ಚಿತ್ರ ವಿಚಿತ್ರ ಹೆಸರಿನ ಹೋಟೆಲ್- ಹಾರ್ನ್ ಓಕೆ ಪ್ಲೀಸ್..

ವಿಸ್ಮಯ

0

ಲಕ್‍ದಿಖಲಾಜಾ, ಸರ್ಕಾರ ರಾಜ್‍ಮಾ ಸಮೋಸಾ, ಪೊಪೊಯ್ ದಾ ವಡಾ, ಆಲೂ ಜೀರಾ ಮಿಲಾಪ್ ಇದೆನಾಪ್ಪ ಚಿತ್ರ ವಿಚಿತ್ರವಾಗಿ ಹೆಸರುಗಳು ಅಂದುಕೊಂಡರಾ.. ಈ ಚಿತ್ರ ವಿಚಿತ್ರವಾಗಿ ಕಾಣುವ ಈ ಹೆಸರುಗಳು ಹೋಟೆಲ್ ಒಂದರ ಮೆನುವಿನಲ್ಲಿ ಕಾಣಸಿಗುವ ಖಾದ್ಯಗಳು.. ತಿಂಡಿಗಳ ಹೆಸರೇ ಹೀಗೆ ಇದೆ ಅಂದ್ರೆ ಹೋಟೆಲ್ ಹೆಸರು ಇನ್ನು ಹೇಗೆ ಇರಬೇಕು ಅಲ್ವಾ.. ಈ ವಿಚಿತ್ರ ತಿಂಡಿಗಳ ಹೋಟೆಲ್‍ನ ಹೆಸರು ಹಾರ್ನ್ ಓಕೆ ಪ್ಲೀಸ್..!

ಹಾರ್ನ್ ಓಕೆ ಪ್ಲೀಸ್ ಹೆಸರಿನಷ್ಟೇ ವೈವಿದ್ಯಮಯ ಖಾದ್ಯ ಪಟ್ಟಿಯನ್ನು ಹೊಂದಿದೆ.. ಹೈವೆಗಳಲ್ಲಿ ಹೋದಾಗ ದಾಬಾ ಶೈಲಿಯ ತಿಂಡಿಗಳನ್ನು ನೆನಪು ಮಾಡುವ, ಜೊತೆಗೆ ಸಂಪೂರ್ಣ ಹೊಸ ರೀತಿಯ ಹೆಸರು, ಬಗೆ ಬಗೆಯ ಖಾದ್ಯಗಳು ತನ್ನ ಪಟ್ಟಿಗೆ ಸೇರಿಸಿ ಗ್ರಾಹಕರನ್ನು ಹೊಸ ರೀತಿಯಲ್ಲಿ ಸೆಳಯಲು ಸಜ್ಜಾಗಿದೆ ಹಾರ್ನ್ ಓಕೆ ಪ್ಲೀಸ್ ಹೋಟೆಲ್. ಹಾರ್ಟ್ ಆಫ್ ಸಿಟಿ ಅಂತ ಕರೆಸಿಕೊಳ್ಳುವ ಇಂದಿರಾನಗರದಲ್ಲಿ ಸುಮಾರು 90ಕ್ಕೂ ಹೆಚ್ಚು ಹೋಟೆಲ್- ರೆಸ್ಟೋರೆಂಟ್‍ಗಳು ಇರೋ ಜಾಗ. ಇವುಗಳ ಮಧ್ಯೆ ಹೊಸದೊಂದು ಸೇರ್ಪಡೆಯಾಗಿದೆ ಹಾರ್ನ್ ಓಕೆ ಪ್ಲೀಸ್ ಹೋಟೆಲ್.

ಇದನ್ನು ಓದಿ

ಹಸಿತ್ಯಾಜ್ಯ ಸಂಸ್ಕರಣೆಯಿಂದ ಅಡುಗೆ ಅನಿಲ, ತರಕಾರಿ ಬೆಳೆದ ಬೆಂಗಳೂರಿಗರು

ಹಾರ್ನ್ ಓಕೆ ಪ್ಲೀಸ್ ಹೋಟೆಲ್‍ನಲ್ಲಿ ಏನಾಲ್ಲ ಸಿಗುತ್ತೆ..?

ವಿವಿಧ ರಾಜ್ಯ- ದೇಶಗಳ ಕೆಲ ಆಯ್ದ ತಿಂಡಿಗಳು ಇಲ್ಲಿ ಲಭ್ಯವಿದೆ. ಹೊಸ ರೀತಿಯ ಹೆಸರುಗಳ ಮೂಲಕ ಸೆಳೆಯೋ ಈ ಹೋಟೆಲ್‍ನಲ್ಲಿ ಲಕ್‍ದಿಖಲಾಜಾ, ಸರ್ಕಾರ ರಾಜ್‍ಮಾ ಸಮೋಸಾ, ಪೊಪೊಯ್ ದಾ ವಡಾ, ಶ್ರೂಮ್ ಮಚಾಲೇ, ಸ್ಕೆವೆರ್ ಕಾ ಬಚ್ಚಾ, ಅಜಯ್ ಬೈಗನ್ ಸ್ಪೆಷಲ್, ನಾನಾ ಪಾಟಿ ಕರ್, ಮುರ್ಗ್ ಮಲಾಯಿ ಮಾರ್ಕೆ, ಚಿಕನ್ 65, ಆಲೂ ಜೀರಾ ಮಿಲಾಪ್, ಕಾಲ್‍ಮಿರ್ಚಿಕನ್ ಸುಕ್ಕಾ, ಚೆನ್ನಾ ದೇ ದೇ.. ಹೀಗೆ ಎಲ್ಲ ಮಾಂಸಾಹಾರಿ ಮತ್ತು ಸಸ್ಯಹಾರಿ ಆಹಾರಗಳು ಇಲ್ಲಿ ಸಿಗಲಿವೆ. ಕೇವಲ ಊಟ ತಿಂಡಿಗಳಲ್ಲಿ ಮಾತ್ರವಲ್ಲದೇ ಹೋಟೆಲ್ ವಿನ್ಯಾಸದಲ್ಲೂ ಸಂಪೂರ್ಣ ಹೊಸ ವೈಶಿಷ್ಟ್ಯವಿದೆ.. ಇನ್ನು ಹಾರ್ನ್ ಓಕೆ ಎನ್ನುವ ಹೆಸ್ರೇ ಸಾಕು ಹಾದಿಗೆ ಹೋಗುವವರನ್ನು ತಕ್ಷಣ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತದೆ. ಒಳಗೆ ಎಂಟ್ರಿ ಆದರೆ ಯಾವುದೋ ದಾಬಾದ ನೆನಪು ಮನಸ್ಸಿಗೆ ಹೋಗುವುದು ಖಂಡಿತ.. ಒಂದು ರೀತಿಯ ಹೊಸತನ ಕಣ್ಮನ ಸೆಳೆಯುತ್ತದೆ..

ಹಾರ್ನ್ ಓಕೆ ಪ್ಲೀಸ್ ನಾ ಹೆಡ್..?

ಹಾರ್ನ್ ಓಕೆ ಪ್ಲೀಸ್ ನಾ ಮಾಸ್ಟರ್ ಮೈಂಡ್ ಮಾಲೀಕ ವಿಕ್ರಮ್ ಬದೇರಿಯ.. ವಯಸ್ಸು ಇನ್ನು 26ರ ಹರೆಯದ ಈ ಯುವಕನ ಕನಸಿನ ಕೂಸು ಇದು.. ಹೋಟೆಲ್ ಉದ್ಯಮವನ್ನು ವಿಭಿನ್ನವಾಗಿ ಮಾಡಬೇಕೆಂಬ ಆಸೆಯಿಂದ ಸುಮಾರು ಒಂದು ವರ್ಷಗಳ ಕಾಲ ಪ್ರವಾಸದಲ್ಲಿಯೇ ಕಳೆದಿದ್ರು ವಿಕ್ರಮ್.. ದೇಶದ ಎಲ್ಲಾ ಭಾಗಗಳನ್ನು ಸುತ್ತಿ, ಅಲ್ಲಿನ ವಿಶೇಷ ತಿಂಡಿಗಳನ್ನು ಸವಿದು ಅನುಭವಿಸಿದ್ವರು.. ಮುಖ್ಯವಾಗಿ ದಾಬಾಗಳಲ್ಲಿ ಸಿಗುವ ಕೆಲವು ಅಪರೂಪದ ತಿಂಡಿಗಳನ್ನು ಅಧ್ಯಯನ ಮಾಡಿದ್ದಾರೆ. ಆಹಾರ ತಜ್ಞರನ್ನು ಒಳಗೊಂಡ ನಮ್ಮ ತಂಡ ಸಾಕಷ್ಟು ಕಾಳಜಿ ವಹಿಸಿ ಹೊಸ ಹೊಸ ಖಾದ್ಯಗಳನ್ನು ಪರಿಚಯಿಸಿದೆ.ನಮ್ಮ ಈ ಹೊಸ ಪ್ರಯತ್ನವನ್ನು ಗ್ರಾಹಕರು ಮೆಚ್ಚುತ್ತಾರೆ ಅನ್ನುವ ಭರವಸೆ ಇದೆ ಅಂತಾರೆ ವಿಕ್ರಮ್..

ಏನ್ ಹೇಳ್ತಾರೆ ಗ್ರಾಹಕರು..?

ದಾಬಾವನ್ನು ನೆನಪಿಸುವ ಈ ಹೋಟೆಲ್ ನಿಜಕ್ಕೂ ಇಷ್ಟವಾಗುತ್ತೆ.. ಫ್ಯಾಮಿಲಿ ಫ್ರೆಂಡ್ಸ್ ಜೊತೆ ಬಂದಾಗ ಇಷ್ಟದ ಹೊಸ ತಿಂಡಿಗಳ ಸವಿಯನ್ನ ಸವಿಯುತ್ತೇನೆ.. ಇಲ್ಲಿ ವೆಜ್ ಹಾಗೂ ನಾನ್‍ವೆಜ್ ಇರೋದ್ರಿಂದ ತುಂಬಾ ಚಾಯ್ಸ್​​ಗಳಿವೆ.. ಇಲ್ಲಿನ ಸರ್ವೀಸ್ ಕೂಡ ಅಷ್ಟೇ ತುಂಬಾ ಚೆನ್ನಾಗಿ ಇರುತ್ತೆ. ಇನ್ನು ಹೋಟೆಲ್ ಹೆಸರು ನೋಡಿಯೇ ಮೊದಲು ಬಂದಿದ್ದು, ಏನ್ ಸ್ಪೆಷಲ್ ಇರಬಹುದು ಅಂತ? ಬಂದ್ಮೇಲೆ ಗೊತ್ತಾಯಿತು ಸಾಕಷ್ಟು ವಿಶೇಷಗಳಿವೆ ಅಂತ. ಇನ್ನು ಇಲ್ಲಿ ಸಿಗುವ ಕಾಲ್‍ಮಿರ್ಚಿಕನ್ ಸುಕ್ಕಾ ಸಖತ್ ಟೆಸ್ಟಿ ಆಗಿರುತ್ತೆ.
                                       ರಜಿನಿ, ಗ್ರಾಹಕಿ

ಇನ್ನು ನಗರದ ಒಳಗಡೆಯೇ ಇರೋದ್ರಿಂದ ವಿಕೆಂಡ್ ಟೈಮ್‍ನಲ್ಲಿ ಬಂದು ಎಂಜಾಯ್ ಮಾಡಬಹುದು.. ಬೇರೆ ಬೇರೆ ದೇಶದ ಖಾದ್ಯಗಳು ಇರೋದು ಪ್ಲಸ್ ಪಾಯಿಂಟ್ ಅಂತಾರೆ ಸ್ವಪ್ನ. ಮನೆಯಲ್ಲಿ ಅದೇ ತಿಂಡಿಗಳನ್ನು ತಿಂದು ಬೇಹಾರಾಗಿರೋವರಿಗೆ ಇದು ಒಳ್ಳೆ ಪ್ಲೇಸ್.. ಮಧ್ಯಾಹ್ನ 12ರಿಂದ ರಾತ್ರಿ 11ರವರೆಗೆ ಓಪನ್ ಇರುತ್ತೆ.

ಅದೇನೆ ಹೇಳಿ ಹೊಸ ಹೆಸರು, ವಿಭಿನ್ನ ತಿಂಡಿಗಳು ನಿಜಕ್ಕೂ ಆಕರ್ಷಿಕವಾಗಿದೆ. ವಿಕ್ರಮ್‍ನ ಹೋಟೆಲ್ ಉದ್ಯಮಕ್ಕೆ, ಹಾಗೇ ಅವ್ರ ಹೊಸ ಆಲೋಚನೆ ಇಂದು ಎಲ್ಲರ ಗಮನ ಸೆಳೆಯುತ್ತಿದೆ. ನೀವು ಕೂಡ ಚಿತ್ರ ವಿಚಿತ್ರ ಹೆಸರಿನ ತಿಂಡಿಗಳನ್ನು ಸವಿಬೇಕು ಅಂತ ಇದ್ದಾರೆ ಒಮ್ಮೆ ಇಂದಿರಾನಗರದಲ್ಲಿ ಇರೋ ಹಾರ್ನ್ ಓಕೆ ಪ್ಲೀಸ್ ಹೋಟೆಲ್​ಗೆ  ಭೇಟಿ ನೀಡಿ.

ಇದನ್ನು ಓದಿ

1. ಸ್ವಂತ ಅನುಭವವೇ ಉದ್ಯಮಕ್ಕೆ ದಾರಿ.. ಇದು ಪಿಕ್ ಮೈ ಲಾಂಡ್ರಿ ಸ್ಟೋರಿ.. !

2. ಸಿಟಿಯಲ್ಲೋಂದು ಹಳ್ಳಿ - ಬನ್ನಿ ಮಕ್ಕಳಿಗೆ ಪ್ರಾಣಿ ಪರಿಚಯ ಮಾಡಿಸಿ

3. ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು, ಜೋಗಪ್ಪ ಸಮುದಾಯದ ಹಕ್ಕುಗಳಿಗಾಗಿ ಹೋರಾಟ: ಸಾಮಾಜಿಕ ಬದಲಾವಣೆಗೆ ಸಾಲಿಡಾರಿಟಿ ಫೌಂಡೇಷನ್ ಸಂಕಲ್ಪ

Related Stories