ವ್ಯಾವಹಾರಿಕ ವಿಶ್ವದಲ್ಲಿ ವರ್ಷಾಂತ್ಯದ ಘೋಷಣೆಗಳು ಹಾಗೂ ಹೆಚ್ಚುವರಿ ಹೂಡಿಕೆ ಮತ್ತು ವಿಲೀನ ಪ್ರಕ್ರಿಯೆ

ಟೀಮ್​ ವೈ.ಎಸ್​​. ಕನ್ನಡ

ವ್ಯಾವಹಾರಿಕ ವಿಶ್ವದಲ್ಲಿ ವರ್ಷಾಂತ್ಯದ ಘೋಷಣೆಗಳು ಹಾಗೂ ಹೆಚ್ಚುವರಿ ಹೂಡಿಕೆ ಮತ್ತು ವಿಲೀನ ಪ್ರಕ್ರಿಯೆ

Sunday December 13, 2015,

2 min Read

image


ಈ ವರ್ಷಾಂತ್ಯದ ಡೀಲ್ ಅಂತಿಮಗೊಂಡಿದೆ. ಡಿಸೆಂಬರ್ ಮೊದಲ ವಾರ ಸುಮಾರು 16ಡೀಲ್‌ಗಳು ಘೋಷಣೆಯಾಗಿವೆ. 

ಈ ವಾರದ ವ್ಯಾವಹಾರಿಕ ಒಪ್ಪಂದಗಳ ಒಟ್ಟು ಮೌಲ್ಯ ಸುಮಾರು 3.6 ಮಿಲಿಯನ್ ಡಾಲರ್. ಕಳೆದ ನವೆಂಬರ್ ತಿಂಗಳಿನಲ್ಲಿ 31 ಡೀಲ್‌ಗಳು ಘೋಷಣೆಯಾಗಿ ಸುಮಾರು 231 ಮಿಲಿಯನ್ ಹೂಡಿಕೆಯಾಗಿತ್ತು.

ಉಳಿದಂತೆ ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳ ಮೇಲೆ ಹೂಡಿಕೆಯ ಆಸಕ್ತಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಜಾಗತಿಕವಾಗಿ ಸುಮಾರು 2.5 ಬಿಲಿಯನ್ ಡಾಲರ್ ಹೂಡಿಕೆಯನ್ನು ಘೋಷಿಸಿದೆ.

ಈ ವಾರದಲ್ಲಿ ಕೆಲವು ಕಂಪನಿಗಳು ತಮ್ಮ ಹೆಚ್ಚುವರಿ ಹೂಡಿಕೆ ಮಾಡುವ ಬಗ್ಗೆ ನಿರ್ಧರಿಸಿವೆ. ಕೊನೇ ಕ್ಷಣದಲ್ಲಿ ಹೊಟೇಲ್ ರೂಂಗಳನ್ನು ಬುಕ್ ಮಾಡಬಲ್ಲ ರೂಮ್ಸ್ ಟು ನೈಟ್ ಆ್ಯಪ್ 1.5 ಮಿಲಿಯನ್ ಡಾಲರ್ ಸಾಂಸ್ಥಿಕ ಬಂಡವಾಳ ಹೂಡುವ ಬಗ್ಗೆ ತೀರ್ಮಾನಿಸಿದೆ. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಕಾಲೇಜಿನೊಂದಿಗೆ ಸಂಪರ್ಕಿಸುವ ಹಾಗೂ ಕಾಲೇಜುಗಳ ಬಗ್ಗೆ ಮಾಹಿತಿ ನೀಡುವ ಕಾಲೇಜ್ ದೇಖೋ ಆ್ಯಪ್ ಸುಮಾರು 1ಮಿಲಿಯನ್ ಡಾಲರ್ ಹೂಡಿಕೆ ಹೆಚ್ಚಿಸಿದೆ.

image


ಹೂಡಿಕೆಯಲ್ಲಿ ಎ ಸರಣಿಗೆ ಪ್ರಾಧಾನ್ಯತೆ

ಈ 16 ಡೀಲ್‌ಗಳು ಪ್ರೀ ಸೀರಿಸ್ ಅಥವಾ ಪೂರ್ವಸರಣಿಯ ಎ ಡೀಲ್‌ಗಳೆಂದು ಪರಿಗಣಿಸಲ್ಪಟ್ಟಿದೆ. ಪ್ರಾಥಮಿಕ ಹಂತದಲ್ಲಿ ಹೂಡಿಕೆದಾರರಿಂದ 1 ಮಿಲಿಯನ್ ಡಾಲರ್‌ಗಳಿಗಿಂತ ಕಡಿಮೆ ಹೂಡಿಕೆ ಮಾಡಿಸಿಕೊಳ್ಳುವ ಸ್ಟಾರ್ಟ್ ಅಪ್ ಸಂಸ್ಥೆಗಳಿವು. ಎ ಸರಣಿಯ ಡೀಲ್‌ಗಳಿಗೆ ಹೂಡಿಕೆ ಮಾಡಲು ಸಾಕಷ್ಟು ಸಂಸ್ಥೆಗಳು ಮುಂದೆ ಬಂದಿವೆ. ಇನ್ನೂ ಕೆಲವು ಅಭಿವೃದ್ಧಿ ಹಂತದಲ್ಲಿರುವ ಬಿ ಸರಣಿಯ ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಿಕೊಂಡಿವೆ. ಆದರೆ ಆರಂಭಿಕ ಹಂತದಲ್ಲಿರುವ ಸ್ಟಾರ್ಟ್ ಅಪ್ ಎ ಸರಣಿಯ ಸಂಸ್ಥೆಗಳು ನವೆಂಬರ್ ತಿಂಗಳಿನಲ್ಲಿ ಸುಮಾರು 77 ಡೀಲ್‌ಗಳನ್ನು ಘೋಷಿಸಿದ್ದವು.

ಮೈತ್ರಿ ಮತ್ತು ಹೂಡಿಕೆ

ಆಲೋಚನಾಬದ್ಧ ಹೂಡಿಕೆ ಜೊತೆ ಎರಡು ವ್ಯಾವಹಾರಿಕ ಮೈತ್ರಿಗಳು ಘೋಷಣೆಯಾಗಿವೆ. ಟೈಮ್ಸ್ ಗ್ರೂಪ್‌ನ ಮೀಡಿಯಾ ವೆಂಚರ್ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ, ಅದರದ್ದೇ ಇನ್ನೊಂದು ವಿಭಾಗವಾದ ಟೈಮ್ಸ್ ಇಂಟರ್‌ನೆಟ್‌ನೊಂದಿಗೆ ಮೈತ್ರಿ ಸಾಧಿಸಿದೆ ಹಾಗೂ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆ ಡು ಇಟ್ ಯುವರ್ ಸೆಲ್ಫ್ ಸಾಸ್ ಪೂರೈಕೆದಾರ ಉಪ ಸಂಸ್ಥೆ ಗೆಟ್‌ ಮಿ ಎ ಶಾಪ್ ಸಂಸ್ಥೆಯನ್ನು ವಿಲೀನಗೊಳಿಸಿಕೊಂಡಿದೆ. ಟಿ ಲ್ಯಾಬ್ಸ್‌ ನ ಅಂಗಸಂಸ್ಥೆಯಾಗಿದ್ದ ಗೆಟ್‌ ಮಿ ಎ ಶಾಪ್ ಈಗ ಟೈಮ್ಸ್ ಗ್ರೂಪ್‌ನ ಇನ್ನೊಂದು ಭಾಗವೆನಿಸಿದೆ. ಇನ್ನೊಂದು ಮಹತ್ವದ ಡೀಲ್‌ನಲ್ಲಿ ವ್ಯವಹಾರ-ಗ್ರಾಹಕ ಮಾದರಿಯ ಸ್ಟಾರ್ಟ್ ಅಪ್ ಮ್ಯಾಜಿಕ್ ಟೈಗರ್, ಇನ್‌ಸ್ಟಾನೋ ಸಂಸ್ಥೆಯನ್ನು ಇದೇ ಜುಲೈನಲ್ಲಿ ಖರೀದಿಸಿದೆ. ಈ ಹಿಂದೆ ಮ್ಯಾಜಿಕ್ ಟೈಗರ್ ತನ್ನ ಪ್ರತಿಸ್ಪರ್ಧಿ ಸಂಸ್ಥೆಯಾದ ಗಾಡ್ ಎಲಿವರ್ ಸಂಸ್ಥೆಯನ್ನು ವಿಲೀನಗೊಳಿಸಿಕೊಂಡಿತ್ತು. ಫ್ಲಿಪ್ ಕಾರ್ಟ್ ತನ್ನ ಹೂಡಿಕೆಯನ್ನು ಮುಂದುವರೆಸಿ ಮ್ಯಾಪ್ ಮೈ ಇಂಡಿಯಾದಂತಹ ವಿಭಾಗದ ಪ್ರಗತಿಗೆ ಮುಂದಾಗಿದೆ.