ಶಂಕರಣ್ಣನ ಬಣ್ಣದ ಮನೆಯಲ್ಲಿ ತೆಂಗಿನಎಣ್ಣೆಯ ಕಂಪು..!

ಪೂರ್ವಿಕಾ

0

ಶಂಕರ್ ನಾಗ್...ಕನ್ನಡ ಚಿತ್ರರಂಗ ಕಂಡ ಕ್ರಿಯಾಶೀಲ ನಿರ್ದೇಶಕ,ಕನಸುಗಾರ, ಮೂವತ್ತು ವರ್ಷಗಳ ಹಿಂದೆಯೇ ಮೆಟ್ರೋ ಕನಸು ಕಂಡಂತ ನಟ, ಶಂಕರ್‍ನಾಗ್‍ ಅಂದ್ರೆ ಈಗಲೂ ಕನ್ನಡ ಜನತೆಗೆ ಅದೇನೋ ಹುರುಪು ಉತ್ಸಾಹ.ಯಾಕಂದ್ರೆ ಶಂಕರ್‍ನಾಗ್‍ ಅಂದ್ರೆನೇ ಸ್ಪೂರ್ತಿ,ಉತ್ಸಾಹ...

ಸಾಮಾನ್ಯವಾಗಿ ಎಲ್ಲರಂತೆ ಯೋಚಿಸೋ ವ್ಯಕ್ತಿ ಅಲ್ಲವೇ ಅಲ್ಲ ಶಂಕರಣ್ಣ ಅನ್ನೋದು ಎಲ್ಲರಿಗೂ ಗೋತ್ತಿರೋ ವಿಚಾರ. ಅವರು ಯಾವಾಗ್ಲೂ ಥಿಂಕ್ ಮಾಡ್ತಿದ್ದಿದ್ದು ಔಟ್‍ಆಫ್ ದಿ ಬಾಕ್ಸ್. ಶಂಕರ್ ನಾಗ್ ಅಷ್ಟೇ ಅಲ್ಲ ಅವ್ರ ಮಗಳು ಕೂಡ ಅಪ್ಪನಂತೆ ಅನ್ನೋದು ಈಗಾಗಲೇ ಪ್ರೂವ್​​ ಆಗಿರೋ ವಿಷಯ. ಕಾವ್ಯ ಶಂಕರ್‍ನಾಗ್ ನೈಸರ್ಗಿಕ ಆರೋಗ್ಯದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಅದು ತಮ್ಮದೆ ಸ್ವಂತ ಕಂಪನಿಯಾದ ಕೋಕೋನೆಸ್ ಮೂಲಕ.

ಕೋಕೋನೆಸ್‍ ತೆಂಗಿನೆಣ್ಣೆ. ಸಾಮಾನ್ಯವಾಗಿ ತೆಂಗಿನೆಣ್ಣೆ ಅಂದ್ರೆ ಕೊಬ್ಬರಿ ಎಣ್ಣೆ ಅಂತ ಅಂದುಕೊಳ್ಳೊದು ಕಾಮನ್. ಆದ್ರೆ ನಾವು ಈಗ ಹೇಳ್ತಿರೋದು ತೆಂಗಿನೆಣ್ಣೆ ಬಗ್ಗೆ ಸುಮಾರು 150 ವರ್ಷದ ಹಿಂದೆ ನಿಮ್ಮ, ನಮ್ಮ ಮನೆಯಲೆಲ್ಲ ಅಡುಗೆಗೆ, ಮಕ್ಕಳ ಸ್ನಾನಕ್ಕೆ ಉಪಯೋಗಿಸ್ತಿದ್ದು ಇದೇ ತೆಂಗಿನೆಣ್ಣೆ. ಕಾಲ ಬದಲಾಗ್ತಿದ್ದ ಹಾಗೇ ಜನರು ಈ ತೆಂಗಿನೆಣ್ಣೆಯನ್ನ ಮರೆತು ಕಡಲೆಕಾಯಿ ಎಣ್ಣೆಯ ಹಿಂದೆ ಬಿದ್ರು. ಹೀಗೆ ಸಾಮಾನ್ಯವಾಗಿ ಮನೆಯಲ್ಲಿ ಅಮ್ಮನ ಜೊತೆ ಮಾತನಾಡೋ ಸಮಯದಲ್ಲಿತೆಂಗಿನೆಣ್ಣೆ ಬಗ್ಗೆ ತಿಳಿದುಕೊಂಡ ಕಾವ್ಯ, ತೆಂಗಿನೆಣ್ಣೆ ಅಂದ್ರೆ ಏನು, ಹೇಗೆ ಮಾಡೋದು, ಇದ್ರಿಂದ ಏನು ಲಾಭ ಅನ್ನೋದನ್ನ ಸಂಶೋಧನೆ ಮಾಡೋದಕ್ಕೆ ಶುರು ಮಾಡ್ರಿದ್ರು. ಇದನ್ನ ತಿಳಿದುಕೊಳ್ಳೊಕೆ ಸುಮಾರು ಎರಡು ವರ್ಷಗಳ ಕಾಲ ಬೇಕಾಗಿತ್ತು. ಕೋಕೋನೆಟ್‍ ಡೆವೆಲಪ್​​ಮೆಂಟ್ ಬೋರ್ಡ್ , ಮತ್ತು ಸಿ. ಟಿ. ಸಿ. ಆರ್.ಐನಲ್ಲಿ ಇದ್ರ ಬಗ್ಗೆ ಟ್ರೈನಿಂಗ್‍ ಕೂಡ ತೆಗೆದುಕೊಂಡು ನಂತ್ರ ತೆಂಗಿನೆಣ್ಣೆ ಜೊತೆಯಲ್ಲಿ ಬಳಸೋ ಆಯುರ್ವೇದಿಕ್ ವಸ್ತುಗಳ ಬಗ್ಗೆ ಬೆಂಗಳೂರಿನ ಐ ಎ ಎಂ ನಿಂದ ಮಾಹಿತಿ ಪಡೆದಿದ್ದಾರೆ. ಇಷ್ಟಾದ ನಂತ್ರ ಕಾಸರಗೋಡಿನಲ್ಲಿರೋ ಸೆಂಟ್ರಲ್ ಪ್ಲಾಂಟೇಷನ್‍ ಫಾರ್​ ಕ್ರಾಪ್‍ ರಿಸರ್ಚ್ ಬೋರ್ಡ್​ನಿಂದಲೂ ಟ್ರೈನಿಂಗ್ ಪಡೆದುಕೊಂಡು ಯಾವೆಲ್ಲಾ ಮೆಷಿನರಿ ಪಡೆಯಬಹುದು ಅನ್ನೋದನ್ನ ತಿಳಿದುಕೊಂಡು ಅಲ್ಲಿಂದಲೇ ಮೆಷಿನರಿಗಳನ್ನ ತರಿಸಿಕೊಂಡಿದ್ದಾರೆ. ಇಷ್ಟೆಲ್ಲ ಆದ ನಂತ್ರ ತೆಂಗಿನೆಣ್ಣೆಯಿಂದ ಜನರಿಗೆ ಹಲವು ಲಾಭ ಇರುತ್ತೆ ಅನ್ನೋದನ್ನ ಪಕ್ಕಾ ಮಾಡಿಕೊಂಡು ಇದನ್ನೇ ಈಗ ಉದ್ಯೋಗವನ್ನಾಗಿಸಿಕೊಂಡಿದ್ದಾರೆ.

ಮಗಳ ಉದ್ಯೋಗಕ್ಕೆ ಅಮ್ಮ ಅರುಂಧತಿ ನಾಗ್ ಸಾಥ್ ಹಾಗೂ ಆರೈಕೆ ಇರೋದರ ಜೊತೆಗೆ ಕೋಕೋನೆಸ್‍ ಕಂಪನಿಯ ಸ್ಟಿಕ್ಕರ್ ಡಿಸೈನಿಂಗ್‍ ಕೂಡ ಫೈನಲ್ ಮಾಡುತ್ತಿರೋದು ಅರುಂಧತಿ ಅವ್ರೇ. ಕಳೆದ ಆರು ತಿಂಗಳಿಂದ ಈ ಕೋಕೋನೆಸ್‍ ತೆಂಗಿನೆಣ್ಣೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಎಲ್ಲಾಕಡೆಯಿಂದಲೂ ಕೋಕೋನೆಸ್​​ಗೆ ಸಖತ್​​ ರೆಸ್ಪಾನ್ಸ್ ಸಿಗುತ್ತಿದೆ.

ಸದ್ಯ ಕೋಕೋನೆಸ್​​ನಲ್ಲಿ 12 ಪ್ರಾಡಕ್ಟ್​​ಗಳಿದ್ದು ಮಕ್ಕಳಿಗೆ ತಾಯಂದಿರಿಗೆ ಮತ್ತು ಪ್ರಾಣಿಗಳಿಗಾಗಿಯೂ ಅನೇಕ ಪ್ರಾಡಕ್ಟ್​​​ಗಳು ಕೋಕೋನೆಸ್​​ನಲ್ಲಿದೆ. ಮಕ್ಕಳಿಗಾಗಿ ಬಾಡಿ ಆಯಿಲ್ ಲಭ್ಯವಿದ್ದು ಇದನ್ನ ಬಳಸೋದ್ರಿಂದ ಚರ್ಮದ ಬಣ್ಣ ಹಾಗೂ ಮಕ್ಕಳ ಸ್ನಾಯುಗಳನ್ನ ಗಟ್ಟಿಗೊಳಿಸುತ್ತೆ. ಈಗ ಮಾರುಕಟ್ಟೆಯಲ್ಲಿ ಸಿಗೋ ಬೇಬಿ ಆಯಿಲ್​​​ನಲ್ಲಿ ಮಿನರಲ್‍ ಆಯಿಲ್‍ ಉಪಯೋಗಿಸ್ತಾರೆ. ಅದ್ರಿಂದ ಮಕ್ಕಳ ಚರ್ಮಕ್ಕೆ ತೊಂದರೆಗಳಾಗುತ್ತೆ. ಆದ್ರೆ ಈ ಕೋಕೋನೆಸ್‍ ತೆಂಗಿನೆಣ್ಣೆ ಬಳಸೋದ್ರಿಂದ ಯಾವುದೇ ರೀತಿಯ ಸೈಡ್‍ಎಫೆಕ್ಟ್ ಆಗೋದಿಲ್ಲ. ಇನ್ನೂ,ತಾಯಂದಿರಿಗಾಗಿ ಮತ್ತು ಸ್ಕಿನ್ ಕೇರ್ ಹಾಗೂ ಈ ಹಿಂದೆ ನಮ್ಮ ಪೂರ್ವಜರು ಮಾಡುತ್ತಿದ್ದ ಆಯಿಲ್ ಪುಲ್ಲಿಂಗ್ (ಬೆಳ್ಳಗ್ಗಿನ ಜಾವ ಎದ್ದತಕ್ಷಣ ಬಾಯಿಗೆ ತೆಂಗಿನಎಣ್ಣೆಯನ್ನ ಹಾಕಿಕೊಂಡು ಬಾಯಿ ಮುಕ್ಕಳಿಸಿ ಉಗಿಯೋದು) ಅನ್ನೋ ವಿಧಾನಕ್ಕೂಇವ್ರ ಬಳಿ ತೆಂಗಿನೆಣ್ಣೆ ಸಿಗುತ್ತೆ. ಕೋಕೋನೆಸ್​​ನಲ್ಲಿ ಸಿಗೋ ತೆಂಗಿನ ಎಣ್ಣೆಯ ಒಂದೊಂದು ಪ್ರಾಡಕ್ಟ್​​ಗಳಿಗೂ ಒಂದೊಂದು ರೀತಿಯ ಗಿಡಮೂಲಿಕೆಯನ್ನ ಬಳಸಲಾಗುತ್ತೆ. ಇನ್ನೂ ವಿಶೇಷ ಅಂದ್ರೆ ನಿಮ್ಮ ಮುದ್ದು ನಾಯಿ ಮರಿಗಳ ಊಟದಲ್ಲಿ ಬಳಸಲು ತೆಂಗಿನೆಣ್ಣೆ ಸಿಗುತ್ತೆ. ಶ್ವಾನಗಳಿಗೆ ಇಮ್ಯೂನಿಟಿ, ಮೆಟಬಾಲಿಸಂ ಹೆಚ್ಚಾಗಲು ಕೂದಲು ಬೆಳೆಯಲು ಈ ತೆಂಗಿನೆಣ್ಣೆಯನ್ನ ಬಳಸಬಹುದಾಗಿದೆ.

ಕೋಕೋನೆಸ್‍ ತೆಂಗಿನೆಣ್ಣೆಯ ಬೆಲೆ 200 ರೂಪಾಯಿಂದ ಪ್ರಾರಂಭವಾಗಿ 1980 ರೂಪಾಯಿವರೆಗೂ ದೊರೆಯುತ್ತೆ. ಅಷ್ಟೇ ಅಲ್ಲದೆ ಗಿಫ್ಟ್ ಫ್ಯಾಕ್​​ಗಳು ಕೂಡ ಇದ್ರಲ್ಲಿ ಲಭ್ಯವಿದ್ದು ಎರಡು ರೀತಿಯ ಗಿಫ್ಟ್ ಪ್ಯಾಕ್‍ ಇದ್ದು ಒಂದೊಂದರಲ್ಲಿ 7 ಪ್ರಾಡಕ್ಟ್​​​ಗಳು ಬರುತ್ತೆ. ಸದ್ಯ ಕೋಕೋನೆಸ್ ಮೂಲಕ 10 ಜನರಿಗೆ ಕೆಲಸ ನೀಡಿರೋ ಕಾವ್ಯ ಶಂಕರ್‍ನಾಗ್ ಮುಂದಿನ ದಿನಗಳಲ್ಲಿ ತಮ್ಮ ಪ್ರಾಡಕ್ಟ್​​​ಗಳನ್ನ ಮತ್ತಷ್ಟು ಪ್ರಸಿದ್ದಿ ಮಾಡೋಆಶಯದಲ್ಲಿದ್ದಾರೆ. ಸದ್ಯಕೋಕೋನೆಸ್ ಪ್ರಾಡಕ್ಟ್​​ಗಳು www.coconessindia.comನಲ್ಲಿ ಕೊಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ,ಮೈಸೂರಿನಲ್ಲಿ ಕೋಕೋನೆಸ್‍ ಅವರದ್ದೇ ಒಂದು ಔಟ್​ಲೆಟ್‍ ಇದೆ. ಆನ್​​ಲೈನ್ ಸೈಟ್​​ಗಳಾದ ಫ್ಲಿಫ್​​ಕಾರ್ಟ್​, ಅಮೇಜಾನ್, ಮಾಮ್‍ಅಂಡ್ ಮಿ, ಓಯ್ ಬೇಬಿ ಹೀಗೆ ಇನ್ನೂ ಅನೇಕ ಸೈಟ್​​ಗಳಲ್ಲಿ ಕೋಕೋನೆಸ್ ಪ್ರಾಡಕ್ಟ್​​ಗಳು ಲಭ್ಯವಿದೆ. ದೇಸಿತನದ ಪ್ರಾಮುಖ್ಯತೆಯನ್ನ ಜನರಿಗೆ ಮತ್ತೆ ಪರಿಚಯಿಸಲು ಶ್ರಮ ಪಡ್ತಿರೋ ಕಾವ್ಯಶಂಕರ್​​ನಾಗ್‍ ಕೆಲಸಕ್ಕೆ ಒಂದು ಹ್ಯಾಟ್ಸ್​​ಅಫ್ ಹೇಳಲೇಬೇಕು.

Related Stories