ನಿಮ್ಮನ್ನು ನೀವು ಬಿಟ್ಟುಕೊಡುವುದನ್ನು ನಿಯಂತ್ರಿಸಲು 10 ಹಂತಗಳು ಇಲ್ಲಿವೆ

ಟೀಮ್​ ವೈ.ಎಸ್​. ಕನ್ನಡ

ನಿಮ್ಮನ್ನು ನೀವು ಬಿಟ್ಟುಕೊಡುವುದನ್ನು ನಿಯಂತ್ರಿಸಲು 10 ಹಂತಗಳು ಇಲ್ಲಿವೆ

Tuesday December 15, 2015,

7 min Read

ಇಲ್ಲಿ ಕೆಲವು ವೈಫಲ್ಯದ ಆಯಾಮಗಳಿವೆ. ವೈಫಲ್ಯವನ್ನು ವಿವರಿಸುತ್ತಲೇ, ವೈಫಲ್ಯಗಳ ಸುತ್ತಲೇ ಸುತ್ತುವ ಈ ಕಥಾನಕ ಯಶಸ್ಸಿನ ಪಾಠ ಹೇಳಿಕೊಡುತ್ತದೆ. ಇದೇ, ಇದರ ಲೇಖಕರು ಬದುಕಿನಲ್ಲಿ ಹಾಗೂ ಸಾಧನೆಗಳಲ್ಲಿ ಬಿಟ್ಟುಕೊಡುವುದನ್ನು ನಿಯಂತ್ರಿಸಲು ಹೇಳಿಕೊಟ್ಟ ಕಿವಿಮಾತುಗಳು.

ನಾನು ಕಣ್ಮರೆಯಾಗಲು ಬಯಸಿದ್ದೆ. ಇಲ್ಲಿಯವರೆಗೆ ನಾನು ಯಾರಿಗೂ ತಿಳಿಸದ ಹಳೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬದುಕಲು ಇಚ್ಛಿಸಿದ್ದೆ. ಎಲ್ಲಾ ಭಾಷೆಯನ್ನು ಮಾತನಾಡುವ ನನ್ನ ಪಕ್ಕದ ಮನೆಯವರೊಡನೆ ನಾನು ಇಂಗ್ಲೀಷ್‌ನಲ್ಲಿ ಸಂಭಾಷಿಸುತ್ತಿದ್ದೆ. ನಾನು ಅವರ ಆಟಗಳನ್ನು ಕಲಿಯುತ್ತಿದ್ದೆ. ಅವರು ಕೇಳುವ ಸಂಗೀತವನ್ನು ಆಸ್ವಾದಿಸುತ್ತಿದ್ದೆ.

image


ಆದರೂ ಕೆಲವೊಮ್ಮೆ ನಾನು ಗೊಂದಲದಲ್ಲಿರುತ್ತಿದ್ದೆ. ನನ್ನಲ್ಲಿ ಕಂಡೂ ಕಾಣದಂತೆ ಕೀಳರಿಮೆ ತುಂಬಿರುತ್ತಿತ್ತು. ಈ ಸಂದರ್ಭದಲ್ಲೆಲ್ಲಾ ನನ್ನೊಳಗೆ ಅನಾರೋಗ್ಯ ಭಾವ ಕಾಡುತ್ತಿತ್ತು. ನನ್ನ ಬದುಕಿನಲ್ಲಿ ಹೆಚ್ಚಿನದ್ದೇನೋ ಸಾಧಿಸುವ ತುಡಿತ ಹೊಂದಿದೆ. ನನಗೆ ವಿಶೇಷವಾದ ಬೇರೆ ಯಾವುದೋ ಉದ್ಯೋಗ ಬೇಕಿತ್ತು. ನಾನು ಪ್ರೀತಿಸುವ ಕೆಲಸವನ್ನು ಅರಸುತ್ತಿದ್ದೆ.

ಆ ಉದ್ಯೋಗ ನನ್ನಲ್ಲಿ ಆಗಾಗ ಸಾಕಷ್ಟು ಗೊಂದಲ ಹುಟ್ಟಿಸುತ್ತಿತ್ತು. ಏಕೆಂದರೆ ನನ್ನ ವೃತ್ತಿ ಬದುಕಿನಲ್ಲಿ ಅದಕ್ಕಾಗಿ 10 ವರ್ಷ ತರಬೇತಿ ಹೊಂದಿ 20 ವರ್ಷ ಅದನ್ನು ನಿರ್ವಹಿಸಿದ್ದೆ.

ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದೆ, ನನ್ನ ಜೀವನದ ಭೂತಕಾಲದಂತೆ ನಾನು ನನ್ನ ಭವಿಷ್ಯದಲ್ಲಿಯೂ ಜೈಲು ಕೀಪರ್ ಆಗಿ ಮುಂದುವರೆಯಲಾರೆ ಎಂದು.

ನಾನು ಯೋಚಿಸುತ್ತಿದ್ದೆ. ನಾನು ಪಡೆದಿದ್ದು ಎಕ್ಸ್(X) ಡಿಗ್ರಿಯನ್ನು, ಆದರೆ ನಾನು ಮಾಡಬೇಕಿದ್ದುದ್ದು ವೈ (Y) ಕೆಲಸವನ್ನು. ಅಥವಾ ನಾನು ಬದುಕುತ್ತಿದ್ದಿದ್ದು ಎ(A) ಜೊತೆಗೆ. ಆದರೆ ನಾನು ಬರೆದಿದ್ದು ಜೆ(J) ಬಗೆಗೆ. ಇದು ನನ್ನ ಈಗಿನ ಬದುಕು.

ಅಥವಾ ನಾನು ವ್ಯವಹಾರ ಅಥವಾ ವ್ಯಾವಹಾರಿಕ ಕಲೆಯಲ್ಲಿ ವೈಫಲ್ಯ ಹೊಂದಿದ್ದೆ. ಆದರೆ ಮತ್ತೆ ಪ್ರಯತ್ನಿಸುವ ಗೋಜಿಗೆ ಹೋಗಲಿಲ್ಲ. ಅಥವಾ ನನ್ನ ಪೋಷಕರು ನನ್ನನ್ನು ಒಬ್ಬ ವೈದ್ಯನಾಗಿ ನೋಡಲು ಇಚ್ಛಿಸಿದ್ದರು. ನಾನು ವೈದ್ಯನಾಗಲೇ ಬೇಕಿತ್ತು.

ದುರದೃಷ್ಟ

ನಾನು ಮ್ಯಾಟ್ ಬೆರ್ರಿಯೊಂದಿಗೆ ಮಾತನಾಡಿದೆ. ನನಗೆ ಯಾವುದು ಕನಸಿನ ಕೆಲಸ ಎನ್ನಿಸಿತ್ತೋ ಅವರು ಅದನ್ನೇ ಮಾಡುತ್ತಿದ್ದರು. ಸಿನಿಮಾಗಳ ವಿಮರ್ಶೆ ಬರೆಯುವುದು ಅಥವಾ ಸ್ಪೋರ್ಟ್ಸ್ ಅಂಕಣಗಳು. ಇದಕ್ಕಾಗಿ ಅವರು ಒಂದು ಪೋಸ್ಟ್‌ ಗೆ 100 ಡಾಲರ್ ಆದಾಯ ಪಡೆಯುತ್ತಿದ್ದರು.

8 ವರ್ಷಗಳ ನಂತರ ಅವರು ಇಎಸ್‌ಪಿಎನ್‌ನ ಸ್ಪೋರ್ಟ್ಸ್‌ ಚಾನೆಲ್‌ನಲ್ಲಿ ಮುಖ್ಯ ನಿರೂಪಕರಾದರು.

ಅಥವಾ ಜಿಮ್ ನಾರ್ಟನ್ ವಿಷಯಕ್ಕೆ ಬರೋಣ, ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಅಥವಾ ಶ್ರಮಿಕ ಕೆಲಸಗಳನ್ನು ಮಾಡುತ್ತಿದ್ದ ವ್ಯಕ್ತಿ ಅವರು. ಆದರೆ ಅವರೊಬ್ಬ ಹಾಸ್ಯ ಕಲಾವಿದರಾಗ ಬಯಸಿದ್ದರು. 20 ವರ್ಷಗಳ ನಂತರ ಅವರು ಜಗತ್ತಿನ ಅದ್ವಿತೀಯ ಹಾಸ್ಯ ಕಲಾವಿದರೆನಿಸಿದರು.

ಅಥವಾ ಜುಡಿ ಬ್ಲೂಮೆ, ತಮ್ಮ ತಲೆಯಲ್ಲಿ ಇಂತಹ ಹತ್ತಾರು ಕಾಲ್ಪನಿಕ ಕಥೆಗಳನ್ನು ಅವರು ಹೊಂದಿದ್ದರು. ಆದರೆ ಅವರ ಕುಟುಂಬ ಅವರನ್ನು ಮದುವೆ ಮಾಡಿ ಕೈತೊಳೆದುಕೊಂಡಿತು. ಇದಕ್ಕೆ ಅವರ ಅನುಮತಿ ಸಹ ಇರಲಿಲ್ಲ. ಹಾಗಾಗಿ ಅವರ ಕಥೆಗಳು ಜಗತ್ತಿನ ಮುಂದೆ ಬರದೇ ಅವರು ಮಾನಸಿಕ ಅನಾರೋಗ್ಯಕ್ಕೆ ತುತ್ತಾದರು.

ಇದೇ ರೀತಿ ನನ್ನ ಹಾಗೂ ನಿಮ್ಮಲ್ಲೂ ಹತಾಶೆಗಳಿರುತ್ತವೆ. ಅಥವಾ ಉದ್ಯೋಗ ಕುರಿತಾದ ಅಸಂತೋಷವಿರುತ್ತದೆ. ನಮ್ಮ ಸಾಮರ್ಥ್ಯ ಹಾಗೂ ಶ್ರದ್ಧೆಯನ್ನು ಅರಿತಿದ್ದರೂ ಅಸಂತೃಪ್ತಿ ಇರುತ್ತದೆ. ಇವೆಲ್ಲವೂ ಬದಲಾಗಬೇಕು.

10 ಹಂತಗಳು

ಇವು ನಿಮಗಾಗಿ 10 ಹಂತಗಳು ಮಾತ್ರವಲ್ಲ, 10 ವಿಭಿನ್ನ ಕಾರ್ಯಕ್ರಮಗಳು ಕೂಡ. ಇವು ನನಗಾಗಿ ನಾನು ಮಾಡಲಿಚ್ಛಿಸಿದ 10 ಹಂತಗಳು. ನನ್ನ ಮಾನಸಿಕ ಅನಾರೋಗ್ಯಕರ ಸ್ಥಿತಿಯಿಂದ ಹೊರಬರಲು, ನನ್ನ ಕನಸುಗಳನ್ನು ತ್ಯಾಗ ಮಾಡದೇ ಇರಲು, ನನ್ನ ಪ್ರತಿದಿನದ ಆಂತರಿಕ ನೋವಿನಿಂದ ಹೊರಬರಲು ನಾನು ಕಂಡುಕೊಂಡ ವಿಧಾನ.

ಅ) ಒಪ್ಪಿಕೊಳ್ಳಿ

ನಾನು ವಿಶ್ರಾಂತಿಯಿಲ್ಲದ ಸ್ಥಿತಿಯಲ್ಲಿದ್ದೇನೆ. ಏಳಲೂ ಸಾಧ್ಯವಿಲ್ಲ. ಈ ಹಂತದಲ್ಲಿ ಮಾಡಬೇಕಿರುವುದು ಕೇವಲ ಸಮಸ್ಯೆಯನ್ನು ಗುರುತಿಸುವುದು ಅಷ್ಟೇ.

ಇದೊಂದು ರೀತಿಯ ಪಿಸುಗುಡುವಿಕೆ. ಇದು ಹೊರಗಿನ ವಿಶ್ವದ ಪಿಸುಮಾತಲ್ಲ. ನಿಮ್ಮದೇ ದೇಹದೊಳಗಿನಿಂದ ಹೊರಹೊಮ್ಮುವ ಪಿಸುಮಾತು. ಇದು ನಿಮ್ಮನ್ನು ಹಾಸಿಗೆ ಬಿಟ್ಟು ಮೇಲೇಳದಂತೆ ಮಾಡಿರುತ್ತದೆ.

ಇದು ನಿಮ್ಮನ್ನು ಒಳಗಿನಿಂದಲೇ ತಿನ್ನುತ್ತಿರುತ್ತದೆ. ಹಂತ ಹಂತವಾಗಿ ನಿಮ್ಮ ದೇಹ ಇದರಿಂದ ತೊಂದರೆಗೊಳಗಾಗುತ್ತದೆ. ಹಾಗಾಗಿ ನೀವು ಇದನ್ನು ಗುರುತಿಸಲೇಬೇಕು.

ಬಹುತೇಕ ಮಂದಿ ತಮ್ಮ 30ರ ಪ್ರಾಯದಲ್ಲಿ ಇದನ್ನು ಅನುಭವಿಸುತ್ತಾರೆ. ಆದರೆ ಇದು ಬದಲಾಗದೇ ನಿಧಾನವಾಗಿ ಅವರನ್ನು ಜೀವಂತವಾಗಿ ದಹಿಸುತ್ತದೆ.

ಈ ಸಂದರ್ಭದಲ್ಲಿ ಅವರು ಔಷಧೋಪಚಾರಗಳನ್ನು ಬಯಸಿದರೂ ಲಭಿಸದಷ್ಟು ದೂರ ಸಾಗಿರುತ್ತಾರೆ. ಗುರುತಿಸದ ಕಾರಣ ಅವರು ಸಾವಿನತ್ತ ಸಾಗುತ್ತಿರುತ್ತಾರೆ.

ಆ) ನಿರಾಸೆ

ನಾನು ಗುರುತಿಸಿದಂತೆ ಕೆಲವು ವಿಷಯಗಳು ಯಾವತ್ತಿಗೂ ಬದಲಾಗವು. ನಾನು ಇಂತಹ ವಿಚಾರಗಳಲ್ಲಿ ಸಿಕ್ಕಿಬಿದ್ದಿದ್ದೇನೆ. ನನ್ನ ಪೋಷಕರು, ಸ್ನೇಹಿತರು, ಪ್ರೀತಿಪಾತ್ರರು, ಮೇಲಾಧಿಕಾರಿಗಳು ಇದನ್ನು ಎಂದಿಗೂ ಒಪ್ಪಿಕೊಳ್ಳಲಾರರು.

ಅಥವಾ ನಾನು ಶರಣಾಗಬೇಕು. ಇದರರ್ಥ ನನ್ನ ವಿದ್ಯೆ ವ್ಯಥಾ ನಾಶವಾಗಬೇಕು. ಅಥವಾ ಹಣ, ಅಥವಾ ಬುದ್ಧಿಶಕ್ತಿ, ಅಥವಾ ನನ್ನ ಕೆಲಸದ ಮೇಲಿನ ಪ್ರೀತಿ ನಾಶವಾಗಬೇಕು.

ಆಗಲೂ ನಾನು ಬೇಸರ ಹೊಂದಿದ್ದೆ.

ನೀವು ಪ್ರೀತಿಸುವ ವಿಚಾರಗಳನ್ನು ಆಸ್ಥೆಯಿಂದ ಆಲಿಸಿ. ನಿಮ್ಮ ಬಾಲ್ಯದಲ್ಲಿ ನೀವೇನು ಬಯಸಿದ್ದಿರಿ?, ನೀವೀಗ ಏನು ಬಯಸುತ್ತಿದ್ದೀರಿ?, ಮಾಡುತ್ತಿರುವುದೇನು?

ಇದು ಕೇವಲ ನನಗೆ ಮಾತ್ರವಲ್ಲ, ನಿಮಗೂ ಕೂಡ ಅನ್ವಯವಾಗುತ್ತವೆ. ಇದನ್ನು ಇಂದಾದರೂ ಪ್ರಯತ್ನಿಸಿ ಅಥವಾ ನಾಳೆ. ಆದರೆ ಇಲ್ಲಿ ಅತ್ಯುತ್ತಮ ಪ್ರಯತ್ನ ಅತೀ ಮುಖ್ಯ. ನೀವು ಬಾಲ್ಯದಲ್ಲಿ ಬಯಸಿದ್ದ ಮತ್ತು ಈಗ ಬಯಸುತ್ತಿರುವ ವಿಷಯಗಳನ್ನು ಬರೆದಿಡಿ. ಎರಡರ ಮಧ್ಯದ ವ್ಯತ್ಯಾಸ ಅಥವಾ ಸಂಬಂಧವನ್ನು ಗುರುತಿಸಿ.

ಬ್ರೈನ್ ಕೊಪ್ಪೆಲ್ ಮೆನ್, ತಾವು ಸಂಗೀತಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಕಾರ್ಯನಿರ್ವಹಿಸಬೇಕು ಎಂದುಕೊಂಡಿದ್ದರು. ಅದೇ ವ್ಯವಹಾರವನ್ನು ಅವರ ಕುಟುಂಬ ನಿರ್ವಹಿಸಿತ್ತು. ಅದೇ ಉದ್ಯಮದ ಕುರಿತಾಗಿ ಅವರು ತರಬೇತಿ ಪಡೆದಿದ್ದರು. ಅವರು ಅದರಲ್ಲೇ ಮುಂದುವರೆಯುವುದು ಒಳ್ಳೆಯದಿತ್ತು.

ಅವರು ತಮ್ಮ ಅಮೂಲ್ಯ 3 ವರ್ಷಗಳನ್ನು ತಮ್ಮ ಪಾರ್ಟ್‌ನರ್ ಹಾಗೂ ಹೈಸ್ಕೂಲ್ ಸ್ನೇಹಿತ ಡೇವಿಡ್ ಲೆವಿನ್ ಜೊತೆಗೂಡಿ ಹೊಸ ಹೊಸ ಆಲೋಚನೆಗಳ ಮೂಲಕ ಸಿನಿಮಾದ ತಯಾರಿ ನಡೆಸಿದರು. ಅಂತಿಮವಾಗಿ ಅವರು ರೌಂಡರ್ಸ್ ಎನ್ನುವ ಸಿನಿಮಾಗೆ ಕಥೆ ಹೆಣೆದರು. ಆ ಬಳಿಕ ಓಷಿಯನ್ಸ್ 13 ಸಿನಿಮಾ, ಈಗ ಬಿಲಿಯನ್ಸ್ ಸಿನಿಮಾಗೆ ಹೊಸ ಸೃಜನಾತ್ಮಕ ಕಥೆ ರಚಿಸಿದ್ದಾರೆ.(ಬಿಲಿಯನ್ಸ್‌ ನ ಟ್ರೈಲರ್ ವೀಕ್ಷಿಸಿ)

ನಾನು ಪ್ರತಿದಿನವೂ ಹೊಸ ಹೊಸ ಹೊಳಹುಗಳನ್ನು ನಿರೀಕ್ಷಿಸುತ್ತಿದ್ದೇನೆ. ಪ್ರತಿದಿನವೂ ನನ್ನ ಪಾಲಿಗೆ ಆವಿಷ್ಕಾರ.

ಇ) ಕಲಿಕೆ

ನಾವು ಆವಿಷ್ಕಾರ ಮಾಡದಿದ್ದರೆ ಅದೇ ನಮ್ಮ ಅಂತ್ಯ.

ಬುಕ್‌ಸ್ಟೋರ್‌ಗೆ ಹೋಗಿ. ಯಾವ ಪುಸ್ತಕಗಳು ನಿಮ್ಮನ್ನು ಬದಲಾಯಿಸುತ್ತವೋ ಗಮನಿಸಿ. ನಿಮ್ಮಲ್ಲಿರುವ ಸಮಸ್ಯೆಗೆ ಅದರಲ್ಲಿ ಪರಿಹಾರವಿದೆಯೇ?, ನಿಮ್ಮ ಬದುಕಿನ ಅಸ್ತಿತ್ವ ಹಾಗೂ ಅನುಭವಗಳನ್ನು ಆಳವಾಗಿ ಅರಿಯಬಲ್ಲ ಸಾಮರ್ಥ್ಯವಿದೆಯೇ? ಹುಡುಕಿ.

ಎಲ್ಲವನ್ನೂ ಓದಿ. ಅದರಲ್ಲಿ ನಿಮ್ಮ ಆಸಕ್ತಿಯನ್ನು ಹುಡುಕಿ. ಎಲ್ಲವನ್ನೂ ಕಲಿಯಿರಿ, ಎಲ್ಲವನ್ನೂ ನೋಡಿ.

ಜನ ನಿಮ್ಮತ್ತ ನೋಡುತ್ತಾರೆ. ಅವರಿಗೆ ನಿಮ್ಮ ಬಗ್ಗೆ ಆಕರ್ಷಣೆ ಹುಟ್ಟಬೇಕು.

ನೀನು ನಿನ್ನ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೀಯ ಅಥವಾ ನಿನಗೆ ಬದುಕಿನ ಬಗ್ಗೆ ಯಾವ ಆಲೋಚನೆಗಳೂ ಇಲ್ಲವೇ?, ಏನು ಮಾಡುತ್ತಿದ್ದೀಯಾ? ಎಂಬಿತ್ಯಾದಿ ಪ್ರಶ್ನೆಗಳು ಅವರಿಂದ ಎದುರಾಗಬೇಕು.

ಅವರು ನನ್ನ ಸೆರೆಮನೆಯ ಕೈದಿಗಳಲ್ಲ. ನಾನೊಬ್ಬ ಜೈಲ್ ಕೀಪರ್ ಆದರೆ ಪ್ರತಿದಿನವೂ ಕೈದಿಗಳನ್ನು ಹೊರಬಿಡುತ್ತೇನೆ. ಅವರ ಬದುಕನ್ನು ಬೆಳಕಿನತ್ತ ತಳ್ಳುತ್ತೇನೆ.

ಈ) ವೈಫಲ್ಯ

ನಾನು ಪ್ರತಿ ಬಾರಿ ಆರಂಭಿಸಿದಾಗಲೂ ಪ್ರತಿ ಬಾರಿಯೂ ವೈಫಲ್ಯ ಅನುಭವಿಸಿದ್ದೇನೆ. ನನ್ನ ಮೊದಲ ಎರಡು ಮೂರು ವ್ಯಾವಹಾರಿಕ ಪ್ರಯತ್ನಗಳು ಸಂಪೂರ್ಣವಾಗಿ ನೆಲಕಚ್ಚಿದ್ದವು. ನಾನು ಆರಂಭಿಸಿದ 20 ವ್ಯವಹಾರಗಳಲ್ಲಿ 17 ಸೋಲು ಕಂಡಿತು.

ನನ್ನ ಮೊದಲ 5 ಪುಸ್ತಕಗಳು ಪ್ರಕಟಣೆಯೇ ಕಾಣಲಿಲ್ಲ.

ಬದುಕಿನ ಸಂಬಂಧಗಳನ್ನು ಹುಡುಕುವಲ್ಲಿ ವೈಫಲ್ಯ ಹೊಂದಿದ್ದ ಕಾರಣ ನಾನು ವಿಚ್ಛೇದನ ಪಡೆದೆ.

ಟಿವಿ ಕಾರ್ಯಕ್ರಮಗಳನ್ನು ನಿರ್ಮಿಸುವಲ್ಲಿಯೂ ವೈಫಲ್ಯ ಕಂಡೆ. ಒಂದಲ್ಲ ಎರಡಲ್ಲ ಮೂರು ಬಾರಿ.

ಮುಂದುವರೆಯಲು ಪ್ರಯತ್ನಿಸಿದ್ದಷ್ಟೂ ನಿರಾಸೆ ಅನುಭವಿಸಿದೆ.

ನೀವು ಏನನ್ನಾದರೂ ಇಚ್ಛಿಸುತ್ತೀರಾದರೆ, ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಯಾವುದು ಎನ್ನುವುದನ್ನು ತಿಳಿದುಕೊಳ್ಳಿ.

ತುರ್ತಾಗಿ ಜಗತ್ತಿನೆದುರು ನಾನು ಸರ್ವಶ್ರೇಷ್ಠನೆನಿಸಿಕೊಳ್ಳಬೇಕಿತ್ತು. ಆದರೆ ನಾನು ಪುನಃ ಪುನಃ ಮೂರ್ಖನಾದೆ. ಇದರ ಕಾಠಿಣ್ಯತೆ ಮತ್ತೆ ಮತ್ತೆ ನನ್ನನ್ನು ದುಃಖತಪ್ತನಾಗಿಸಿತ್ತು. ಮೇಲೆ ಹೋಗಲು ಪ್ರಯತ್ನಿಸಿದಷ್ಟೂ ಕೆಳಗೆ ಬಿದ್ದೆ.

ಇದು ಸಾಕಷ್ಟು ವರ್ಷ ತೆಗೆದುಕೊಂಡಿತು.

ಪ್ರೀತಿ + ಛಲ = ಯಶಸ್ಸು.

ಉ) ಆದರೆ ನೀವು ಮುಂದುವರೆಯುತ್ತೀರಾ?

ನಿಮ್ಮಿಂದ ಸಾಧ್ಯ ಅಥವಾ ಅಸಾಧ್ಯ. ನಾನು 90ರ ದಶಕಕ್ಕೂ ಮೊದಲೇ ನಾಲ್ಕು ಪುಸ್ತಕಗಳನ್ನು ಬರೆದಿದ್ದೆ. ಇದರಲ್ಲಿ ವೈಫಲ್ಯ ಕಂಡೆ. ಹಾಗಾಗಿ ನಿಲ್ಲಿಸಿದೆ. ಆದರೆ ನನ್ನನ್ನು ನಾನು ಬಿಟ್ಟುಕೊಡದೇ ಹೆಚ್‌ಬಿಓ ವಾಹಿನಿಯಲ್ಲಿ ಕೆಲಸ ಗಿಟ್ಟಿಸಿದೆ.

7 ವರ್ಷಗಳ ತರುವಾಯ ನಾನು ಮತ್ತೆ ಬರೆಯಲಾರಂಭಿಸಿದೆ. ಆದರೆ ಹಣಕಾಸಿಗೆ ಸಂಬಂಧಿಸಿದ ವಿಚಾರಗಳಾಗಿದ್ದವು, ಹಾಗಾಗಿ ನಿಲ್ಲಿಸಿದೆ. ಪುನಃ 8 ವರ್ಷಗಳ ನಂತರ ವೈಯಕ್ತಿಕ ಸಂಗತಿಗಳನ್ನು ಬರೆಯಲು ಪ್ರಾರಂಭಿಸಿದೆ.

ಈಗ ನನಗನ್ನಿಸಿದ್ದನ್ನು ನಾನು ಬರೆಯುತ್ತಿದ್ದೇನೆ. ನಾನೀಗ ಬರೆಯುತ್ತಿರುವುದು ನಿಜಕ್ಕೂ ವಿಶೇಷವಾದದ್ದು.

ಬಹಳ ಬೇಸರದ, ದುಃಖದ ಸಂಗತಿಗಳನ್ನು ಬರೆಯುತ್ತಿದ್ದೇನೆ. ಮುಂದೊಂದು ದಿನ ನಾನೊಬ್ಬ ಒಳ್ಳೆಯ ಬರಹಗಾರನಾಗಬಹುದು. ಆದರೆ ನಾನು ಪ್ರಯತ್ನಿಸುವುದನ್ನು ಪ್ರೀತಿಸುತ್ತೇನೆ. ನಾನೊಬ್ಬ ಗಮನಾರ್ಹ ವ್ಯಕ್ತಿಯಾಗಲು ಬಯಸುತ್ತೇನೆ.

ಯಾವತ್ತಿಗೂ ಬಿಟ್ಟುಕೊಡುವುದನ್ನು ಯೋಚಿಸಬೇಡಿ. ಕ್ಷಮೆಗಳನ್ನು ತಿರಸ್ಕರಿಸಬೇಡಿ. ಅವಕಾಶಗಳನ್ನು ನಿರ್ಲಕ್ಷಿಸಬೇಡಿ.

ಊ) ನೀವು ವಾಪಸ್ಸಾಗಿದ್ದೀರಿ

ನಾನು ನನ್ನ ಬದುಕಿನಲ್ಲಿ, ಬರಹಗಳಲ್ಲಿ, ವ್ಯವಹಾರದಲ್ಲಿ, ಸಂಬಂಧಗಳಲ್ಲಿ ನೀರಸನಾಗಿದ್ದೇನೆ.

ನನಗೆ: ನನ್ನ ಬಗ್ಗೆ ನಾನೇ ನಿರಾಸೆ ಹೊಂದುವುದು ನನ್ನ ಮಟ್ಟಿಗೆ ಹೊಸದೊಂದು ಸವಾಲುಗಳನ್ನು ಸ್ವೀಕರಿಸುವುದಷ್ಟೇ. ಅವು ನನಗೆ ದುಃಖ ತರುವವರೆಗೂ ನಾನು ಪ್ರತಿದಿನವೂ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತಲೇ ಇದ್ದೆ.

ಕೆಲವೊಮ್ಮೆ ಇವುಗಳು ನನ್ನನ್ನು ಅತಿಯಾಗಿ ಬಾಧಿಸುತ್ತಿದ್ದವು.

ನನ್ನ ಗೊಂದಲಗಳನ್ನು ನಾನು ಅರಿತಿದ್ದೆ. ನನ್ನ ಸಮಸ್ಯೆಗಳನ್ನು ಗುರುತಿಸುವುದು ನನಗೆ ಗೊತ್ತಿತ್ತು. ಜೊತೆಗೆ ನನಗೆ ಇಷ್ಟವಾದುದನ್ನು ಬಯಸುವುದು ನನಗೆ ಗೊತ್ತಿತ್ತು. ನನ್ನ ಹಠವನ್ನು ನಾನು ಸಾಧಿಸಿಕೊಳ್ಳಬಲ್ಲೆ. ಕೆಲವೊಮ್ಮೆ ಸಾಧಿಸಿಕೊಳ್ಳಲಾರೆ.

ಆದರೆ ಯಾವಾಗಲೂ ನಾನು ನನ್ನ ಪ್ರೀತಿಯ ಸಂಗತಿಗಳೊಂದಿಗೆ ವಾಪಸ್ಸಾಗಿದ್ದೇನೆ.

ಋ) ಮಾರ್ಗದರ್ಶಕರು

ನನ್ನ ಬದುಕಿನ ಪ್ರತಿ ಕ್ಷೇತ್ರದಲ್ಲೂ ಅತ್ಯುತ್ತಮ ಮಾರ್ಗದರ್ಶಕರು ಸಿಕ್ಕಿದ್ದರು.

ಮಾರ್ಗದರ್ಶಕರನ್ನು ನೀವು ಹೇಗೆ ಪಡೆಯುತ್ತೀರಿ?

ನಿಮಗೆ ಯಾರಾದರೂ ಇಷ್ಟವಾದರೆ ಅವರಿಗೆ ಸಲಹೆಗಳನ್ನು ನೀಡಿ.

ನಾನು ನಿಮಗೆ ಹೇಗೆ ಸಹಾಯ ಮಾಡಬಲ್ಲೆ? ಎಂದು ಕೇಳಬೇಡಿ. ಏಕೆಂದರೆ ಅದು ಅವರಿಗೆ ಯಾವುದೋ ಕೆಲಸವನ್ನು ಹೇಳುವಂಥದ್ದಾಗಿರುತ್ತದೆ. ಅವರಿಗೆ ಅವರದ್ದೇ ಆದ ಕೆಲಸಗಳಿದ್ದರೆ ಅವರು ನಿಮಗೆ ಏಕೆ ಸಹಾಯ ಮಾಡಬಲ್ಲರು?

ಅವರ ಬದುಕನ್ನು ನೀವು ಹೇಗೆ ಉತ್ತಮ ಪಡಿಸುತ್ತೀರಿ ಎಂದು ನೀವು ಅವರನ್ನು ಕೇಳಿ.

ನಿಮಗೆ ಬೇರೆ ಬೇರೆ ಮಾರ್ಗದರ್ಶಕರ ಅವಶ್ಯಕತೆ ಇದ್ದರೆ(ಕೆಲವೊಮ್ಮೆ ಅತ್ಯುತ್ತಮ) ನಿಮ್ಮ ಆಸಕ್ತಿಯ ಇನ್ನೂರು ಪುಸ್ತಕಗಳನ್ನು ಓದಿ. ಪ್ರತಿ 50 ಪುಸ್ತಕಗಳಲ್ಲಿ ನಿಮಗೊಬ್ಬರು ಮಾರ್ಗದರ್ಶಕರು ಸಿಗುತ್ತಾರೆ.

ಆ 200 ಪುಸ್ತಕಗಳಲ್ಲಿ ಇರುವುದೇನು?

ಅಂದರೆ ಕ್ವಾಂಟಂ ಮೆಕ್ಯಾನಿಕ್ಸ್ ವಿಷಯದಲ್ಲಿ ಪುಸ್ತಕದಲ್ಲಿ ಸುಂದರ ಚಿಟ್ಟೆಗಳನ್ನು ಚಿತ್ರಿಸಲಾಗಿರುತ್ತದೆ. ನೀವು ವಿಷಯವನ್ನು ಎಷ್ಟು ಪ್ರೀತಿಸುತ್ತೀರೋ ಅಷ್ಟು ಸುಂದರವಾಗಿ ಗೋಚರಿಸುತ್ತದೆ.

ಎ) ನಿಮ್ಮ ಧ್ವನಿ ನೀವೇ ಸೃಷ್ಟಿಸಿ

ದ ಬೀಟಲ್ಸ್, ಪಿಂಕ್ ಫ್ಲೋಯ್ಡ್, ದ ರೋಲಿಂಗ್ ಸ್ಟೋನ್ಸ್, ಯು2, ದ ವು ಟಾಂಗ್ ಕ್ಲಾನ್ ಮುಂತಾದ ಹೆಸರುಗಳ ಮುಂಚೆ ವ್ಯಕ್ತಿಗಳ ಅಸ್ತಿತ್ವವಿದೆ.

ಅವರೆಲ್ಲಾ ಪರಿಪೂರ್ಣವಾಗಿ ವಿಭಿನ್ನರೇನಲ್ಲ. ತಮ್ಮ ಹಿಂದಿನ ದಿನಗಳ ಅನುಭವಗಳಿಂದ ಎಲ್ಲವನ್ನೂ ಪಡೆದುಕೊಂಡವರು ಅವರು. ವರ್ಷಗಟ್ಟಲೆ ಅನುಕರಿಸಲ್ಪಟ್ಟವರು. ಹಾಗೂ ತಮ್ಮೊಳಗೆ ಅಪೂರ್ವ ಧ್ವನಿಯೊಂದನ್ನು ಅಭಿವೃದ್ಧಿಪಡಿಸಿಕೊಂಡವರು.

ಬಹುತೇಕ ಜನ ಅನುಕರಣೆ ಮತ್ತು ಅಪೂರ್ವತೆಗಳ ಮಧ್ಯೆ ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಇದು ಅನುಕರಣೆಯ ಜಾಲ. ಇದರಲ್ಲಿ ಸಿಲುಕಬೇಡಿ.

ಪ್ರತಿ ದಿನವೂ 10 ನಿಮ್ಮ ಆಸಕ್ತಿಯ ವಿಭಿನ್ನ ಆಲೋಚನೆಗಳನ್ನು ಹಾಗೂ ನಿಮ್ಮದೇ ಧ್ವನಿಯಲ್ಲಿ, ನಿಮ್ಮದೇ ತಾಂತ್ರಿಕ ಆಲೋಚನೆಗಳಲ್ಲಿ ಯೋಜಿಸಿ.

ಏ) ಮತ್ತೆ ವೈಫಲ್ಯ

ನಿರಂತರ ವೈಫಲ್ಯವೇ ಯಶಸ್ಸಿನ ರಹಸ್ಯ.

10 ಬಾರಿ ನಿಮ್ಮ ಪ್ರೀತಿ ಪಾತ್ರ ಹುಡುಗಿಯ ಮುಂದೆ ನಿಂತು ನಿಮ್ಮ ಪ್ರೇಮಾಲಾಪನೆ ತಿರಸ್ಕೃತಗೊಂಡರೆ ಅದು ವೈಫಲ್ಯವೇ. ಅಥವಾ ಅದನ್ನು ಕೇವಲ ಯೋಚಿಸಿದ್ದೀರಾ ಅಥವಾ ಪ್ರೇಮಪತ್ರ ಬರೆದು ಅಭ್ಯಾಸ ಮಾಡಿದ್ದೀರಾ?

ವೈಫಲ್ಯ ಹೊಂದುವುದರಿಂದ ವೈಫಲ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಇದೊಂದು ದಾಖಲೆಯಾಗುತ್ತದೆ. ಇದೇ ನಿಮ್ಮ ಮನಸ್ಸಿನ ಇನ್‌ಬಾಕ್ಸ್‌ ನಲ್ಲಿ ಶೇಖರಿಸಿಡಬಹುದಾದ ಕಡತವಾಗುತ್ತದೆ. ಇದರ ಸಹಾಯದಿಂದ ಮುಂದೆ ಇಂತಹ ವೈಫಲ್ಯಗಳನ್ನು ದೂರ ಇಡಬಹುದು ಹಾಗೂ ಇದು ನಿಮ್ಮ ಯಶಸ್ಸಿಗೆ ಖಂಡಿತಾ ನೆರವಾಗುತ್ತದೆ.

ಸಾಧ್ಯವಾದಷ್ಟು ವೈಫಲ್ಯ ಹೊಂದಿ, ಆ ವೈಫಲ್ಯದ ತುಣುಕೊಂದನ್ನು ತೆಗೆದುಕೊಂಡು ಮತ್ತೆ ಪ್ರಯತ್ನಿಸಿ.

ನಿಮ್ಮ ಯೋಚನೆಗಳೂ ವಿಫಲವಾಗುತ್ತವೆ. ಅವುಗಳನ್ನು ಗುರುತಿಸುವುದು ಅತೀ ಮುಖ್ಯ. ಉಪಯೋಗಕಾರಿ ಅಥವಾ ಉಪಯೋಗರಹಿತವಾದದ್ದು ಅನ್ನುವುದು ಅತೀ ಮುಖ್ಯ.

ಇದು ಅನುಭವಗಳಿಂದ ಮಾತ್ರ ಈ ಭಾವ ನಿಮ್ಮ ಅರಿವಿಗೆ ಬರುತ್ತದೆ.

ಮತ್ತೆ ಮತ್ತೆ ಪ್ರಯತ್ನಿಸುವುದಷ್ಟೇ ಯಶಸ್ಸಿನ ಗುಟ್ಟು. ಅತಿಯಾದ ನಿರೀಕ್ಷೆ, ಅತಿಯಾದ ಆತ್ಮವಿಶ್ವಾಸ, ಹಂಬಲ ಅಥವಾ ನಿರಾಸೆ ಇದ್ಯಾವುದೂ ಕೆಲಸಕ್ಕೆ ಬರುವುದಿಲ್ಲ.

ಹಾಗಾಗಿ ಇನ್ನು ಮುಂದೆ

ಗುರುತಿಸಿ+ ಛಲದಿಂದ ಪ್ರಯತ್ನಿಸಿ+ಮಾರ್ಗದರ್ಶಕರನ್ನು ಹುಡುಕಿಕೊಳ್ಳಿ+ ವೈಫಲ್ಯವನ್ನು ಗೌರವಿಸಿ+ ಪ್ರಯತ್ನವನ್ನು ಪ್ರೀತಿಸಿ = ಯಶಸ್ಸು

ಆದರೆ ಇನ್ನೊಂದು ಅಂಶ ಬಹು ಕಷ್ಟಕರ.

ಐ) ನಿಮ್ಮನ್ನು ಪ್ರೀತಿಸುವ ವ್ಯಕ್ತಿಗಳು

ನಾನು ಗೊಂದಲದಲ್ಲಿದ್ದಾಗ ನನ್ನ ಸಮಾಧಾನಪಡಿಸಲು ಸ್ನೇಹಿತರಿದ್ದರು. ಅವರು ನನ್ನ ಕೈಹಿಡಿದು ಮೇಲೆತ್ತುತ್ತಾರೆ ಎಂದು ನಾನು ನಂಬಿದ್ದೆ.

ಅದೊಂದು ಪ್ರಾರ್ಥನೆ ಗಾಳಿಯಲ್ಲಿ ಕರಗಿಹೋಯಿತು. ಆ ಪ್ರಾರ್ಥನೆಯೇ ಯಾರಾದರೊಬ್ಬ ಸ್ನೇಹಿತ ನನ್ನನ್ನು ಮೇಲೆತ್ತುತ್ತಾನೆ ಎನ್ನುವುದು.

ಅವರು ನಿಮಗೆ ಯಾವುದು ಅತೀ ಮುಖ್ಯ ಎನ್ನುವುದನ್ನು ಅರಿತಿರುತ್ತಾರೆ. ಅವರು ನಿಮಗೆ ಕಂಫರ್ಟ್ ಒದಗಿಸಿದರೆ, ಬೆಂಬಲ ನೀಡಿದ್ದರೆ, ಅವರಿಂದ ನಿಮಗೆ ಸಾಕಷ್ಟು ನೆರವು ಸಿಕ್ಕಿದ್ದೇ ಆದರೆ ಅವರು ನಿಮ್ಮ ಪಾಲಿಗಿರುತ್ತಾರೆ. ಅವರ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ. ಅವರಿಗೆ ಇನ್ನೇನನ್ನೋ ಕಲಿಸಲು ಮುಂದಾಗಬೇಡಿ. ಕೇವಲ ಅವರಿಗೆ ಋಣಿಯಾಗಿರಿ ಅಷ್ಟೇ. ನನ್ನ ಪ್ರಕಾರ ನನ್ನ ಬದುಕು ಇವೇ ಕಾರಣಗಳಿಂದ ಈ ಅನುಭವಗಳನ್ನು ಗಳಿಸಿಕೊಂಡಿದೆ.

ಮರು ಆವಿಷ್ಕಾರ ವ್ಯಾಪಕ ಬದಲಾವಣೆಯನ್ನು ಸಾಧ್ಯವಿಲ್ಲದೇ ಇರಬಹುದು. ಟ್ರಕ್ ಡ್ರೈವರ್ ಆಗಿರುವ ನೀವು ಬಾಸ್ಕೆಟ್ ಬಾಲ್ ಆಟಗಾರನಾಗದೇ ಹೋಗಬಹುದು.

ಆದರೆ ನೀವು ಉತ್ತಮ ವ್ಯಕ್ತಿಗಳಿಂದ ಅತ್ಯುತ್ತಮ ವ್ಯಕ್ತಿಗಳತ್ತ ಸರಿಯುತ್ತೀರಿ.

ಸ್ಪರ್ಧಾರಹಿತ ಸ್ಥಿತಿಯಿಂದ ಪೈಪೋಟಿಯ ಸ್ಥಿತಿ ತಲುಪಿಕೊಳ್ಳುತ್ತೀರಿ.

ಉತ್ತಮ ಸ್ನೇಹಿತನಿಂದ ಅತ್ಯುನ್ನತ ಸ್ನೇಹಿತನನ್ನು ಪಡೆದುಕೊಳ್ಳುತ್ತೀರಿ.

ಗುಲಾಮರಾಗಿದ್ದವರು ಸ್ವತಂತ್ರರಾಗುತ್ತೀರಿ.

ಈ ಮೇಲಿನ ಎಲ್ಲವೂ ಕೇವಲ ಅಭ್ಯಾಸಗಳಿಂದ ಸಾಧ್ಯವಾಗುತ್ತದೆ.

ನೀವು ಮುಂದೊಂದು ದಿನ ಖಗೋಳಯಾನಿಯಾಗಬಹುದು ಅಥವಾ ಚಿತ್ರಕಾರನಾಗಬಹುದು. ನಿಮಗೆ ರಜತ ಅವಕಾಶ ಸಿದ್ಧಿಸಿದರೆ ಅದನ್ನು ಸ್ವರ್ಣ ಅವಕಾಶವಾಗಿ ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ಅದೇ ಬದುಕು. ಅದೇ ಯಶಸ್ಸು.


ಲೇಖಕರು: ಜೇಮ್ಸ್​ ಅಲ್ಚರ್​

ಅನುವಾದಕರು: ವಿಶ್ವಾಸ್​