ಬಾಡಿಗೆಗೆ ಬಟ್ಟೆ ಬೇಕೆ..? ಫ್ಲೈರೋಬ್​ಗೆ ಲಾಗಿನ್​ ಆಗಿ

ಟೀಮ್​ ವೈ.ಎಸ್​. ಕನ್ನಡ

0

ಬಟ್ಟೆಗಳು ಈಗ ಲೈಫ್​ ಸ್ಟೈಲ್​ ಅನ್ನುವುದರಲ್ಲಿ ಬೇರೆ ಮಾತೇ ಇಲ್ಲ. ಸ್ಟೈಲಿಷ್​ ಆಗಿರುವ ಬಟ್ಟೆಗಳು ಬೇಕು. ವಾರ್ಡ್​ ರೋಬ್​ ಕಲೆಕ್ಷನ್​ ಸಖತ್​ ಆಗಿ ಇರಬೇಕು. ಸೀಸನ್​ಗೆ ತಕ್ಕಂತಹ ಬಟ್ಟೆಗಳು ಬೇಕೇ ಬೇಕು. ಟ್ರೆಂಡ್​ ಬೇಕಾಗಿರುವುದು ಕೂಡ ಅನಿವಾರ್ಯ. ಆದ್ರೆ ಕೆಲವೊಮ್ಮೆ ಬಟ್ಟೆಗಳನ್ನು ಖರೀದಿ ಮಾಡುವುದು ಕಷ್ಟದ ಕೆಲಸ. ಆದ್ರೆ ಟ್ರೆಂಡಿ ಆಗಿರುವ ಬಟ್ಟೆಯನ್ನು ತೊಡಲೇಬೇಕು. ಇಂತಹ ಸಮಯಕ್ಕೆ ನಿಮಗೆ ಸಹಾಯ ಮಾಡಲೆಂದೇ ಆನ್​ಲೈನ್​ ತಾಣವೊಂದು ಹುಟ್ಟಿಕೊಂಡಿದೆ. ಅಂದಹಾಗೇ ಇಲ್ಲಿ ಬಟ್ಟೆ ಮಾರಾಟಕ್ಕಿಲ್ಲ, ಬದಲಾಗಿ ಬಾಡಿಗೆಗೆ ಇದೆ.

ನಿಮಗೆ ಅರ್ಜೆಂಟ್​ ಆಗಿ ಬಾಡಿಗೆಗೆ ಬಟ್ಟೆ ಬೇಕಾಗುತ್ತದೆ. ಇನ್ನು ಕೆಲವೇ ಗಂಟೆಗಳು ಅದಕ್ಕಿರುವ ಸಮಯ. ಇಂತಹ ಸಮಯದಲ್ಲಿ ನಿಮ್ಮ ಸಹಾಯಕ್ಕೆಂದು ಒಂದು ಆನ್​ಲೈನ್​ ತಾಣವೊಂದು ಹುಟ್ಟಿಕೊಂಡಿದೆ. ಹೌದು ಫ್ಲೈರೋಬ್​ ಎಂಬ ಸ್ಟಾರ್ಟ್​ಅಪ್​ ಕಂಪನಿ ಈ ರೀತಿಯ ಬಾಡಿಗೆಗೆ ಸಿದ್ಧ ಉಡುಪುಗಳನ್ನು ನೀಡುತ್ತಿದೆ. ಇಲ್ಲಿ ನೀವು ಜಸ್ಟ್​ ಲಾಗ್​ ಇನ್​ ಆದ್ರೆ ಸಾಕು ನಿಮ್ಮ ಆಯ್ಕೆಯ ಬಟ್ಟೆ ನಿಮ್ಮ ಕಣ್ಣೆದುರಿಗೆ ಇರುತ್ತದೆ. ಇಷ್ಟವಾಗಿದ್ದಕ್ಕೆ ಕ್ಲಿಕ್​ ಮಾಡಿದ್ರೆ, ಆನ್​ಲೈನ್​ನಲ್ಲೇ ಆ ಬಟ್ಟೆ ಬುಕ್​ ಆಗಿ ಬಿಡುತ್ತದೆ.

ನೀವು ನಿಮಗೆ ಬೇಕಾದ ಬಟ್ಟೆಯನ್ನು ಬಾಡಿಗೆಗೆ ಪಡೆಯಲು www.flyrobe.com ವೆಬ್​ಸೈಟ್​ಗೆ ಹೋಗಬೇಕು. ನೀವು ಬುಕ್​ ಮಾಡಿದ ಕೆಲವೇ ಗಂಟೆಗಳಲ್ಲಿ ಅದು ಬಂದು ನಿಮ್ಮನ್ನು ತಲುಪುತ್ತದೆ.  ಅತ್ಯಂತ ಕಡಿಮೆ ಬಂಡವಾಳವನ್ನು ಹೂಡಿ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು  ಸಿದ್ಧ ಉಡುಪುಗಳನ್ನು ಬಾಡಿಗೆ ಕೊಡುವ ಸ್ಟಾರ್ಟ್​ಅಪ್​ ಇದಾಗಿದೆ.  ಮುಂಬೈ ಮೂಲದ ಶ್ರೇಯಾಮಿಶ್ರಾ, ತುಷಾರ್​ ಸಕ್ಸೇನಾ ಮತ್ತು  ಪ್ರಣಯ ಸುರಾನಾ ಎಂಬ ಮೂವರು ಸ್ನೇಹಿತರು ಅತ್ಯಲ್ಪ ಬಂಡವಾಳ ಹೂಡಿ ನೂತನ ತಂತ್ರಜ್ಞಾನದಲ್ಲಿ ಉಡುಪುಗಳನ್ನು ಬಾಡಿಗೆ ಕೊಡುವ ಈ ಫ್ಲೈರೋಬ್​ ಎಂಬ ಕಂಪೆನಿಯನ್ನು ತೆರೆದಿದ್ದಾರೆ.

ಇದನ್ನು ಓದಿ: ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

ಈ ಫ್ಲೈರೋಬ್​ ಕಂಪನಿಯಲ್ಲಿ ಪಾರ್ಟಿಗಳು, ಮದುವೆ ಮುಂಜಿಗಳು ಹಾಗೂ ಸಭೆ ಸಮಾರಂಭಗಳಿಗೆ ಹೋಗುವವರಿಗೆ ಸಿದ್ಧ ಉಡುಪುಗಳನ್ನು ಬಾಡಿಗೆ ಕೊಡಲಾಗುತ್ತದೆ. ಗ್ರಾಹಕರು ವೆಬ್​ಸೈಟ್​ ಅಥವಾ ಮೊಬೈಲ್​ ಆ್ಯಪ್​ ಮೂಲಕ ಉಡುಪಗಳನ್ನು ಬುಕ್​ ಮಾಡಿ ಕೆಲವೇ ಗಂಟೆಗಳಲ್ಲಿ ಮನೆ ಬಾಗಿಲಿನಲ್ಲಿ ಸ್ವೀಕರಿಸಿಕೊಳ್ಳಬಹುದು. ಈ ಕಂಪನಿ ಪ್ರಸ್ತುತ ಹೈದರಾಬಾದ್​, ಬೆಂಗಳೂರು, ಮುಂಬೈ ಮಹಾನಗರಗಳಲ್ಲಿ ತನ್ನ  ಸೇವೆಯನ್ನು ನೀಡುತ್ತಿದೆ.

ಈ ಕಂಪನಿಯನ್ನು ಹುಟ್ಟು ಹಾಕಿದ ಮೂವರು ಗೆಳೆಯರು ಮುಂಬೈನ ಐಐಟಿಯಲ್ಲಿ ಪದವಿ ಪಡೆದವರು. ಪದವಿಯ ಅಂತಿಮ ದಿನಗಳಲ್ಲಿ ಒಂದು ಸಂಜೆ ಗೆಳೆಯರೊಬ್ಬರು ಪ್ರಣಯ ಅವರನ್ನು ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದರು. ಪ್ರಣಯ ಮನೆಗೆ ಬಂದು ವಾರ್ಡ್​ ರೋಬ್​ ಎಲ್ಲಾ ತಡಕಾಡಿದರೂ ಒಂದು ಒಳ್ಳೆಯ ಉಡುಪು ಸಿಗಲಿಲ್ಲ! ಈ ಸಮಯದಲ್ಲಿ ಪ್ರಣಯಗೆ ಈ ರೀತಿಯ ಉಡುಪುಗಳನ್ನು ಬಾಡಿಗೆ ಕೊಡುವ ಒಂದು ಕಂಪನಿ ಇದ್ದರೆ ಹೇಗೆ ಎಂಬ ಐಡಿಯಾ ಹೊಳೆಯಿತು. ಅದನ್ನ ತನ್ನ ಇಬ್ಬರು ಗೆಳೆಯರ ಬಳಿ ಹೇಳಿ ಸ್ವಲ್ಪ ದಿನಗಳಲ್ಲೇ ಅದಕ್ಕೊಂದು ರೂಪ ನೀಡಿ  ಕಂಪನಿಯ ಆರಂಭಕ್ಕೆ ಮುನ್ನುಡಿ ಬರೆದರು.

ಬ್ರಾಂಡೆಡ್​ ಉಡುಪುಗಳು ಇಲ್ಲಿ ಲಭ್ಯ

ಈ ಫ್ಲೈರೋಬ್​ ಕಂಪನಿಯಲ್ಲಿ ಮಹಿಳೆಯರು ಮತ್ತು  ಪುರುಷರು ಬಯಸುವಂತಹ ಪ್ರತಿಷ್ಟಿತ   ಬ್ರಾಂಡ್​ಗಳು ಸೇರಿದಂತೆ ಎಲ್ಲಾ ಬ್ರಾಂಡ್​ಗಳು ಜೊತೆಗೆ ಗೆ ಸಾಂಪ್ರದಾಯಿಕ ಮತ್ತು  ಪಾಶ್ಚಿತ್ಯ  ಶೈಲಿಯ ಸಿದ್ಧ ಉಡುಗೆಗಳು ದಿನದ ಲೆಕ್ಕದಲ್ಲಿ ಬಾಡಿಗೆಗೆ ಇಲ್ಲಿ ಲಭ್ಯವಾಗುತ್ತವೆ.

ಈ ಕಂಪನಿಯಲ್ಲಿ ಸುಮಾರು 18 ವರ್ಷದಿಂದ 60 ವರ್ಷ ವಯಸ್ಸಿನವರಿಗೆ ಬೇಕಾದ ಎಲ್ಲ ಸೈಜ್​ನ  ಬಟ್ಟೆಗಳು ಸಿಗುತ್ತವೆ. ಅಲ್ಲದೇ ಗ್ರಾಹಕರು ದಿನದ ಲೆಕ್ಕದಲ್ಲಿ ಮಾತ್ರವಲ್ಲದೆ ಗಂಟೆಗಳ ಲೆಕ್ಕದಲ್ಲಿಯೂ ಉಡುಪುಗಳನ್ನು ಬಾಡಿಗೆಗೆ ಪಡೆಯಬಹುದು.

ಈ ಕಂಪನಿಯನ್ನು ಆರಂಭ ಮಾಡಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ಈ ಫ್ಲೈರೋಬ್​ ಕಂಪನಿ ಸುಮಾರು 5000 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ತಲುಪಿದೆ. ಸಾಕಷ್ಟು ಮಂದಿ ಈ ಕಂಪನಿಯಿಂದ ಉಡುಪುಗಳನ್ನು ಬಾಡಿಗೆ ಪಡೆದು ತಮ್ಮ ಸ್ನೇಹಿತರ ಕಾರ್ಯಕ್ರಮಗಳನ್ನು ಎಂಜಾಯ್​ ಮಾಡಿದ್ದಾರೆ. ಒಂದು ಸಣ್ಣ ಆಲೋಚನೆ ಇಷ್ಟು ದೊಡ್ಡ ಮಟ್ಟದ ಉದ್ಯಮ ಕಟ್ಟಲು ಸಹಕಾರಿಯಾಗಿದೆ, ಅಲ್ಲದೇ ಇದರಿಂದ ಸಾಕಷ್ಟು ಜನರಿಗೆ ಉದ್ಯೊಗವನ್ನು ಸಹ ಈ ಮೂವರು ಗೆಳೆಯರು ನೀಡಿದ್ದಾರೆ.

ಇದನ್ನು ಓದಿ:

1.  ಡಿಜಿಟಲ್​ ಪೇಮೆಂಟ್​ ಕಡೆ ಗಮನ ಕೊಡಿ- ಆಕರ್ಷಕ ಬಹುಮಾನ ಗೆಲ್ಲಿರಿ..!

2. ಇಂಧೋರ್​ನಲ್ಲಿ ಟೆಲಿ ರಿಕ್ಷಾ ಕಿಂಗ್​- ಲೂಧಿಯಾನದ ಕರಣ್​ವೀರ್​ ಸಿಂಗ್​

3. ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

Related Stories