ಆರ್​ಬಿಐ ಮಾಜಿ ಗರ್ವರ್ನರ್​ ಪಾಲಿಗೆ ಪ್ರಾಧ್ಯಾಪಕ- ಬುಡಕಟ್ಟು ಜನರಿಗೆ ಅಭಿವೃದ್ಧಿ ಪಾಠ ಹೇಳುವ ಸಾಧಕ

ಟೀಮ್​ ವೈ.ಎಸ್​. ಕನ್ನಡ

0

ಅಲೋಕ್ ಸಾಗರ್, ಐಐಟಿ ದೆಹಲಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು. ಹೊಸ್ಟನ್ ಯೂನಿವರ್ಸಿಟಿಯಿಂದ ಮಾಸ್ಟರ್ಸ್ ಡಿಗ್ರಿ ಮತ್ತು ಪಿ.ಎಚ್.ಡಿ ಪಡೆದ ಸಾಧಕ. ಅಷ್ಟೇ ಅಲ್ಲ ಐಐಟಿಯ ಮಾಜಿ ಫ್ರೊಫೆಸರ್ ಕೂಡ ಹೌದು. ಆದ್ರೆ ಈಗ ಅಲೋಕ್ ಕಳೆದ 32 ವರ್ಷಗಳಿಂದ ಮಧ್ಯ ಪ್ರದೇಶದ ಕುಗ್ರಾಮ ಒಂದರಲ್ಲಿ ಬದುಕುತ್ತಿದ್ದಾರೆ. ಅಲ್ಲೇ ಆದಿವಾಸಿಗಳ ಜೊತೆಗೆ ಜೀವನ ನಡುತ್ತಿದ್ದಾರೆ. ಬುಡಕಟ್ಟು ಜನಾಂಗದವರ ಜೊತೆ ಅವರ ಎಲ್ಲಾ ಆಗುಹೋಗುಗಳು ನಡೆದು ಹೋಗುತ್ತಿದೆ.

ಚಿತ್ರ: ಪತ್ರಿಕಾ ಕೃಪೆ
ಚಿತ್ರ: ಪತ್ರಿಕಾ ಕೃಪೆ

ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದಾಗ ಅಲೋಕ್ ಹಲವು ಬುದ್ಧಿವಂತ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿದ್ದರು.  ಆರ್​ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೂಡ ಅಲೋಕ್ ಸಾಗರ್ ವಿದ್ಯಾರ್ಥಿ ಅನ್ನುವುದು ಅಚ್ಚರಿಯ ವಿಷಯ. ಆದ್ರೆ ಅಲೋಕ್​ಗೆ  ಐಐಟಿ ಕೆಲಸ ಇಷ್ಟವಾಗಲಿಲ್ಲ. ಪ್ರೊಫೆಸರ್ ಹುದ್ದೆಗೆ ರಾಜಿನಾಮೆ ನೀಡಿ ಮಧ್ಯಪ್ರದೇಶದ ಬೆತುಲ್ ಮತ್ತು ಹೊಷಂಗಬಾದ್ ಜಿಲ್ಲೆಗಳಲ್ಲಿ ಆದಿವಾಸಿಗಳ ಜೊತೆಗೆ ಕೆಲಸ ಮಾಡಲು ಆರಂಭಿಸಿದರು. ಕಳೆದ 26 ವರ್ಷಗಳಿಂದ ಅಲೋಕ್ ಕೊಚಮು ಅನ್ನುವ ಕುಗ್ರಾಮದಲ್ಲಿ ಸುಮಾರು 750 ಬುಡಕಟ್ಟು ಕುಟುಂಬಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಅಚ್ಚರಿ ಅಂದ್ರೆ ಈ ಗ್ರಾಮಕ್ಕೆ ವಿದ್ಯುತ್ ಇಲ್ಲ. ರಸ್ತೆ ಕೂಡ ಸರಿಯಾಗಿಲ್ಲ. ಚಿಕ್ಕದೊಂದು ಪ್ರಾಥಮಿಕ ಶಾಲೆ ಮಾತ್ರ ಈ ಗ್ರಾಮದಲ್ಲಿದೆ.

ಇದನ್ನು ಓದಿ: ಶಿಕ್ಷಣದ ಬಗ್ಗೆ ತಿಳಿಸಿಕೊಡಲು ಆಯ್ಕೆಯಾದ 16ರ ಪೋರಿ- ಮಿಶೆಲ್ ಒಬಾಮ ಗಮನ ಸೆಳೆದ ಭಾರತೀಯ ಮೂಲದ ಹುಡಗಿ

ಅಂದಹಾಗೇ, ವಿದ್ಯಾವಂತರಾಗಿದ್ದ ಅಲೋಕ್ ಇಲ್ಲೇನು ಮಾಡುತ್ತಿದ್ದಾರೆ ಅನ್ನುವ ಸಂಶಯ ನಿಮಗೆ ಕಾಡಬಹುದು. ಅದಕ್ಕೂ ಉತ್ತರವಿದೆ. ಅಲೋಕ್ ಕಳೆದ 32 ವರ್ಷಗಳಲ್ಲಿ ಈ ಕುಗ್ರಾಮದಲ್ಲಿ ಸುಮಾರು 55000 ಮರಗಳನ್ನು ನೆಟ್ಟಿದ್ದಾರೆ. ದೇಶಕ್ಕಾಗಿ ಎಲ್ಲಿ ಬೇಕಾದ್ರೂ ಕೆಲಸ ಮಾಡಬಹುದು ಅನ್ನುವುದನ್ನು ಮಾಡಿ ತೋರಿಸಿದ್ದಾರೆ.

“ ಭಾರತದಲ್ಲಿ ಹಲವರಿಗೆ ಹಲವು ಸಮಸ್ಯೆಗಳಿವೆ. ಆದ್ರೆ ಜನರು ತಮ್ಮ ಬುದ್ಧಿವಂತಿಕೆಯನ್ನು ಮಾತ್ರ ಉಪಯೋಗಿಸಿಕೊಂಡು ಮಾನವೀಯತೆಯನ್ನು ಬದಿಗಿಟ್ಟು ಬಿಟ್ಟಿದ್ದಾರೆ. ಜನರ ಹಿತಕ್ಕಾಗಿ ಕೆಲಸ ಮಾಡುವ ಬದಲು ತಮ್ಮ ಡಿಗ್ರಿಗಳನ್ನು ತೋರ್ಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ”
- ಅಲೋಕ್ ಸಾಗರ್, ಐಐಟಿ ದೆಹಲಿಯ ಮಾಜಿ ಪ್ರೊಫೆಸರ್

ಅಲೋಕ್​ಗೆ ಸಾಮಾನ್ಯರಂತೆ ಬದುಕುವುದು ಮೊದಲಿನಿಂದಲೇ ಇಷ್ಟವಾಗಿತ್ತು. ಇತ್ತೀಚೆಗೆ ಬೆತುಲ್ ಜಿಲ್ಲಾ ಚುನಾವಣೆಯ ವೇಳೆ ಅಲೋಕ್ ಬಗ್ಗೆ ಅಲೋಕ್ ಬಗ್ಗೆ ಹಲವರಿಗೆ ಸಂಶಯ ಬಂದಿತ್ತು. ಆ ವೇಳೆ ಅಲೋಕ್ ತನ್ನ ವಿದ್ಯಾಭ್ಯಾಸ ಮತ್ತು ತನ್ನ ಇತಿಹಾಸದ ಬಗ್ಗೆ ತಿಳಿಸಿದ್ದರು. ಕೊನೆಗೆ ಅಲೋಕ್ ಹೇಳಿದ್ದೇ ಸತ್ಯ ಎಂದು ಅರಿತಾಗ ಎಲ್ಲರಿಗೂ ಅಚ್ಚರಿ ಆಗಿತ್ತು ಅನ್ನೋದನ್ನ ಪತ್ರಿಕಾ ವರದಿ ಮಾಡಿದೆ.

ಅಲೋಕ್ ಸರಳತೆ ಎಲ್ಲರಿಗೂ ಮಾದರಿ ಆಗಿದೆ. 3 ಸೆಟ್ ಕರ್ತಾ, ಒಂದು ಸೈಕಲ್ ಮಾತ್ರ ಹೊಂದಿರುವ ಅಲೋಕ್ ಬುಡಕಟ್ಟು ಜನರಿಗೆ ಕಾಡಿನ ಮಹತ್ವ ಮತ್ತು ಗಿಡಗಳನ್ನು ಬೆಳೆಸುವ ಬಗ್ಗೆ ಹೇಳಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ ವಿವಿಧ ಜಾತಿಯ ಗಿಡಗಳ ಬೀಜಗಳನ್ನು ಕೂಡ ಬುಡಕಟ್ಟು ಜನರಿಗೆ ಹಂಚಿ ಮರ ಬೆಳೆಸಲು ನೆರವು ನೀಡುತ್ತಿದ್ದಾರೆ. ಅಲೋಕ್ ಹಲವು ಭಾಷೆಗಳನ್ನು ಮಾತನಾಡಬಲ್ಲರು, ಜೊತೆಗೆ ಬುಡಕಟ್ಟು ಜನರಿಗೆ ಮನಸ್ಸಿಗೆ ಮುಟ್ಟುವಂತೆ ಎಲ್ಲವನ್ನೂ ತಿಳಿಸಬಲ್ಲರು. ಶ್ರಮಿಕ ಆದಿವಾಸಿ ಸಂಘದ ಜೊತೆ ಕೆಲಸ ಮಾಡುತ್ತಿರುವ ಅಲೋಕ್ ಸಾಗರ್ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸದ್ದಿಲ್ಲದೆ ಶ್ರಮಿಸುತ್ತಿದ್ದಾರೆ.

ಇದನ್ನು ಓದಿ:

1. ಅನಾಥ ಹೆಣ್ಣುಮಕ್ಕಳಿಗೂ 'ದಂಗಲ್' ನೋಡುವ ಚಾನ್ಸ್ : ಎಲ್ಲರಿಗೂ ಮಾದರಿ ಇಂದೋರ್ ಕಲೆಕ್ಟರ್

2. ಹೆಂಗಳೆಯರ ಪಾಲಿನ ಆತ್ಮರಕ್ಷಕ ಗುರು

3. ನಗದು ಇಲ್ಲದಿದ್ರೂ ನೋ ಟೆನ್ಷನ್ : ಕ್ಯಾಶ್​ಲೆಸ್​ ಆಗ್ತಿದೆ LPG ಪೇಮೆಂಟ್

Related Stories

Stories by YourStory Kannada