಅವರಿಗೆ ಈ ಹೆಸರು ಮತ್ತು ಚಿಕಿತ್ಸೆ ನೀಡುವ ವಿಧಾನ ಕರಗತವಾಗಿದ್ದು ತಮ್ಮ ಮಾವನಿಂದ. ಮೊದಲು ಸಾಮಾನ್ಯ ಮಹಿಳೆಯಂತಿದ್ದ ಅವರು, ಮದುವೆ ನಂತರ ತಮ್ಮ ಜೀವನವನ್ನೇ ಬದಲಿಸಿಕೊಂಡರು. ಚರ್ಮ ಬೆಳವಣಿಗೆ ಹಾಗೂ ಮತ್ತಿತರ ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡುತ್ತಿದ್ದ ಮಾವನವರ ಕ್ಲಿನಿಕ್‍ಗೆ ಪದೇ ಪದೇ ಭೇಟಿ ನೀಡುತ್ತಿದ್ದ ಡಾ. ತ್ರಾಸಿ, ಅಲ್ಲಿ ನೀಡಲಾಗುತ್ತಿದ್ದ ಚಿಕಿತ್ಸಾ ವಿಧಾನಗಳನ್ನು ನೋಡುತ್ತಲೇ ಕರಗತ ಮಾಡಿಕೊಂಡರು ಮತ್ತು ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡರು.

ನಂತರ ಆ ವೃತ್ತಿಯಲ್ಲೇ ಮುಂದುವರೆಯಲ್ಲಿಚ್ಚಿಸಿದ ಅವರು ನೇರವಾಗಿ ಹಾರಿದ್ದು, ಪೆನ್ಸಿಲ್ವೇನಿಯಾಕ್ಕೆ. ಅಲ್ಲಿ ಸೌಂದರ್ಯ ಚಿಕಿತ್ಸೆ ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲಾ ಚಿಕಿತ್ಸಾ ವಿಧಾನವನ್ನು ಕಲಿತು ವಾಪಾಸು ಬಂದವರೇ ಡರ್ಮಾಟೋಸರ್ಜರಿಯನ್ನು ಭಾರತದಲ್ಲಿ ಪರಿಚಯಿಸಿದರು. ಮೊದಲಿಗೆ ನಾಯರ್ ಆಸ್ಪತ್ರೆಯಲ್ಲಿ ಈ ಸರ್ಜರಿಯನ್ನು ಮಾಡಿದರು. ಮುಂಬೈನಲ್ಲಿ ನೂತನ ಚಿಕಿತ್ಸಾ ವಿಧಾನ ಪರಿಚಯಿಸಿದ ಮೊದಲಿಗರೆನಿಸಿದ ಡಾ.ತ್ರಾಸಿ, ಅದರೊಂದಿಗೆ ಸ್ಕಿನ್ ಪಾಲಿಶಿಂಗ್, ಪೀಲ್ಸ್ ಆಫ್ ಪಿಗ್ಮೆನ್‍ಟೇಷನ್, ಡೆರ್ಮಾ ಸರ್ಜರಿ, ಟೆಕ್ನಿಕ್ಸ್ ಫಾರ್ ಡೀಲಿಂಗ್ ವಿಥ್ ಪಿಂಪಲ್ ಆಂಡ್ ಸ್ಕಾರ್ಸ್ ಹೀಗೆ ಅನೇಕ ಚಿಕಿತ್ಸೆಯನ್ನು ತಮ್ಮ ಕ್ಲಿನಿಕ್‍ನಲ್ಲಿ ಪರಿಚಯಿಸಿದರು. ಅದು ಹೊಸ ಹೊಸ ತಂತ್ರಜ್ಞಾನ ಸಮೇತವಾಗಿ.

ಚಿಕಿತ್ಸೆ ಮೂಲಕವೇ ಖ್ಯಾತರಾದ ಡಾ.ತ್ರಾಸಿ

ನೂತನ ಚಿಕಿತ್ಸೆ ಬಗ್ಗೆ ಅಷ್ಟಾಗಿ ಪ್ರಚಾರವಿಲ್ಲದಿದ್ದರೂ ಡಾ.ತ್ರಾಸಿ ನೀಡುತ್ತಿದ್ದ ಚಿಕಿತ್ಸಾ ವಿಧಾನ ಮತ್ತು ಅದರ ಪರಿಣಾಮದಿಂದಾಗಿ ಮುಂಬೈನಾದ್ಯಂತ ಬೇಗನೆ ಡರ್ಮಾಟೋಸರ್ಜರಿ ಮನೆ ಮಾತಾಯಿತು. ಇಂದು ಡಾ.ತ್ರಾಸಿ ಮುಂಬೈನಲ್ಲಿ ಮೂರು ಕ್ಲಿನಿಕ್‍ಗಳನ್ನು ಹೊಂದಿದ್ದು, ರಾಮಕೃಷ್ಣಾ ಮಿಷನ್ ಆಸ್ಪತ್ರೆ, ಆಶಾ ಪರೆಖಾ ಆಸ್ಪತ್ರೆ ಹಾಗೂ ಇಂಡಿಯನ್ ಏರ್‍ಲೈನ್ಸ್, ಏರ್ ಇಂಡಿಯಾಗಳಿಗೂ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ತಮ್ಮ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸುವ ಡಾ.ತ್ರಾಸಿ ‘ಅನೇಕರು ನನ್ನನ್ನು ಸ್ಕಿನ್ ಸ್ಪೆಷಲಿಸ್ಟ್ ಎಂದು ಹೇಳುತ್ತಾರೆ. ಆದರೆ, ನಾನು ಆ ಬಗ್ಗೆ ಅಭ್ಯಾಸವನ್ನೇ ಮಾಡಿಲ್ಲ’ ಎನ್ನುತ್ತಾರೆ.

ಮಗಳಿಗೆ ಸಹಾಯಕಿ

ಸದ್ಯ ಡಾ.ತ್ರಾಸಿ ಚರ್ಮ ತಜ್ಞೆಯಾಗಿರುವ ತಮ್ಮ ಮಗಳು ಡಾ. ಶೆಫಾಲಿ ನೆರುರ್ಕರ್ ಅವರಲ್ಲಿ ಸಹಾಯಕಿಯಾಗಿದ್ದಾರೆ. ಶೆಫಾಲಿ ವೈದ್ಯ ವೃತ್ತಿಗೆ ಪ್ರವೇಶಿಸುವ ಮೂಲಕ ತ್ರಾಸಿ ಕುಟುಂಬದ ಮೂರನೇ ತಲೆಮಾರು ವೈದ್ಯರಾದಂತಾಗಿದೆ. ಗೈನೆಕೋಲೊಜಿ ಅಥವಾ ಡೆಂಟಿಸ್ಟ್ ಆಗುವ ಅವಕಾಶವಿದ್ದರೂ ಶೆಫಾಲಿ ಮಾತ್ರ ತಾಯಿಯ ಹಾದಿಯಲ್ಲೇ ನಡೆಯಲು ನಿರ್ಧರಿಸಿ ಸ್ಕಿನ್ ಸ್ಪೆಷಲಿಸ್ಟ್ ಆಗಿದ್ದಾರೆ.

ಲೇಖಕರು: ಪ್ರೀತಿ ಚಮಿಕುಟ್ಟಿ

ಅನುವಾದಕರು: ಗಿರಿ