ಸ್ವೈಪಿಂಗ್​ ಮಷಿನ್​ಗಳಿಗೆ ಸಿಗಲಿದೆ ಬಹುಭಾಷೆಯ ಟಚ್​- ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಸ ​ಕಿಕ್​

ಟೀಮ್​ ವೈ.ಎಸ್​. ಕನ್ನಡ

ಸ್ವೈಪಿಂಗ್​ ಮಷಿನ್​ಗಳಿಗೆ ಸಿಗಲಿದೆ ಬಹುಭಾಷೆಯ ಟಚ್​- ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಸ ​ಕಿಕ್​

Friday April 07, 2017,

2 min Read

ಡಿಜಿಟಲ್​ ಇಂಡಿಯಾದ ಕನಸು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಕೇಂದ್ರ ಸರಕಾರವಂತೂ ಕ್ಯಾಶ್​ಲೆಸ್​ ಟ್ಯಾನ್ಸ್​ಆ್ಯಕ್ಷನ್​ಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗ್ರಾಹಕರಿಗೆ ಮತ್ತು ಉದ್ಯಮಿಗಳಿಗೆ ನೆರವಾಗುವಂತಹ ವ್ಯವಸ್ಥೆ ಮಾಡಿಕೊಡುತ್ತಿದೆ. ಕಳೆದ ನವೆಂಬರ್​ 8ರ ನೋಟ್​ ಬ್ಯಾನ್​ ಬಳಿಕ ಡಿಜಿಟಲ್​ ಪಾವತಿಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿತ್ತು. ಕೈಯಲ್ಲಿ ನೋಟ್​ ಇಲ್ದೇ ಇದ್ದಾಗ ಗ್ರಾಹಕರು ಅನಿವಾರ್ಯವಾಗಿ ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಂದಿಕೊಂಡು ಹೋಗಿದ್ದರು. ಈಗ ನೋಟ್​ಗಳು ಲಭ್ಯವಿದ್ದರೂ ಗ್ರಾಹಕರಿಗೆ ಮತ್ತು ಉದ್ಯಮಿಗಳಿಗೆ ಡಿಜಿಟಲ್​ ಟ್ಯಾನ್ಸ್​ ಆ್ಯಕ್ಷನ್​ನ ಲಾಭದ ಅರಿವಾಗಿದೆ. ಹಾರ್ಡ್​ ಕರೆನ್ಸಿಯಲ್ಲಿರುವ ರಿಸ್ಕ್​ ಡಿಜಿಟಲ್​ ವ್ಯವಸ್ಥೆಯಲ್ಲಿ ಶೂನ್ಯ ಅನ್ನುವುದು ಮನದಟ್ಟಾಗಿದೆ.

image


ನೋಟ್​ ಬ್ಯಾನ್​ಗೂ ಮುನ್ನ ಡಿಜಿಟಲ್​ ವ್ಯವಹಾರದ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆದ್ರೆ ನೋಟ್​ ಬ್ಯಾನ್​ ಬಳಿಕ ಸ್ವೈಪಿಂಗ್​ ಮಷಿನ್​ಗಳು ಎಲ್ಲಾ ಕಡೆ ಸಾಮಾನ್ಯವಾಗಿ ಬಿಟ್ಟಿವೆ. ಕೆಲವೇ ಸಾವಿರ ರೂಪಾಯಿ ವಹಿವಾಟು ನಡೆಸುವ ಉದ್ಯಮದಿಂದ ಹಿಡಿದು ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುವ ಬಜಾರ್​ಗಳ ತನಕ ಎಲ್ಲವೂ ಕಾರ್ಡ್​ ಸ್ವೈಪಿಂಗ್​ ಮೂಲಕ ನಡೆಯುತ್ತಿದೆ. ಇನ್ನೊಂದು ಅರ್ಥದಲ್ಲಿ ಮನೆ ಪಕ್ಕದ ಪೆಟ್ಟಿ ಅಂಗಡಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಬಿಗ್​ ಬಜಾರ್​, ಡಿ ಮಾರ್ಟ್​ನಂತಹ ಶಾಪಿಂಗ್​ ಕಾಂಪ್ಲೆಕ್ಸ್​ಗಳಲ್ಲಿ ಡಿಟಿಟಲ್​ ಪಾವತಿಯೇ ಮುಖ್ಯವಾಗಿ ಬಿಟ್ಟಿದೆ.

ಇದನ್ನು ಓದಿ: ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​

ಪಿಒಎಸ್​ಗೆ ಹೊಸ ಟಚ್​

ಸ್ಟೈಪಿಂಗ್​ ಮಷಿನ್​ನಲ್ಲಿ ಬಳಸುವ ಎಲ್ಲಾ ಕಡೆ ಇಂಗ್ಲೀಷ್​ ಭಾಷೆ ಮಾತ್ರ ಪ್ರಮುಖವಾಗಿತ್ತು. ಕೆಲವೊಂದು ಭಾಗಗಳಲ್ಲಿ ಹಿಂದಿ ಭಾಷೆ ಲಭ್ಯವಿದ್ದರೂ ಅದು ಗ್ರಾಹಕರನ್ನಾಗಲಿ ಅಥವಾ ವ್ಯಾಪಾರಿಗಳನ್ನಾಗಲಿ ಸರಿಯಾಗಿ ತಲುಪುತ್ತಿರಲಿಲ್ಲ. ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಒಟ್ಟು 8 ಭಾಷೆಗಳಲ್ಲಿ ಪಿಒಎಸ್​ ಕೆಲಸ ಮಾಡಲಿದೆ. ಕನ್ನಡ , ತೆಲುಗು, ತಮಿಳು, ಬೆಂಗಾಲಿ, ಮಲಯಾಳಂ , ಮರಾಠಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸ್ವೈಪಿಂಗ್​ ಮಷಿನ್​ ಕೆಲಸ ಮಾಡುವಂತೆ ಮಾಡಲು ಸಿದ್ಧತೆಗಳು ನಡೆಯುತ್ತಿದೆ. ಈ ಮೂಲಕ ಗ್ರಾಹಕರು ಮತ್ತು ವ್ಯಾಪಾರಸ್ಥರು ತಮಗೆ ಗೊತ್ತಿರುವ ಭಾಷೆಯಲ್ಲೇ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಮಾಡುವ ಪ್ರಯತ್ನ ಇದಾಗಿದೆ. ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಿಒಎಸ್​ ಗಳಲ್ಲಿ ಬಹುಭಾಷೆಯ ಆಯ್ಕೆ ಒದಗಿಸಲು ಸಾಕಷ್ಟು ಕಂಪನಿಗಳು ಮುಂದೆ ಬಂದಿವೆ.

"ಪಿಒಎಸ್​ಗಳಿಗೆ ಬಹುಭಾಷಾ ಆಯ್ಕೆ ನೀಡುವುದು ಉತ್ತಮ ಬೆಳವಣಿಗೆ. ಆದ್ರೆ ಬ್ಯಾಂಕಿಂಗ್​ಗೆ ಮತ್ತು ಸ್ವೈಪಿಂಗ್​ ಮಷಿನ್​ಗೆ ಒಪ್ಪುವ ಭಾಷೆ ಬಳಸುವುದು ಸೂಕ್ತ. ಗ್ರಾಹಕರಿಗೆ ಹಾಗೂ ವರ್ತಕರಿಗೆ ಉಪಯೋಗವಾಗುವಂತಹ ಭಾಷೆ ಇದ್ದರೆ ವ್ಯವಹಾರಗಳು ಸಲೀಸಾಗಿ ನಡೆದು ಬಿಡುತ್ತದೆ. ಡಿಜಿಟಲ್​ ಪಾವತಿ ಬಗೆಗಿನ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ."
- ಮಹೇಶ್​, ಉದ್ಯಮಿ, ವ್ಯಾಪಾರಸ್ಥರು

ಪ್ರಸ್ತುತ ಪಿಒಎಸ್​ಗಳು ಇಂಗ್ಲೀಷ್​ ಭಾಷೆಯಲ್ಲಿ ಹೆಚ್ಚು ಕೆಲಸ ಮಾಡುತ್ತಿವೆ. ಕೆಲವೇ ಕೆಲವು ಕಡೆ ಮಾತ್ರ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಈಗಾಗಲೇ ಭೀಮ್​ ಆ್ಯಪ್​ ಹಲವು ಭಾರತೀಯ ಭಾಷೆಗಳನ್ನು ಒದಗಿಸಿಕೊಡುತ್ತಿದೆ. ಭೀಮ್ ಭಾಷೆಗಳ ಆಯ್ಕೆಯಿಂದಲೇ ಸಾಕಷ್ಟು ಗ್ರಾಹಕರ ಗಮನ ಸೆಳೆದಿದೆ. ಹೀಗಾಗಿ ಪಿಒಎಸ್​ಗಳಿಗೂ ಬಹುಭಾಷಾ ಆಯ್ಕೆ ನೀಡಲು ಪ್ಲಾನ್​ಗಳು ನಡೆಯುತ್ತಿದೆ.​ ಈ ಮೂಲಕ ಜನರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ.

"ಸ್ವೈಪಿಂಗ್​ ಮಷಿನ್​ನಲ್ಲಿ ಕನ್ನಡ ಭಾಷೆಯ ಆಯ್ಕೆ ಇದ್ದರೆ ನಮಗೆ ಉಪಯೋಗವಾಗುತ್ತದೆ. ಕೆಲವೊಮ್ಮೆ ಇಂಗ್ಲೀಷ್​ ಬಾರದೇ ಇರುವವರಿಗೆ ಅರ್ಥ ಮಾಡಿಸಲು ನಮಗೆ ಕಷ್ಟವಾಗುತ್ತಿದೆ. ಆದ್ರೆ ಕನ್ನಡದಲ್ಲಿ ಸ್ವೈಪಿಂಗ್​ ಮಾಡುವ ಅವಕಾಶ ಸಿಕ್ಕರೆ ನಮ್ಮ ಕೆಲಸ ಸ್ವಲ್ಪ ಸುಲಭವಾಗುತ್ತದೆ."
- ಹನುಮಂತು, ವ್ಯಾಪಾರಿ

ಡಿಜಿಟಲ್​ನಲ್ಲಿ ಚಿಲ್ಲರೆ ಕಿರಿಕಿರಿ ಇಲ್ಲ

ಡಿಜಿಟಲ್​ ಪಾವತಿ ವ್ಯವಸ್ಥೆ ಜನಪ್ರಿಯವಾದ ಮೇಲೆ ಚಿಲ್ಲರೆಯ ಕಿರಿಕಿರಿ ತಪ್ಪಿದೆ. ಅಷ್ಟೇ ಅಲ್ಲ ಗ್ರಾಹಕರಿಗೆ ಆಗಲಿ ಅಥವಾ ವ್ಯಾಪಾರಿಗಳಿಗೇ ಆಗಲಿ ಒಂದು ನಯಾಪೈಸೆಯ ನಷ್ಟವೂ ಆಗುತ್ತಿಲ್ಲ. ಹೀಗಾಗಿ ಡಿಜಿಟಲ್​ ಪಾವತಿ ಬಗೆಗಿನ ಮೋಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದೊಂದು ದಿನ ಭಾರತ ಕ್ಯಾಶ್​ಲೆಸ್​ ನೇಷನ್​ ಆದ್ರೂ ಅಚ್ಚರಿ ಇಲ್ಲ.

ಇದನ್ನು ಓದಿ:

1. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!  

2. ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ

3. ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ