ಮಾರಕ ರೋಗಗಳ ಪತ್ತೆಗೆ ಮೆಡಿಕಲ್ ಕಿಟ್

ಅಗಸ್ತ್ಯ

0

ನೀವು ವೈದ್ಯರ ಬಳಿಗೆ ಹೋಗದೆ, ಔಷಧ ತೆಗೆದುಕೊಳ್ಳದೆ ನಿಮಗೆ ಬಂದಿರುವ ಖಾಯಿಲೆ ಏನು? ಎಂಬುದು ಗೊತ್ತಾದರೆ ಎಷ್ಟು ಚೆನ್ನಾಗಿರುತ್ತದಲ್ಲವೆ. ಅದೇ ರೀತಿ ಡಿಆರ್‍ಡಿಒ ವೈದ್ಯಕೀಯ ಕಿಟ್ಟೊಂದನ್ನು ಅಭಿವೃದ್ಧಿ ಪಡಿಸಿದೆ. ಈ ಆವಿಷ್ಕಾರ್ ಕಿಟ್‍ನಿಂದ ಚಿಕೂನ್ ಗುನ್ಯ, ಡೆಂಘೆ, ಜಪಾನಿಸ್ ಎನ್ಸಫಲೈಟೀಸ್, ಗ್ಲ್ಯಾಂಡರ್ಸ್, ಲ್ಯಾಪ್ಟೋಸ್ಪಿರೊಸಿಸ್, ಪ್ಲೇಗ್‍ನಂತಹ 7 ಮಾರಣಾಂತಿಕ ಖಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಈ ಅತ್ಯಾಧುನಿಕ ವೈದ್ಯಕೀಯ ಕಿಟ್‍ಗಳನ್ನು ಡಿಆರ್‍ಡಿಒ ಸೇನಾ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಿದೆ. ಅಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಆವಿಷ್ಕಾರವನ್ನು ಖಾಸಗಿ ಸಂಸ್ಥೆಗಳಿಗೂ ವರ್ಗಾಯಿಸಲು ಡಿಆರ್‍ಡಿಒ ನಿರ್ಧರಿಸಿದೆ.

ಎಲ್ಲಾ 7 ಕಾಯಿಲೆಗಳಿಗೂ ಪ್ರತ್ಯೇಕವಾಗಿ ಪರೀಕ್ಷಿಸಿಕೊಳ್ಳಬಹುದು. ಅದಕ್ಕಾಗಿ ಪ್ರತ್ಯೇಕ ಕಿಟ್‍ಗಳನ್ನು ಸಿದ್ಧಪಡಿಸಲಾಗಿದೆ. ಎನ್‍ಜೈಮ್​​ ಲಿಂಕ್ಡ್ ಇಮ್ಯುನೊಸೊರ್ಬೆಂಟ್ ಅಸ್ಸೆಸ್ ಮೂಲಕ ಈ ಕಿಟ್‍ಗಳನ್ನು ತಯಾರಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಮತ್ತು ಬಲು ಬೇಗ ಖಾಯಿಲೆಗಳನ್ನು ಪತ್ತೆ ಹಚ್ಚಲು ಈ ಕಿಟ್‍ಗಳಿಂದ ಸಾಧ್ಯವಾಗಲಿದೆ. ಒಂದು ಕಿಟ್‍ನಲ್ಲಿ 100 ಸೆರಮ್‍ನಷ್ಟು ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಕಾಯಿಲೆ ಪತ್ತೆ ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ

ಶ್ವಾಸ್​​​ನಲ್ಲಿ ಮಕ್ಕಳ ಜೀವನದ ಭವಿಷ್ಯವಾಗಿ ಕಿಂಜಲ್ ಶಾ ಉಸಿರಾಡಿದಾಗ..

ಎರಡು ರಾಜ್ಯಗಳಲ್ಲಿ ಪ್ರಯೋಗ

ಡಿಆರ್‍ಡಿಒ ತಯಾರಿಸಿರುವ ಕಿಟ್‍ನಲ್ಲಿ ಡೆಂಘೆಗೆ ಸಂಬಂಧಿಸಿದ ಕಿಟನ್ನು ಈಗಾಗಲೆ ಎರಡು ರಾಜ್ಯಗಳಲ್ಲಿ ಪ್ರಯೋಗಿಸಲಾಗಿದೆ. ಮಧ್ಯಪ್ರದೇಶ ಮತ್ತು ಆಂಧ್ರದಲ್ಲಿ ಡೆಂಘೆ ಕಿಟ್‍ನಿಂದ ಪ್ರಾಯೊಗಿಕ ಪರೀಕ್ಷೆ ನಡೆಸಲಾಗಿದೆ. ಅದು ಅಲ್ಲಿ ಯಶಸ್ವಿಯೂ ಆಗಿದೆ.

ಹಲವು ವಿಧದ ಕಿಟ್:

ಇದೇ ರೀತಿ ದೇಹದಲ್ಲಿ ಪ್ಲೇಗ್ ಖಾಯಿಲೆಗೆ ಕಾರಣವಾಗುವ ಯೆರ್ಸೆನಿಯಾ ಪೆಸಿಟ್ಸ್ ಎಚ್‍ಎ ಮತ್ತು ಎಚ್‍ಎಐ ರೋಗಾಣುಗಳು ಇರುವ ಬಗ್ಗೆ ಪತ್ತೆಗಾಗಿ ಪ್ಲೆಗ್ ಸೆನ್ಸ್ ಕಿಟ್ ತಯಾರಿಸಲಾಗಿದೆ. ಅದರೊಂದಿಗೆ ಕುದುರೆ, ಕತ್ತೆ, ಕೊತಿಗಳ ಜೊಲ್ಲು ಅಥವಾ ಸಿಂಬಳದಿಂದ ಜನರಿಗೆ ತ್ವರಿತವಾಗಿ ಹಬ್ಬುವ

ಗ್ಲಾಂಡರ್ಸ್ ಸ್ಪಾಟ್ ಕಾಯಿಲೆ ಪರೀಕ್ಷೆಗೆ ರಿಕಾಂಬಿನೆಂಟ್ ಪ್ರೋಟೀನ್ ಆಧಾರಿತ ಕಿಟ್ ಸಿದ್ಧಪಡಿಸಲಾಗಿದೆ. ಹಾಗೆಯೇ ಮನುಷ್ಯನ ದೇಹದೊಳಗೆ ಪ್ರಾಣಿಗಳಿಂದ ಹಬ್ಬುವ ಸೋಂಕು ಲ್ಯಾಪ್ಟೋಸ್ಪಿರೊಸಿಸ್ ಬ್ಯಾಕ್ಟಿರಿಯಾ ಪತ್ತೆಗಾಗಿ ಲ್ಯಾಪ್ಟೋ ಸೆನ್ಸ್ ಕಿಟ್, ದಕ್ಷಿಣ ಏಷ್ಯಾ ಅದರಲ್ಲೂ ಭಾರತದಲ್ಲಿ ವ್ಯಾಪಕವಾಗಿ ಹಂದಿ ಮತ್ತು ಕಾಡು ಹಕ್ಕಿಗಳಿಂದ ಹರಡುವ ಜಪಾನಿಸ್ ಎನ್ಸ್‍ಫಲೈಟಿಸ್ ವೈರಸ್ ಪತ್ತೆಗೂ ಕಿಟ್ ಅಭಿವೃದ್ಧಿ ಪಡಿಸಲಾಗಿದೆ.

ಬಳಕೆ ಸುಲಭ:

ಪ್ರತಿ ಕಿಟ್‍ನ್ನು ಸುಲಭವಾಗಿ ಬಳಸಬಹುದಾಗಿದ್ದು ಯಾವುದೇ ಪರಿಣಿತಿಯ ಅವಶ್ಯಕತೆ ಇಲ್ಲ. ಒಂದು ಹನಿ ರಕ್ತ ಇದ್ದರೆ ಸಾಕು ನಿಮಗೆ ಯಾವ ಸೋಂಕು ತಗಲಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ನಂತರ ಅದಕ್ಕೆ ತಕ್ಕ ಹಾಗೆ ಔಷಧವನ್ನು ಪಡೆದುಕೊಳ್ಳಬಹುದು.

ನೂತನ ಕಿಟ್ ಹೆಚ್ಚಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲಕರವಾಗಿದೆ. ಚಿಕೂನ್ ಗೂನ್ಯಾ, ಡೆಂಘೆ ಸೇರಿದಂತೆ ಆ ರೀತಿ ಕಾಯಿಲೆಗಳ ಪತ್ತೆಗೆ ಗ್ರಾಮೀಣ ಆಸ್ಪತ್ರೆಗಳಲ್ಲಿ ಹಲವು ದಿನಗಳು ಬೇಕಾಗುತ್ತವೆ. ಈ ರೀತಿಯ ಕಿಟನ್ನು ಗ್ರಾಮೀಣ ಆಸ್ಪತ್ರೆಯಲ್ಲಿಟ್ಟರೆ ಅಥವಾ ಜನರು ಮನೆಯಲ್ಲಿಟ್ಟುಕೊಂಡರೆ ಖಾಯಿಲೆ ಪತ್ತೆ ಸುಲಭವಾಗಲಿದೆ.

ಶೀಘ್ರದಲ್ಲಿ ಸಾವರ್ಜನಿಕರಿಗೆ ಲಭ್ಯ:

ಈ ಬಹುಪಕಾರಿ ಆವಿಷ್ಕಾರವನ್ನು ಸದ್ಯ ಸೆನೆಯಲ್ಲಿ ಬಳಸಲಾಗುತ್ತಿದೆ. ಈ ಕಿಟ್ ಸೇನೆಯಲ್ಲಿ ದೊಡ್ಡ ಮಟ್ಟದ ಸಹಾಯ ನೀಡುತ್ತಿದೆ. ಅಲ್ಲದೆ ಸೈನಿಕರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳನ್ನು ಶೀಘ್ರದಲ್ಲಿ ಪತ್ತೆ ಮಾಡಿ ಔಷಧ ನೀಡಲು ಸಾಧ್ಯವಾಗಲಿದೆ. ಇದನ್ನು ಈಗ ಸಾರ್ವಜನಿಕರಿಗೂ ನೀಡಲು ಡಿಆರ್‍ಡಿಒ ಉದ್ದೇಶಿಸಿದ್ದು, ಅದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಸಾಮಾನ್ಯ ಜನರ ಬಳಕೆಗೂ ಕಿಟ್ ದೊರೆತರೆ ಡೆಂಘೆ, ಚಿಕೂನ್ ಗೂನ್ಯದಂತಹ ಕಾಯಿಲೆಗಳಿಗೆ ಆದಷ್ಟು ಬೇಗ ಪರಿಹಾರ ನೀಡಬಹುದಾಗಿದೆ.

ಇದನ್ನು ಓದಿ

ಬೈಂಡ್ ಬೈಂಡ್.ಕಾಂ ದೇಸಿ ರುಚಿಗೆ ಒನ್‍ಟಚ್ ಸಲ್ಯೂಷನ್

ಸ್ಯಾನಿಟರಿ ಪ್ಯಾಡ್​​ನ ಪವಾಡ ಮನುಷ್ಯ

ಕ್ಯಾಬ್​​​​ ಸೇವೆಯಲ್ಲಿ ಸೂಪರ್​ ಸಕ್ಸಸ್​​​..!

Related Stories