ಆನ್​​ಲೈನ್​​ನಲ್ಲಿ ಕಾಫಿ ಆರ್ಡರ್​​​​ ಮಾಡಿ- ಗಂಟೆಯೊಳಗೆ ಕಾಫಿಯ ಟೇಸ್ಟ್​​ ನೋಡಿ..!

ಉಷಾ ಹರೀಶ್​​

ಆನ್​​ಲೈನ್​​ನಲ್ಲಿ ಕಾಫಿ ಆರ್ಡರ್​​​​ ಮಾಡಿ- ಗಂಟೆಯೊಳಗೆ ಕಾಫಿಯ ಟೇಸ್ಟ್​​ ನೋಡಿ..!

Tuesday November 24, 2015,

2 min Read

ನೀವಿದ್ದ ಸ್ಥಳಕ್ಕೆ ಪಿಜ್ಡಾ, ಬಿರಿಯಾನಿ, ಕೂಲ್ ಡ್ರಿಂಕ್ಸ್ ಎಲ್ಲವೂ ಸಿಗುವುದನ್ನು ಕೇಳಿದ್ದೀರಿ ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉತ್ತಮ ದರ್ಜೆಯ ಕಾಫಿಯು ನೀವು ಕುಳಿತಿರುವ ಸ್ಥಳಕ್ಕೆ ಸಿಗುತ್ತದೆ.

ಹೌದು ಈ ಸಿಲಿಕಾನ್ ಯುಗದಲ್ಲಿ ಇಂಟರ್​​ನೆಟ್ ಒಂದಿದ್ದರೆ ಸಾಕು ಏನನ್ನು ಬೇಕಾದರೂ ನಾವಿದ್ದಲ್ಲಿಗೆ ಪಡೆಯಬಹುದು. ಅಷ್ಟೊಂದು ಇ- ಕಾಮರ್ಸ್ ತಾಣಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ಆ ಸಾಲಿಗೆ ಕಾಫಿಯೂ ಸೇರಿಕೊಂಡಿದೆ.

ಸ್ವತಃ ಕಾಫಿ ಪ್ರಿಯರಾದ ಬೆಂಗಳೂರಿನ ಚೈತನ್ಯ ಚಿತ್ತ, ಲಕ್ಷ್ಮೀ ದಂಪತಿ ನಗರದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಕಾಫಿ ಪ್ರಿಯರಿಗಾಗಿ ಡ್ರಾಪ್ ಕೆಫೆ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಕಾಫಿ ಪ್ರಿಯರಿಗೆ ಕೆಲಸದ ಒತ್ತಡ ಹೆಚ್ಚಾದ ಒಂದು ಕಾಫಿಯ ಅಗತ್ಯ ಬಹಳಷ್ಟು ಇರುತ್ತದೆ. ಅದಕ್ಕಾಗಿ ಅವರು ಕ್ಯಾಂಟೀನ್​ಗೆ ಹೋಗಿ ಕಾಫಿ ಕುಡಿದು ಬರುವಷ್ಟು ಸಮಯ ಅವರಲ್ಲಿರುವುದಿಲ್ಲ. ಇನ್ನು ಕೆಲ ಕಚೇರಿಗಳಲ್ಲಿ ಇನ್ಸ್​​ಸ್ಟಂಟ್ ಕಾಫಿ, ವೆಂಡಿಂಗ್ ಮಿಷಿನ್ ಕಾಫಿಯಾಗಲಿ ಅಷ್ಟು ರುಚಿಸುವುದಿಲ್ಲ. ಅಂತವರಿಗಾಗಿಯೇ ಬೆಂಗಳೂರಿನಲ್ಲಿ ಸಿಗುವ ಅಂತಾರಾಷ್ಟ್ರೀಯ ಮಟ್ಟದ ಫ್ಲೇವರ್ ಇರುವ ಕಾಫಿಯನ್ನು ಈ ವೆಬ್​​ಸೈಟ್ ಮೂಲಕ ಚೈತನ್ಯ ದಂಪತಿಗಳು ತಲುಪಿಸುತ್ತಿದ್ದಾರೆ.

image


ಜಗತ್ತಿನಲ್ಲಿ ನೀರನ್ನು ಬಿಟ್ಟರೆ ಜನ ಹೆಚ್ಚಾಗಿ ಕುಡಿಯುವುದು ಕಾಫಿಯನ್ನು ಆದರೆ ಇದುವರೆಗೂ ಕಾಫಿಯನ್ನು ಆನ್​​ಲೈನ್ ಮಾರುಕಟ್ಟೆಗೆ ತಂದಿರದ ಕಾರಣ ಒಂದು ಹೊಸತನವಿರುತ್ತದೆ ಮತ್ತು ಮಾರುಕಟ್ಟೆಯ ಬೆಳೆಯುತ್ತದೆ ಎಂಬ ಉದ್ದೆಶದಿಂದ ಈ ಆನ್​​ಲೈನ್ ಕಾಫಿಯನ್ನು ಪ್ರಾರಂಭ ಮಾಡಲಾಗಿದೆ ಎನ್ನುತ್ತಾರೆ ಚೈತನ್ಯ.

ಆರ್ಡರ್​​​ ಮಾಡುವ ಬಗೆ

ಡ್ರಾಪ್ ಕೆಫೆ ವೆಬ್​​ಸೈಟ್​​ಗೆ ಹೋಗಿ ಅಲ್ಲಿ ನಿಮ್ಮ ಹೆಸರನ್ನು ನೊಂದಾಯಿಸುವುದಲ್ಲದೇ ನಿಮ್ಮ ಇ ಮೇಲ್ ಐಡಿಯನ್ನು ನೀಡಬೇಕು. ನಂತರ ಆ ವೆಬ್​​ನಲ್ಲಿ ಒಂದು ಮೆನು ಕಾರ್ಡ್ ಪ್ರಕಟಗೊಳ್ಳುತ್ತದೆ. ತದ ನಂತರ ನಿಮಗೆ ಇಷ್ಟವಾದ ಕಾಫಿಯನ್ನು ಆರ್ಡರ್​​ ಮಾಡಬಹುದು. ಇಲ್ಲಿಯೂ ಸಹ ಬೇರೆ ಇ ಕಾಮರ್ಸ್​ನ ತರಹ ಹೆಸರು ಈ ಮೇಲ್ ಐಡಿ, ಮೊಬೈಲ್ ಸಂಖೆ, ವಿಳಾಸವನ್ನು ಪಡೆಯುತ್ತಾರೆ.

image


ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಈ ಡ್ರಾಪ್ ಕೆಫೆ ಕಾರ್ಯನಿರ್ವಹಿಸುತ್ತದೆ.

ಏನೇನು ಸಿಗುತ್ತದೆ..?

ಫಿಲ್ಟರ್ ಕಾಫಿ, ಕೆಫೆ ಲಾಟ್ಟೆ,ಮಿಲ್ಕ್ ಶೇಕ್,ಸ್ಯಾಂಡ್ ವಿಚ್, ಚಿಲ್ಲಿ ಚಿಕನ್ ಬರ್ಗರ್​​ಗಳು ಸಿಗುತ್ತವೆ. ಮೆನುವಿನಲ್ಲಿ ದಿನದ ವಿಶೇಷದ ಜೊತೆಗೆ ವಾರದ ಮೆನು ಕೂಡಾ ಸಿಗುತ್ತದೆ. ಇಷ್ಟೇ ಕಪ್ ಆರ್ಡರ್​​​ ಮಾಡಬೇಕೆಂಬ ನಿಯಮವೂ ಡ್ರಾಪ್ ಕೆಫೆಯಲ್ಲಿಲ್ಲ. ಕ್ಯಾಷ್ ಆನ್ ಡೆಲಿವರಿ ಜೊತೆಗೆ ಕಾರ್ಡ್ ಬಳಸಿಯೂ ಪಾವತಿ ಮಾಡಬಹುದು. ಈಗಾಗಲೇ ಕೋರಮಂಗಲ, ಇಂದಿರಾನಗರ, ಎಚ್ಎಸ್ಆರ್ ಲೇಔಟ್,ಬೊಮ್ಮನಹಳ್ಳಿ, ದೊಮ್ಮಲೂರಿನಲ್ಲಿ ಡ್ರಾಫ್ ಕೆಫೆ ಕಾರ್ಯನಿರ್ವಹಿಸುತ್ತಿದೆ. ಫಿಲ್ಟರ್ ಕಾಫಿಯ ದರ 50 ರೂಪಾಯಿಯಿದ್ದರೆ ಉಳಿದ ಫ್ಲೇವರ್​​ಗಳು 100 ರೂಪಾಯಿ ಒಳಗೆ ಸ್ಯಾಂಡ್ ವಿಚ್ ಬರ್ಗರ್ ಕೂಡಾ 90 ರಿಂದ 120 ರೂಪಾಯಿ.

image


ನೀವು ಆರ್ಡರ್​​ ಮಾಡಿದ ಒಂದು ಗಂಟೆಯೊಳಗೆ ಡೆಲಿವರಿ ಬಾಯ್​​ಗಳು ಕಾಫಿಯನ್ನು ನಿಮ್ಮ ಟೇಬಲ್ ಮೇಲಿಡುತ್ತಾರೆ. ಇನ್ನೇಕ ತಡ ಕಾಫಿಯನ್ನು ಆರ್ಡರ್​​ಮಾಡಿ. ವೆಬ್ ಸೈಟ್​​ಗೆ ಲಾಗ್ ಇನ್ ಆಗಲು http://www.dropkaffe.com/.