ಬೇಡವಾದ ಔಷಧಗಳನ್ನು ಸಂಗ್ರಹಿಸುತ್ತಾರೆ - ದೆಹಲಿಯಲ್ಲೊಬ್ಬ “ಮೆಡಿಸಿನ್ ಬಾಬಾ”

ಟೀಮ್​ ವೈ.ಎಸ್. ಕನ್ನಡ

1

ಓಂಕಾರ್​ನಾಥ್ ಶರ್ಮಾ. 80 ವರ್ಷದ ಹಣ್ಣು ಹಣ್ಣು ಮುದಕ, ವಯಸ್ಸು ಕೊಂಚ ಹೆಚ್ಚಾದ್ರೂ ಇವರ ಉತ್ಸಾಹಕ್ಕೇನು ಕೊರತೆ ಇಲ್ಲ. ದೆಹಲಿಯಲ್ಲಿ ಈ ಓಂಕಾರ್​ನಾಥ್ ಶರ್ಮಾ “ಮೆಡಿಸಿನ್ ಬಾಬಾ” ಅಂತಲೇ ಫೇಮಸ್. ಓಂಕಾರ್​ನಾಥ್ ಡಾಕ್ಟರ್ ಅಲ್ಲ. ಔಷಧಿ ವ್ಯಾಪಾರಿಯೂ ಅಲ್ಲ. ಆದ್ರೆ ಇವರು ಮಾಡುವ ಕೆಲಸ ಯಾವ ವೈದ್ಯ ಮಾಡುವ ಕೆಲಸಕ್ಕೂ ಕಡಿಮೆ ಇಲ್ಲ. ಇವರು ದೆಹಲಿಯ ಎಲ್ಲಾ ಕಡೆ ಓಡಾಡುತ್ತಾರೆ. ಮನೆ ಮನೆ ತಿರುಗುತ್ತಾರೆ. ಅಲ್ಲಿ ಉಪಯೋಗಕ್ಕೆ ಬಾರದ ಮೆಡಿಸಿನ್​ಗಳನ್ನು ಸಂಗ್ರಹಿಸುತ್ತಾರೆ. ಹಾಗೇ ಸಂಗ್ರಹವಾದ ಔಷಧಗಳನ್ನು ಬಡವರಿಗೆ ಹಂಚುತ್ತಾರೆ. ಓಂಕಾರ್​ನಾಥ್ ಈ ಕೆಲಸ ಶುರುಮಾಡಿಕೊಂಡು 7 ವರ್ಷಗಳೇ ಕಳೆದಿವೆ.

ಓಂಕಾರ್​ನಾಥ್ ಉತ್ತರಪ್ರದೇಶದ ನೋಯ್ಡಾದ ಬಳಿಯಿರುವ ಕೈಲಾಶ್ ಆಸ್ಪತ್ರೆಯ ಬ್ಲಡ್​ಬ್ಯಾಂಕ್​ನಲ್ಲಿ ಟೆಕ್ನಿಷಿಯನ್ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಓಂಕಾರ್ ಆರಾಮವಾಗಿ ಕಾಲ ಕಳೆಯುತ್ತಿದ್ದರು. ಆದ್ರೆ 2008ರಲ್ಲಿ ನಡೆದ ಘಟನೆ ಒಂದು ಓಂಕಾರ್ ಮನಸ್ಸುನ್ನು ಬದಲಿಸಿತು. ಪೂರ್ವ ದೆಹಲಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸೇತುವೆ ಕುಸಿದು ಬಿದ್ದು ಇಬ್ಬರು ಮರಣ ಹೊಂದಿದ್ರು. ಹಲವು ಮಂದಿ ಗಾಯಗೊಂಡ್ರು. ಈ ಘಟನೆ ಓಂಕಾರ್ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಸರ್ಕಾರಿ ಆಸ್ಪತ್ರೆಗಳ ದು:ಸ್ಥಿತಿ ಮತ್ತು ಬಡವರಿಗೆ ಔಷಧಿಗಳು ಕೈಗೆಟುಕುತ್ತಿಲ್ಲ ಅನ್ನುವ ಸತ್ಯ ಓಂಕಾರ್ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಅಷ್ಟೇ ಅಲ್ಲ ಔಷಧಿಗಳನ್ನು ಸಪ್ಲೈ ಮಾಡುವ ಚೈನ್ ಅನ್ನು ಬಿಲ್ಡ್ ಮಾಡುವ ಕಾರ್ಯದಲ್ಲಿ ತೊಡಗಿದ್ರು.

“ಆತನನ್ನು ನಮ್ಮ ಏರಿಯಾದಲ್ಲಿ ನೋಡೋದಿಕ್ಕೆ ಖುಷಿಯಾಗುತ್ತಿದೆ. ನಮಗೆ ಬೇಡವಾದ ಔಷಧಿಗಳನ್ನು ಅವರ ಕೈಗೆ ನೀಡುತ್ತಿದ್ದೇವೆ. ಓಂಕಾರ್ ಶರ್ಮಾ ರೀತಿಯಲ್ಲಿ ಈ ಕೆಲಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ಮೆಡಿಸಿನ್ ಬಾಬಾ ಮಾಡುತ್ತಿರುವುದ ಪುಣ್ಯದ ಕೆಲಸ ”
ರಿಚಾ ಜೈನ್, ಮಾಲ್ವಿಯಾ ನಗರ ನಿವಾಸಿ

ಅಷ್ಟಕ್ಕೂ ಈ ಮೆಡಿಸಿನ್ ಬಾಬಾ ಸುಖವಾಗಿ ಜೀವಿಸುವಷ್ಟು ತಾಕತ್ತು ಹೊಂದಿಲ್ಲ. ಬಾಡಿಗೆ ಮನೆಯೊಂದರಲ್ಲಿ ಓಂಕಾರ್, ಮಡದಿ ಮತ್ತು 45 ವರ್ಷ ಮಯಸ್ಸಿನ ಮಗ ಜಗ್​ಮೋಹನ್ ಜೊತೆ ವಾಸಿಸುತ್ತಿದ್ದಾರೆ. ಮಗ ಮಾನಸಿಕ ಅಸ್ವಸ್ಥ ಅನ್ನೋದು ಕೂಡ ಇಲ್ಲಿ ಗಮನಿಸಬೇಕಾದ ವಿಷಯ. ಓಂಕಾರ್ ಪ್ರತಿದಿನ ಕನಿಷ್ಠ 5 ರಿಂದ 6 ಕಿಲೋಮೀಟರ್ ನಡೆದೇ ಸಾಗುತ್ತಾರೆ. ಮೆಟ್ರೋದಲ್ಲಿ ಓಡಾಡುವಷ್ಟು ಆರ್ಥಿಕ ಸ್ಥಿತಿ ಚೆನ್ನಾಗಿ ಇರದೇ ಇರುವುದರಿಂದ ಡೆಲ್ಲಿಯ ಬಸ್​ಗಳಲ್ಲಿ ಸಂಚರಿಸಿ, ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಔಷಧಿಗಳನ್ನು ಸಂಪಾದಿಸುತ್ತಾರೆ. ಬಸ್​ಗಳು ಹೋಗದೇ ಇರುವ ಜಾಗಕ್ಕೂ ಓಂಕಾರ್ ತೆರಳಿ ಔಷಧಿ ಸಂಗ್ರಹಿಸುತ್ತಾರೆ.

“ ಔಷಧಿಗಳನ್ನು ಪಡೆಯಲು ಮಧ್ಯಮ ವರ್ಗ ಮತ್ತು ಕೆಳವರ್ಗ ವಾಸಿಸುವ ಕಾಲೋನಿಗಳೇ ಉತ್ತಮ ಸ್ಥಳಗಳು. ಆರ್ಥಿಕವಾಗಿ ಬಡವರಾಗಿದ್ದರೂ, ಅವರು ಮನಸ್ಸಿನಲ್ಲಿ ಶ್ರೀಮಂತರಾಗಿರುತ್ತಾರೆ. ಶ್ರೀಮಂತರು ವಾಸಿಸುವ ಮನೆಯಲ್ಲಿ ಯಾರೂ ದಾನ ಮಾಡುವಷ್ಟು ಸಹೃದಯಿಗಳಲ್ಲ ಅನ್ನೋದು ನನ್ನ ಭಾವನೆ”
ಓಂಕಾರ್​ನಾಥ್ ಶರ್ಮಾ, ಮೆಡಿಸಿನ್ ಬಾಬಾ

ಓಂಕಾರ್ ಪ್ರತಿ ತಿಂಗಳು 4 ರಿಂದ 6 ಲಕ್ಷ ರೂಪಾಯಿ ಬೆಲೆ ಬಾಳುವ ಔಷಧಿಗಳನ್ನು ಸಂಗ್ರಹಿಸಿ ಬೇಕಾದವರಿಗೆ ಹಂಚುತ್ತಾರೆ. ಇವತ್ತು ಓಂಕಾರ್ ದೆಹಲಿಯಾದ್ಯಂತ ಮೆಡಿಸಿನ್ ಬಾಬಾ ಅಂತಲೇ ಖ್ಯಾತರಾಗಿದ್ದಾರೆ. ಉಚಿತವಾಗಿ ಈ ಸೇವೆ ಮಾಡುವ ಓಂಕಾರ್​ಗೆ  ಅದೆಷ್ಟು ಧನ್ಯವಾದಗಳನ್ನು ಅರ್ಪಿಸಿದ್ರೂ ಕಡಿಮೆಯೇ.

ಇದನ್ನು ಓದಿ:

1. 5 ಮನೆಗಳಿಗೆ ಬೆಳಕು ಕೊಡುವ 'ಸೌರ ವೃಕ್ಷ'

2. ಭಾಗ್ಯದ ಲಕ್ಷ್ಮೀಗೆ ಭಕ್ತಿಯ ನಮನ- ವರ್ಷವಿಡೀ ಕಾಪಾಡು ನಮ್ಮನ್ನ

3. ನಿರುದ್ಯೋಗದ ಚಿಂತೆ ಬಿಡಿ- ಆಸಾನ್​ಜಾಬ್ಸ್​​.ಕಾಂನಲ್ಲಿ ಕೆಲಸಕ್ಕೆ ಟ್ರೈ ಮಾಡಿ..!