ಫಂಡಿಂಗ್-ಬಂಡವಾಳ ಹೂಡಿಕೆ: ಹೇಗೆ ಹೂಡಿಕೆದಾರ ಪ್ರಾರಂಭಿಕ ಸಂಸ್ಥೆಗಳ ಮೌಲ್ಯವನ್ನು ಅಳೆಯುತ್ತಾನೆ?

ಟೀಮ್​​ ವೈ.ಎಸ್​​.

0

ಇದು ಅತೀ ಮುಖ್ಯವಾಗಿ ಚರ್ಚೆಯಾಗಲ್ಪಡುವ ಪ್ರಶ್ನೆ. ಹೇಗೆ ಒಬ್ಬ ಹೂಡಿಕೆದಾರ ಆರಂಭಿಕ ಹಂತದಲ್ಲಿರುವ ಸಂಸ್ಥೆಯ ಮೌಲ್ಯವನ್ನು ಅಳೆತಮಾಡುತ್ತಾನೆ ಅನ್ನುವುದು ಮಾರುಕಟ್ಟೆಗೆ ಕಾಲಿಡುವ ಪ್ರತಿಯೊಬ್ಬ ಉದ್ಯಮಿಯೂ ಅರಿತುಕೊಳ್ಳಬೇಕಾದ ವ್ಯವಾಹಾರಿಕ ನೀತಿ. ಆದರೆ ದುರದೃಷ್ಟವಶಾತ್ ಉದ್ಯಮಿಗಳು ಇದನ್ನು ಉದ್ಯಮದ ಯೋಜನೆಗೆ ಅವಲಂಭಿಸಿದಂತೆ ಹೂಡಿಕೆದಾರನ ಆಸಕ್ತಿ ಅಳೆಯಬಹುದು ಎಂದು ಭಾವಿಸಿದ್ದಾರೆ. ಆದರೆ ಆರಂಭಿಕ ಸಂಸ್ಥೆಗೆ ಬಂಡವಾಳ ಹೂಡಿಕೆ ಮಾಡಲು ನಿರ್ದಿಷ್ಟ ಮಾನದಂಡವೊಂದಿದೆ ಅನ್ನುವುದಕ್ಕಾಗಿ ಇಲ್ಲಿ ಕೆಲವು ಸಂಗತಿಗಳನ್ನು ಅವಲೋಕಿಸಿ ಪ್ರಸ್ತಾಪಿಸಲಾಗಿದೆ.

ಇಲ್ಲಿ ಮುಖ್ಯ ಅಂಶವೆಂದರೆ ನಿಮ್ಮ ಉದ್ಯಮದ ಯೋಜನೆಗೆ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಅಗತ್ಯತೆಗಳಿವೆ. ನಿಮ್ಮ ಉದ್ಯಮ ಮಾರುಕಟ್ಟೆಯ ಪಾಲಿಗೆ ಎಷ್ಟು ಅವಶ್ಯಕವಾಗಿದೆ ಅನ್ನುವುದು. ನಿಮ್ಮ ಉದ್ಯಮ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಸಾರವಾಗಿ ಹೇಗೆ ಪೂರೈಕೆ ಮಾಡಬಲ್ಲದು ಅಥವಾ ಬೇಡಿಕೆ ಹಾಗೂ ಪೂರೈಕೆಯ ನಡುವೆ ಅಂತರಗಳಿವೆಯೇ ಅನ್ನುವ ಸಂಗತಿ, ಹಣದ ಬೇಡಿಕೆ ಹಾಗೂ ಪೂರೈಕೆ, ಸಮಯಕ್ಕೆ ಸರಿಯಾಗಿ ಸೇವೆ ಒದಗಿಸುವುದು, ಇತ್ತೀಚೆಗಿನ ಪ್ರಗತಿಯ ಗಾತ್ರ, ಹೂಡಿಕೆದಾರನ ಆಸಕ್ತಿ ವೃದ್ಧಿಸುವ ಉದ್ಯಮದ ವಿಶೇಷ ಅಂಶಗಳೇನಾದರೂ ಇದ್ದಲ್ಲಿ ಅದು, ಉದ್ಯಮದ ಸಾಹಸ ಹಾಗೂ ಹತಾಶೆಯ ಹಂತಗಳನ್ನು ದಾಟಿ ಭವಿಷ್ಯದಲ್ಲಿ ಉದ್ದಿಮೆದಾರನ ಯಶಸ್ಸು ಸಾಧಿಸುವ ಸೂಚನೆ ಸಾಧ್ಯವೇ ಅನ್ನುವ ಅಂಶ ಇಲ್ಲಿ ಗಮನೀಯ.

ಹಾಗಾಗಿ ಇಲ್ಲಿ ಕೆಲವು ಸಂಗತಿಗಳು ಆರಂಭಿಕ ಉದ್ಯಮವೊಂದಕ್ಕೆ ಹೂಡಿಕೆದಾರನ ಆಸಕ್ತಿ ಗಿಟ್ಟಿಸಿಕೊಳ್ಳುವ ಮಾರ್ಗೋಪಾಯಗಳನ್ನು ಗಮನದಲ್ಲಿಟ್ಟುಕೊಂಡು ಬೆಳಕು ಚೆಲ್ಲುವಂತದ್ದಾಗಿದೆ.

ಕೆಲವು ಮೌಲ್ಯಾಧಾರಿತ ಮಾನದಂಡಗಳ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ

• ಡಿಸಿಎಫ್ (ಡಿಸ್ಕೌಂಟ್ ಕ್ಯಾಶ್ ಫ್ಲೋ ಅಥವಾ ರಿಯಾಯತಿ ಹಣದ ಹರಿವು)

• ಮಾರುಕಟ್ಟೆ ಹಾಗೂ ವ್ಯಾವಹಾರಿಕ ವ್ಯತ್ಯಾಸ ಸೂಚಿ

• ಆಸ್ತಿ ಆಧಾರದಲ್ಲಿ ಮೌಲ್ಯ-ಅಂದರೆ ಪುಸ್ತಕದ ಮೌಲ್ಯ ಹಾಗೂ ದ್ರವ್ಯತೆ ಮೌಲ್ಯ

ಈಗಾಗಲೆ ಹೇಳಿದಂತೆ ಆರಂಭಿಕ ಸಂಸ್ಥೆಯ ಮೌಲ್ಯತೆ ಅದಕ್ಕಿರುವ ಮಾರುಕಟ್ಟೆಯ ಅವಶ್ಯಕತೆ ಹಾಗೂ ಸ್ಪಂದನೆಯ ಆಧಾರದಲ್ಲಿರುತ್ತದೆ. ಮುಖ್ಯವಾಗಿ ಅದರ ಪ್ರಸ್ತುತ ಮೌಲ್ಯ ಹಾಗೂ ಭವಿಷ್ಯದಲ್ಲಿ ಆ ನಿರ್ದಿಷ್ಟ ಉದ್ಯಮ ಹೇಗೆ ಲಾಭದಾಯಕ ಅನ್ನುವ ಸಂಗತಿಯೂ ಇಲ್ಲಿ ಮುಖ್ಯ.

ಹೇಗೆ ಹೂಡಿಕೆದಾರ ಹೂಡಿಕೆ ಮಾಡಿದ ನಂತರ ತನ್ನ ಮೌಲ್ಯವನ್ನು ನಿರ್ಧರಿಸಿಕೊಳ್ಳುತ್ತಾನೆ?

ಉದ್ಯಮದ ಅಂತಿಮ ದರದ ಪ್ರಮಾಣ ಅಥವಾ ಅಂತಿಮವಾಗಿ ಆ ಉದ್ಯಮ ಎಷ್ಟರ ಮೌಲ್ಯದಲ್ಲಿ ವ್ಯವಹರಿಸಬಹುದು ಅನ್ನುವ ಸ್ಥೂಲ ಆಲೋಚನೆ ಇಲ್ಲಿ ಹೂಡಿಕೆದಾರನ ಆಸಕ್ತಿ ಸೆಳೆಯಲು ಅತಿ ಮುಖ್ಯ. ಯಾವುದೇ ಹೂಡಿಕೆದಾರನಾದರೂ ತಾನು ಹೂಡುವ ಹಣಕ್ಕೆ ಪ್ರತಿಯಾಗಿ ಆ ನಿರ್ದಿಷ್ಟ ಉದ್ಯಮದಲ್ಲಿ ತನಗೆ ಎಷ್ಟು ಪ್ರತಿಲಾಭ ದೊರೆಯುತ್ತದೆ ಅಥವಾ ಪರ್ಯಾಯವಾಗಿ ತನ್ನ ಉದ್ಯಮದ ಲಾಭದ ಪ್ರತಿಶತಃ ಎಷ್ಟು ಎಂದೇ ಯೋಚಿಸುತ್ತಾನೆ. (ಹೂಡಿಕೆದಾರ ಹೂಡುವ ಹಣವನ್ನು ನಿಮ್ಮ ಕಂಪೆನಿಯ ಭವಿಷ್ಯದ ಮೌಲ್ಯದೊಂದಿಗೆ ಭಾಗಿಸಿದಾಗ = ಆತನ ಆದಾಯದ ಅಂಶ ಪತ್ತೆಯಾಗುತ್ತದೆ)

ಇದನ್ನು ಮುಂದುವರೆಸುವುದಕ್ಕಿಂತ ಮುನ್ನ ಸಂಕ್ಷಿಪ್ತ ನೋಟ:

• ಪ್ರೀ ಮನಿ ಅಥವಾ ಪೂರ್ವ ಹೂಡಿಕೆ=ಪ್ರಸ್ತುತ ಕಂಪೆನಿಯ ಮೌಲ್ಯ

• ಪೋಸ್ಟ್ ಮನಿ ಅಥವಾ ಭವಿಷ್ಯದ ಹಣ = ಹೂಡಿಕೆದಾರ ಹಣ ಹೂಡಿದ ನಂತರ ನಿಮ್ಮ ಸಂಸ್ಥೆಯ ಮೌಲ್ಯ

• ಹಣದ ಮೇಲೆ ಹಣದ ಗುಣಾಕಾರ = ಕಂಪೆನಿಯ ಜೀವಮಾನವಿಡಿ ಹೂಡಿಕೆದಾರ ಹೂಡುವ ಹಣಕ್ಕೆ ಪ್ರತಿಯಾಗಿ ಅಂತ್ಯದಲ್ಲಿ ಆತ ಗಳಿಸುವ ದ್ವಿಗುಣ ಗಳಿಕೆ.

ಯಾವುದೇ ಆದಾಯ ಹಾಗೂ ಆಸ್ತಿಗಳಿಲ್ಲದಿದ್ದಾಗ ಕಂಪೆನಿಯ ಮೌಲ್ಯ:

ಮೌಲ್ಯ ನಿರ್ಧರಿಸುವ ದಿನದವರೆಗೂ ಆರಂಭಿಕ ಕಂಪೆನಿ ಯಾವುದೇ ಮೂಲದ ಆದಾಯ ಅಥವಾ ಆಸ್ತಿಯನ್ನು ಹೊಂದಿರದೇ ಇದ್ದಾಗ ಅದರ ಮೌಲ್ಯ ನಿರ್ಧರಿಸುವುದು ಅತ್ಯಂತ ಕಷ್ಟದ ಕೆಲಸ. ಅದಕ್ಕಿರುವ ಒಂದೇ ಪರಿಹಾರ ಎಂದರೆ ಮಾರುಕಟ್ಟೆಯನ್ನು ಅವಲೋಕಿಸಿ ಯಾವ ಬಗೆಯ ಕಾರ್ಯಾಚರಣೆ ನಡಸಬಹುದು ಎಂದು ತೀರ್ಮಾನಿಸುವುದು. ಶೂನ್ಯದಿಂದ ಆರಂಭವಾಗುವು ಯಾವುದೇ ವ್ಯವಹಾರಗಳೂ ಇಲ್ಲ. ಪ್ರತಿಯೊಂದು ವ್ಯವಹಾರವೂ ಮಾರುಕಟ್ಟೆಯಲ್ಲಿರುವ ಒಂದೇ ಮಾದರಿಯ ಉದ್ಯಮವನ್ನು ಅನುಕರಿಸುವಂತದ್ದೇ ಆಗಿರುತ್ತದೆ. ಮಾರುಕಟ್ಟೆಯ ದರ ವಿಂಗಡನೆ ಮಾದರಿಯ ಮೌಲ್ಯ ಇದಕ್ಕಿರುವ ಸಕಾರಾತ್ಮಕ ದಾರಿ.

ಆರಂಭಿಕ ಕಂಪೆನಿಯ ಮೌಲ್ಯವನ್ನು ಅಳೆಯಲು ಕೆಲವು ಅತ್ಯಗತ್ಯ ಮಾಹಿತಿ ಪಡೆದುಕೊಳ್ಳಲೇಬೇಕು. ಅವುಗಳಲ್ಲು ಪ್ರಮುಖವಾದವುಗಳು ಇಲ್ಲಿವೆ.

• ಮಾರುಕಟ್ಟೆಯ ಸಮೀಕ್ಷೆ (ಮಾರ್ಕೆಟ್ ಸರ್ವೇ)-ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉದ್ಯಮದ ಮೇಲೆ ಜನರಿಗಿರುವ ಎಲ್ಲಾ ಬಗೆಯ ಅಭಿಪ್ರಾಯಗಳ ಮಾಹಿತಿ ಸಂಗ್ರಹಣೆ.

• ಕಂಪೆನಿಗಳ ನಡುವಿನ ವ್ಯತ್ಯಾಸ ತಿಳಿಸುವ ಮಾಹಿತಿ-ಉದ್ಯಮದಲ್ಲ ಈಗಾಗಲೆ ಕ್ರಿಯಾಶೀಲವಾಗಿರುವ ಸಂಸ್ಥೆಗಳ ಕಾರ್ಯಾಚರಣೆಯಲ್ಲಿರುವ ವ್ಯತ್ಯಾಸ ತಿಳಿಸುವಂತಹ ಸಮರ್ಪಕ ಮಾಹಿತಿ.

• ಭವಿಷ್ಯದ ರೂಪುರೇಷೆ-ಮುಂದಿನ 5 ವರ್ಷಗಳಿಗೆ ಅನ್ವಯಿಸುವಂತೆ ಎಲ್ಲಾ ಭವಿಷ್ಯದ ನಿರೀಕ್ಷಿತ ಒಳಹರಿವು ಹಾಗೂ ಹೊರಹರಿವು, ನಿವ್ವಳ ಆದಾಯ, ಆಸ್ತಿ, ನಷ್ಟದ ಹೊಣೆಗಾರಿಗೆಯ ಸ್ಥಿತಿ.

ಇಲ್ಲಿ ಅನೇಕ ವಿಧಾನಗಳಿವೆಯಾದರೂ ಅವುಗಳಲ್ಲಿ ಗುಣಾತ್ಮಕ ವಿಧಾನವೆಂದರೆ ಇನ್ಸ್ಟಿಂಕ್ಚುಯಲ್ ಅಥವಾ ಸಹಜ ಮಾದರಿ ವಿಧಾನ. ಪ್ರಾರಂಭಿಕ ಹಂತದ ಸಂಸ್ಥೆಗಳ ಹಾಗೂ ಕಂಪೆನಿಯ ಬೆಳವಣಿಗೆ ಸಂದರ್ಭದಲ್ಲಿ ಜೊತೆಗೆ ಹಣಕಾಸಿನ ಮಾಹಿತಿ ಅಳೆಯಲು ಈ ಸಹಜ ಗುಣಾತ್ಮಕ ಮಾದರಿ ವಿಧಾನವನ್ನು ಹೆಚ್ಚಾಗಿ ಬಳಸುತ್ತಾರೆ.

ಈ ಸಹಜ ಮಾದರಿ ವಿಧಾನ ಸಂಪೂರ್ಣವಾಗಿ ಗುಣಾತ್ಮಕ ಅವಲೋಕನವನ್ನೇ ಅವಲಂಭಿಸಿಲ್ಲ. ಇದು ಕೇವಲ ಹೂಡಿಕೆದಾರನ ಅನುಭವಗಳನ್ನು ಆಧರಿಸಿ ಒಳ ಹೂಡಿಕೆ ಹಾಗೂ ಅಂತಿಮ ದರದ ಆಧಾರದಲ್ಲಿ ಮೌಲ್ಯ ಅಳೆಯುವ ವಿಧಾನವಾಗಿದೆ.

ಪರಿಮಾಣಾತ್ಮಕ ವಿಧಾನ ಬೇರೆಯ ವಿಧಾನವಲ್ಲದಿದ್ದರೂ ಇದು ಇನ್ನಷ್ಟು ಸಮರ್ಪಕ ಚಿತ್ರಣವನ್ನು (ಮೌಲ್ಯಾಧಾರಿತ ಮಾಧರಿ ವಿಧಾನದ ಅಂಕಿ ಅಂಶಗಳನ್ನೂ ಬಳಸಿಕೊಂಡು) ನೀಡುವ ಮೂಲಕ ಸಂಸ್ಥೆಯ ಸಾಮರ್ಥ್ಯದ ಸರಣಿ ಹಾಗೂ ಅಂತಿಮ ರೂಪುರೇಷೆಗಳನ್ನು ನೀಡುತ್ತದೆ.

ಈ ರೀತಿ ಅಳತೆಯಿಂದಾಗಿ ಮಾರುಕಟ್ಟೆ, ಹಾಗೂ ವ್ಯವಹಾರಿಕ ತುಲನಾತ್ಮಕ ವ್ಯತ್ಯಾಸಗಳನ್ನು ಅಳತೆ ಮಾಡುವುದು ಸುಲಭ. ಈ ಬಗೆಯ ವಿಧಾನಗಳನ್ನು ಅನುಸರಿಸುವ ಮೂಲಕ ಹೂಡಿಕೆದಾರರು ತಮ್ಮ ಹೂಡಿಕೆಯ ಹಣದ ವ್ಯಾಪ್ತಿ, ಆದಾಯ ಗಳಿಕೆ ಹಾಗೂ ಭವಿಷ್ಯದ ಯೋಜನೆಗಳನ್ನು ನಿರ್ಧರಿಸುತ್ತಾರೆ.

ಹೂಡಿಕೆದಾರರನ್ನು ಆಕರ್ಷಿಸುವುದೇನು?

ಗ್ರಿಪ್ಪಿಂಗ್ ಅಥವಾ ಫೂಟೇಜ್:

ಮುಜಖ್ಯವಾಗಿ ಕಂಪೆನಿಯ ಉತ್ಪನ್ನ ಅಥವಾ ಸೇವೆಗಳು ಎಷ್ಟರ ಮಟ್ಟಿಗೆ ಮಾರುಕಟ್ಟೆಯಲ್ಲಿ ಸೆಳೆತ ಹೊಂದಿವೆ ಅನ್ನುವ ಅಂಶ ಹೂಡಿಕೆದಾರನ ಆಸಕ್ತಿಗೆ ಕಾರಣ. ಉಳಿದ ಔದ್ಯಮಿಕ ಅಂಶಗಳು ಅಷ್ಟು ಸಮರ್ಥನೀಯವಲ್ಲದಿದ್ದರೂ ಈ ಅಂಶ ಪ್ರಬಲವಾಗಿದ್ದಾಗೆ ಹೂಡಿಕೆದಾರ ಸಂಸ್ಥೆಗೆ ಬಂಡವಾಳ ಒದಗಿಸಲು ಸಿದ್ಧನಾಗುವ ಸಾಧ್ಯತೆಯಿದೆ.

ಆದಾಯ:

ಮಾಡಿರುವ ಹೂಡಿಕೆ ಹಣಕ್ಕೆ ಪ್ರತಿಯಾಗಿ ಆ ನಿರ್ದಿಷ್ಟ ಸಂಸ್ಥೆ ವಾಪಾಸು ಮಾಡುವ ನಿವ್ವಳ ಆದಾಯ ಪ್ರತಿಯೊಬ್ಬ ಹೂಡಿಕೆದಾರನ ಅತಿ ಪ್ರಮುಖ ಆಸಕ್ತಿ. ಇದು ಸಾಕಷ್ಟು ಆದಾಯ ಗಳಿಕೆಯ ಹಂತಗಳಿರುವ ಪ್ರಾರಂಭಿಕ ಕಂಪೆನಿಗಳಲ್ಲಿ ಮುಖ್ಯವಾಗಿರುತ್ತದೆ. ಒಂದು ವೇಳೆ ಬಳಕೆದಾರ ಅಥವಾ ಗ್ರಾಹಕರ ಬೇಡಿಕೆಗಳಿಗೆ ಹೆಚ್ಚಿನ ದರದಲ್ಲಿ ಸೇವೆ ಒದಗಿಸಿದರೆ ಸಂಸ್ಥೆಯ ಬೆಳವಣಿಗೆ ನಿಧಾನಗತಿಯಲ್ಲಿರುತ್ತದೆ. ಫಲಿತಾಂಶ ಸಂಸ್ಥೆ ದೀರ್ಘಕಾಲದ ಬೆಳವಣಿಗೆ ಕಾಣುವಲ್ಲಿ ವಿಫಲವಾಗುತ್ತದೆ.

ಹೂಡಿಕೆದಾರ ಲಾಬ ಗಳಿಕೆಯನ್ನೇ ಮಾನದಂಡವನ್ನಾಗಿಸಿ ಹೂಡಿಕೆ ಮಾಡುತ್ತಾನೆ ಅನ್ನುವುದು ಮುಖ್ಯವಾದರೂ ಪ್ರಾರಂಭಿಕ ಕಂಪೆನಿಗಳಲ್ಲಿ ಲಾಭಗಳಿಕೆಗಿಂತ ನೆಲೆ ನಿಲ್ಲುವುದು ಅತಿ ಮುಖ್ಯವಾಗಿರುತ್ತದೆ. ನೆಲೆ ನಿಂತ ಬಳಿಕ ಅಭಿವೃದ್ಧಿ ಹಾಗೂ ಬೆಳವಣಿಗೆ ಸಾಧಿಸಿದ ಬಳಿಕ ಸಂಸ್ಥೆಗೆ ನಿರೀಕ್ಷೆ ಮೀರಿದ ಲಾಭ ಬರಲಾರಂಭಿಸುತ್ತದೆ.

ಸಂಸ್ಥಾಪಕನ ಸಾಮಾಜಿಕ ಸ್ಥಾನಮಾನ ಹಾಗೂ ಸಾಧನೆ:

ಹೊಸದಾಗಿ ಮಾರುಕಟ್ಟೆಗೆ ಕಾಲಿಡುವ ಉದ್ಯಮಿಯ ಅನುಭವ ಹಾಗೂ ಈ ಕ್ಷೇತ್ರದಲ್ಲಿ ಆತನ ಸಾಧನೆ ಜೊತೆಗೆ ಸಂಸ್ಥಾಪಕ ಅನ್ನಿಸಿಕೊಂಡ ವ್ಯಕ್ತಿಯ ಪರಿಶ್ರಮವನ್ನೂ ಹೂಡಿಕೆದಾರ ಗಮನಿಸುತ್ತಾನೆ. ಉದ್ಯಮಿಯ ಸಾಮಾಜಿಕ ಗೌರವದ ಜೊತೆಗೆ ಅವನ ಮುಂದಿನ ಆಲೋಚನೆಯೇನು ಅನ್ನುವುದು ಇಲ್ಲಿ ಅಳತೆಗೆ ನಿಲುಕುವ ವಸ್ತುವಾಗಿರುತ್ತದೆ. ಹಿಂದೆ ಆ ಉದ್ಯಮಿ ಯಾವುದಾದರೂ ಸಂಸ್ಥೆಯಿಂದ ಹೊರ ಬಿದ್ದಿದ್ದನಾ ಅಥವಾ ಹಿಂದೆ ಸರಿದಿದ್ದನಾ ಅನ್ನುವ ಸಂಗತಿಯನ್ನೂ ಹೂಡಿಕೆದಾರ ಗಮನಿಸುತ್ತಾನೆ. ವ್ಯಾವಹಾರಿಕ ಮಾದರಿಯಲ್ಲಿ ಯದ್ಯಮವನ್ನು ಯಶಸ್ಸಿನತ್ತ ಕೊಂಡೊಯ್ಯಬಲ್ಲ ಸಾಮರ್ಥ್ಯ ಆ ವ್ಯಕ್ತಿಗಿದೆಯಾ ಅನ್ನುವ ವಿಷಯವೂ ಮೌಲ್ಯ ಹೊಂದುತ್ತದೆ. ಕೊನೆಯಲ್ಲಿ ಸಂಸ್ಥಾಪಕ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ಸಹ ಅಳತೆಯ ವ್ಯಾಪ್ತಿಗೆ ಸೇರುತ್ತದೆ.

ಉಪಸಂಹಾರ:

ಈ ಚರ್ಚೆಯನ್ನು ಪೂರ್ಣಗೊಳಿಸುವ ಮುನ್ನ ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ವ್ಯವಹಾರದ ಭಾಷೆ ಅಂದರೇ ಅದು ಕೇವಲ ಹಣ ಮಾತ್ರ. ಹೂಡಿಕೆದಾರರ ಗಮನ ಸಂಸ್ಥೆಯ ವ್ಯಾಪ್ತಿಯೊಳಗೆ ಬರಬೇಕೆಂದರೆ ಅದರ ಮೌಲ್ಯ ಮೊದಲೇ ನಿರ್ಧಾರವಾಗಿರಬೇಕು. ಫಂಡಿಂಗ್ ಅಥವಾ ಹೂಡಿಕೆ ಮಾಡುವ ಮುಂಚೆ ಒಬ್ಬ ಹೂಡಿಕೆದಾರ ಸಂಸ್ಥೆಯ ಮಾರುಕಟ್ಟೆಯ ವ್ಯಾಪ್ತಿ, ಸಾಮರ್ಥ್ಯ, ಟಾರ್ಗೆಟ್ ಮಾರುಕಟ್ಟೆ ಹಾಗೂ ಗ್ರಾಹಕ, ಅಭಿವೃದ್ಧಿ ಅಥವಾ ಬೆಳವಣಿಗೆ ಸಾಧಿಸಬಹುದಾದ ಸಾಧ್ಯತೆ ಹಾಗೂ ಭವಿಷ್ಯದಲ್ಲಿ ಲಾಭದಾಯಕವಾಗುವ ಸೂಚನೆ ಇವೆಲ್ಲವನ್ನೂ ಗಣನೆಯಲ್ಲಿಟ್ಟುಕೊಂಡಿರುತ್ತಾನೆ.

Related Stories