ಪ್ರೀತಿಯಲ್ಲಿ ಬೀಳಿಸುವ ಡೇಟಿಂಗ್​ ಸೈಟ್​​: ಕ್ವಾಕ್​​ಕ್ವಾಕ್​​ನಲ್ಲಿದೆ ಸ್ಪೆಷಲ್​​​ ಥೀಮ್​​

ಟೀಮ್​​ ವೈ.ಎಸ್​​.

ಪ್ರೀತಿಯಲ್ಲಿ ಬೀಳಿಸುವ ಡೇಟಿಂಗ್​ ಸೈಟ್​​: ಕ್ವಾಕ್​​ಕ್ವಾಕ್​​ನಲ್ಲಿದೆ ಸ್ಪೆಷಲ್​​​ ಥೀಮ್​​

Friday October 02, 2015,

4 min Read

ಯುಎನ್ ವರದಿಯ ಪ್ರಕಾರ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ. ಆನ್​ಲೈನ್ ಡೇಟಿಂಗ್ ಉದ್ಯಮಗಳಿಗೆ ಹೇಳಿ ಮಾಡಿಸಿದ ವೇದಿಕೆ. ಆನ್​ಲೈನ್​​​ ಡೇಟಿಂಗ್ ಈ ಹಿಂದೆ ಹತಾಶೆಗೊಂಡ ಜನರಿಗೆ ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳುವ ತಾಣವೆಂದು ಕರೆಸಿಕೊಳ್ಳುತ್ತಿತ್ತು. ಆದ್ರೆ ಇತ್ತೀಚೆಗೆ ವಿಶ್ವದಾದ್ಯಂತ ಸಾಮಾನ್ಯ ಜನರು ಕೂಡ ಆನ್​ಲೈನ್​​ ಡೇಟಿಂಗ್​​ಗೆ ಮನಸೋಲುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಟಿಂಡರ್ ಆನ್​ಲೈನ್​​​ ಡೇಟಿಂಗ್ ಅಂದಾಜು 1.6 ಬಿಲಿಯನ್ ಅಮೆರಿಕನ್ ಡಾಲರ್​​ನಷ್ಟು ಉದ್ಯಮದಲ್ಲಿ ತೊಡಗಿಸಿಕೊಂಡಿದೆ. ಭಾರತೀಯ ಉದ್ಯಮಗಳು ಅವಕಾಶಗಳಿಂದ ದೂರ ಉಳಿದಿಲ್ಲ. ಮಾರ್ಚ್ 2015ರಂದು ಭಾರತೀಯ ಆ್ಯಪ್ ಟ್ರೂಲಿ ಮ್ಯಾಡಿ ಮೊದಲ ಹಂತದ ಹೂಡಿಕೆಯನ್ನ 35 ಕೋಟಿ ರೂಪಾಯಿಗಳಿಗೆ ಏರಿಸಿತ್ತು. ಹಾಗೆಯೇ 2015 ಜುಲೈರಂದು ಐಡಿಜಿ ಉದ್ಯಮ, ಡೇಟಿಂಗ್ ಆ್ಯಪ್ ಆದ ಐ ಕ್ರಾಶ್ ಫ್ಲಶ್ ಮೇಲೆ ಬಾರೀ ಪ್ರಮಾಣದಲ್ಲಿ ಮೊತ್ತವನ್ನ ಬಹಿರಂಗಪಡಿಸದೆ ಹೂಡಿಕೆ ಮಾಡಿದೆ. ಅದೇ ರೀತಿ ಮಾರುಕಟ್ಟೆಯಲ್ಲಿರುವಂತದ್ದು ಕ್ವಾಕ್ ಕ್ವಾಕ್. ಇನ್. 2010ರಲ್ಲಿ ರವಿ ಮಿತ್ತಲ್ ಈ ಉದ್ಯಮವನ್ನು ಆರಂಭಿಸಿದ್ರು. ಈ ವೆಬ್​ಸೈಟ್​​ ಒಂದೇ ತಿಂಗಳಲ್ಲಿ 1 ಮಿಲಿಯನ್ ರಿಜಿಸ್ಟ್ರೇಷನ್ ಸರಿಗಟ್ಟಿತು. ರವಿ 16 ನೇ ವಯಸ್ಸಿನಲ್ಲೇ ತಮ್ಮ ತಂದೆಯ ಬ್ಯಾಟರಿ ಉತ್ಪಾದನಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ರು. ಇದ್ರಿಂದಾಗಿ ಆತನ ಸ್ನೇಹಿತರ ಜೊತೆಗಿನ ಒಡನಾಟ ಕಡಿಮೆಯಾದ್ದರಿಂದ 2010ರಲ್ಲಿ ಹೊಸ ಸ್ನೇಹಿತರ ಹುಡುಕಾಟಕ್ಕೆ ಆನ್​ಲೈನ್​​ ಡೇಟಿಂಗ್​​ ರವಿಯನ್ನು ಪ್ರೇರೇಪಿಸಿತು. ಭಾರತೀಯರಿಗೆ ಅಂತಾನೆ ಡೇಟಿಂಗ್ ನಡೆಸುವ ಯಾವುದೇ ಒಂದು ಆನ್​ಲೈನ್​​ ತಾಣ ಇಲ್ಲದೇ ಇರುವುದು ಅವರನ್ನು ಆಶ್ಚರ್ಯಗೊಳಿಸಿತು. ಬಹುತೇಕ ಜನರಿಗೆ ಗೊತ್ತಿರುವಂತೆ ಫೇಸ್​ಬುಕ್ ಇಲ್ಲವೆ ಶಾದಿ. ಕಾಮ್ ಡೇಟಿಂಗ್ ತಾಣಗಳಾಗಿದ್ದವು.

ಈ ಸಂದರ್ಭದಲ್ಲಿ ಭಾರತೀಯರಿಗೆ ಅನುಕೂಲವಾಗುವಂತೆ ತಾವೇ ಒಂದು ಆನ್​ಲೈನ್ ಡೇಟಿಂಗ್ ತಾಣವನ್ನು ಶುರು ಮಾಡಬಾರದೇಕೆ ಎಂಬ ಯೋಚನೆ ಮೂಡಿತು. ಇದರ ಮೊದಲ ಹೆಜ್ಜೆಯಂತೆ 2 ಬಿಹೆಚ್​​ಕೆ ಅಪಾರ್ಟ್​ಮೆಂಟ್​​ನ್ನ ಬಾಡಿಗೆಗೆ ಪಡೆದ್ರು. ಹೀಗೆ ಈ ಕ್ವಾಕ್ ಕ್ವಾಕ್. ಇನ್ ಅಭಿವೃದ್ದಿಗೆಂದು ಒಂದು ಚಿಕ್ಕ ಟೀಮ್ ಒಂದನ್ನ ಕಟ್ಟಿದ್ರು. ಕ್ವಾಕ್ ಕ್ವಾಕ್.ಇನ್ ಪ್ರಾರಂಭಿಸುವುದಕ್ಕೂ ಮೊದಲು ರವಿ ಗೂಗಲ್ ಆ್ಯಡ್ಸ್ ಹಾಗೂ ಫೇಸ್​​ಬುಕ್​​ನಲ್ಲಿ ನಕಲಿ ಜಾಹೀರಾತುಗಳನ್ನ ಹರಿಬಿಟ್ಟರು. ಈ ಆನ್​​ಲೈನ್ ಡೇಟಿಂಗ್ ಉದ್ಯಮವನ್ನು ಮಾರುಕಟ್ಟೆ ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತೆ ಎಂಬುದನ್ನ ಪರೀಕ್ಷಿಸಲು ಆ ಪ್ರಯೋಗ ಮಾಡಿದ್ದರು. ರವಿ ಆಶ್ಚರ್ಯಗೊಳ್ಳುವಂತೆ ಪ್ರತಿ ನೂರು ಜಾಹಿರಾತುಗಳಲ್ಲಿ 20 ಜನರು ಸೈನ್ಅಪ್ ಆಗಿರುವುದು ಕಂಡು ಬಂತು. ಈ ಬೆಳವಣಿಗೆ ರವಿಯ ಮುಂದಿನ ನಡೆಗೆ ಸ್ಪಷ್ಟತೆ ಹಾಗೂ ಧನಾತ್ಮಕ ದಿಕ್ಸೂಚಿಯಾಗಿತು.

image


ಪ್ರಸ್ತುತ, 15 ಸದಸ್ಯರನ್ನುಗೊಂಡ ತಂಡ ಒಳಗೊಂಡಂತೆ ಎಂಜಿನಿಯರ್​​ಗಳು, ವಿನ್ಯಾಸಕರು, ಯುಐ/ಯು ಎಕ್ಸ್ ಹುಡುಗರು, ಮಾಡ್ರೇಟರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಟೀಮ್ ಹೊಂದಿದ್ದು ನವ್ಯೋದ್ಯಮ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಯೋಗ್ಯವಾಗಿ ಪ್ರದರ್ಶನ ಕಾಣುತ್ತಿದೆ. ಕಳೆದ 12 ತಿಂಗಳಲ್ಲಿ ಕ್ವಾಕ್ ಕ್ವಾಕ್ .ಇನ್ 5 ಲಕ್ಷ ಬಳಕೆದಾರರನ್ನು ಸೇರಿಸಿಕೊಂಡಿದೆ. ಮುಂದಿನ 3 ವರ್ಷಗಳಲ್ಲಿ 5 ಮಿಲಿಯನ್ ಬಳಕೆದಾರರನ್ನು ಮುಟ್ಟುವ ಗುರಿ ಹೊಂದಿದೆ.

ಕ್ವಾಕ್ ಕ್ವಾಕ್ . ಇನ್ ಕುರಿತು

ನಾನು ಯಾವಾಗಲೂ ಗ್ರಾಹಕರ ಅಂತರ್ಜಾಲ ಸ್ಥಳದಲ್ಲಿ ಹೊಸದೇನಾದರು ಸೃಷ್ಟಿಸಲು ಉತ್ಸುಕನಾಗಿರುತ್ತೇನೆ.. ಅದ್ರಲ್ಲೂ ಡೇಟಿಂಗ್ ಕುರಿತಾದ ವಿಚಾರ ನಿಜಕ್ಕೂ ನನ್ನನ್ನು ಸಾಕಷ್ಟು ಉದ್ವೇಗಕ್ಕೆ ಒಳಗಾಗಿಸಿತು. ಪ್ರಮುಖವಾಗಿ ನಮ್ಮ ಆ್ಯಪ್ ಬಳಸುವ ಬಳಕೆದಾರರ ಸಂದೇಶಗಳನ್ನ ನೋಡಿ. ನಮ್ಮ ಆ್ಯಪ್ ಮೂಲಕ ಡೇಟಿಂಗ್ ನಡೆಸಿದ ಬಳಕೆದಾರರು ಅವರ ಡೇಟ್ ಭೇಟಿ ಆದ ಬಳಿಕ ನಮಗೆ ಧನ್ಯವಾದಗಳು ಎಂಬ ಸಂದೇಶಗಳನ್ನ ಕಳಿಸುತ್ತಾರೆ. ಇದು ನಮ್ಮ ಮುಖದಲ್ಲಿ ನಗುವನ್ನ ತರಿಸುವುದಲ್ಲದೆ, ನಮ್ಮನ್ನು ಮತ್ತಷ್ಟು ಹೊಸದನ್ನು ಬಳಕೆದಾರರಿಗೆ ನೀಡಲು ಪ್ರೇರೇಪಿಸುತ್ತಿದೆ.

ಆದಾಯದ ಮಾದರಿ

ಕ್ವಾಕ್ ಕ್ವಾಕ್. ಇನ್ ಪ್ರಮುಖ ಆದಾಯದ ಮೂಲವೆಂದ್ರೆ ಅದು ಪ್ರೀಮಿಯಂ ಸದಸ್ಯತ್ವವಾಗಿದೆ. ಹೊಸ ಬಳಕೆದಾರರು ಯಾವುದೇ ಹಣ ನೀಡದೆ ಉಚಿತವಾಗಿ ಸೈನ್ ಅಪ್ ಆಗಬಹುದು. ಅಲ್ಲದೆ ಬೇರೆ ಬಳಕೆದಾರರ ಕುರಿತು ಆಸಕ್ತಿಯನ್ನು ವ್ಯಕ್ತಪಡಿಸುವ ಅವಕಾಶವು ಇದೆ.. ಆದ್ರೆ ಅವರಿಗೆ ಯಾವುದೇ ಸಂದೇಶ ಕಳುಹಿಸಲು ಮಾತ್ರ ಸಾಧ್ಯವಿರುವುದಿಲ್ಲ. ಬಳಕೆದಾರರು ತಾವು ಆಸಕ್ತಿ ಹೊಂದಿರುವ ವ್ಯಕ್ತಿಗೆ ಸಂದೇಶ ಕಳುಹಿಸಬೇಕಿದ್ದಲ್ಲಿ ಮುಂದಿನ ಹಂತದಂತೆ ವಿವಿಧ ರೀತಿಯಲ್ಲಿ ಚಂದಾ ಮಾದರಿಯಂತೆ ಹಣ ಪಾವತಿಸಿ ಅಪ್​ಗ್ರೇಡ್ ಹೊಂದಬಹುದಾಗಿದೆ. ಈ ವೇದಿಕೆಯನ್ನು ಬಳಸಿಕೊಳ್ಳಲು ಒಂದು ತಿಂಗಳಿಗೆ 1 ಸಾವಿರ ರೂಪಾಯಿಗಳು; 3 ತಿಂಗಳು ಈ ಸೌಲಭ್ಯ ಪಡೆಯಲು 2500 ರೂಪಾಯಿ ಹಾಗೂ 6 ಮತ್ತು 12 ತಿಂಗಳಿಗಾಗಿ ಕ್ರಮವಾಗಿ 4400 ಮತ್ತು 6400 ರೂಪಾಯಿಗಳಾಗಿವೆ. ಇನ್ನು ಒಟ್ಟು ಬಳಕೆದಾರರಲ್ಲಿ ಶೇ. 15 ರಿಂದ 20 ರಷ್ಟು ಬಳಕೆದಾರರು ತಮ್ಮ ಸದಸ್ಯತ್ವವನ್ನು ನವೀಕರಿಸಿಕೊಳ್ಳುತ್ತಿದ್ದಾರೆ. ಕ್ವಾಕ್ ಕ್ವಾಕ್. ಇನ್ ಹೇಳಿರುವಂತೆ 2013-14 ನೇ ಸಾಲಿನಲ್ಲಿ ಆದಾಯ 91 ಲಕ್ಷ ರೂಪಾಯಿಗಳಾಗಿದ್ದು, 2014-15 ನೇ ಸಾಲಿಗೆ 1.81 ಕೋಟಿ ರೂಪಾಯಿಗೆ ತಲುಪಿದೆಯಂತೆ.

ಉಳಿದ ಸೈಟ್​​ಗಳಿಗಿಂತ ಭಿನ್ನ

ಈ ಉದ್ಯಮ ತಾಣದ ಸಂಸ್ಥಾಪಕರು ಹೇಳುವಂತೆ ಕ್ವಾಕ್ ಕ್ವಾಕ್. ಇನ್ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಳಕೆದಾರರು ಅಪ್ಲೋಡ್​​​ ಮಾಡುವ ವಿಷಯದಲ್ಲಿ ಯಾವುದೇ ಮಾಡರೇಟ್ ಮಾಡಲಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ ನಮ್ಮ ಬಳಿ ನಾಲ್ಕು ಜನರನ್ನೊಳಗೊಂಡ ಮಾಡರೇಶನ್ ಟೀಮ್​​ನ್ನು ಹೊಂದಿದ್ದು 2 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಬಳಕೆದಾರರು ಏನೆಲ್ಲಾ ವಿಷಯಗಳನ್ನು ಅಪ್ಲೋಡ್ ಮಾಡುತ್ತಾರೆಂಬುದನ್ನ ಗಮನಿಸಿ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇನ್ನು ಬಹುತೇಕ ಸಮಯದಲ್ಲಿ ಬಳಕೆದಾರರ ಆರೋಪೆವೇನೆಂದ್ರೆ ಇಲ್ಲಿರುವ ಸದಸ್ಯರು 26 ವರ್ಷ ಅಂತಾ ಹಾಕಿಕೊಂಡಿದ್ದಾರೆ ಆದ್ರೆ ಅವರು ಇನ್ನೂ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದಾರೆ ಎಂಬುದು. ಕೆಲ ಬಳಕೆದಾರರು ಅವರಿಗೆ ಸಂಬಂಧವೇ ಇಲ್ಲದಿರುವಂತೆ ವಿಷಯಗಳನ್ನ ಅಪ್ಲೋಡ್ ಮಾಡಿರುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಬಳಕೆದಾರರ ವಿಷಯಗಳನ್ನ ನಿರ್ಬಂಧಿಸುತ್ತೇವೆ.. ಯಾಕಂದ್ರೆ ಇತರೆ ಬಳಕೆದಾರರ ಅಮೂಲ್ಯ ಸಮಯ ವ್ಯರ್ಥವಾಗಕೂಡದು ಹಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಬೇಕು ಎನ್ನುವುದು ನಮ್ಮ ಧ್ಯೇಯ ಅಂತಾರೆ ರವಿ.

ಇನ್ನು ಈ ಡೇಟಿಂಗ್ ತಾಣಕ್ಕೆ ರಿಜಿಸ್ಟ್ರೇಷನ್ ಆಗುವ ಮೊದಲೇ ಸ್ಟಾರ್ಟ್ ಅಪ್ ಪ್ರತಿಯೊಬ್ಬ ಬಳಕೆದಾರನನ್ನು ವಿಚಾರಣೆ ನಡೆಸುತ್ತದೆ. ಕೆಳಮಟ್ಟದ ಫೋಟೋ ಹಾಗೂ ವಿಷಯವನ್ನು ಅಪ್ಲೋಡ್ ಮಾಡದಂತೆ ತಿಳಿಸುತ್ತದೆ. ಅಲ್ಲದೆ ಇದರಲ್ಲಿ ಸ್ವಯಂಚಾಲಿಯ ಕ್ರಮಾವಳಿಗಳು ಚಾಲನೆಯಲ್ಲಿದ್ದು ಯಾವುದೇ ರೀತಿಯಲ್ಲಿ ದುರುಪಯೋಗ, ನಿಂದನೆಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ ಮತ್ತು ಅಂತಹ ಬಳಕೆದಾರನ ಮೇಲೆ ತಕ್ಷಣವೇ ಕ್ರಮವನ್ನು ಜರುಗಿಸುತ್ತದೆ.

ಕ್ವಾಕ್ ಕ್ವಾಕ್.ಇನ್ ಅತೀ ಹೆಚ್ಚಾಗಿ ಉಪಕ್ರಮಗಳನ್ನು ಹೊಂದಿದ್ದು ಪುರುಷ-ಮಹಿಳಾ ಅನುಪಾತವನ್ನು ಸಮತೋಲದಲ್ಲಿಡಲು ಮಹಿಳಾ ಬಳಕೆದಾರರನ್ನು ಹೆಚ್ಚಾಗಿ ಹೊಂದಲು ಗಮನಹರಿಸುತ್ತಿದೆ. ಯಾಕಂದ್ರೆ ಪ್ರಸ್ತುತ ಪುರುಷ-ಮಹಿಳಾ ಅನುಪಾತ ಏರುಪೇರಾಗಿದ್ದು, ಈ ಒಂದು ವೇದಿಕೆಯಲ್ಲಿ 70 ಪುರುಷರಿಗೆ 30 ಮಹಿಳಾ ಅನುಪಾತವಿದೆ.

ರವಿ ಮಿತ್ತಲ್​​​, ಕ್ವಾಕ್​​ಕ್ವಾಕ್​.ಇನ್​ ಸಂಸ್ಥಾಪಕ

ರವಿ ಮಿತ್ತಲ್​​​, ಕ್ವಾಕ್​​ಕ್ವಾಕ್​.ಇನ್​ ಸಂಸ್ಥಾಪಕ


ಸೆಳೆತ

ಕಳೆದ ತಿಂಗಳಲ್ಲಿ ಕ್ವಾಕ್ ಕ್ವಾಕ್.ಇನ್ ವೆಬ್​​ಸೈಟ್ 5.1 ಮಿಲಿಯನ್ ಪುಟ ವೀಕ್ಷಣೆಗೆ ಸಾಕ್ಷಿಯಾಗಿದೆ. ಅಲ್ಲದೆ ಆ್ಯಪ್​​ನಲ್ಲಿ ಸರಾಸರಿ 1.41 ಮಿಲಿಯನ್ ಚಾಟ್ಸ್ ವಿನಿಮಯಗೊಂಡಿವೆ. ಇನ್ನು ಈ ವೆಬ್​​ಸೈಟ್​ ಬಳಕೆದಾರರು ಸರಾಸರಿ 27 ವರ್ಷದವರಾಗಿದ್ದು, ದಿನನಿತ್ಯ 10 ರಿಂದ 12 ನಿಮಿಷಗಳನ್ನ ಈ ವೆಬ್ ತಾಣದಲ್ಲಿ ಕಳೆಯುತ್ತಾರೆ. ಈ ವೆಬ್ ಬಳಸುವ ಹೆಚ್ಚು ಪ್ರಭಾವಿ ತಾಣಗಳೆಂದ್ರೆ ದೆಹಲಿ, ಬೆಂಗಳೂರು, ಹೈದ್ರಾಬಾದ್ ಮತ್ತು ಮುಂಬೈ. ಇನ್ನು ಈ ವೆಬ್ ಬಳಸುವ 2ನೇ ಶ್ರೇಣಿ ಮಾರುಕಟ್ಟೆ ನಗರಗಳೆಂದ್ರೆ ಅಹಮದಾಬಾದ್, ಚಂಡೀಘಡ್, ಜೈಪುರ್ ಮತ್ತು ಲಕ್ನೋ ಆಗಿದ್ದು ಹೆಚ್ಚು ಹೆಚ್ಚು ಜನರು ಕ್ವಾಕ್​​ಕ್ವಾಕ್​​.ಇನ್​​ಗೆ ಮನಸೋಲುತ್ತಿದ್ದಾರೆ.

ಮುಂದಿನ ಗುರಿ

ಈ ಉದ್ಯಮದ ಮುಂದಿನ ಗುರಿ ಬಳಕೆದಾರರಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ವೆಬ್ ತಾಣದಲ್ಲಿ ಬದಲಾವಣೆಗಳು ಹಾಗೂ ಅಪ್ಡೇಟ್ ಮಾಡುವುದು ಆಗಿದೆ. ಅಲ್ಲದೆ ಬಳಕೆದಾರರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ಆತನ ಅವಶ್ಯತೆಗಳಿಗೆ ತಕ್ಕಂತೆ ಬದಲಾವಣೆ ತರುವ ಉದ್ದೇಶ ಇಟ್ಟುಕೊಂಡಿದೆ. ಇದರಿಂದ ಒಂದೇ ಮನಸ್ಥಿತಿಯ ಬಳಕೆದಾರರನ್ನು ಒಂದುಗೂಡಿಸಲು ಹಾಗೂ ಒಂದೇ ಅಭಿರುಚಿವುಳ್ಳ ವ್ಯಕ್ತಿಯ ಕುರಿತು ಮತ್ತೊಬ್ಬ ಬಳಕೆದಾರನಿಗೆ ಸಲಹೆ ನೀಡಲು ಸಾಧ್ಯವಾಗುತ್ತದೆ. ಹೀಗೆ ಬಳಕೆದಾರರಿಗೆ ಅನಕೂಲವಾಗುವಂತೆ ಐಓಸ್ ಆವೃತ್ತಿಯ ಆ್ಯಪ್ ಒಂದನ್ನ ಸದ್ಯದಲ್ಲೇ ಬಿಡುಗಡೆಗೊಳಿಸುವ ಸಿದ್ಧತೆ ನಡೆಸಿದೆ. ಇದಲ್ಲದೆ ಹೊಂದಾಣಿಕೆಯಾದ ಪ್ರೊಫೈಲ್​​ಗಳ ಅನೂಕೂಲಕ್ಕೆಂದೇ ಇನ್ ಆ್ಯಪ್ ಕಾಲಿಂಗ್ ಎಂಬ ಹೊಸ ಆ್ಯಪ್ ಬಿಡುಗಡೆಯ ಯೋಜನೆಯು ಸಹ ಸಿದ್ದಗೊಂಡಿದೆ.

ಅನುಭವ

ಕ್ವಾಕ್​​ಕ್ವಾಕ್​​.ಇನ್​​​ ಸಂಸ್ಥಾಪಕ ರವಿಯವರಿಗೆ ಆದ ಅನುಭವಗಳು ಸಾಕಷ್ಟು ಆಸಕ್ತಿ ಮೂಡಿಸಿವೆಯಂತೆ. ಅವರಿಗೆ ಕಷ್ಟವಾದದ್ದು ಅಂದ್ರೆ ತಮ್ಮ ದುಡಿಮೆಯ ಕುರಿತು ದೊಡ್ಡವರಿಗೆ ತಿಳಿಸುವುದಂತೆ.. ಈ ಕುರಿತು ನಗುತ್ತಾ ಹೇಳುವ ರವಿ.. ಯಾರಾದರು ಜೀವನಕ್ಕೆ ಏನು ಮಾಡಿಕೊಂಡಿದ್ದೀಯ ಅಂದ್ರೆ.. ನಾನು ಮ್ಯಾಟ್ರಿಮೊನಿ ಪೋರ್ಟಲ್ ತರ ನಡೆಸುತ್ತಿದ್ದೇನೆ ಹೇಳುತ್ತೇನೆ ಎಂಬುದು...ಅಕಸ್ಮಾತ್ ಮ್ಯಾಟ್ರಿಮೊನಿ ಇಲ್ಲದಿದ್ದರೆ...! ಹೇಗಪ್ಪ ಅವರಿಗೆ ತಿಳಿಸಬೇಕಿತ್ತು ಎಂಬುದು ರವಿಯ ಮಾತು..